Home » ಮೂಲವ್ಯಾದಿ ಲಕ್ಷಣಗಳೇನು? ಕಾರಣ ಮತ್ತು ಪರಿಹಾರಗಳೇನು?

ಮೂಲವ್ಯಾದಿ ಲಕ್ಷಣಗಳೇನು? ಕಾರಣ ಮತ್ತು ಪರಿಹಾರಗಳೇನು?

by manager manager

ಮೂಲವ್ಯಾದಿ ಎಂಬುದು ಇಂತಹವರಿಗೆ ಬರಬೇಕು ಎಂಬುದಿಲ್ಲ, ಎಲ್ಲರಿಗೂ ಒಂದೇ ರೀತಿಯಲ್ಲಿರಬೇಕು ಎಂದೆನಿಲ್ಲ. ಕಾರಣ ಇದರ ಸ್ವರೂಪಗಳು ಭಿನ್ನಭಿನ್ನವಾಗಿರುತ್ತದೆ. ಉತ್ತಮವಾದ

ಚಟುವಟಿಕೆಗಳಿಂದ, ಆಹಾರ ಕ್ರಮಗಳಿಂದ ನಾವು ಮೂಲವ್ಯಾದಿಯನ್ನು ದೂರವಿಡಬಹುದು. ಆದರೆ ಈಗಾಗಲೇ ಮೂಲವ್ಯಾದಿ ಇರುವವರು ಸಹ ಭಯಪಡುವ ಅಗತ್ಯವಿಲ್ಲ. ಕಾರಣ ಇಂದು ಒಂದೇ ದಿನದಲ್ಲಿ ಇದರಿಂದ ಹೊರಬರಬಹುದು ಆದರೆ ನಿಮ್ಮ ಬಳಿ ಹಣವಿರಬೇಕು ಅಷ್ಟೇ, ಇಲ್ಲವಾದರೆ ನಾವು ಆರ್ಯವೇದದ ಮೊರೆ ಹೋಗಬೇಕು ಅಥವಾ ಸ್ವಲ್ಪ ಕಾಲದವರೆಗೆ ಈ ಮೂಲವ್ಯಾದಿಯನ್ನು ತಡೆಹಿಡಿಯಬಹುದು ಅಷ್ಟೆ.

ಮೊದಲಿಗೆ ನಾವು ಮೂಲವ್ಯಾದಿ(ಪೈಲ್ಸ್)ಯ ಬಗ್ಗೆ ತಿಳಿದುಕೊಳ್ಳೊಣ :-

ನಮ್ಮ ದೇಹದಲ್ಲಿ ಹರಿಯುವ ರಕ್ತವು ಮಲವಿಸರ್ಜನೆ ಮಾಡುವ ಜಾಗದಲ್ಲಿ ಒಂದೆ ಕಡೆ ಸೇರಿ ಅಲ್ಲಿ ಒಂದು ರೀತಿಯ ಉಬ್ಬಿದ ಗುಳ್ಳೆ ರೀತಿಯಲ್ಲಿ ಬೆಳೆಯುತ್ತ ಹೋಗುತ್ತದೆ ಅದು ಕಾಲ ಕಳೆದಂತೆ ನಮಗೆ ಮಲವಿಸರ್ಜನೆ ಮಾಡುವಾಗ ತೊಂದರೆ ಕೊಡುತ್ತದೆ. ಮೊದಲಿಗೆ ಮಲವಿಸರ್ಜನೆ ಮಾಡುವಾಗ ರಕ್ತವು ಹೋಗುತ್ತದೆ. ಕ್ರಮೇಣ ಅದು ನೋವನ್ನು ಕೊಡುತ್ತದೆ. ಇದು ಒಂದು ರೀತಿಯದ್ದಾದ್ದರೆ ಮಲವಿಸರ್ಜನೆ ಮಾಡುವ ಜಾಗದ ಒಳಗೆ ಗುಳ್ಳೆಗಳಾಗಿ ಅಲ್ಲಿ ನೋವು ಕೊಡುವ ಮತ್ತು ಆಗಾಗ ಕಿವುತುಕೊಳ್ಳುವ ಹಾಗೂ ಒಳಾಂಗಣ ಮತ್ತು ಹೊರಾಂಗಣ ಮೂಲವ್ಯಾದಿಯೆಂದು ವಿಂಗಡಣೆ ಮಾಡಿ ಚಿಕಿತ್ಸೆ ಕೊಡುತ್ತಾರೆ.

ಮೂಲವ್ಯಾದಿ(ಪೈಲ್ಸ್) ಲಕ್ಷಣಗಳು :-

– ಮೊದಲಿಗೆ ಮಲವಿಸರ್ಜನೆ ಸಮಯದಲ್ಲಿ ರಕ್ತ ಹೋಗುವುದು

– ಮಲವಿಸರ್ಜನೆ ಮಾಡುವಾಗ ವಿಫರೀತ ನೋವು

– ಮಲವಿಸರ್ಜನೆ ಮಾಡಿದ ನಂತರದಲ್ಲಿ ವಿಫರೀತ ಉರಿ

– ಕೆಲವು ಸಂದರ್ಭದಲ್ಲಿ ವಿಸರ್ಜನೆ ಮಾಡಲು ಸಾಧ್ಯವಾಗುವುದಿಲ್ಲ.

– ತುಂಬ ಕಾಲ ಇದನ್ನು ಬಿಟ್ಟರೆ ಇದು ಅನೇಮಿಯಾ, ಇನ್ಫೇಕ್ಷನ್ ಆಗುವುದು

ಮೂಲವ್ಯಾದಿ(ಪೈಲ್ಸ್)ಗೆ ಕಾರಣಗಳು :-

– ದೀರ್ಘಕಾಲದ ಮಲಬದ್ದತೆ ಅಥವಾ ಮಲ ವಿಸರ್ಜನೆಗೆ ಕೂರುವುದು.

– ದೀರ್ಘಕಾಲದ ಅತಿಸಾರ(ಡೈಯಾರ)

– ಭಾರವಾದ ತೂಕವನ್ನು ಎತ್ತುವುದರಿಂದ

– ಮಲ ವಿಸರ್ಜನೆಗೆ ಹೆಚ್ಚು ಒತ್ತಡ ಏರುವುದು

ಮೂಲವ್ಯಾದಿ(ಪೈಲ್ಸ್)ಚಿಕಿತ್ಸೆಗಳು ಅಥವಾ ಪರಿಹಾರಗಳು :-

ಜೀವನಶೈಲಿಯ ಬದಲಾವಣೆ :-

1. ಡಯಟ್ :- ನಿಮ್ಮ ದೇಹವನ್ನು ನಿಮ್ಮ ಹಿಡಿತಕ್ಕೆ ತರಬೇಕು ಹಾಗಾಗೀ ಆಹಾರ ಕ್ರಮದಲ್ಲಿ ನೀವು ಕೆಲವು ನಿಯಮಗಳನ್ನು ಪಾಲಿಸಬೇಕು, ಹೆಚ್ಚಾಗಿ ನೀರು ಕುಡಿಯುವುದು, ತರಕಾರಿಗಳನ್ನು ತಿನ್ನುವುದು, ಹೊಟ್ಟು ಆಧಾರಿತ ಆಹಾರ ಸೇವನೆ.

2. ದೇಹದ ತೂಕ :- ನಿಮ್ಮ ದೇಹವನ್ನು ದಂಡಿಸಿ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು, ಉತ್ತಮ ವ್ಯಾಯಾಮದ ಮೂಲಕ ನಿಮ್ಮ ಮೂಲವ್ಯಾದಿಯನ್ನು ತಡೆಯಬಹುದು.

3. ಔಷಧಿಗಳು :- ಮೊದಲಿಗೆ ನಿಮ್ಮಲ್ಲಿ ಮೂಲವ್ಯಾದಿಯು ಕಂಡುಬಂದರೆ ಡಾಕ್ಟರ್ ಬಳಿ ಹೋಗಿ ಕೆಲವು ಮೆಡಿಕೇಷನ್ಸ್ ತಂದು ಅದನ್ನು ತೆಗೆದುಕೊಳ್ಳುವುದು ಉತ್ತಮ ಅವರಿವರ ಮಾತನ್ನು ಕೇಳಿ ವ್ಯರ್ಥವಾಗಿ ಹಣವನ್ನು ಖರ್ಚು ಮಾಡಬೇಡಿ.

4. ಶಸ್ತ್ರಚಿಕಿತ್ಸೆಗಳು :- ಈಗೀನ ಶಸ್ತ್ರಚಿಕಿತ್ಸೆಗಳ ಬೆಳವಣಿಗೆಯಿಂದ ಒಂದೇ ದಿನದಲ್ಲಿ ಮೂಲವ್ಯಾದಿಗೆ ಗುಡ್ಬೈ ಹೇಳಬಹುದು, ಮೂಲವ್ಯಾದಿಯ ಶಸ್ತ್ರಚಿಕಿತ್ಸೆಯಲ್ಲಿಅಪರೇಷನ್, ಲೇಸರ್ ಟ್ರಿಟ್ಮೆಂಟ್, ಐಸ್ಬರ್ನ್ ಟ್ರೀಟ್ಮೆಂಟ್ ಹೀಗೆ ಹಲವು ರೀತಿಯ ಶಸ್ತ್ರಚಿಕಿತ್ಸೆಗಳಿದ್ದು ನಿಮ್ಮ ಆದಾಯ ಅನುಸಾರ ಚಿಕಿತ್ಸೆಗೆ ಒಳಗಾಗಬಹುದು.

ಮನೆಯಲ್ಲೆ ಮಾಡಬಹುದಾದ :-ಮೂಲವ್ಯಾದಿ(ಪೈಲ್ಸ್) ಚಿಕಿತ್ಸೆಗಳು

1. ತುಂಬ ನೀರನ್ನು ಕುಡಿಯಿರಿ, ಯಾವಾಗಲು ನಿಮ್ಮ ಮಲವಿಸರ್ಜನೆ ಜಾಗ ಮೃದುವಾಗಿರುವ ಹಾಗೆ ನೋಡಿಕೊಳ್ಳಿ.

2. ಮಲವಿಸರ್ಜನೆ ಮಾಡಿದ ಮೇಲೆ ಆ ಜಾಗವನ್ನು ಶುದ್ಧಿಕರಿಸಿ

3. ತುಂಬ ನೋವನ್ನು ಕೊಡುತ್ತಿದ್ದರೆ ಪಾರಸೆಟಮಲ್ ಮಾತ್ರೆಯನ್ನು ವೈದ್ಯರ ಸಲಹೆ ಮೇರೆಗೆ ಮಾತ್ರ ತೆಗೆದುಕೊಳ್ಳಬಹುದು.

4. ಬಿಸಿ ನೀರಿನಲ್ಲಿ ಸ್ನಾನ ಮಾಡಿ. ಇದು ನಿಮಗೆ ವಿಪರೀತ ನೋವಿದ್ದರೆ ಸಹಕಾರಿಯಾಗುತ್ತದೆ.

5. ವ್ಯಾಯಾಮವನ್ನು ಪ್ರತಿದಿನ ಮಾಡಿ

6. ಆಲ್ಕೋಹಾಲ್, ಕಾಫಿ, ಟೀ, ಕೊಲಾವನ್ನು ಆದಷ್ಟು ಅವೈಡ್ ಮಾಡಿ

ಶ್ವಾಸಕೋಶದ ಶತ್ರು ನ್ಯುಮೋನಿಯಾ ಲಕ್ಷಣಗಳೇನು, ಕಾರಣಗಳು ಮತ್ತು ಪರಿಹಾರಗಳನ್ನು ಇಲ್ಲಿ ತಿಳಿಯಿರಿ..

You may also like