Home » ಮಹಿಳೆಯರಿಗೆ ಪಿಸಿಓಡಿ ಪ್ರಾಬ್ಲಮ್ ಇದ್ರೆ ಏನೆಲ್ಲ ಆಗುತ್ತೆ ಗೊತ್ತ? ಕಾರಣ, ಲಕ್ಷಣ ಮತ್ತು ಮುನ್ನೆಚ್ಚರಿಕೆ..

ಮಹಿಳೆಯರಿಗೆ ಪಿಸಿಓಡಿ ಪ್ರಾಬ್ಲಮ್ ಇದ್ರೆ ಏನೆಲ್ಲ ಆಗುತ್ತೆ ಗೊತ್ತ? ಕಾರಣ, ಲಕ್ಷಣ ಮತ್ತು ಮುನ್ನೆಚ್ಚರಿಕೆ..

by manager manager

ಭಾರತದಲ್ಲಿ ಅಂದಾಜು ಶೇ.25-30 ವಯಸ್ಸಿನ ಸ್ತ್ರೀಯರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅನೇಕ ಸ್ತ್ರೀಯರಲ್ಲಿ ಆಹಾರ ಪದ್ಧತಿಯಲ್ಲಿ ಯಾವುದೇ ವ್ಯತ್ಯಾಸವಿಲ್ಲದಿದ್ದರೂ ಅಧಿಕ ತೂಕ, ಕೂದಲು ಉದುರುವಿಕೆ, ಮೊಡವೆ, ಗಂಡಸರಿಗಿರುವಂತೆ ಕೂದಲು ಬರುವುದು ಮೊದಲಾದ ಸಮಸ್ಯೆಗಳನ್ನು ಕಾಣಬಹುದು. ಹಾಗಾಗೀ ಪಿಸಿಒಡಿ, ಈ ಕಾಲದ ಸ್ತ್ರೀಯರನ್ನು ಕಾಡುತ್ತಿರುವ ಸಮಸ್ಯೆಯಾಗಿ ಮಾರ್ಪಡಾಗಿದೆ.

ಹೆಣ್ಣು ಹುಟ್ಟಿದ ತರುವಾಯ ಅವಳ ಜೀವಿತಾವಧಿಯಲ್ಲಿ ಅನೇಕ ಬದಲಾವಣೆಗಳಿಗೆ ಒಳಗಾಗುತ್ತಾಳೆ. ಅದು ಮಾನಸೀಕವಾಗಿಯು ಹೌದು, ದೈಹಿಕವಾಗಿಯು ಹೌದು. ಹಾರ್ಮೋನ್‍ಗಳ ಬದಲಾವಣೆಯಿಂದ ಹೆಣ್ಣು ಮಕ್ಕಳಲ್ಲಿ ವ್ಯತ್ಯಾಸವಾದರೆ ಅಲ್ಲಿಂದ ಒಂದರ ಹಿಂದೊಂದು ಸಮಸ್ಯೆಯ ಸುಳಿಗೆ ಅವಳು ಸಿಲುಕುತ್ತಾಳೆ. ಇತ್ತೀಚಿನ ದಿನಗಳಲ್ಲಿ ಹರೆಯದ ಹೆಣ್ಣುಮಕ್ಕಳನ್ನು ಬಾಧಿಸುತ್ತಿರುವ ಸಮಸ್ಯೆಗಳಲ್ಲಿ ಪಿಸಿಓಡಿ ಸಮಸ್ಯೆ (ಪಾಲಿಸಿಸ್ಟಿಕ್ ಒವೇರಿಯನ್ ಡಿಸೀಸ್) ಕೂಡ ಒಂದು. ಹಲವು ರೋಗಲಕ್ಷಣಗಳುಳ್ಳ ಪಿಸಿಓಡಿ ವೈದ್ಯಲೋಕಕ್ಕೆ ಸವಾಲಾಗಿದೆ.

ಪಾಲಿಸಿಸ್ಟಿಕ್ ಒವೇರಿಯನ್ ಡಿಸೀಸ್ (ಪಿಸಿಓಡಿ) ಎಂದರೇ :- ಅಪರಿಪಕ್ವವಾದ ಅಂಡಾಣು ಗರ್ಭಾಶಯದ ಎರಡೂ ಬದಿಯಲ್ಲಿರುವ ಅಂಡಕೋಶದ ಮೇಲೆ ನೀರಿನ ಗುಳ್ಳೆಯಂತೆ ಇರುವುದನ್ನು ಪಿಸಿಒಡಿ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಮಹಿಳೆಯರಲ್ಲಿ 28-30 ದಿನಗಳ ಅವಧಿಗೊಮ್ಮೆ ಋತುಚಕ್ರವಾಗುವುದನ್ನು ಕಾಣಬಹುದು. ಮುಟ್ಟಾದ 11-14 ನೇ ದಿನಗಳ ಮಧ್ಯೆ ಯಾವುದಾದರು ಅಂಡಕೋಶದಿಂದ ಅಂಡಾಣುವು ಬಿಡುಗಡೆಯಾಗುತ್ತದೆ. ಹೀಗೆ ಪ್ರತಿ ತಿಂಗಳು ಬಲ ಅಥವಾ ಎಡ ಅಂಡಾಶಯದಿಂದ ಒಂದು ಅಂಡಾಣು ಬಿಡುಗಡೆಯಾಗುತ್ತಿರುತ್ತದೆ ಮತ್ತು ಗರ್ಭ ಧರಿಸಲು ಸಿದ್ಧವಾಗಿರುತ್ತದೆ. ಆದರೆ ಯಾರಲ್ಲಿ ಪಿಸಿಒಡಿ ಸಮಸ್ಯೆ ಇರುತ್ತದೋ ಅವರಲ್ಲಿ ಅಂಡಕೋಶದಿಂದ ಅಂಡಾಣುಗಳು ಬಿಡುಗಡೆಯಾಗದೇ ಅಲ್ಲಿಯೇ ಅಪರಿಪಕ್ವವಾದ ಅಂಡಾಣುಗಳು ನೀರಿನ ಗುಳ್ಳೆಗಳಂತೆ ಅಂಡಕೋಶದ ಒಳ ಪದರ ಮೇಲೆ ಉಳಿದು ಹೋಗುತ್ತದೆ.

ಪಿಸಿಓಡಿ ಅಥವ ಪಿಸಿಓಎಸ್ ಬಗ್ಗೆ ಕೆಲವು ತಪ್ಪು ಪರಿಕಲ್ವನೆಗಳಿದೆ ಅವುಗಳೆಂದರೇ :-

• ಪಿಸಿಒಎಸ್ ಸಮಸ್ಯೆ ಇರುವವರು ಗರ್ಭ ಧರಿಸಲು ಬಹಳ ಕಷ್ಟಪಡುತ್ತಾರೆ. ಗರ್ಭೀಣಿಯಾದರೂ ಗರ್ಭಧಾರಣೆಯ ಸಮಯ ತೊಂದರೆಗಳನ್ನು ಅನುಭವಿಸುತ್ತಾರೆ ಎಂಬುದು ನಿಜ. ಆದರೆ ಮಕ್ಕಳನ್ನು ಹೆರುವುದು ಸಾಧ್ಯವೇ ಇಲ್ಲ ಎಂದು ಅರ್ಥವಲ್ಲ, ಪರಿಸ್ಥಿತಿಯನ್ನು ನಿರ್ವಹಿಸುವ ಮೂಲಕ ಪಿಸಿಒಎಸ್ ಇರುವ ಮಹಿಳೆಯರು ಗರ್ಭಧರಿಸಿ ಆರೋಗ್ಯಕರವಾದ ಮಕ್ಕಳನ್ನು ಹೆರಬಹುದು. ಯಾವುದೇ ಚಿಕಿತ್ಸೆಯ ನೆರವಿಲ್ಲದೇ ಸಹಜವಾಗಿಯೇ ಗರ್ಭಧರಿಸಬಹುದು ಇದಕ್ಕಾಗಿ ಆಹಾರ ಕ್ರಮ ಮತ್ತು ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ಆ ಮೂಲಕ ಅಂಡಾಣು ಉತ್ಪತ್ತಿಯ ಸಂಭಾವ್ಯತೆಯನ್ನು ಹೆಚ್ಚಿಸಿಕೊಳ್ಳಬೇಕು. ಉತ್ತಮ ಆಹಾರ ಕ್ರಮ, ನಿಯಮಿತ ವ್ಯಾಯಾಮದಿಂದ ದೇಹ ತೂಕದ ಶೇ. 10ರಷ್ಷನ್ನಾದರೂ ಕಳೆದುಕೊಂಡಲ್ಲಿ ಸಂತಾನೋತ್ಪತ್ತಿಯ ಸಾಧ್ಯತೆ ಹೆಚ್ಚಾಗುತ್ತದೆ.

• ಪಿಸಿಒಎಸ್ ಇದ್ದರೆ ತೂಕವು ಕಡಿಮೆ ಆಗಲ್ಲ ಎಂದು ತಪ್ಪು ಪರಿಕಲ್ಪನೆ ಇದೆ. ಪಿಸಿಒಎಸ್ ಇದ್ದವರು ತೂಕ ಇಳಿಸುವುದು ಕಷ್ಟ ಆದರೇ ಅಸಾಧ್ಯವೆನಲ್ಲ. ಒಳ್ಳೆಯ ಪ್ರೋಟೀನ್ ಆಹಾರ, ನಾರಿನಾಂಶ ಇರುವ ಆಹಾರವನ್ನು ಹೆಚ್ಚು ಸೇವನೆ ಮಾಡಿದರೆ ಹಾಗೂ ಕಾರ್ಬೋಹೈಡ್ರೇಟ್ ಸೇವನೆ ಕಡಿಮೆ ಮಾಡಬೇಕು, ಧ್ಯಾನ, ಯೋಗದ ಮೂಲಕ ಒತ್ತಡವನ್ನು ಕಡಿಮೆ ಮಾಡಿ ರಾತ್ರಿ ಚೆನ್ನಾಗಿ ನಿದ್ರೆ ಮಾಡಿದರೆ ತೂಕವನ್ನು ಇಳಿಸಬಹುದು.

• ಪಿಸಿಒಎಸ್ ತೆಳ್ಳಗಿರುವವರಿಗೆ ಬರುವುದಿಲ್ಲ ಎನ್ನುವುದು ಸಹ ತಪ್ಪು ಪರಿಕಲ್ಪನೆ

ಪಿಸಿಓಡಿ ಗೆ ಕಾರಣಗಳೂ :

• ಹಾರ್ಮೋನ್ ಅಸಮತೋಲನ

• ಅಸಮರ್ಪಕ ಜೀವನಶೈಲಿ

• ಅಧಿಕ ಒತ್ತಡ

• ವ್ಯಾಯಾಮದ ಕೊರತೆ

• ಕೊಬ್ಬಿನ ಪದಾರ್ಥಗಳನ್ನು ಹೆಚ್ಚು ತಿನ್ನುವುದು

• ಅನುವಂಶೀಯತೆಯ ಪ್ರಭಾವವೂ ಇದೆ.

ಈ ವ್ಯಾಧಿಗೆ ಖಚಿತವಾದ ಕಾರಣಗಳು ಈವರೆಗೆ ತಿಳಿದು ಬಂದಿಲ್ಲ. ಆದರೆ ಹಾರ್ಮೋನ್‍ಗಳ ಅಸಮತೋಲನದಿಂದ ಸಂಭವಿಸುವುದು ಎಂದು ಹೇಳಲಾಗುತ್ತದೆ. ರಕ್ತದಲ್ಲಿ ಇನ್ಸ್‍ಲಿನ್ ಅಂಶವು ಹೆಚ್ಚಾಗಿ ಟೆಸ್ಟೊಸ್ಟಿರಾನ್ ಅನ್ನುವ ಹಾರ್ಮೋನ್ ಹೆಚ್ಚಾಗುತ್ತದೆ. ಇದು ಸ್ಥೂಲಕಾಯಕ್ಕೆ ದಾರಿಯಾಗಿ ಪಿಸಿಒಡಿ ಸಮಸ್ಯೆಗೆ ಪ್ರೇರಕವಾಗುತ್ತದೆ.

ಪಿಸಿಓಡಿ ಲಕ್ಷಣಗಳು:

• ಪ್ರತಿ ತಿಂಗಳ ಋತುಚಕ್ರದಲ್ಲಿ ಏರುಪೇರು, ತೂಕ ಹೆಚ್ಚಾಗುವುದು, ಕೂದಲು ಉದುರುವುದು

• ಋತುಚಕ್ರ ಸರಿಯಾಗಿ ಆದರೂ ಅಂಡಾಣುಗಳು ಅಂಡಕೋಶದಿಂದ ಬಿಡುಗಡೆಯಾಗದಿರುವುದು

• ಸಾಮಾನ್ಯವಾಗಿ ಋತುಚಕ್ರದ ಸಂದರ್ಭದಲ್ಲಿ 4-5 ದಿನ ರಕ್ತಸ್ರಾವ ಆಗುತ್ತದೆ. ಆದರೆ ಇಲ್ಲಿ ರಕ್ತಸ್ರಾವು ಹೆಚ್ಚಿನ ದಿನಗಳವರೆಗೆ ಇರುವುದು

• ಎರಡು ಋತುಚಕ್ರದ ಮಧ್ಯೆ ಮತ್ತೆ ರಕ್ತಸ್ರಾವ ಕಾಣಿಸಿಕೊಳ್ಳುವುದು

• ಋತುಚಕ್ರ ಕಾಣಿಸಿಕೊಂಡಾಗ ಅತಿ ತೀವ್ರವಾದ ನೋವು ಕಾಣಿಸಿಕೊಳ್ಳುವುದು

• ಬಹಳ ತಿಂಗಳಾದರೂ ಋತುಚಕ್ರ ಕಾಣಿಸಿಕೊಳ್ಳದಿರುವುದು

• ಮುಖದ ಮೇಲೆ, ಶರೀರದ ಮೇಲೆ ಅಧಿಕವಾಗಿ ಕೂದಲು ಕಾಣಿಸಿಕೊಳ್ಳುವುದು

• ಬಂಜೆತನ.

ಮುಂಜಾಗ್ರತೆ:

ಜೀವನ ವಿಧಾನದಲ್ಲಿ ಬದಲಾವಣೆ ಮಾಡಿಕೊಂಡು ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು, ಸರಿಯಾದ ವ್ಯಾಯಾಮದಿಂದ ಹಾರ್ಮೋನ್‍ಗಳ ಸಮತೋಲನವನ್ನು ಕಾಪಾಡಿಕೊಳ್ಳುವುದು, ಸಮತೋಲನ ಆಹಾರ ಸೇವಿಸುವುದು.

ರಕ್ಷಾ ಬಂಧನ: ಆಚರಣೆಯ ಹಿಂದಿನ ಮಹತ್ವ, ರಕ್ಷಾಬಂಧನಕ್ಕೆ ಶುಭಾಶಯಗಳು ಇಲ್ಲಿ ತಿಳಿಯಿರಿ

You may also like