Home » LIC ಜೀವನ್ ಅಜಾದ್ ಪಾಲಿಸಿ ಇಂದ ಪಡೆಯಿರಿ 5 ಲಕ್ಷದ ವರೆಗೂ ಕವರೇಜ್

LIC ಜೀವನ್ ಅಜಾದ್ ಪಾಲಿಸಿ ಇಂದ ಪಡೆಯಿರಿ 5 ಲಕ್ಷದ ವರೆಗೂ ಕವರೇಜ್

by manager manager

Life Insurance Corporation of India (LIC) ಯಾರಿಗೆ ತಿಳಿದಿಲ್ಲ ಹೇಳಿ. ವ್ಯಕ್ತಿ ಮರಣದ ನಂತರ ಅಥವಾ ಜೀವಿತಾವಧಿಯಲ್ಲಿನ ಹಣಕಾಸಿನ ಭದ್ರತೆಗೆ ಸಂಬಂಧಿಸಿದಂತೆ ಒಂದಿಷ್ಟು ಹೂಡಿಕೆ ಮಾಡಲು ಈ ವೇದಿಕೆ ನಿಜಕ್ಕೂ ಒಂದು ಉತ್ತಮ ದಾರಿ. ಇಲ್ಲಿ ನಾವು ನಿಮ್ಮ ಮಕ್ಕಳ ಶೈಕ್ಷಣಿಕ ವೆಚ್ಚಕ್ಕಾಗಿ, ಅನಾರೋಗ್ಯಕ್ಕೆ ತುತ್ತಾದ ಸಂದರ್ಭದಲ್ಲಿ, ಭವಿಷ್ಯದ ಅರ್ಥಿಕ ತುರ್ತುನಿಧಿಗಾಗಿ ಮಾಸಿಕ, ತ್ರೈಮಾಸಿಕ, 6 ತಿಂಗಳು ಮತ್ತು ವರ್ಷಕೊಮ್ಮೆ ಎಂಬಂತೆ ಇಲ್ಲಿ ಪಾವತಿಸಬಹುದು. ಪಾವತಿಸಿದ ಹಣಕ್ಕೆ ಇಂತಿಷ್ಟು ಬಡ್ಡಿಯಂತೆ ನಿಗದಿಸಿದ ವರ್ಷಗಳ ಕಂತು ಮುಗಿದ ಮೇಲೆ ಪುನಃ ವಾಪಸ್ ಪಡೆಯಬಹುದು. LIC ಪಾಲಿಸಿಗಳಲ್ಲಿ ಈಗಾಗಲೇ 10 ಹಲವು ಪ್ಲಾನ್ ಗಳು ಲಭ್ಯವಿದ್ದರೂ ಸಧ್ಯ ಈ ನಡುವೆ LIC ಸಂಸ್ಥೆ ಇನ್ನೊಂದು ಹೊಸ ಪ್ಲಾನ್ ಅನ್ನು ಮಾರುಕಟ್ಟೆಗೆ ತಂದಿದೆ ಅದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.

LIC ಜೀವನ್ ಅಜಾದ್
LIC ಜೀವನ್ ಅಜಾದ್ ನಿಗಮದ ಹೊಸ ಯೋಜನೆಯಾಗಿದ್ದು, ಇದು ವೈಯಕ್ತಿಕ ಉಳಿತಾಯ ಮತ್ತು ಜೀವ ವಿಮೆಯ ಗುರಿಯನ್ನು ಹೊಂದಿದೆ. ಹಾಗೆ ಇದು ಒಂದು ಆಕರ್ಷಕ ಸಂರಕ್ಷಿತ ಉಳಿತಾಯವನ್ನು ಗ್ರಾಹಕರಿಗೆ ನೀಡುತ್ತಿದೆ.

ಈ ಯೋಜನೆಯಡಿ ನೋಂದಾಯಿಸಿದ ಗ್ರಾಹಕರಿಗೆ ತಮ್ಮ ಮರಣದ ನಂತರ ಎದುರಾಗುವ ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ, ಹಾಗೇ ಯೋಜನೆಯ ಅವಧಿಯಲ್ಲಿ ಹಣದ ಕೊರತೆ ಇರುವ ಗ್ರಾಹಕರಿಗೆ ಬಾಂಡ್‌ಗಳ ಮೇಲೆ ಸಾಲ ಸೌಲಭ್ಯ ಮತ್ತು ನಿಗದಿತ ಯೋಜನೆಯ ಅವಧಿ ಮುಗಿದ ಮೇಲೆ ಪೂರ್ವ ನಿರ್ಧರಿತ ಯೋಜನೆಯ ಮೊತ್ತವನ್ನು ಪಾಲಿಸಿದಾರರಿಗೆ ಸಿಗುವಂತೆ ಮಾಡುವುದು ಯೋಜನೆಯ ಮುಖ್ಯ ಗುರಿಯಾಗಿದೆ.

ಹಾಗಾದರೆ ಈ ಯೋಜನೆಯಾದಿಯಲ್ಲಿ ಎಷ್ಟು ಕವರೇಜ್ ಲಭ್ಯವಿವೆ ಗೊತ್ತಾ?
LIC ಜೀವನ್ ಅಜಾದ್ ಯೋಜನೆಯ ಪಾಲಿಸಿದಾರರಿಗೆ ರೂ 2 ಲಕ್ಷ ದಿಂದ ರೂ 5 ಲಕ್ಷದ ವರೆಗೆ ಕವರೇಜ್ ಸಿಗುತ್ತದೆ. ಈ ಪಾಲಿಸಿ 15 ವರ್ಷದಿಂದ 20 ವರ್ಷದ ವರೆಗಿನ ನಿಗದಿತ ಯೋಜನೆಯಾಗಿದೆ.

ಪ್ರೀಮಿಯಂ ಪೇಮೆಂಟ್ ಅವಧಿ
ಈ ಯೋಜನೆಯ ಪಾಲಿಸಿದಾರರು ಗರಿಷ್ಟ 8 ವರ್ಷಗಳ ವರೆಗೆ ಪ್ರೀಮಿಯಂ ಪಾವತಿಸಬೇಕು. ನೀವು 20 ವರ್ಷಗಳ ಟರ್ಮ್ ಅನ್ನು ಆಯ್ಕೆ ಮಾಡಿದ್ದಲ್ಲಿ 12 ವರ್ಷಗಳ ವರೆಗೆ ಪ್ರೀಮಿಯಂ ಪಾವತಿಸಬೇಕಾಗುತ್ತದೆ.

ಯಾರೆಲ್ಲ ಈ ಯೋಜನೆಗೆ ಅರ್ಹರು
90 ದಿನದ ಮಗುವಿನಿಂದ 50 ವರ್ಷ ವಯಸ್ಸಿನ ಯಾರಾದರೂ ಈ ಪಾಲಿಸಿಗೆ ಅರ್ಹರಾಗಿರುತ್ತರೆ. ಮಗು 18 ವರ್ಷ ವಯಸ್ಸಿಗೆ ಬರುವ ತನಕ ಅ ಮಗುವಿನ ಪೋಷಕರೆ ಪಾಲಿಸಿಯ ಸಂಪೂರ್ಣ ಫಲಾನುಭವಿಗಳಾಗಿರುತ್ತಾರೆ.

ಪ್ರೀಮಿಯಂ ಪೇಮೆಂಟ್
ಪ್ರೀಮಿಯಂ ಮೊತ್ತವನ್ನು ನಾವು ನಿಯಮದಂತೆ ಅಗತ್ಯಕ್ಕೆ ಮತ್ತು ಲಭ್ಯತೆಗೆ ಅನುಗುಣವಾಗಿ ತೈಮಾಸಿಕೆ, ಅರ್ಧ ವರ್ಷ ಅಥವಾ ಒಂದು ವರ್ಷಕ್ಕೆ ಒಮ್ಮೆ ಎಂಬಂತೆ ನಿಗದಿತ ಟರ್ಮ್ ವರೆಗೆ ಪಾವತಿಸಬಹುದು.

ಡೆತ್ ಬೆನಿಫಿಟ್ಸ್
ವ್ಯಕ್ತಿ ಪಾಲಿಸಿ ಅವಧಿಯಲ್ಲಿ ಸಹಜವಾಗಿ ಮರಣ ಹೊಂದಿದರೆ, ಅಪಘಾತದಿಂದ ಮರಣ ಹೊಂದಿದರೆ ಅಥವಾ ಶಾಶ್ವತ ಅಂಗ ವೈಕಲ್ಯ ಉಂಟಾದರೆ ಸಂಪೂರ್ಣ ಪ್ರೀಮಿಯಂ ಮೊತ್ತ ಸಂಬಂಧ ಪಟ್ಟವರಿಗೆ ಲಭಿಸುತ್ತದೆ.

ಹಾಗೇ ಒಂದು ವೇಳೆ ಮಗುವಿನ ಪೋಷಕರು ಪಾಲಿಸಿ ಅವಧಿಯಲ್ಲಿ ಮೃತರಾದರೆ ಪಾಲಿಸಿ ಪ್ರೀಮಿಯಂ ಮುಂದುವರೆಸುವ ಅಗತ್ಯ ಇರುವುದಿಲ್ಲ. ಮಗು ಇನ್ನು ಪ್ರಬುದ್ಧವಸ್ಥೆಗೆ ಬಾರದ ಕಾರಣ ಪಾಲಿಸಿಯಿಂದ ಸಿಗುವ ಸಂಪೂರ್ಣ ಪಾಲನುಭವ, ಪ್ರೀಮಿಯಂ ಟರ್ಮ್ ಮುಕ್ತಾಯವಾಗದಿದ್ದರು ಮಗುವಿಗೆ ಸಿಗುತ್ತದೆ.

LIC ಜೀವನ್ ಅಜಾದ್ ಬಗ್ಗೆ ಇನ್ನಷ್ಟು

  • ಪಾಲಿಸಿ ಲಾಭ ಪಡೆಯಲು ಕನಿಷ್ಟ ಎರಡು ವರ್ಷಗಳವರೆಗೆಯಾದರೂ ಯೋಜನೆ ಸಕ್ರಿಯವಾಗಿ ಇರಬೇಕು. ಇಲ್ಲದಿದ್ದರೆ ಪಾವತಿಸಿದ ಪ್ರೀಮಿಯಂ ಮೊತ್ತಕ್ಕೆ ಲಾಯಲ್ಟಿ ಸೇರಿಸಿ ಮರು ಪಾವತಿಸಲಾಗುವುದು.
  • ಇನ್ನೂ ಪಾಲಿಸಿಯನ್ನ ಸ್ಥಗಿತಗೊಳಿಸಲು ಪಾವತಿಸಿದ ಹಣ ಹಿಂಪಡೆಯಲು ಅಥವಾ ಪಾಲಿಸಿ ಮೇಲೆ ಸಾಲ ಪಡೆಯಲು ಪಾಲಿಸಿದಾರರು ಕನಿಷ್ಟ 2 ವರ್ಷಗಳವರೆಗಾದರು ಪ್ರೀಮಿಯಂ ಟರ್ಮ್ ಪಾವತಿಸಬೇಕಾಗಿರುತ್ತದೆ.
  • ಈ ಯೋಜನೆಯ ಪಾಲಿಸುದಾರರು ಪಾಲಿಸಿ ಬೆನಿಫಿಟ್ ಅನ್ನು 18 ವರ್ಷದಿಂದ 70 ವರ್ಷದ ಒಳಗೆ ಯಾವಾಗ ಬೇಕಾದರೂ ಪಡೆಯಬಹುದು.
  • ಇನ್ನೂ ಇನ್‌ಸ್ಟಾಲ್‌ಮೆಂಟ್‌ ಪಾವತಿಯ ಮೊತ್ತವನ್ನ, ಆಯ್ಕೆ ಮಾಡುವ ಕವರೇಜ್ ಹಾಗೂ ಟರ್ಮ್ ನ ಮೇಲೆ ನಿಗಧಿ ಪಡಿಸಲಾಗುತ್ತದೆ.
  • ಮುಖ್ಯವಾಗಿ ಅನಾರೋಗ್ಯ, ಆತ್ಮಹತ್ಯೆ ಇತರ ಅಸಹಜ ಘಟನೆಯಿಂದ ಮೃತಪಟ್ಟ ಪಾಲಿಸಿದಾರರಿಗೆ ಈ ಯೋಜನೆಯ ಲಾಭ ಲಭ್ಯವಿಲ್ಲ.