Home » ಥೈರಾಯ್ಡ್ ಬಗ್ಗೆ ನಿಮಗೆಷ್ಟು ಗೊತ್ತು? ಅದರ ಲಕ್ಷಣಗಳು, ಕಾರಣಗಳು, ಪರಿಹಾರಗಳನ್ನು ಇಲ್ಲಿ ತಿಳಿಯಿರಿ..

ಥೈರಾಯ್ಡ್ ಬಗ್ಗೆ ನಿಮಗೆಷ್ಟು ಗೊತ್ತು? ಅದರ ಲಕ್ಷಣಗಳು, ಕಾರಣಗಳು, ಪರಿಹಾರಗಳನ್ನು ಇಲ್ಲಿ ತಿಳಿಯಿರಿ..

by manager manager

ಥೈರಾಯ್ಡ್ ಎಂದರೇ ಏನು ಎಂಬುದನ್ನು ಮೊದಲು ತಿಳಿದುಕೊಳ್ಳೊಣ. ನಮ್ಮ ದೈಹಿಕ ಚಟುವಟಿಕೆಗಳಲ್ಲಿ ಥೈರಾಯ್ಡ್‍ನ ಪಾತ್ರವು ದೊಡ್ಡದು. ಈ ರೀತಿಯ ಥೈರಾಯ್ಡ್ ಗ್ರಂಥಿಗಳು ಬಿಡುಗಡೆ ಮಾಡುವಂತಹ ಹಾರ್ಮೋನುಗಳು ಹೆಚ್ಚಾದಾಗ ಅಥವಾ ಕಡಿಮೆಯಾದಾಗ ಥೈರಾಯ್ಡ್ ಸಮಸ್ಯೆಗಳು ಉಂಟಾಗುತ್ತದೆ. ಈ ರೀತಿಯ ಥೈರಾಯ್ಡ್‍ನಲ್ಲಿ ಎರಡು ವಿಧ ಒಂದು “ಥೈರಾಡಿಸಮ್” ಮತ್ತೊಂದು “ಹೈಪೊಥೈರಾಡಿಸಮ್” ಈ ತರಹದ ಥೈರಾಯ್ಡ್‍ಗಳು ಗಂಟಲಿನಲ್ಲಿ ಚಿಟ್ಟೆಯ ಆಕಾರದಲ್ಲಿರುತ್ತವೆ. ಆದ್ದರಿಂದ ಇದು ಪಿಟ್ಯುಟರಿ ಗ್ರಂಥಿಯ ಅಧೀನದಲ್ಲಿ ತಮ್ಮ ಕಾರ್ಯ ನಿರ್ವಹಿಸುತ್ತವೆ. ಈ ಥೈರಾಯ್ಡ್ ಸಮಸ್ಯೆಗಳು ನಮ್ಮ ಶರೀರದ ಮೇಲಷ್ಟೇ ಅಲ್ಲ ಮಾನಸಿಕವಾಗಿ ಸಹ ತೊಂದರೆ ಕೊಡುತ್ತದೆ ಹಾಗಾಗೀ ದಯವಿಟ್ಟು ಇದನ್ನು ನಿರ್ಲಕ್ಷಿಸಬೇಡಿ.

ಲಕ್ಷಣಗಳು :-

• ಥೈರಯ್ಡ್ ಹಾರ್ಮೋನುಗಳು ನಿಮ್ಮ ಜೀರ್ಣಕ್ರೀಯೆಯ ವ್ಯವಸ್ಥೆಯ ಮೇಲೆ ತನ್ನ ಪ್ರಭಾವವನ್ನು ಬೀರಿ ಮಲಬದ್ದತೆಗೆ ಎಡೆಮಾಡಿಕೊಡುತ್ತದೆ.

• ಹಗಲ್ಲಲ್ಲಿ ನಿಮಗೆ ಸುಸ್ತಾಗುವುದು ಮತ್ತು ಅತೀಯಾದ ನಿದ್ರೆಬರುವುದು ಕೂಡ ನಿಷ್ಕ್ರೀಯ ಥೈರಾಯ್ಡ್‍ನ ಲಕ್ಷಣವಾಗಿದೆ.

• ನಿಷ್ಕ್ರೀಯ ಥೈರಾಯ್ಡ್‍ನಿಂದಾಗಿ ಕೂದಲು ಉದುರುವುದು, ಕಣ್ಣಿನ ರೆಪ್ಪೆ ಸಹ ಉದುರುವುದು, ನಿಮ್ಮ ದೇಹದ ಚರ್ಮ ಒಣಗುವುದು.

• ನಿಮ್ಮಲ್ಲಿ ಬೇಸರ ಮತ್ತು ಖಿನ್ನತೆಗೂ ಸಹ ಇದು ಒಂದೂ ರೀತಿಯಲ್ಲಿ ಕಾರಣವಾಗಬಹುದು.

• ನಿಮ್ಮ ದೇಹದ ತೂಕ ಧೀಡಿರನೇ ಹೆಚ್ಚಾಗುವುದು.

• ನಿಮ್ಮಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತದೆ.

• ಈ ಥೈರಾಯ್ಡ್ ಸಮಸ್ಯೆಯಿಂದ ಹೃದಯದ ಸಮಸ್ಯೆಗಳು ಸಹ ಬರಬಹುದು ಮತ್ತು ನಿಮ್ಮ ದೇಹದ ಸ್ನಾಯುಗಳ ಸೆಳೆತ ಹಾಗೂ ನೋವು ಕೂಡ ಹೆಚ್ಚಾಗುವುದು.

• ಅಧಿಕ ರಕ್ತದೊತ್ತಡ ಮತ್ತು ಮಂಕು ಹಿಡಿಯುವುದು.

• ಗಂಟಲಿನ ನೋವು ಹೆಚ್ಚಾಗಿ ಊತವಾಗುವುದು ಮತ್ತು ಕುತ್ತಿಗೆಯ ನೋವು ವಿಫರೀತವಾಗುವುದು.

• ಹಸಿವು ಕಡಿಮೆಯಾಗುವುದು, ರುಚಿ ಬದಲಾದಂತೆ ಅನಿಸುವುದು, ನಿಶ್ಯಕ್ತಿಯಾಗುವುದು, ಪ್ರತಿಯೊಂದು ವಿಷಯಕ್ಕು ಕಿರಿಕಿರಿ ಉಂಟಾಗುವುದು, ತುರಿಕೆ ಸಮಸ್ಯೆ ತಲೆದೂರುವುದು.

ಕಾರಣಗಳು :-

• ಅಯೋಡಿನ್ ಕೊರತೆ :- ನಿಮ್ಮಲ್ಲಿ ಅಯೋಡಿನ್ ಕೊರತೆಯಿಂದ ಥೈರಾಯ್ಡ್ ಉಂಟಾಗಬಹುದು.

• ಥೈರಾಯ್ಡಿಟಿಸ್ :- ಉರಿಯೂತದಿಂದಾಗಿ ಅಂದರೆ ಇದು ನಿಮಗೆ ನೋವನ್ನು ಕೊಡಬಹುದು ಅಥವ ಕೊಡದೇ ಇರಬಹುದು ಇದು ನಿಮ್ಮಲ್ಲಿ ಉತ್ಪತ್ತಿಯಾಗುವ ಹಾರ್ಮೋನ್‍ಗಳನ್ನು ಕಡಿಮೆ ಮಾಡುತ್ತದೆ.

• ಹಶಿಮೊಟೊದ ಥೈರಾಯ್ಡಿಟಿಸ್ :- ನೋವು ರಹಿತ ಕಾಯಿಲೆ, ಇದು ಸ್ವಯಂ ನಿರೋಧಕ ಸ್ಥಿತಿಯಾಗಿದ್ದು ಇದರಲ್ಲಿ ದೇಹದ ಜೀವಕೋಶಗಳು ಥೈರಾಯ್ಡ್ ಅನ್ನು ಆಕ್ರಮಿಸುತ್ತವೆ ಮತ್ತು ಹಾನಿಗೊಳಿಸುತ್ತವೆ. ಇದು ಅನುವಂಶಿಕ ಸ್ಥಿತಿ.

• ಗರ್ಭಧಾರಣೆಯ ನಂತರದ ಥೈರಾಯ್ಡ್ :- ಹೆರಿಗೆಯ ನಂತರದಲ್ಲಿ 5 ರಿಂದ 9 ಶೇಕಡ ಮಹಿಳೆಯರಲ್ಲಿ ಈ ಸ್ಥಿತಿ ಕಂಡುಬರುತ್ತದೆ.

ಪರಿಹಾರಗಳು :-

ಪ್ರಪಂಚದ ಜನಸಂಶ್ಯೆಯಲ್ಲಿ ಸು. ಶೇ7.5% ರಷ್ಟು ಸ್ತ್ರೀಯರು ಥೈರಾಯ್ಡ್‍ನಿಂದ ಬಳಲುತ್ತಿದ್ದಾರೆ. ಅದು ಪುರುಷರಲ್ಲಿ 1.5%ರಷ್ಟಿದೆ ಹಾಗಾಗಿ ಇದಕ್ಕೆ ಕೆಲವು ರೀತಿಯ ಪರಿಹಾರಗಳಿವೆ ಅವುಗಳೆಂದರೇ

• ನೈಸರ್ಗಿಕವಾಗಿ ಅಹಾರದಲ್ಲಿನ ಬದಲಾವಣೆ

• ಸೆಲೆನಿಯಮ್ ಸೇವನೆ :- ಸೆಲೆನಿಯಮ್ ಎಂಬುದು ಥೈರಾಯ್ಡ್ ಹಾರ್ಮೋನ್ ಚಯಾಪಚಯ ಕ್ರಿಯೆಯಲ್ಲಿ ಒಂದು ಜಾಡಿನ ಅಂಶದ ಪಾತ್ರವನ್ನು ವಹಿಸುತ್ತದೆ. ಸೆಲೆನಿಯಮ್ ಇರುವ ಪದಾರ್ಥಗಳೆಂದರೇ ಟ್ಯೂನ, ಟರ್ಕಿ, ಬ್ರೆಜಿಲ್ ಬೀಜಗಳು, ಹುಲ್ಲು ತಿಂದು ಬೆಳೆದ ಗೋಮಾಂಸ.

• ಸಕ್ಕರೆ ರಹಿತ ಆಹಾರ :- ಸಕ್ಕರೆ ರಹಿತವಾದ ಆಹಾರವನ್ನು ಅಳವಡಿಸಿಕೊಳ್ಳುವುದರಿಂದ ನಿಮ್ಮ ದೇಹದಲ್ಲಿ ಥೈರಾಯ್ಡ್‍ನಿಂದ ಹದಗೆಡಿಸಬಹುದಾದ ಅನೇಕ ಕಾರ್ಯಗಳನ್ನು ತಡೆಗಟ್ಟಬಹುದು.

• ವಿಟಮಿನ್ ಬಿ ಸೇವನೆ :- ವಿಟಮಿನ್ ಬಿಯು ನಿಮ್ಮ ದೇಹದಲ್ಲಿ ಹೈಪೋಥೈರಾಯ್ಡಿಸಮ್ ಅನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಹಾಗಾಗೀ ವಿಟಮಿನ್ ಬಿ ಇರುವ ಪದಾರ್ಥಗಳೆಂದರೆ ಬಟಾಣಿ, ಬೀನ್ಸ್, ಶತಾವರಿ, ಎಳ್ಳು, ಟ್ಯೂನ, ಗಿಣ್ಣು, ಹಾಲು, ಮೊಟ್ಟೆಗಳು.

• ಅಂಟು ರಹಿತ ಆಹಾರ ಸೇವನೆ :- ಈ ಅಂಟು ರಹಿತ ಆಹಾರವು ಎಲ್ಲರಿಗೂ ಒಂದೇ ರೀತಿ ಪ್ರಭಾವ ಬೀರುವುದಿಲ್ಲ ಬದಲಿಗೆ ಈ ರೀತಿಯ ಆಹಾರ ಸೇವನೆಯನ್ನು ನಿಲ್ಲಿಸಿದ ಕೆಲವರಲ್ಲಿ ಅಂದರೆ ಹೈಪೋಥೈರಾಯ್ಡಿಸಮ್ ಇದ್ದವರಲ್ಲಿ ಸ್ವಲ್ಪ ಚೇತರಿಕೆ ಕಂಡುಬಂದಿದೆ.

ಮೂಲವ್ಯಾದಿ ಲಕ್ಷಣಗಳೇನು? ಕಾರಣ ಮತ್ತು ಪರಿಹಾರಗಳೇನು?

You may also like