Home » ಡೀಸೆಲ್, ಪೆಟ್ರೋಲ್, ಗ್ಯಾಸ್‌ ಬೆಲೆ ಏರಿಕೆ ಟೆನ್ಷನ್ ಬಿಡಿ.. ಹಣ ಉಳಿತಾಯಕ್ಕೆ ಇಲ್ಲಿದೆ ಟಿಪ್ಸ್‌

ಡೀಸೆಲ್, ಪೆಟ್ರೋಲ್, ಗ್ಯಾಸ್‌ ಬೆಲೆ ಏರಿಕೆ ಟೆನ್ಷನ್ ಬಿಡಿ.. ಹಣ ಉಳಿತಾಯಕ್ಕೆ ಇಲ್ಲಿದೆ ಟಿಪ್ಸ್‌

by manager manager

ದಿನೇ ದಿನೇ ಡೀಸೆಲ್, ಪೆಟ್ರೋಲ್, ಗ್ಯಾಸ್‌ ಬೆಲೆ ಏರಿಕೆ ಕಾಣುತ್ತಿದೆ. ಕಳದೆ ಒಂದು ದಶಕದಲ್ಲೇ ಈ ಇಂಧನಗಳ ಬೆಲೆ ಡಬಲ್‌ ಏರಿಕೆ ಆಗಿದೆ. ಜನರು ತತ್ತರಗೊಳ್ಳುತ್ತಿದ್ದಾರೆ. ಇನ್ನು ಬಡ ಕುಟುಂಬದವರು, ಮಧ್ಯಮ ವರ್ಗದ ಕುಟುಂಬದವರು ವಾಹನಗಳನ್ನೇ ಬಳಸಲು ಹೆಚ್ಚಿನ ತೊಂದರೆ ಅನುಭವಿಸಬೇಕಾಗಬಹುದು. ಇಂದು ಅಗತ್ಯಕ್ಕಿಂತ ಹೆಚ್ಚಾಗಿ ವಾಹನ ಬಳಕೆ ಆಗುತ್ತಿದೆ. ಸಿಗ್ನಲ್‌ ನಲ್ಲಿ ಇಂಜಿನ್ ಆಫ್‌ ಮಾಡಲು ಸೋಮಾರಿತನ. ಒಬ್ಬರೇ ಕನಿಷ್ಠ 5 ಕಿಲೋ ಮೀಟರ್ ಹೋಗಲು ಸಹ ಐಷರಾಮಿ ಕಾರ್ ಬಳಕೆ, ಹೀಗೇ ಹೇಳುತ್ತಾ ಹೋದರೆ ಒಂದಲ್ಲ ಎರಡಲ್ಲ, ಅದೆಷ್ಟೋ ಕಾರಣಗಳು ಸಿಗಬಹುದು. ಈ ಇಂಧನಗಳ ಬೆಲೆ ಏರಿಕೆ, ಬೇಡಿಕೆ ಬಗ್ಗೆ ತಲೆ ಕೆಡಿಸಿಕೊಂಡು ಎಲ್ಲೋ ಹರಟೆ ಕಟ್ಟೆ ಮೇಲೆ ಚರ್ಚಿಸುವ ಬದಲು, ಇಲ್ಲಿ ನೀಡಲಾದ ಟಿಪ್ಸ್‌ಗಳನ್ನು ಓದಿ, ನಿಮ್ಮ ಕಾಸನ್ನು ಉಳಿತಾಯ ಮಾಡಿಕೊಳ್ಳಿ.

1) ಇಂಧನ – ಸಮರ್ಥ ವಾಹನವನ್ನು ಆರಿಸಿ
ಉತ್ತಮ ಇಂಧನ ದಕ್ಷತೆಗಾಗಿ ನೀವು ಮಾಡಬೇಕಾದ ಮೊದಲನೆಯದು ಉತ್ತಮ ಇಂಧನ ಆರ್ಥಿಕತೆಯ ರೇಟಿಂಗ್ ಹೊಂದಿರುವ ಕಾರನ್ನು ಖರೀದಿಸುವುದು. ಇದಕ್ಕಾಗಿ ನೀವು ಆನ್‌ಲೈನ್‌ ಕಾರು ಖರೀದಿ ವೇದಿಕೆಗಳಿಗೆ ಭೇಟಿ ನೀಡಿ ಕಾರುಗಳ ನೈಜ-ಪ್ರಪಂಚದ ಇಂಧನ ದಕ್ಷತೆಯನ್ನು ಪರಿಶೀಲಿಸಬೇಕು.

2) ಥ್ರೊಟಲ್ ಡಿವೈಸ್‌ ಬಗ್ಗೆ ಗಮನಹರಿಸಿ.
ಇಂಧನ ಹರಿಯುವ ಸಾಧನವೇ ಈ ಥ್ರೋಟಲ್. ವೇಗವಾಗಿ ಇಂಧನ ಹರಿಯುವುದು ಇಂಧನದ ವ್ಯರ್ಥಕ್ಕೆ ಮಾತ್ರ ಕಾರಣವಾಗುತ್ತದೆ. ತಾತ್ತ್ವಿಕವಾಗಿ, 20 ಶೇಕಡಾ ಥ್ರೊಟಲ್ ಪ್ರಯತ್ನವು ಕಾರನ್ನು ಚಲಿಸುವಂತೆ ಮಾಡಲು ಸಾಕು. ಅನಗತ್ಯವಾಗಿ ರಿವ್ ಮಾಡಬೇಡಿ ಮತ್ತು ಥ್ರೊಟಲ್‌ಗೆ ಮೃದುವಾಗಿರಿ.

3 ) ಹಾರ್ಡ್ ಬ್ರೇಕ್ ಮಾಡುವುದನ್ನು ತಪ್ಪಿಸಿ
ತುರ್ತು ಪರಿಸ್ಥಿತಿ, ಹೊರತುಪಡಿಸಿ ಅನಗತ್ಯವಾಗಿ ಹಾರ್ಡ್‌ ಬ್ರೇಕ್‌ ಮಾಡುವುದನ್ನು ನಿಯಂತ್ರಿಸಿ. ಹಾರ್ಡ್‌ ಬ್ರೇಕ್‌ ನಿಮ್ಮ ಕಾರಿನ ನಿಯಂತ್ರಣ ತಪ್ಪಿಸುವುದಲ್ಲದೇ ಇಂಧನವನ್ನು ಹೆಚ್ಚು ವೇಗವಾಗಿ ಹೀರುತ್ತದೆ. ಹಾಗೆಯೇ ಮತ್ತೆ ವೇಗಗೊಳ್ಳಲು ಕಾರು ಹೆಚ್ಚು ಫ್ಯೂಯೆಲ್‌ ಹೀರುತ್ತದೆ.

4) ಕಾರನ್ನು ನಿಷ್ಕ್ರಿಯಗೊಳಿಸಬೇಡಿ
ಕಾರನ್ನು ಸುಮ್ಮನೆ ನಿಲ್ಲಿಸುವುದು, ನಿಷ್ಕ್ರಿಯಗೊಳಿಸುವುದನ್ನು ತಪ್ಪಿಸಿ. ಹೀಗೆ ಮಾಡದಿದ್ದರೆ ಇಂಧನ ಬಿಲ್‌ ಹೆಚ್ಚಾಗಲು ಕಾರಣವಾಗುತ್ತದೆ. ರಸ್ತೆಯಲ್ಲಿ ಟ್ರಾಫಿಕ್‌ ವೇಳೆ ಇಂಜಿನ್ ಆಫ್‌ ಮಾಡಿ. ಒಟ್ಟಾರೆ ಸುಖಾಸುಮ್ಮನೆ ಕಾರನ್ನು ಚಲಿಸದೇ ಕೇವಲ ಆನ್‌ ಮಾಡಿ ನಿಲ್ಲಿಸಿಕೊಳ್ಳುವ ಯಾವುದೇ ಸಂದರ್ಭಗಳನ್ನು ನಿಯಂತ್ರಿಸಿ.

5 ) ಹವಾನಿಯಂತ್ರಣದ ಬಳಕೆಯನ್ನು ಕಡಿಮೆ ಮಾಡಿ
ಏರ್‌ ಕಂಡೀಷನ್‌ ಬಳಕೆಯಿಂದ ಎಂಜಿನ್‌ ಮೇಲೆ ಇನ್ನಷ್ಟು ಲೋಡ್‌ ಹಾಕಿದಂತಾಗುತ್ತದೆ. ಅಲ್ಲದೇ ಹೆಚ್ಚು ಇಂಧನ ಬಳಕೆ ಆಗುತ್ತದೆ. ಕ್ಯಾಬಿನ್ ಅನ್ನು ತಂಪಾಗಿಸುವ ಮೂಲಕ ನೀವು ತಾಪಮಾನವನ್ನು ನಿಯಂತ್ರಿಸಬಹುದು. ಏರ್‌ ಕಂಡೀಷನ್‌ ಅಫ್‌ ಮಾಡಿ, ಆಗಾಗ ವಿಂಡೋಸ್ ತೆರೆಯುವುದರಿಂದ ತಾಪಮಾನ ನಿಯಂತ್ರಣದಲ್ಲಿ ಇರಿಸಿಕೊಳ್ಳಬಹುದು.

6 )ಸರಿಯಾದ ಗೇರ್‌ನಲ್ಲಿ ಡ್ರೈವ್ ಮಾಡುವುದು
ಕಡಿಮೆ ಗೇರ್‌ನಲ್ಲಿ ಚಾಲನೆ ಮಾಡುವುದರಿಂದ ಅನಗತ್ಯವಾಗಿ ಇಂಧನ ಹೆಚ್ಚು ಬಳಕೆ ಆಗುತ್ತದೆ. ಹೆಚ್ಚು ಎಕ್ಸಲೇರೇಟ್‌ ನೀಡುವ ಬದಲು ಹೆಚ್ಚಿನ ಗೇರ್ ನೀಡುವುದು ಉತ್ತಮ. ಕಡಿಮೆ ಗೇರ್‌ನಲ್ಲಿ ಹೆಚ್ಚು ವೇಗದಲ್ಲಿ ಚಲಿಸುವುದು ಸಹ ಹೆಚ್ಚು ಇಂಧನ ಲಾಸ್‌ಗೆ ಕಾರಣವಾಗುತ್ತದೆ. ರೆವ್ ಬ್ಯಾಂಡ್‌ ಅನ್ನು 2000-2500rpm ನಲ್ಲಿ ಇಡುವುದರಿಂದ ಉತ್ತಮ ಇಂಧನ ಬಳಕೆಯ ಚಾಲನೆ ಮಾಡಬಹುದು.

7)ಕ್ರೂಸ್ ಕಂಟ್ರೋಲ್ ಬಳಸಿ
ಕ್ರೂಸ್ ಫೀಚರ್‌ ಅನ್ನು ನಿಮ್ಮ ಕಾರ್‌ ಹೊಂದಿದ್ದರೆ ಸಾಮಾನ್ಯವಾಗಿ ಇಂಧನ ಉಳಿತಾಯಕ್ಕೆ ಸಹಾಯವಾಗುತ್ತದೆ. ದೂರದ ಪ್ರಯಾಣ ಹೋದಾಗ, ಹೆದ್ದಾರಿಗಳಲ್ಲಿ ಪ್ರಯಾಣ ಮಾಡುವಾಗ ಕ್ರೂಸ್ ಕಂಟ್ರೋಲ್‌ ಆಯ್ಕೆ ಮಾಡಿಕೊಳ್ಳಿ. ಇದರಿಂದ ಚಾಲಕರಿಗೂ ರಿಲ್ಯಾಕ್ಸ್‌ ಆದ ಅನುಭವ ಹೆಚ್ಚು ಸಿಗುತ್ತದೆ.

8) ಟೈರ್ ಗಳಲ್ಲಿ ಅಗತ್ಯ ಏರ್ ಇರಲಿ
ಟೈರ್‌ಗಳಲ್ಲಿ ಅಗತ್ಯ ಏರ್‌ ಒತ್ತಡ ಇದ್ದಲ್ಲಿ, ಶೇಕಡ 3 ರಷ್ಟು ಇಂಧನ ಉಳಿತಾಯ ಹೆಚ್ಚಾಗುತ್ತದೆ ಎಂದು ಅಧ್ಯಯನಗಳೇ ಹೇಳಿವೆ. ಒಂದು ತಿಂಗಳಿಗೆ ಒಮ್ಮೆ ಟೈರ್‌ಗಳಲ್ಲಿ ಏರ್‌ ಕಡಿಮೆ ಆಗುವ ಅವಕಾಶಗಳು ಇರತ್ತವೆ. ಆದ್ದರಿಂದ ಪೆಟ್ರೋಲ್‌ ಸರ್ವೀಸ್ ಸ್ಟೇಷನ್‌ಗಳ ಹತ್ತಿರ ಆಗಾಗ ಏರ್‌ ಪ್ರೆಸರ್ ಅನ್ನು ಚೆಕ್‌ ಮಾಡಿಕೊಳ್ಳುತ್ತಿರಬೇಕು. ಆಯಾ ಕಾರ್‌ಗಳ ಟೈರ್‌ಗಳಿಗೆ ಅಗತ್ಯ ಏರ್‌ ಒತ್ತಡ ಎಷ್ಟಿರಬೇಕು ಎಂದು ಯೂಸರ್ಸ್‌ ಮ್ಯಾನುಅಲ್‌ ನಲ್ಲಿ ನೀಡಲಾಗಿರುತ್ತದೆ.

9 ) ನಿಯಮಿತ ಅವಧಿಯಲ್ಲಿ ಕಾರ್ ಸರ್ವೀಸ್ ಮಾಡಿಕೊಳ್ಳುವುದು.
ಉತ್ತಮ ಇಂಧನ ದಕ್ಷತೆ ಕಾಪಾಡಲು, ಕಾರ್‌ ಅನ್ನು ನಿಯಮಿತ ಅವಧಿಯೊಳಗೆ ಸರ್ವೀಸ್ ಮಾಡಿಸಬೇಕು. ಸರ್ವೀಸ್ ಮಾಡಿಸುವುದರಿಂದ ಸಣ್ಣ ಸಮಸ್ಯೆಗಳು ತಿಳಿಯುತ್ತವೆ. ಹಾಗೆ ಎಂಜಿನ್‌ ಚಾಲನೆಗೆ ಎಷ್ಟು ಸೂಕ್ತ ಎಂಬುದು ತಿಳಿಯುತ್ತದೆ. ಎಂಜಿನ್‌ ದೀರ್ಘಬಾಲಿಕೆಗೆ ಸಹಾಯಕಾರಿ ಅಲ್ಲದೆ, ಉತ್ತಮ ಇಂಧನ ದಕ್ಷತೆಗೆ ಸಹಾಯಕಾರಿ.

10) ಏರ್ ಫಿಲ್ಟರ್‌ ಅನ್ನು ಆಗಾಗ ಸ್ವಚ್ಛಗೊಳಿಸುವುದು.
ಆಗಾಗ ಏರ್‌ ಫಿಲ್ಟರ್‌ ಅನ್ನು ಕ್ಲೀನ್‌ ಮಾಡಿಸುವುದರಿಂದ, ಕಾರ್ ಹೆಚ್ಚು ಇಂಧನ ಹೀರುವುದನ್ನು ಕಡಿಮೆಗೊಳಿಸಬಹುದು. ದೂಳು ಮತ್ತು ಇತರೆ ಕಣಗಳಿಂದ ಮುಚ್ಚಿಹೋದ ಏರ್‌ ಫಿಲ್ಟರ್‌ಗಳಿಂದ ಎಂಜಿನ್‌ಗೆ ಗಾಳಿಯ ಹರಿವನ್ನು ನಿರ್ಬಂಧಿಸಿದಂತಾಗುತ್ತದೆ. ಏರ್‌ ಫಿಲ್ಟರ್‌ ತುಂಬಾ ಕೆಟ್ಟಿದರೆ ಬದಲಾಯಿಸುವುದು ಬೆಟರ್‌ ಸಹ.