Home » ಮಳೆಯಾಶ್ರಿತ ರೈತರಿಗಾಗಿ ಕೃಷಿ ಭಾಗ್ಯ ಯೋಜನೆ: ಇಲ್ಲಿದೆ ಯೋಜನೆಯ ಸಂಪೂರ್ಣ ಮಾಹಿತಿ

ಮಳೆಯಾಶ್ರಿತ ರೈತರಿಗಾಗಿ ಕೃಷಿ ಭಾಗ್ಯ ಯೋಜನೆ: ಇಲ್ಲಿದೆ ಯೋಜನೆಯ ಸಂಪೂರ್ಣ ಮಾಹಿತಿ

by manager manager

ಕರ್ನಾಟಕ ಮಳೆಯಾಶ್ರಿತ ಕೃಷಿಯ ಮೇಲೆ ಹೆಚ್ಚು ಅವಲಂಬಿತವಾಗಿರುವುದರಿಂದ ಹವಾಮಾನ ಬದಲಾವಣೆಯಿಂದ ಗಂಭೀರವಾಗಿ ಪ್ರಭಾವಕ್ಕೋಳಗಾಗುವ ರಾಜ್ಯಗಳಲ್ಲಿ ಒಂದಾಗಿದೆ. ರಾಜ್ಯದಲ್ಲಿ ಬೆಳೆ ಹಂಗಾಮುಗಳಲ್ಲಿ ಹೆಚ್ಚುತ್ತಿರುವ ಮಧ್ಯಮ ಶ್ರೇಣಿಯ ಬರ ಮತ್ತು ಪ್ರವಾಹಗಳಿಂದ ಮಳೆಯಾಶ್ರಿತ ಕೃಷಿಯು ಅನಿಶ್ಚಿತವಾಗುತ್ತಿದೆ. ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಯಲ್ಲಿ ಮಳೆ ನಡವಳಿಕೆ (ಪ್ರಮಾಣ, ಅವಧಿ ಇತ್ಯಾದಿಗಳು) ಬಗ್ಗೆ ಅರಿವು ಇಲ್ಲದಿರುವುದು ರೈತ ಸಮುದಾಯಕ್ಕೆ ಗಣನೀಯ ಆರ್ಥಿಕ ನಷ್ಟವನ್ನುಂಟು ಮಾಡಲಿದ್ದು, ಇದನ್ನು ಗಮನದಲ್ಲಿರಿಸಿ ಮಳೆಯಾಶ್ರಿತ ರೈತರ ಜೀವನಮಟ್ಟವನ್ನು ಉತ್ತಮಪಡಿಸಲು ಕೃಷಿ ಭಾಗ್ಯ ಯೋಜನೆಯನ್ನು ೨೦೧೪-೧೫ ನೇ ಸಾಲಿನಿಂದ ಜಾರಿಗೊಳಿಸಲಾಗಿದೆ. ಈ ಯೋಜನೆಯ ಪ್ರದೇಶದಲ್ಲಿ ರೈತರ ಕ್ಷೇತ್ರದಲ್ಲಿ ಬೆಳೆಗಳಿಗಾಗಿ ಲಭ್ಯವಾಗುವ ನೀರಿನ ಪ್ರಮಾಣವನ್ನು ಮಳೆ ನೀರು ಸಂಗ್ರಹಣೆ ಮುಖಾಂತರ ಹೆಚ್ಚಿಸಿ ಆಯ ವಲಯಗಳಲ್ಲಿ ಸುಸ್ಥಿರ ಕೃಷಿ ಉತ್ತೇಜಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಯೋಜಿಸಲಾಗಿದೆ.

ಕೃಷಿ ಭಾಗ್ಯ ಯೋಜನೆಯ ಸೌಲಭ್ಯವನ್ನು ಎಲ್ಲಾ ವರ್ಗದ ರೈತರು ಪಡೆಯಬಹುದಾಗಿದೆ. ಈ ಯೋಜನೆಯಲ್ಲಿ ಮಳೆನೀರಿನ ಸಂಗ್ರಹಣೆ, ಸಂರಕ್ಷಣೆ ಹಾಗೂ ಉಪಯುಕ್ತ ಬಳಕೆ, ಲಾಭದಾಯಕ ಬೆಳೆ ಪದ್ಧತಿ ಅಳವಡಿಕೆ, ಉತ್ತಮ ಆದಾಯ ತರುವ ತೋಟಗಾರಿಕೆ ಬೆಳೆಗಳು, ಪಶುಸಂಗೋಪನಾ ಚಟುವಟಿಕೆಗಳು ಇವೆ.

2014-15 ರಿಂದ ‘ಕೃಷಿಭಾಗ್ಯ’ ಯೋಜನೆ ಅನುಷ್ಠಾನಗೊಂಡಿದ್ದು, 25 ಜೆಲ್ಲೆಗಳ 131 ತಾಲ್ಲೂಕುಗಳು ‘ಕೃಷಿಭಾಗ್ಯ’ ವ್ಯಾಪ್ತಿಗೆ ಒಳಪಟ್ಟಿವೆ. ಈ ಯೋಜನೆಯನ್ನು ಒಂದು ಪ್ಯಾಕೇಜ್’ನಡಿ ಹಲವು ಘಟಕಗಳ ಅಡಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಸ್ಥಳದಲ್ಲಿ ಮಣ್ಣಿನ ತೇವಾಂಶ ಸಂರಕ್ಷಿಸಲು ಕ್ಷೇತ್ರ ಬದುಗಳ ನಿರ್ಮಾಣ, ನೀರನ್ನು ಸಂಗ್ರಿಹಿಸಲು ಕೃಷಿಹೊಂಡ ನಿರ್ಮಾಣ ಜೊತೆಗೆ ನೀರು ಇಂಗದಂತೆ ತಡೆಯಲು ಪಾಲಿಥೀನ್ ಹೊದಿಕೆ. ಹೊಂಡದಿಂದ ನೀರು ಎತ್ತಲು ಡಿಸೇಲ್ ಪಂಪಸೆಟ್ ಹಾಗೂ ನೀರನ್ನು ಬೆಳೆಗೆ ಹಾಯಿಸಲು ಲಘು ನೀರಾವರಿ ಮತ್ತು ಸುಧಾರಿತ ಬೆಳೆ ಪದ್ಧತಿ, ಪಾಲಿಹೌಸ್ (ನೆರಳು ಪರದೆ) ಮನೆ ಪ್ರಮುಖ ಘಟಕಗಳಾಗಿವೆ.

Krushi bhagya: scheme for rain-fed farmers

ಯೋಜನೆಯ ಉದ್ದೇಶಗಳು:

ರಾಜ್ಯದ ಮಳೆಯಾಶ್ರಿತ ಕೃಷಿಯನ್ನು ಸುಸ್ಥಿರ ಕೃಷಿಯನ್ನಾಗಿ ರೂಪಾಂತರಗೊಳಿಸುವುದು. ಸಮರ್ಪಕ ಮಳೆ ನೀರಿನ ಸಂಗ್ರಹಣೆ ಹಾಗೂ ಉಪಯುಕ್ತ ಬಳಕೆ ಪದ್ಧತಿಯಿಂದ ಕೃಷಿ ಉತ್ಪಾದಕತೆಯನ್ನು ಉತ್ತಮ ಪಡಿಸುವುದು ಮತ್ತು ಆದಾಯವನ್ನು ಹೆಚ್ಚಿಸುವುದು. ಬಿದ್ದ ಮಳೆ ನೀರನ್ನು ವ್ಯರ್ಥ ಮಾಡದೆ ಆಯ್ದ ಸಥಳದಲ್ಲಿ ಕೃಷಿ ಹೊಂಡ ತೆಗೆದು ಜಲ ಸಂಗ್ರಹಿಸಿ ಸಂದಿಗ್ಧ ಹಂತಗಳಲ್ಲಿ ರಕಷಣಾತ್ಮಕ ನೀರಾವಿ ಒದಗಿಸುವುದು.

ಈ ಯೋಜನೆಯಡಿ ಒದಗಿಸಲಾಗುವ ಸೌಲಭ್ಯಗಳ/ಘಟಕಗಳ ವಿವರಗಳು:

  1. ನೀರು ಸಂಗ್ರಹಣಾ ರಚನೆ (ಕೃಷಿ ಹೊಂಡ)
  2. ನೀರು ಇಂಗದಂತೆ ತಡೆಯಲು ಪಾಲಿಥೀನ್ ಹೊದಿಕೆ/ಪರ್ಯಾಯ ಮಾದರಿಗಳು
  3. ಹೊಂಡದಿಂದ ನೀರು ಎತ್ತಲು ಡಿಸೇಲ್/ಸೋಲಾರ ಪಂಪ್‌ಸೆಟ್ ಹಾಗೂ
  4. ನೀರನ್ನು ಬೆಳೆಗೆ ಹಾಯಿಸಲು ಲಘು ನೀರಾವರಿ (ಹನಿ/ತುಂತುರು)
  5. ಕೃಷಿ ಹೊಂಡದ ಸುತ್ತಲೂ ನೆರು ಪರದೆ.
  6. ಬದು ನಿರ್ಮಾಣ ಕಾಮಗಾರಿಯನ್ನು, ಜಲಾನಯನ ಅಭಿವೃದ್ಧಿ ಇಲಾಖೆಯ ಯೋಜನೆಗಳಡಿ ಅಥವಾ ಉದ್ಯೋಗ ಖಾತ್ರಿಯೋಜನೆಯಡಿ ಕೈಗೊಳ್ಳುವುದು.

Krushi bhagya: scheme for rain-fed farmers

ನೀರನ್ನು ಸಂಗ್ರಹಿಸಲು ಕೃಷಿ ಹೊಂಡ (ನೀರು ಸಂಗ್ರಹಣಾ ರಚನೆ):

ಮಳೆ ನೀರು ಸಂಗ್ರಹಣೆಗೆ ಎಲ್ಲಾ ರೀತಿಯ ಮಣ್ಣುಗಳಲ್ಲಿ ಈ ರಚನೆ ಅನುಕೂಲಕರವಾಗಿರುತ್ತದೆ. ಉಪಚರಿಸಲ್ಪಟ್ಟ ಕೃಷಿ ಯೋಗ್ಯ ಜಮೀನಿನಿಂದ ದಾರಿಗಳಲ್ಲಿ ಹರಿಯುವ ಹೆಚ್ಚುವರಿ ಮಳೆಯ ನೀರನ್ನು ಆಯ್ದ ಸ್ಥಳದಲ್ಲಿ ಹೊಂಡ ತೆಗೆದು ಜಲ ಸಂಗ್ರಹಣೆಯನ್ನು ಮಾಡಬಹುದಾಗಿದೆ. ಸಂಗ್ರಹಣೆಯಾದ ಮಳೆ ನೀರನ್ನು ಬೆಳೆಗಳಿಗೆ ಸಂದಿಗ್ಧ ಹಂತಗಳಲ್ಲಿ ರಕ್ಷಣಾತ್ಮಕ ನೀರಾವರಿಗಾಗಿ ಬಳಸಿಕೊಳ್ಳಬಹುದಾಗಿದೆ. ನೀರು ಸಂಗ್ರಹಣಾ ಕ್ರಮಗಳ ವಿವಿಧ ರಚನೆಗಳ ಗಾತ್ರ ಹಾಗೂ ಘಟಕ ವೆಚ್ಚದ ವಿವರ ಈ ಕೆಳಕಂಡಂತಿದೆ. ಶಿಪಾರಸ್ಸು ಮಾಡಿರುವ ರಚನೆಗಳಲ್ಲದೆ ರೈತರು, ಸ್ಥಳೀಯ ಅವಶ್ಯಕತೆಗೆ ಅನುಗುಣವಾಗಿ ಕೃಷಿ ಹೊಂಡದ ಗಾತ್ರವನ್ನು ಅಳವಡಿಸಿಕೊಳ್ಳಬಹುದಾಗಿದೆ. ಸದರಿ ಘಟಕಕ್ಕೆ ಸಾಮ್ಯ ರೈತರಿಗೆ ಶೇ.೮೦ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ರೈತರಿಗೆ ಶೇ.೯೦ ರ ಸಹಾಯಧನ ನೀಡುವುದು.

Krushi bhagya scheme: Scheme for rain-fed farmers. Krushi Bhagya scheme has been implemented to improve the quality of life of rain-fed farmers. The Krishi Bhagya programme was launched to secure farmers incomes by promoting on-farm rainwater conservation and encouraging efficient use of water through adoption of modern technologies.

You may also like