Home » ಅಕ್ರಮಸಕ್ರಮ ಅರ್ಜಿ ಬಗ್ಗೆ ನಿಮಗೆಷ್ಟುಗೊತ್ತು? ಫಾರಂ ನಂ.57ರಲ್ಲಿ ಏನೇನಿದೆ?

ಅಕ್ರಮಸಕ್ರಮ ಅರ್ಜಿ ಬಗ್ಗೆ ನಿಮಗೆಷ್ಟುಗೊತ್ತು? ಫಾರಂ ನಂ.57ರಲ್ಲಿ ಏನೇನಿದೆ?

by manager manager

Akrama Sakrama : ಸರ್ಕಾರಿ ಜಮೀನುಗಳಲ್ಲಿನ ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸಲು ಸರ್ಕಾರ ಕರ್ನಾಟಕ ಭೂ ಕಂದಾಯ ಕಾಯಿದೆ 1964ರ ಕಲಂ 94ಎ(4)ಗೆ 2018 ಮಾರ್ಚ್ 17ರಂದು ತಿದ್ದುಪಡಿ ತಂದಿದ್ದು, 1966ರ ನಿಯಮ 108ಸಿಸಿ ಹಾಗೂ 108ಸಿಸಿಸಿಯನ್ನು ಸೇರ್ಪಡೆ ಮಾಡಿ ಹೊಸದಾಗಿ ಫಾರಂ ನಂ.57ರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಫಾರಂ ನಂ.50 ಮತ್ತು 53ರಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ಮತ್ತೊಮ್ಮೆ ಫಾರಂ ನಂ.57ರಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶವಿಲ್ಲ. ಇದುವರೆಗೂ ಅಕ್ರಮ-ಸಕ್ರಮಕ್ಕೆ ಅರ್ಜಿ ಸಲ್ಲಿಸದಿರುವ ಅನಧಿಕೃತ ಸಾಗುವಳಿದಾರರಿಗೆ ಇದು ವರದಾನವಾಗಿದೆ. 2005 ಜನವರಿ 1ಕ್ಕಿಂತ ಮೊದಲು ಅನಧಿಕೃತ ಅಧಿಭೋಗ ಹೊಂದಿದವವರಿಗೆ ಜಮೀನು ಸಕ್ರಮಕ್ಕಾಗಿ 2019 ಮಾರ್ಚ್ 16ರವರೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ. ಅರ್ಜಿಗಳನ್ನು ಸ್ವೀಕರಿಸಿ ಇತ್ಯರ್ಥಪಡಿಸುವ ಬಗ್ಗೆ ಸರ್ಕಾರ ಅ.25ರಂದು ಮಾರ್ಗಸೂಚಿ ಹೊರಡಿಸಿದೆ.

ಅರ್ಜಿ ಕೊಡುವುದು ಹೇಗೆ :-

– ಆಯಾ ತಾಲೂಕಿನ ತಹಸೀಲ್ದಾರ್‍ಗಳು ಫಾರಂ 57ರಲ್ಲಿ ಅರ್ಜಿದಾರರಿಂದ ಅರ್ಜಿ ಶುಲ್ಕ 100ರೂ.ಗಳೊಂದಿಗೆ ಸ್ವೀಕರಿಸಬೇಕು.

– ಈ ಅರ್ಜಿಗಳನ್ನು ಜ್ಯೇಷ್ಠತೆಗೆ ಅನುಗುಣವಾಗಿ ನಮೂನೆ 58ರ ರಿಜಿಸ್ಟರ್‍ನಲ್ಲಿ ನಮೂದಿಸಿ ಪರಿಶೀಲನೆ ಮಾಡಬೇಕು.

– ಸರ್ಕಾರಿ ಜಮೀನಿನ ಅನಧಿಕೃತ ಸಾಗುವಳಿ ಸಕ್ರಮಗೊಳಿಸಲು ಕಲಂ 94(ಎ) ಅಡಿಯಲ್ಲಿ ಫಾರಂ 50 ಹಾಗೂ ಕಲಂ 94(ಬಿ) ಅಡಿಯಲ್ಲಿ ಫಾರಂ 53ರ ಅರ್ಜಿಗಳನ್ನು ಸಲ್ಲಿಸಿದ ಅರ್ಜಿದಾರರು ಹೊಸದಾಗಿ ಹೊರಡಿಸಲಾದ ಫಾರಂ ನಂ.57ರ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.

– ಈ ಕಾಯಿದೆಯಡಿ ಸಕ್ರಮಗೊಳಿಸಿದ ಜಮೀನನ್ನು 25 ವರ್ಷ ಪರಭಾರೆ ಮಾಡಲು, ವ್ಯವಸಾಯೇತರ ಉದ್ದೇಶಕ್ಕೆ ಬಳಸಲು ಅವಕಾಶವಿಲ್ಲ.

ಸಕ್ರಮಕ್ಕೆ ಅಂತರ ನಿಗಧಿ :-

– ಫಾರಂ ನಂ.57ರಲ್ಲಿ ಜಮೀನು ಮಂಜೂರು ಮಾಡಲು ನಗರ ವ್ಯಾಪ್ತಿಯಿಂದ ಎಷ್ಟು ದೂರದಲ್ಲಿರಬೇಕು ಎಂಬ ಬಗ್ಗೆ ಸರಕಾರ ಅಂತರವನ್ನೂ ನಿಗದಿ ಮಾಡಿದೆ.

– ಯಾವ ರೀತಿಯ ಜಮೀನುಗಳನ್ನು ಸಕ್ರಮಗೊಳಿಸಬಾರದು ಎಂಬ ಬಗ್ಗೆಯೂ ಸ್ಪಷ್ಟಪಡಿಸಿದೆ.

– ನಿಬರ್ಂಧಿತ ಅಂತರವನ್ನು ತೀರ್ಮಾನಿಸುವಾಗ ಕರ್ನಾಟಕ ಜನರಲ್ ಕ್ಲಾಸ್ ಕಾಯಿದೆ 1899ರ ಕಲಂ 11 ಮೆಸರ್‍ಮೆಂಟ್ ಆಫ್ ಡಿಸ್ಟೆನ್ಸ್‍ನಡಿ ಕ್ರಮ ಕೈಗೊಳ್ಳಲು ಸೂಚಿಸಿದೆ.

– ನಿಬರ್ಂಧಿತ ಅಂತರ ಅಳತೆ ಮಾಡುವಾಗ ನೇರ ಅಂತರ ಅಳತೆ ಮಾಡಿಸಿ ಸಕ್ಷಮ ಪ್ರಾಧಿಕಾರ ಭೂಮಾಪನ ಇಲಾಖೆಯಿಂದ ನಿರ್ವಹಿಸಿ ದೃಢೀಕೃತ ಮಾಹಿತಿ ಪಡೆದು ಕ್ರಮ ವಹಿಸಬೇಕು. ಕಲಂ 94(ಡಿ)ಅಡಿ ಜಿಲ್ಲೆಯ ಯಾವ ಗ್ರಾಮಗಳಲ್ಲಿ ಬಗರ್‍ಹುಕುಂ ಸಾಗುವಳಿ ಸಕ್ರಮೀಕರಣಕ್ಕೆ ಅವಕಾಶವಿದೆ ಎಂಬ ಪಟ್ಟಿಯನ್ನು ಸಾರ್ವಜನಿಕವಾಗಿ ಪ್ರಕಟಿಸಲು ಆದೇಶಿಸಿದೆ.

– ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ವ್ಯಾಪ್ತಿಯಿಂದ 18ಕಿ.ಮೀ, ಬೆಳಗಾವಿ, ಕಲಬುರಗಿ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಮೈಸೂರು ನಗರದಿಂದ 10ಕಿ.ಮೀ, ಎಲ್ಲ ನಗರಸಭೆಗಳ ವ್ಯಾಪ್ತಿಯಿಂದ 5ಕಿ.ಮೀ ಹಾಗೂ ಎಲ್ಲ ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಿಂದ 3ಕಿ.ಮೀ. ಅಂತರದಲ್ಲಿ ಮಾತ್ರ ಫಾರಂ ನಂ.57ರಡಿ ಜಮೀನು ಸಕ್ರಮ ಮಾಡಲು ಅವಕಾಶ ನೀಡಲಾಗಿದೆ.

ಮಾರಾಟಕ್ಕೆ ಸರ್ಕಾರ ಅಂಕುಶ ಹಾಕಿದೆ :-

– ಫಾರಂ ನಂ.50 ಮತ್ತು 53ರಲ್ಲಿ ಬಗರ್‍ಹುಕುಂ ಸಾಗುವಳಿ ಸಕ್ರಮ ಮಾಡಿಸಿಕೊಂಡವರು ನಿಗದಿತ ಪರಭಾರೆ ಅವಧಿ ಮುಗಿದ ನಂತರ ಅಂತಹ ಜಮೀನು ಮಾರಾಟ ಮಾಡಲು ಸರ್ಕಾರದ ಪೂರ್ವಾನುಮತಿ ಪಡೆಯುವುದು ಕಡ್ಡಾಯ.

– ಒಂದೊಮ್ಮೆ ಪರಭಾರೆ ಮಾಡಲು ತಹಸೀಲ್ದಾರ್ ಈಗಾಗಲೇ ನಿರಾಕ್ಷೇಪಣಾ ಪತ್ರ ನೀಡಿದ್ದರೆ ಅದನ್ನು ತಕ್ಷಣ ಹಿಂಪಡೆಯಬೇಕು. ಈ ಬಗ್ಗೆ ಜಿಲ್ಲಾ ಉಪ ನೋಂದಣಾಧಿಕಾರಿಗೂ ಸೂಚನೆ ನೀಡಬೇಕು.

– ಸರಕಾರದ ವಿವಿಧ ಅಭಿವೃದ್ಧಿ ಮತ್ತು ಮೂಲಸೌಕರ್ಯದ ಯೋಜನೆಗಳಿಗೆ ಸರಕಾರಿ ಜಮೀನಿನ ಕೊರತೆ ಇದೆ. ವಸತಿ, ಸ್ಮಶಾನ ಭೂಮಿ, ಸಾರ್ವಜನಿಕ ಉದ್ದೇಶಕ್ಕೆ ಖಾಸಗಿ ಜಮೀನು ಖರೀದಿಸುವುದು ಸರಕಾರಕ್ಕೆ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಫಾರಂ ನಂ.50 ಮತ್ತು 53ರಲ್ಲಿ ಮಂಜೂರು ಮಾಡಿದ ಜಮೀನುಗಳ ಪರಭಾರೆ ಅವಧಿ ಮುಗಿದಿದ್ದರೆ, ಅಂತಹ ಜಮೀನು ಮಾರಾಟ ಮಾಡಲು ಫಲಾನುಭವಿಗಳು ಇಚ್ಛಿಸಿದರೆ, ಈ ಜಮೀನು ಸರಕಾರದ ಯೋಜನೆಗಳಿಗೆ ಉಪಯುಕ್ತವಾಗಿದ್ದರೆ ಕರ್ನಾಟಕ ಭೂ ಕಂದಾಯ (3ನೇ ತಿದ್ದುಪಡಿ ನಿಯಮ), 2018ರ ನಿಯಮ 108ಜೆ(ಐಎ) ಅನ್ವಯ ಪ್ರಚಲಿತ ಮಾರ್ಗಸೂಚಿ ಬೆಲೆ ನೀಡಿ ಖರೀಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.

ಸ್ವಯಂ ಘೋಷಣೆ ಮಾಡಿಕೊಳ್ಳುವುದು ಹೇಗೆ :-

– ಅರ್ಜಿ ಸಲ್ಲಿಸುವಾಗ ಎಷ್ಟು ನಿವೇಶನ ಮತ್ತು ಕಟ್ಟಡ ನಿರ್ಮಾಣ ಉಲ್ಲಂಘನೆ ಮಾಡಲಾಗಿದೆ ಎಂದು ಸ್ವಯಂ ಘೋಷಣೆ ಮಾಡಿಕೊಳ್ಳಬೇಕು.

– ಎಷ್ಟು ದೊಡ್ಡ ನಿವೇಶನವಿದ್ದರೂ ಸಕ್ರಮಕ್ಕೆ ಅರ್ಜಿ ಸಲ್ಲಿಸಬಹುದು.

– ಸ್ಥಳೀಯ ಆಡಳಿತ ಅರ್ಜಿ ಪರಿಶೀಲಿಸಿ ದಂಡದ ಮೊತ್ತ ನಿರ್ಧರಿಸಲಿದೆ.

– ಎಷ್ಟು ಸಕ್ರಮವಾಗಲಿದೆ : ಸರ್ಕಾರ ವಸತಿ ಉದ್ದೇಶದ ಆಸ್ತಿಗಳಲ್ಲಿನ ಶೇ 50, ವಾಣಿಜ್ಯ ಉದ್ದೇಶದ ಆಸ್ತಿಯಲ್ಲಿನ ಶೇ 25ರಷ್ಟು ಉಲ್ಲಂಘನೆಯನ್ನು ಮಾತ್ರ ಸಕ್ರಮ ಮಾಡಲಿದೆ. ಉಳಿದಂತೆ ಹೆಚ್ಚು ಉಲ್ಲಂಘನೆ ಮಾಡಿದ್ದರೆ, ಕಠಿಣ ಕ್ರಮ ಎದುರಿಸುವುದು ಅನಿವಾರ್ಯ. ಯಾವುದು ಸಕ್ರಮವಾಗುತ್ತದೆ : ಅನಧಿಕೃತ ಬಡಾವಣೆಗಳಲ್ಲಿ ನಿವೇಶನ, ಭೂ ಉಪಯೋಗಗಳ ಉಲ್ಲಂಘನೆ, ಕಟ್ಟಡದ ಸುತ್ತ ನಿರ್ದಿಷ್ಟ ಜಾಗ ಬಿಡದಿರುವುದು, ನೆಲ ವಿಸ್ತೀರ್ಣ ಪ್ರಮಾಣ ಉಲ್ಲಂಘನೆ ಪ್ರಕರಣಗಳು ಸಕ್ರಮವಾಗಲಿವೆ.

ಇವು ಸಕ್ರಮವಾಗೋಲ್ಲ :-

– ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ, ಉದ್ಯಾನವನ, ಕ್ರೀಡಾಂಗಣ ನಿರ್ಮಿಸಲು ಕಾಯ್ದಿರಿಸಿದ ಜಾಗದಲ್ಲಿ ಕಟ್ಟಡ ನಿರ್ಮಾಣ, ನೆಲ ಮಹಡಿಯಲ್ಲಿ ಕಟ್ಟಡ ನಿರ್ಮಾಣ ಮಾಡಿದ್ದರೆ ಸಕ್ರಮ ಮಾಡಲು ಅವಕಾಶವಿಲ್ಲ.

ದಂಡ ಎಷ್ಟು ಕಟ್ಟಬೇಕು :-

– ಚದರ ಮೀಟರ್ ಆಧಾರದಲ್ಲಿ ಸ್ಥಳೀಯ ಸಂಸ್ಥೆಗಳು ದಂಡ ಶುಲ್ಕವನ್ನು ನಿಗದಿ ಮಾಡುತ್ತವೆ. ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತ್ಯೇಕ ದಂಡ ಶುಲ್ಕವಿದ್ದು, ಉಳಿದ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗೆ ಪ್ರತ್ಯೇಕ ದಂಡ ಶುಲ್ಕವಿರಲಿದೆ.

ಅರ್ಜಿ ಎಲ್ಲಿ ಸಿಗುತ್ತದೆ :-

– ಅಕ್ರಮ ಸಕ್ರಮಕ್ಕೆ ಸಲ್ಲಿಸುವ ಅರ್ಜಿಗಳು ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳಲ್ಲಿ ಲಭ್ಯ. ಆನ್‍ಲೈನ್ ಮೂಲಕವೂ ಅರ್ಜಿಗಳನ್ನು ಪಡೆಯಬಹುದಾಗಿದೆ. ನಗರಾಭಿವೃದ್ಧಿ ಇಲಾಖೆ ವೆಬ್‍ಸೈಟ್‍ನಲ್ಲೂ ಅರ್ಜಿ ಲಭ್ಯವಿದೆ.

ಶ್ರೀ ಲಲಿತ ಸಹ್ರಸನಾಮವನ್ನು ಪಠಿಸುವ ಮುನ್ನ ಏನೆಲ್ಲ ಮಾಡಬೇಕು ಮತ್ತು ಅದರ ಪ್ರಯೋಜನಗಳೇನು?