Home » ಭಾರತದಲ್ಲಿ ನಿಮಗೆ ಕಡಿಮೆ ಬೆಲೆಯಲ್ಲಿ 5ಜಿ ಫೋನ್‍ಗಳು ಬೇಕೆ ? ಹಾಗಿದ್ರೆ ಇಲ್ಲಿವೆ ನೋಡಿ ಲಿಸ್ಟ್‌..

ಭಾರತದಲ್ಲಿ ನಿಮಗೆ ಕಡಿಮೆ ಬೆಲೆಯಲ್ಲಿ 5ಜಿ ಫೋನ್‍ಗಳು ಬೇಕೆ ? ಹಾಗಿದ್ರೆ ಇಲ್ಲಿವೆ ನೋಡಿ ಲಿಸ್ಟ್‌..

by manager manager

ನಿಮಗೆ ಕಡಿಮೆ ಬೆಲೆಯಲ್ಲಿ 5ಜಿ ಸ್ಮಾರ್ಟ್‍ಫೋನ್‍ಗಳು ಬೇಕೆಂದರೇ ಇಂದು ನಮ್ಮ ಭಾರತದಲ್ಲೇ ನಿಮಗೆ ಸಿಗಲಿವೆ. ಇನ್ನು 4ಜಿ ಫೋನ್‍ಗಳ ಬೆಲೆನೇ ದುಬಾರಿ ಇರುವಾಗ 5ಜಿ ಫೋನ್‍ಗಳು ಇನ್ನು ದುಬಾರಿಯಾಗಿವೆ ಎಂದು ಭಾವಿಸಬೇಡಿ. ಇಂದು ಭಾರತೀಯ ಮಾರುಕಟ್ಟೆಗೆ ಈಗಾಗಲೇ ಸಾಕಷ್ಟು 5ಜಿ ಸ್ಮಾಟ್ರ್ಫೋನ್ಗಳು ಪ್ರವೇಶ ಪಡೆದಿವೆ. ಆದರೆ, ಅವುಗಳ ಪೈಕಿ ಹೆಚ್ಚಿನ ಮೊಬೈಲ್ಗಳ ಬೆಲೆ ಗಗನದೆತ್ತರಕ್ಕಿದೆ. ಸದ್ಯ ಬಳಕೆದಾರರಲ್ಲಿ 5ಜಿ ಯ ವ್ಯಾಮೋಹ ಮತ್ತು ಉಪಯುಕ್ತತೆಯಿಂದಾಗಿ ಕಂಪನಿಗಳು ಭಾರತದಲ್ಲಿ 5ಜಿ ಸ್ಮಾಟ್ರ್ಫೋನ್ಗಳನ್ನು ಕಡಿಮೆ ಬೆಲೆಗೆ ಬಿಡುಗಡೆ ಮಾಡಿವೆ.

ನಮ್ಮ ಕೈಗೆಟಕುವ ಬೆಲೆಯಲ್ಲಿ ಇರುವ 5ಜಿ ಸ್ಮಾರ್ಟ್‍ಫೋನ್‍ಗಳ ಮಾಹಿತಿ ಇಲ್ಲಿದೆ ನೋಡಿ.

ಒನ್‍ಪ್ಲಸ್ ನೋರ್ಡ್
ಒನ್‍ಪ್ಲಸ್ ನೋರ್ಡ್ ಸ್ಮಾರ್ಟ್‍ಫೋನ್ ಕ್ವಾಲ್ಕಾಮ್ ಸ್ನಾಪ್‍ಡ್ರಾಗನ್ 765ಜಿ ಪ್ರೊಸೆಸರ್ ಅನ್ನು ಒಳಗೊಂಡಿದ್ದು, 5ಜಿ ನೆಟ್‍ವರ್ಕ್ ಅನ್ನು ಬೆಂಬಲಿಸುತ್ತವೆ.

  • 4115 ಎಂಎಹೆಚ್ ಸಾಮಥ್ರ್ಯದ ಬ್ಯಾಟರಿ ಬ್ಯಾಕ್‍ಅಪ್ ಅನ್ನು ಹೊಂದಿದೆ. 6.5-ಇಂಚಿನ ಅಮೋಲೆಡ್ ಡಿಸ್‍ಪ್ಲೇಯನ್ನು ಹೊಂದಿದೆ.
  • 90ಹಟ್ರ್ಸ್ ರಿಫ್ರೆಶ್ ರೇಟ್ ಅನ್ನು ಹೊಂದಿದೆ.
  • ಇದರ ಈ ಡಿಸ್‍ಪ್ಲೇಯು 20: 9 ರಚನೆಯ ಅನುಪಾತವನ್ನ ಒಳಗೊಂಡಿದೆ.
  • ಮುಖ್ಯ ಕ್ಯಾಮೆರಾ : 48 ಮೆಗಾಪಿಕ್ಸೆಲ್ ಸೋನಿ ಐಎಂಎಕ್ಸ್ 586 ಸೆನ್ಸಾರ್ ಜೊತೆಗೆ ಜಿ/ 1.7 ಲೆನ್ಸ್ ಹಾಗೂ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಬೆಂಬಲವನ್ನು ಹೊಂದಿದೆ.
  • ಎರಡನೇ ಕ್ಯಾಮೆರಾ : 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಹೊಂದಿದೆ.
  • ಮೂರನೇ ಕ್ಯಾಮೆರಾ : 5 ಡೆಪ್ತ್ ಸೆನ್ಸಾರ್ ಮತ್ತು ಮಾಕ್ರೋ ಕ್ಯಾಮೆರಾ ಆಗಿದೆ.
  • ಸೆಲ್ಫಿ ಕ್ಯಾಮೆರಾ : 32 ಮೆಗಾಪಿಕ್ಸೆಲ್ ಮತ್ತು 8 ಮೆಗಾಪಿಕ್ಸೆಲ್ ಹೊಂದಿದ್ದು ಮುಂಬಾಗದಲ್ಲಿ ಎರಡು ಕ್ಯಾಮೆರಾ ಇರುವ ಮೊದಲ ಒನ್ಪ್ಲಸ್ ಸ್ಮಾಟ್ರ್ಫೋನ್ ನೋರ್ಡ್ ಆಗಿದೆ.
  • ಇದರ ಬೆಲೆ 27,999 ರೂ.

ರಿಯಲ್ಮೆ ಎಕ್ಸ್ 7 ಪ್ರೊ
ಇದು 5ಜಿ ಅಂತರ್ಜಾಲ ಸೇವೆಯನ್ನು ಹೊಂದಿದ್ದು. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 1000+ ಚಿಪ್‍ಸೆಟ್‍ನಿಂದ ಕಾರ್ಯನಿರ್ವಹಿಸುತ್ತದೆ.

  • 4500 ಎಂಎಎಚ್ ಸಾಮಥ್ರ್ಯದ ಬ್ಯಾಟರಿ ಹೊಂದಿದೆ.
  • 65 ವ್ಯಾಟ್ ಅಲ್ಟ್ರಾ-ಫಾಸ್ಟ್ ಫ್ಲ್ಯಾಶ್ ಚಾಜಿರ್ಂಗ್ ತಂತ್ರಜ್ಞಾನದೊಂದಿಗೆ ಕಾರ್ಯನಿರ್ವಹಿಸುತ್ತದೆ.
  • ಸ್ಟೋರೇಜ್ 128ಜಿಬಿ ಇದ್ದು,
  • 64 ಮೆಗಾಪಿಕ್ಸೆಲ್ + 8ಎಂಪಿ +2ಎಂಪಿ + 2ಎಂಪಿಯ ಕ್ಯಾಮೆರಾವಿದೆ.

ಮೋಟೋ ಜಿ 5ಜಿ
ಈ 5ಜಿ ಸ್ಮಾಟ್ರ್ಫೋನ್ ವೋಲ್ಕಾನಿಕ್ ಗ್ರೇ ಹಾಗೂ ಫ್ರೋಸ್ಟೆಡ್ ಸಿಲ್ವರ್ ಬಣ್ಣಗಳಲ್ಲಿ ಲಭ್ಯವಿದೆ.

  • 6.7 ಇಂಚಿನ ಮ್ಯಾಕ್ಸ್ ವಿಷನ್ ಹೆಚ್ ಡಿಆರ್ 10 ಡಿಸ್‍ಪ್ಲೇ ಯನ್ನು ಹೊಂದಿದೆ.
  • 20:9 ಆಸ್ಪಕ್ಟ್ ರೇಶಿಯೋ ಕ್ವಾಲ್ಕಾಮ್‍ನ ಸ್ನಾಪ್‍ಡ್ರಾಗನ್ 750 ಜಿ ಚಿಪ್ ಸೆಟ್ ಹೊಂದಿದೆ.
  • 6ಜಿಬಿ ರ್ಯಾಮ್ ಹಾಗೂ 128ಜಿಬಿ ಆಂತರಿಕ ಸ್ಟೋರೇಜ್ ಹೊಂದಿದೆ.
  • ಟ್ರಿಪಲ್ ಕ್ಯಾಮರಾಗಳನ್ನು ಹೊಂದಿದ್ದು,
  • 48 ಎಂಪಿ ಪ್ರೈಮರಿ ಕ್ಯಾಮೆರಾ,
  • 8ಎಂಪಿ ಸೆಕೆಂಡರಿ ಕ್ಯಾಮೆರಾ,
  • ಸೆಲ್ಫಿ, ವಿಡಿಯೋ ಕರೆಗಳಿಗಾಗಿ 16 ಎಂಪಿ ಮುಂಭಾಗದ ಕ್ಯಾಮೆರಾ.
  • 5000ಎಂಎಹೆಚ್ ಬ್ಯಾಟರಿ ಹೊಂದಿದೆ.
  • 19,999 ರೂಪಾಯಿ ಬೆಲೆ.

ಶಿಯೋಮಿ ಎಂಐ 10ಐ
ಈ ಫೋನ್ ಮಿಡ್ ನೈಟ್ ಬ್ಲ್ಯಾಕ್, ಅಟ್ಲಾಂಟಿಕ್ ಬ್ಲೂ ಮತ್ತು ಪೆಸಿಫಿಕ್ ಸನ್ ರೈಸ್ ಎಂಬ ಮೂರು ಬಣ್ಣಗಳಲ್ಲಿ ದೊರೆಯುತ್ತಿದೆ.

  • ಇದು 5ಜಿ ಬೆಂಬಲ ಹೊಂದಿದ್ದು,
  • 6.67 ಇಂಚಿನ ಫುಲ್ ಹೆಚ್‍ಡಿ+ ಡಿಸ್‍ಪ್ಲೇ ಹೊಂದಿದೆ.
  • 120ಹಟ್ರ್ಸ್ ರಿಫ್ರೆಶ್ ರೇಟ್, ಹೆಚ್‍ಡಿಆರ್10+ ಹೊಂದಿದೆ.
  • ಒಕ್ಟಾ ಕೋರ್ ಸ್ನಾಫ್‍ಡ್ರ್ಯಾಗನ್ 750ಜಿ ಎಸ್‍ಓಸಿ ಮತ್ತು ಆಡ್ರೇನೋ 619 ಜಿಪಿಯು ಬೆಂಬಲ ಹೊಂದಿದೆ.
  • 108+8+2+2 ಮೆಗಾಪಿಕ್ಸೆಲ್ ಹಿಂಬದಿ ಕ್ವಾಡ್ ಕ್ಯಾಮರಾವಿದೆ.
  • ಸೆಲ್ಫಿ ಕ್ಯಾಮರಾ 16 ಮೆಗಾಪಿಕ್ಸೆಲ್.
  • 4820ಎಂಎಹೆಚ್ ಬ್ಯಾಟರಿ ಹೊಂದಿದೆ.
  • 33ವ್ಯಾಟ್ಸ್ ಫಾಸ್ಟ್ ಚಾಜಿರ್ಂಗ್ ಬೆಂಬಲ ಹೊಂದಿದೆ.
  • 6ಜಿಬಿ+64ಜಿಬಿ ಮಾದರಿಗೆ ₹20,999.
  • 6ಜಿಬಿ+128ಜಿಬಿ ಆವೃತ್ತಿಗೆ ₹21,999.
  • 8ಜಿಬಿ+128ಜಿಬಿ ಆವೃತ್ತಿಗೆ ₹23,999 ದರವಿದೆ.

ರಿಯಲ್ಮೆ ನಾರ್ಜೊ 30 ಪ್ರೊ
ಇದು ಭಾರತೀಯ ಮಾರುಕಟ್ಟೆಯಲ್ಲಿ ಎರಡು ದಿನಗಳ ಹಿಂದೆ ಬಿಡುಗಡೆಯಾಗಿ ಟ್ರೆಂಡ್ ಸೃಷ್ಟಿಸಿದೆ.

  • ಮೀಡಿಯಾ ಟೆಕ್ ಡಿಮೆನ್ಸಿಟಿ 800ಯು 5ಜಿ ಪ್ರೊಸೆಸರ್ ಆಧರಿತವಾಗಿದೆ.
  • 6.5 ಇಂಚಿನ ಫುಲ್ ಹೆಚ್‍ಡಿ ಡಿಸ್ಲೇ ಹೊಂದಿದ್ದು.
  • 30 ವೋಲ್ಟ್ ಫಾಸ್ಟ್ ಚಾಜಿರ್ಂಗ್ ಸಪೋರ್ಟ್ ಹೊಂದಿದೆ.
  • 13 ಮೆಗಾಫಿಕ್ಸಲ್ ಡ್ಯುಯೆಲ್ ಕ್ಯಾಮೆರಾ ಮತ್ತು 8 ಎಂಪಿಯ ಸೆಲ್ಫಿ ಕ್ಯಾಮೆರಾ ಇದೆ.
  • ಇದರ ಬ್ಯಾಟರಿ ಸಾಮಥ್ರ್ಯ 6,000ಎಂಎಹೆಚ್
  • ಇದರ ಬೆಲೆ 16,999 ರೂ.

ಸ್ಮಾರ್ಟ್‌ಫೋನ್‌ ಟಚ್‌ಸ್ಕ್ರೀನ್‌ ವರ್ಕ್‌ ಆಗದಿದ್ದಾಗ ಈ ಟ್ರಿಕ್ಸ್‌ ಬಳಸಿ!

You may also like