Home » ಚಳಿಗಾಲದಲ್ಲಿ ಅಸ್ತಮಾ ರೋಗಿಗಳು ಸೇವಿಸಬೇಕಾದ ಆಹಾರ ಪದಾರ್ಥಗಳಿವು..

ಚಳಿಗಾಲದಲ್ಲಿ ಅಸ್ತಮಾ ರೋಗಿಗಳು ಸೇವಿಸಬೇಕಾದ ಆಹಾರ ಪದಾರ್ಥಗಳಿವು..

by manager manager

What Should Asthma Patients Eat During Winter

ಶ್ವಾಸಕೋಶದಲ್ಲಿ ಗಾಳಿಯು ಹೋಗುವ ಜಾಗದಲ್ಲಿ ಸೋಂಕಾಗಿದ್ದು ಅಲ್ಲಿ ಉರಿಯುತವು ಕಂಡುಬಂದರೆ ಅದು ಉಸಿರಾಡುವಾಗ ತೊಂದರೇ ಕೊಡುತ್ತೆ. ಇದನ್ನೆ “ಅಸ್ತಮಾ” ಎಂದು ಕರೆಯುತ್ತಾರೆ. ಇದು ಹೆಚ್ಚು ವಯಸ್ಸಾದವರಲ್ಲಿ ಕಂಡುಬರುತ್ತೆ, ಇತ್ತೀಚಿಗೆ ಇದು ವಯಸ್ಕರಲ್ಲೂ ಸಹ ಕಂಡುಬರುತ್ತಿದೆ. ಅಸ್ತಮಾದಲ್ಲಿ ಮೂರು ವಿಧಗಳಿವೆ.

ಅವುಗಳೆಂದರೇ..

1. ಸಾಮಾನ್ಯವಾದ ಅಸ್ತಮಾ

2. ಟ್ರಿಗರ್ ಅಸ್ತಮಾ

3. ಅಲೆರ್ಜಿಕ್ ಅಸ್ತಮಾ.

ಇವುಗಳನ್ನು ಕಂಟ್ರೋಲ್ ಮಾಡಲು ಸ್ವಲ್ಪ ಕಷ್ಟಸಾಧ್ಯವಾದರೂ ಚಳಿಗಾಲದಲ್ಲಿ ಇದರ ಪರಿಣಾಮ ಜಾಸ್ತಿ ಇರುತ್ತದೆ. ಇದನ್ನು ಚಳಿಗಾಲದಲ್ಲಿ ನಮ್ಮ ಆಹಾರದ ಮೂಲಕ ಹೇಗೆ ನಮ್ಮ ಹತೋಟಿಯಲ್ಲಿಟ್ಟುಕೊಳ್ಳಬಹುದು ಎಂದು ಈ ಲೇಖದಲ್ಲಿ ತಿಳಿಸಿಕೊಡುತ್ತೇವೆ. ಅದು ಈ ಕೆಳಗಿನಂತಿದೆ.

ಚಳಿಗಾಲದಲ್ಲಿ ತಿನ್ನಲೇಬಾರದ ಆಹಾರ ಪದಾರ್ಥಗಳಿವು..

ಜಂಕ್ ಪುಡ್‍ಗಳು :- ಆಹಾರದಲ್ಲಿ ಮಸಾಲೆಯುಕ್ತ ಪದಾರ್ಥಗಳು, ಎಣ್ಣೆಯಲ್ಲಿ ಕರಿದಾ ಆಹಾರಗಳನ್ನು ಸೇವಿಸಬಾರದು.

ತಣ್ಣನೆಯ ಡೈರಿ ಉತ್ಪನ್ನಗಳು :- ತಣ್ಣನೆಯ ಹಾಲು, ಮೊಸರು, ಬೆಣ್ಣೆ, ಕೋವಾ, ಪನ್ನಿರ್ ಈ ರೀತಿಯ ಪದಾರ್ಥಗಳನ್ನು ಸೇವಿಸಬಾರದು.

ಶೇಖರಿಸಲ್ಪಟ್ಟ ಆಹಾರ :- ಫ್ರಿಡ್ಜ್‍ನಲ್ಲಿಟ್ಟ ಆಹಾರ ಪದಾರ್ಥಗಳು, ಉಪ್ಪಿನಕಾಯಿಯನ್ನು ಸೇವಿಸಬಾರದು.

ನಿಮ್ಮ ಆಹಾರದಲ್ಲಿ ಸೀಗಡಿಯನ್ನು ತಿನ್ನಲೇಬೇಡಿ ಇದು ಚಳಿಗಾಲದಲ್ಲಿ ಕಫವನ್ನು ಹೆಚ್ಚಿಸುತ್ತದೆ. ಇದರಿಂದ ಅಸ್ತಮಾ ರೋಗಿಗಳಿಗೆ ತೊಂದರೆ ಹೆಚ್ಚು.

ಚಳಿಗಾಲದಲ್ಲಿ ತಿನ್ನಬೇಕಾದ ಆಹಾರ ಪದಾರ್ಥಗಳು

– ದಿನವೊಂದಕ್ಕೆ ಸೇಬನ್ನು ಮರೆಯದೆ ತಿನ್ನಲೇಬೇಕು. ಕಾರಣ ಅಧ್ಯಯನದ ಪ್ರಕಾರ ತಿಳಿದುಬಂದಿರುವ ವಿಷಯವೆಂದರೆ. ಅದು ಪ್ರತಿ ದಿನ ಸೇಬನ್ನು ತಿನ್ನುವ ವ್ಯಕ್ತಿಗಳಲ್ಲಿ ಅಸ್ತಮಾದ ಅಪಾಯವು ಕಡಿಮೆ ಎಂಬುದು.

– ಬೆಳ್ಳುಳ್ಳಿ ಮತ್ತು ಶುಂಠಿಯನ್ನು ನಿಮ್ಮ ಆಹಾರದಲ್ಲಿ ಬಳಸಿದರೆ ಇದು ಅಸ್ತಮಾ ರೋಗಿಗಳಿಗೆ ವರದಾನವಾಗುತ್ತದೆ.

– ಮೆಗ್ನೀಷಿಯಂ ತುಂಬಿದ ಆಹಾರಗಳಾದ ಹಸಿರು ಎಲೆಗಳು, ಕುಂಬಳಕಾಯಿ ಬೀಜ ಮತ್ತು ಡಾರ್ಕ್ ಚಾಕೂಲೇಟ್‍ಗಳನ್ನು ತಿನ್ನಬೇಕು.

– ವಿಟಮಿನ್ ಡಿ ಮತ್ತು ವಿಟಮಿನ್ ಸಿ ಯನ್ನು ನಿಮ್ಮ ದೇಹಕ್ಕೆ ತೆಗೆದುಕೊಂಡರೆ ಇದು ಕೂಡ ನಿಮ್ಮಲ್ಲಿನ ಅಸ್ತಮಾವನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ.

ನಮಗೆ ಅಸ್ತಮಾ ಇದೆ ಎಂದು ಹೇಗೆ ತಿಳಿಯುವುದು ?

ನಾವು ಉಸಿರಾಡುವಾಗ ಶಿಳ್ಳೆ ಹೊಡೆದ ರೀತಿಯಲ್ಲಿ ಶಬ್ದವು ಬರುತ್ತದೆ. ಈ ರೀತಿ ಶಬ್ದ ಬಂದಾಗ ನಮಗೆ ಉಸಿರಾಡಲು ಸ್ವಲ್ಪ ಕಷ್ಟವಾಗುತ್ತದೆ ಇದನ್ನೇ ನಾವು ಅಸ್ತಮಾ ಎಂದು ಕರೆಯುವುದು. ಕೆಲವೊಂದು ಅಸ್ತಮಾವು ಚಿಕ್ಕ ವಯಸ್ಸಿಗೆ ಕಾಣಿಸಿಕೊಂಡು ವಯಸ್ಸಾದಂತೆ ಅದು ಹೊರಟು ಹೋಗುತ್ತದೆ. ಆದರೇ ಕೆಲವೊಂದು ಗಂಭೀರವಾದ ಸ್ಥಿತಿಯನ್ನು ಪಡೆದುಕೊಳ್ಳುತ್ತದೆ.

ಅಸ್ತಮಾವು ಇದ್ದಕಿಂದ್ದಂತೆ ಹೆಚ್ಚಾಗುವ ಸನ್ನಿವೇಶಗಳು :

– ಧೂಮಪಾನ ಮಾಡುವುದು.

– ವಾಯು ಮಾಲಿನ್ಯದಿಂದಾಗಿ.

– ಧೂಳಿನಿಂದಾಗಿ.

– ಜಿರಲೆ ಮತ್ತು ಇಲಿಯ ಪಿಕ್ಕೆಗಳಿಂದಾಗಿ

– ಸಾಕು ಪ್ರಾಣಿಗಳ ಅಲೆರ್ಜಿಗಳಿಂದ.

ಅಸ್ತಮಾವನ್ನು ಔಷಧಿಗಳಿಲ್ಲದೇ ಕಂಟ್ರೋಲ್ ಮಾಡುವುದು ಹೇಗೆ ?

– ನೀವು ಕುಳಿತುಕೊಳ್ಳುವಾಗ ಯಾವಾಗಲೂ ನೇರವಾಗಿ ಕುಳಿತುಕೊಳ್ಳಿ ಇದು ನಿಮಗೆ ಸರಿಯಾಗಿ ಉಸಿರಾಡಲು ಸಹಾಯ ಮಾಡುತ್ತದೆ.

– ನೀವು ಉಸಿರಾಡುವಾಗ ಗಾಢವಾದ ಉಸಿರನ್ನು ತೆಗೆದುಕೊಂಡು ನಿಧಾನವಾಗಿ ಅದನ್ನು ಬಿಡುತ್ತ ಉಸಿರಾಡಿ.

– ಯೋಗಮಾಡುವುದನ್ನು ಮರೆಯಬೇಡಿ.

– ಯಾವಾಗಲೂ ಪ್ರಶಾಂತತೆಯನ್ನು ಕಾಪಾಡಿಕೊಳ್ಳಿ.

– ನಿಮ್ಮನ್ನು ಅಸ್ತಮಾಕ್ಕೆ ಪ್ರಚೋದಿಸುವ ಕಾರ್ಯಗಳಿಂದ ದೂರವಿರಿ.

– ಗ್ರೀನ್ ಟೀ, ಬ್ಲಾಕ್ ಕಾಫಿ (ಕೇಫೈನ್ ಇರುವ ಕಾಫಿ)ಯನ್ನು ತೆಗೆದುಕೊಳ್ಳಿ.

ನಿಮ್ಮ ಮೊಬೈಲ್ ಹ್ಯಾಕ್ ಆಗಿದೆಯೇ ಎಂದು ಚೆಕ್‌ ಮಾಡುವುದು ಹೇಗೆ?

You may also like