Home » ನಿಮ್ಮ ಮೊಬೈಲ್ ಹ್ಯಾಕ್ ಆಗಿದೆಯೇ ಎಂದು ಚೆಕ್‌ ಮಾಡುವುದು ಹೇಗೆ?

ನಿಮ್ಮ ಮೊಬೈಲ್ ಹ್ಯಾಕ್ ಆಗಿದೆಯೇ ಎಂದು ಚೆಕ್‌ ಮಾಡುವುದು ಹೇಗೆ?

by manager manager

How to Know Whether My Mobile is Hacked

ಇಂದಿನ ಜೀವನಶೈಲಿಯಲ್ಲಿ ಮೊಬೈಲ್ ಮನುಷ್ಯನ ಒಂದು ಮೂಲಭೂತ ವಸ್ತುವಾಗಿ ಮಾರ್ಪಡಾಗಿಬಿಟ್ಟಿದೆ. ನಮ್ಮ ದೇಹದಲ್ಲಿ ಯಾವುದಾದರೂ ಒಂದು ಅಂಗ ಕೆಲಸ ಮಾಡದೇ ಇದ್ದಾಗ ಎಷ್ಟು ಪರಿತಪಿಸುತ್ತೇವೆಯೋ ಅದೇ ರೀತಿ ನಮ್ಮ ಮೊಬೈಲ್ ಫೋನ್ ಕೈಕೊಟ್ಟರೆ ಅನುಭವವಾಗುತ್ತದೆ. ಇಂದು ಮೊಬೈಲ್ ಫೋನ್‍ನಲ್ಲಿ ಎಲ್ಲಾ ರೀತಿ ವ್ಯವಹಾರಗಳು ನಡೆಯುತ್ತವೆ. ಹಾಗಾಗೀ ಪ್ರತಿ ಕ್ಷೇತ್ರದಲ್ಲೂ ಮೊಬೈಲ್ ಫೋನ್ ಬೇಕೆಬೇಕು. ಎಷ್ಟೊಂದು ಪ್ರಯೋಜನಗಳನ್ನು ಹೊಂದಿರುವ ಈ ಮೊಬೈಲ್ ಫೋನ್‌ಗೆ ಗಂಡಾಂತರಗಳು ಕಮ್ಮಿ ಏನು ಇಲ್ಲ. ಅಂದರೆ ಮೊಬೈಲ್ ಹ್ಯಾಕರ್ಸ್ ನಮ್ಮ ಸುತ್ತಮುತ್ತನೇ ಇರ್ತಾರೆ. ಅವ್ರು ನಮ್ಮ ಮೊಬೈಲ್‍ನ ಹ್ಯಾಕ್ ಮಾಡಿ ಅದರಿಂದ ಬೇರೆ ರೀತಿಯ ಚಟುವಟಿಕೆಗಳನ್ನು ಮಾಡಿ ನಮಗೆ ನಷ್ಟವನ್ನುಂಟು ಮಾಡಬಹುದು. ನಾವು ಇಂದು ಬ್ಯಾಂಕ್ ವ್ಯವಹಾರಗಳನ್ನು ಮೊಬೈಲ್‍ನಲ್ಲೇ ಮಾಡುವುದರಿಂದ ಹೆಚ್ಚು ಗಮನ ಕೊಡಲೇಬೇಕು.

ನಮ್ಮ ಮೊಬೈಲ್ ಹ್ಯಾಕ್ ಆಗಿದ್ದರೆ ಅದನ್ನು ಕಂಡು ಹಿಡಿಯುವುದು ಹೇಗೆ ?

ನಮ್ಮ ಮೊಬೈಲ್ ಅನ್ನು ಸರಿಯಾಗಿ ಪರೀಕ್ಷಿಸಿದರೆ ನಮಗೆ ಗೊತ್ತಾಗುತ್ತೆ ಹ್ಯಾಕ್ ಆಗಿದ್ಯ ಅಥವಾ ಇಲ್ಲ ಎಂದು ಆ ಸೂಚನೆಗಳು ಈ ಕೆಳಗಿನಂತಿವೆ :

ನಿಮ್ಮ ಮೊಬೈಲ್‍ನ ವರ್ತನೆ ಬೇರೆ ಆಗಿರುತ್ತೆ :- ನೀವು ಈ ಹಿಂದೆ ಬಳಸಿದಂತೆ ನಿಮ್ಮ ಮೊಬೈಲ್ ಹ್ಯಾಕ್ ಆಗಿದ್ದರೆ ಅದರ ವರ್ತನೆಯಲ್ಲಿ ಏರುಪೇರುಗಳು ಕಾಣಿಸುತ್ತದೆ. ಏರುಪೇರು ಅಂದರೆ ಮೊಬೈಲ್ ಹ್ಯಾಂಗ್ ಆಗುವುದು ಅಥವಾ ಬೇರೆ ಬೇರೆ ಅಪ್ಲಿಕೇಶನ್‌ಗಳು ಲಾಂಚ್ ಆಗುವುದು ಹೀಗೆ ಅದರ ನಡವಳಿಕೆಯಲ್ಲಿ ಬದಲಾವಣೆಗಳಿರುತ್ತೆ.

ಬ್ಯಾಟರಿ ಪವರ್‌ ಬೇಗ ಕಡಿಮೆ ಅಗುವುದು :- ನಿಮ್ಮ ಮೊಬೈಲ್ 90% ಬ್ಯಾಟರಿ ಇದ್ರು ಇದ್ದಕಿದ್ದಂತೆ 0% ಆಗಿ ಆಫ್ ಆಗುವುದು ಒಂದು ರೀತಿಯ ಸೂಚನೆ. ಹೀಗೆ ನಿಮ್ಮ ಬ್ಯಾಟರಿ ಪ್ರಾಬ್ಲಮ್ ಇದ್ದಾಗಿಯೂ ಆಗುತ್ತೆ. ಆದರೆ ಬ್ಯಾಟರಿ ಪ್ರಾಬ್ಲಮ್ ಇಲ್ಲದೆ ಇದ್ದಾಗ ಈ ರೀತಿ ಆದ್ರೆ ಅದು ಹ್ಯಾಕರ್ಸ್ ನಿಮ್ಮ ಮೊಬೈಲ್ ಅನ್ನು ಬೇರೆ ಆಪ್‌ನಿಂದ ಕಂಟ್ರೋಲ್ ಮಾಡ್ತಾ ಇದಾರೆ ಎಂದು ಅರ್ಥ.

ಇದಕ್ಕಿಂದಂತೆ ಫೋನ್ ಸ್ವಿಚ್ ಆಫ್ ಆದ್ರೆ :- ನಿಮ್ಮ ಮೊಬೈಲ್‍ನಲ್ಲಿ ಈ ಹಿಂದೆ ಬೇರೆ ಯಾವುದೇ ಪ್ರಾಬ್ಲಮ್ ಇಲ್ಲದೆ ಇದ್ದಕಿಂದಂತೆ ಫೋನ್ ಸ್ವಿಚ್ ಆಫ್ ಆಗ್ತಾ ಇದ್ರೆ ಅಥವಾ ನಿಮ್ಮ ಗಮನಕ್ಕೆ ಬಂದಂತೆ ಸ್ವಿಚ್ ಆಫ್ ಆಗಿ ಮತ್ತೆ ಆನ್ ಆದ್ರೆ ನಿಮ್ಮ ಮೊಬೈಲ್ ಹ್ಯಾಕ್ ಆಗಿರಬಹುದು ಎಂದು ತಿಳಿಯಬಹುದು.

ನಿಮ್ಮದಲ್ಲದ ಮೆಸೇಜ್ ನಿಮಗೆ ಬರ್ತಾ ಇದ್ರೆ :- ನಿಮಗೆ ನಿಮ್ಮ ಸ್ನೇಹಿತರಿಂದಲೂ ಅಥವಾ ಬೇರೆ ಯಾವುದೇ ಗೊತ್ತಿರುವ ವ್ಯಕ್ತಿಗಳಿಂದಲೂ ಮೆಸೇಜ್ ಬರದೇ ಬೇರೆ ಯಾವುದೋ ನೆಟ್‌ವರ್ಕ್‌ನಿಂದ ಮೆಸೇಜ್ ಬರ್ತಾ ಇದ್ರೆ, ಅದರಲ್ಲೂ ಯಾವುದೋ ಚಿಹ್ನೆಯಿಂದ ಅಥವಾ ಚಿತ್ರಗಳಿಂದ ಮೆಸೇಜ್ ಬರ್ತಾ ಇದ್ರೆ ಒಂದು ಸಲ ನೀವು ನಿಮ್ಮ ಮೊಬೈಲ್ ಅನ್ನು ಚೆಕ್ ಮಾಡಬೇಕು.

ನಿಮ್ಮ ಇಂಟರ್‍ನೆಟ್ ತುಂಬ ಬಳಕೆ ಆಗ್ತಾ ಇದ್ರೆ :- ನಿಮಗೆ ಗೊತ್ತಿಲ್ಲದೆ ನಿಮ್ಮಲ್ಲಿರುವ ಡಾಟಾಪ್ಯಾಕ್ ಖಾಲಿ ಆಗ್ತಾ ಇದ್ರೆ. ಅಂದರೇ ನೀವು ಬಳಸದೆ ಇಂಟರ್‌ನೆಟ್‌ ಪ್ಯಾಕ್ ಖಾಲಿಯಾಗ್ತಾ ಇದೆ ಅಂತ ನಿಮಗೆ ಗೊತ್ತಾದರೆ ಆಗಲೂ ಸಹ ಒಂದು ಬಾರಿ ನಿಮ್ಮ ಮೊಬೈಲ್ ಹ್ಯಾಕ್ ಆಗಿದ್ದೀಯಾ ಎಂದು ಸಂದೇಹವನ್ನು ಬಗೆಹರಿಸಿಕೊಳ್ಳಿ.

ನಿಮ್ಮ ಮೊಬೈಲ್‍ನ ಬ್ಯಾಕ್‍ಗ್ರೌಂಡ್‍ನಲ್ಲಿ ಅಪ್ಲಿಕೇಶನ್‌ ರನ್ ಆಗ್ತಾ ಇದ್ದು ಅದನ್ನು ನಿಲ್ಲಿಸಿದರೂ ಅದು ರನ್‌ ಆಗಿ ನಿಮ್ಮ ಬಳಿ ಇರುವ ಮಾಹಿತಿಯನ್ನು ಬೇರೆ ಕಡೆಗೆ ಕೊಂಡ್ಯೊಯುವ ಕೆಲಸ ನಡಿತಾ ಇದೆ ಎಂದು ಊಹಿಸಿ ಅದನ್ನು ತಡೆಯಬೇಕಾಗುತ್ತದೆ.

ನಿಮ್ಮ ಮೊಬೈಲ್‌ನಿಂದ ಆಗಾಗ ಆಟೋ ಕಾಲ್ ಹೋಗ್ತಾ ಇದ್ರೆ ಅದು ಸಹ ನಿಮ್ಮ ಮೊಬೈಲ್ ಹ್ಯಾಕ್ ಮಾಡಿದ್ದಾರೆ ಎಂದರ್ಥ. ಅಂದರೆ ಇಲ್ಲಿ ನಿಮ್ಮ ಮೊಬೈಲ್‌ನಿಂದ ಸಂದೇಶಗಳು, ಕಾಲ್‌ಗಳು ಹ್ಯಾಕ್ ಆಗಿ ಅದರಿಂದ ಗಂಭೀರವಾದ ಸಮಸ್ಯೆ ತಲೆದೂರಬಹುದು.

ನಿಮ್ಮ ಮೊಬೈಲ್‍ನಲ್ಲಿರುವ ಡಯಲ್ ಪ್ಯಾಡ್‍ನಲ್ಲಿ ಕಾಲ್ ಮಾಡುವ ಚಿಹ್ನೆ ಹಸಿರು ಬಣ್ಣದಿಂದ ಕೆಂಪು ಬಣ್ಣಕ್ಕೆ ತಿರುಗಿರುತ್ತದೆ ಒಂದು ಸಲ ಪರೀಕ್ಷೆ ಮಾಡಿ ನೋಡಿ ಇದು ಸಹ ಹ್ಯಾಕ್ ಆಗಿರುವುದಕ್ಕೆ ಇರುವ ಒಂದು ಚಿಹ್ನೆ.

ಮೊಬೈಲ್ ಇಂದಿನ ಮತ್ತು ಭವಿಷ್ಯತ್ತಿನ ಒಂದು ಪ್ರಬಲ ಸಾಧನವಾಗಿದೆ. ಹಾಗಾಗೀ ಇದರ ಬಳಕೆಯು ಸಹ ನಮ್ಮ ನಿಮ್ಮ ಮಿತಿಯನ್ನು ದಾಟಿ ಸಾಗುತ್ತಿದೆ. ಇದರ ಬಳಕೆಯನ್ನು ಸರಿಯಾಗಿ ತಿಳಿದುಕೊಂಡು ಅದಕ್ಕೆ ಮಾತ್ರ ಬಳಸಿದರೆ ಯಾರಿಗೂ ಯಾವ ರೀತಿಯಲ್ಲು ನಷ್ಟವಾಗುವುದಿಲ್ಲ. ಇದನ್ನು ಬಳಸಲು ಸರಿಯಾಗಿ ತಿಳಿಯಿರಿ ಮತ್ತೆ ನಿಮ್ಮ ಮೊಬೈಲ್ ಹ್ಯಾಕ್ ಆದರೆ ಅದನ್ನು ತಿಳಿಯುವುದು ಹೇಗೆ ಎಂದು ತಿಳಿದುಕೊಂಡು ಅದನ್ನು ತಡೆಯಿರಿ.

ನಿಮ್ಮ ಟ್ವಿಟ್ಟರ್ ಖಾತೆಯನ್ನು ಹ್ಯಾಕರ್‌ಗಳಿಂದ ಸುರಕ್ಷಿತವಾಗಿರಿಸುವುದು ಹೇಗೆ?

You may also like