Home » ಭಾರತೀಯರು ಆನ್‍ಲೈನ್‍ನಲ್ಲಿ ಅತಿ ಹೆಚ್ಚು ಖರೀದಿಸುವ ಸ್ಮಾರ್ಟ್‍ಫೋನ್ ಯಾವುದು ಗೊತ್ತೇ?

ಭಾರತೀಯರು ಆನ್‍ಲೈನ್‍ನಲ್ಲಿ ಅತಿ ಹೆಚ್ಚು ಖರೀದಿಸುವ ಸ್ಮಾರ್ಟ್‍ಫೋನ್ ಯಾವುದು ಗೊತ್ತೇ?

by manager manager

ಭಾರತೀಯರು ಬೇರೆ ದೇಶದ ನಿವಾಸಿಗಳಿಗೆ ಹೋಲಿಸಿದರೆ ಯಾವುದೇ ಒಂದು ವಸ್ತುವನ್ನು ಖರೀದಿ ಮಾಡುವಾಗ ಸ್ವಲ್ಪ ಯೋಚನೆ ಮಾಡುತ್ತಾರೆ. ಈ ವಸ್ತುವಿಗೆ ಈ ಬೆಲೆ ಸರಿಯೇ ಇದನ್ನು ತೆಗೆದುಕೊಂಡರೇ ನಾವು ಮೋಸ ಹೋಗುವುದಿಲ್ಲವೇ ಎಂಬ ಯೋಚನೆಗಳು ನಮ್ಮ ಭಾರತೀಯರಲ್ಲಿ ಬಂದೆ ಬರುತ್ತದೆ ಹೀಗಿರುವಾಗ ಟೆಕ್ನಾಲಜಿ ಬೆಳೆದಂತೆಲ್ಲ ನಾವು ಖರೀದಿಸುವ ವಸ್ತುಗಳ ವೈಶಿಷ್ಟ್ಯವೇ ಬದಲಾಗುತ್ತಿದೆ. ಇನ್ನು ನಾವು ಭಾರತೀಯರು ಆನ್‍ಲೈನ್‍ನಲ್ಲಿ ಅತಿ ಹೆಚ್ಚು ಖರೀದಿ ಮಾಡುವ ಸ್ಮಾರ್ಟ್‍ಫೋನ್ ಬ್ರ್ಯಾಂಡ್ ಯಾವುದಿರಬಹುದು ಎಂಬ ಪ್ರಶ್ನೆಗೆ ಉತ್ತರವನ್ನು ಕೊಡಲೇ ಈ ಲೇಖನ. ನಮ್ಮ ಭಾರತೀಯರು ಆನ್ಲೈನ್ನಲ್ಲಿ ಅತಿ ಹೆಚ್ಚು ಖರೀದಿ ಮಾಡುವ ವಸ್ತುಗಳ ಪೈಕಿ ಸ್ಮಾಟ್ರ್ಫೋನ್ ಪ್ರಮುಖವಾಗಿದ್ದು. ಫ್ಲಿಪ್ಕಾರ್ಟ್, ಅಮೆಜಾನ್‍ಗಳಲ್ಲಿ ಆಕರ್ಷಕ ಆಫರ್, ಡಿಸ್ಕೌಂಟ್ ಮೂಲಕ ಮೊಬೈಲ್ ಮಾರಾಟ ಮಾಡುತ್ತೀವೆ. ಹೀಗಾಗಿ ಆನ್ಲೈನ್ನಲ್ಲಿ ಸ್ಮಾಟ್ರ್ಫೋನುಗಳು ಅತಿ ಹೆಚ್ಚು ಸೇಲ್ ಆಗುತ್ತಿದೆ. ಇದರ ಬಗ್ಗೆ ಕೌಂಟರ್ ಪಾಯಿಂಟ್ ಸಂಶೋಧನಾ ತಂಡ ಒಂದು ವರದಿ ಮಾಡಿದೆ ಅದು ಭಾರತದಲ್ಲಿ ಅತಿ ಹೆಚ್ಚು ಸೇಲ್ ಆಗುವ 5 ಸ್ಮಾರ್ಟ್‍ಫೋನ್ ಬ್ರ್ಯಾಂಡ್ ಹೆಸರನ್ನು ಪ್ರಕಟಿಸಿದೆ.

  • ಶಿಯೋಮಿ :-
    ಈ ಶಿಯೋಮಿ ಮೊಬೈಲ್ ಸೀರಿಸ್‍ಗಳು ಚೀನಾದ ಮೂಲವಾಗಿದ್ದು ನಮಗೆ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಫೀಚರ್ಸ್‍ಗಳನ್ನು ಕೊಡುವುದೆಂದರೇ ಅದು ವೀನಾ ಮೂಲದ ಕಂಪನಿಗಳು. ಹಾಗಾಗೀ ಈ ಪೈಕಿ ಮೊದಲ ಸ್ಥಾನದಲ್ಲಿ ಚೀನಾ ಮೂಲದ ಶಿಯೋಮಿ ಕಂಪೆನಿ ಇದೆ. ಶಿಯೋಮಿ ಕಂಪೆನಿಯ ಮೊಬೈಲ್ ಅನ್ನು ಭಾರತೀಯರು ಆನ್ಲೈನ್ನಲ್ಲಿ ಅತಿ ಹೆಚ್ಚು ಖರೀದಿ ಮಾಡುತ್ತಾರಂತೆ. ರೆಡ್ಮಿ ಹಾಗೂ ಪೋಕೋ ಕೂಡ ಶಿಯೋಮಿ ಸಂಸ್ಥೆಯ ಭಾಗವಾಗಿದ್ದು. ಭಾರತೀಯ ಸ್ಮಾಟ್ರ್ಫೋನ್ ಮಾರುಕಟ್ಟೆಯಲ್ಲಿ ಶಿಯೋಮಿ ಬರೋಬ್ಬರಿ ಶೇ. 40 ರಷ್ಟು ಮಾರ್ಕೆಟ್ ಅನ್ನು ಹೊಂದಿದೆ.
  • ಸ್ಯಾಮ್‍ಸಾಂಗ್ :-
    ತುಂಬ ವರ್ಷಗಳಿಂದ ತನ್ನ ಇರುವಿಕೆಯನ್ನು ಕಾಪಾಡಿಕೊಂಡು ಬಂದಿರುವ ಈ ಸ್ಯಾಮ್‍ಸಾಂಗ್ ಕಂಪನಿಯು ತನ್ನ ಮಾರುಕಟ್ಟೆಯನ್ನು ಎಂದು ಬಿಳಿಸಿಕೊಂಡಿಲ್ಲ, ಕೀ ಪ್ಯಾಡ್ ಮೊಬೈಲ್‍ಗಳಿಂದ ಸ್ಟಾರ್ಟ್ ಆದ ಈ ಸ್ಯಾಮ್‍ಸಾಂಗ್ ಕಂಪನಿಯ ಮೊಬೈಲ್ ಫೋನ್‍ಗಳು ಇಂದು ಆಫಲ್‍ಗಳೆ ಪೈಪೋಟಿ ಕೊಡುವ ಮಟ್ಟಿಗೆ ತನ್ನ ಇರುವಿಕೆಯನ್ನು ತೋರಿಸುತ್ತಿದೆ. ಹಾಗಾಗೀ ಅತೀ ಹೆಚ್ಚು ಖರೀದಿ ಮಾಡುವ ಸ್ಥಾನದಲ್ಲಿ ಇದು ಎರಡನೇ ಸ್ಥಾನದಲ್ಲಿದೆ. ದಕ್ಷಿಣ ಕೊರಿಯಾದ ಈ ಸ್ಯಾಮ್ಸಂಗ್ ಕಂಪೆನಿ ಭಾರತದಲ್ಲಿ ಶೇ. 19 ರಷ್ಟು ಮಾರ್ಕೆಟ್ ಹೊಂದಿದೆ. ಅದರಲ್ಲೂ ಸ್ಯಾಮ್ಸಂಗ್ ಎಮ್ ಸರಣಿಯ ಸ್ಮಾಟ್ರ್ಫೋನುಗಳು ಭಾರತದಲ್ಲಿ ಅತಿ ಹೆಚ್ಚು ಸೇಲ್ ಆಗಿವೆ ಎಂದು ಕೌಂಟರ್ ಪಾಯಿಂಟ್ ಸಂಶೋಧನಾ ತಂಡ ತಿಳಿಸಿದೆ.
  • ರಿಯಲ್ ಮಿ :-
    ಮತ್ತೆ ನಾವು ಚೀನಾ ಮೂಲದ ಈ ರಿಯಲ್ ಮಿ ಮೊಬೈಲ್‍ಗೆ ಬಂದರೆ ಇದು ಅಷ್ಟೇ ತನ್ನಲ್ಲಿ ಅನೇಕ ರೀತಿಯ ಫೀಚರ್ಸ್‍ಗಳನ್ನು ಹೊಂದಿದ್ದು. ಶೇ. 19 ರಷ್ಟು ಮಾರ್ಕೆಟ್ ಅನ್ನು ಹೊಂದಿ ಭಾರತದಲ್ಲಿ ಮೂರನೇ ಸ್ಥಾನದಲ್ಲಿದೆ.
  • ವಿವೋ :-
    ಅಮಿರ್ ಖಾನ್‍ನ ಜಾಹಿರಾತನ್ನು ನೋಡಿ ವಿವೋ ಮೊಬೈಲ್ ಫೋನ್‍ನನ್ನು ಪಡೆಯಬೇಕು ಎನ್ನುವ ಯೋಚನೆ ಬರದೆ ಇರುವ ಭಾರತೀಯನೇ ಇಲ್ಲ ಹಾಗಾಗೀ ವಿವೋ ಕಂಪೆನಿ ಭಾರತದಲ್ಲಿ ಶೇ. 4 ರಷ್ಟು ಮಾರ್ಕೆಟ್ ಅನ್ನು ಹೊಂದಿದ್ದು ನಾಲ್ಕನೇ ಸ್ಥಾನ ಪಡೆದುಕೊಂಡಿದೆ.
  • ಒನ್ ಪ್ಲಸ್ :-
    ಆಪಲ್ ಐ ಫೋನ್‍ಗಿಗೆ ಸರಿಯಾದ ಪೈಪೋಟಿಯನ್ನು ಕೊಡುತ್ತ ಬೆಲೆಯಲ್ಲಿ ಯಾವುದೇ ರೀತಿಯ ರಾಜಿಯಾಗದೆ ತನ್ನ ಫೀಚರ್ಸ್‍ಗಳಿಂದಲೇ ಫೇಮಸ್ ಆಗ್ತಾ ಇರುವ ಈ ಒನ್ ಪ್ಲಸ್ ಐದನೇ ಸ್ಥಾನದಲ್ಲಿದ್ದು, ಶೇ. 4 ರಷ್ಟು ಮಾರ್ಕೆಟ್ ಹೊಂದಿದೆ.

ಭಾರತದಲ್ಲಿ ನಿಮಗೆ ಕಡಿಮೆ ಬೆಲೆಯಲ್ಲಿ 5ಜಿ ಫೋನ್‍ಗಳು ಬೇಕೆ ? ಹಾಗಿದ್ರೆ ಇಲ್ಲಿವೆ ನೋಡಿ ಲಿಸ್ಟ್‌..

You may also like