Home » ಟ್ರಾಫಿಕ್ ದಂಡವನ್ನು ಆನ್‍ಲೈನ್‍ನಲ್ಲಿ ಪಾವತಿಸುವುದು ಹೇಗೆ..?

ಟ್ರಾಫಿಕ್ ದಂಡವನ್ನು ಆನ್‍ಲೈನ್‍ನಲ್ಲಿ ಪಾವತಿಸುವುದು ಹೇಗೆ..?

by manager manager

ಟ್ರಾಫಿಕ್ ರೂಲ್ಸ್ ಅನ್ನು ಫಾಲೋ ಮಾಡಬೇಕಾದ ಹೊಣೆ ಎಲ್ಲಾ ಭಾರತೀಯರಲ್ಲೂ ಇದೆ. ಹೀಗಿರುವಾಗ ನಾವು ಹೆಲ್ಮೇಟ್ ಹಾಕದೆ, ದ್ವಿಚಕ್ರವಾಹನದ ಡಾಕ್ಯುಮೆಂಟ್ಸ್‍ಗಳನ್ನು ಇಟ್ಟುಕೊಳ್ಳದೆ, ಅಥವ ಕಾರಿನಲ್ಲಿ ಸೀಟ್ ಬೆಲ್ಟ್ ಹಾಕದೆ ಮತ್ತು ಅದಕ್ಕೆ ಸಂಬಂಧಪಟ್ಟ ಡಾಕ್ಯುಮೆಂಟ್ಸ್‍ಗಳನ್ನು ಇಟ್ಟುಕೊಳ್ಳದೆ. ವಾಹನ ಚಾಲನೆ ಮಾಡುವುದು ಕಾನೂನಿನ ಪ್ರಕಾರ ದಂಡಕ್ಕೆ ಆಹ್ವಾನ ಕೊಟ್ಟ ರೀತಿ ಹಾಗಾಗೀ ಯಾವುದೇ ಕಾರಣಕ್ಕೂ ಕೆಲವು ನಿಯಮಗಳನ್ನು ಉಲ್ಲಂಘಿಸಬೇಡಿ. ಸದ್ಯ ದೇಶದೆಲ್ಲಡೆ ಕೊರೋನಾ ವೈರಸ್ ಎರಡನೇ ಅಲೆ ಆವರಿಸಿದ್ದು, ಸಂಚಾರಿ ನಿಯಮಗಳ ಉಲ್ಲಂಘನೆ ಮಾಡಿದರೆ ಭಾರೀ ಪ್ರಮಾಣದಲ್ಲಿ ದಂಡ ವಿಧಿಸಲಾಗುತ್ತಿದೆ. ಆದರೂ ಕೇಂದ್ರ ಸರ್ಕಾರದ ಈ ಕ್ರಮಕ್ಕೆ ಸಾರ್ವಜನಿಕವಾಗಿ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಕೇವಲ ಸಾಂವಿಧಾನಿಕ ಬದಲಾವಣೆ ಅಷ್ಟೇ ಅಲ್ಲದೇ ಸಂಚಾರ ನಿಯಮ ಉಲ್ಲಂಘನೆ ಪತ್ತೆಹಚ್ಚಲು ರಸ್ತೆಗಳಲ್ಲಿ ಕ್ಯಾಮೆರಾಗಳನ್ನು ಸಹ ಅಳವಡಿಸಲಾಗಿದೆ, ಈಗ ನೀವು ಸಂಚಾರ ನಿಯಮ ಉಲ್ಲಂಘಿಸಿದರೆ ಕ್ಯಾಮೆರಾವೇ ಇ-ಚಲನ್ ಸೃಷ್ಟಿಸಿ ನಿಮಗೆ ಕಳುಹಿಸಲಿದೆ.


ಸಾಮಾನ್ಯವಾಗಿ ಸಂಚಾರ ಪೊಲೀಸ್ ಅಧಿಕಾರಿಗಳು ಸಹ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಇ-ಚಲನ್ ಕೋಡುತ್ತಾರೆ ಮತ್ತು ಅಲ್ಲೇ ಫೈನ್ ಕಟ್ಟಿಸಿಕೊಳ್ಳುತ್ತಾರೆ. ಎಂದು ಭಾವಿಸಿದ್ದರೆ ಈಗೀನ ಈ ಚಲನ್ ಅನ್ನು ಆನ್‍ಲೈನ್ ಮತ್ತು ಆಫ್‍ಲೈನ್‍ನಲ್ಲಿ ಪಾವತಿಸಬಹುದು. ಹಾಗಾಗೀ ಟ್ರಾಫಿಕ್ ಇ-ಚಲನ್‍ನ್ನು ಆನ್‍ಲೈನ್‍ನಲ್ಲಿ ಪಾವತಿಸುವುದು ಹೇಗೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

  • ಮೊದಲು ಮೊಬೈಲ್ ಅಥವಾ ಡೆಸ್ಕ್‍ಟಾಪ್‍ನಲ್ಲಿ https://echallan.parivahan.gov.in/ ವೆಬ್‍ಸೈಟ್‍ಗೆ ಭೇಟಿ ನೀಡಿ. ಈ ವೆಬ್‍ಸೈಟ್ ಒನ್ ನೇಷನ್ ಒನ್ ಚಲನ್ ಉಪಕ್ರಮದಡಿ ಸೃಷ್ಟಿಯಾಗಿದೆ ಹಾಗಾಗೀ ಇಲ್ಲಿ “ಚಲನ್ ಸ್ಥಿತಿ ಪರಿಶೀಲಿಸಿ” ಆಯ್ಕೆಯನ್ನು ಕ್ಲಿಕ್ ಮಾಡಿ.
  • ನೀವು ಲೈಸನ್ಸ್ ಸಂಖ್ಯೆ, ವಾಹನ ಸಂಖ್ಯೆ ಅಥವಾ ಚಲನ್ ಸಂಖ್ಯೆಯೊಂದಿಗೆ ದಂಡದ ಚಲನ್‍ಗಳನ್ನು ಹುಡುಕಬಹುದು.
  • ಪ್ರಕ್ರಿಯೆಯಲ್ಲಿ ಮುಂದುವರಿಯಲು ಕ್ಯಾಪ್ಚಾ ನಮೂದಿಸಿ. ಮೇಲಿನ ಮೂರು ವಿವರಗಳಲ್ಲಿ ಒಂದನ್ನು ನಮೂದಿಸಿದ ನಂತರ, ದಂಡದ ಚಲನ್ ವಿವರಗಳು ಆನ್‍ಲೈನ್‍ನಲ್ಲಿ ಗೋಚರಿಸುತ್ತವೆ.
  • ಕೆಲವೊಮ್ಮೆ ಎರಡು ವಿಭಿನ್ನ ಚಲನ್‍ಗಳನ್ನು ಪರವಾನಗಿ ಸಂಖ್ಯೆ ಮತ್ತು ವಾಹನ ಸಂಖ್ಯೆ ಎರಡನ್ನು ಪ್ರತ್ಯೇಕವಾಗಿ ಬಳಸಿ ನೀಡಿರುತ್ತಾರೆ ಎಂಬುದನ್ನು ಗಮನಿಸಬೇಕು.
  • ಆನ್‍ಲೈನ್‍ನಲ್ಲಿ ಉತ್ಪತ್ತಿಯಾಗುವ ಚಲನ್ ವಿವರಗಳನ್ನು ಪಡೆಯಲು ಎರಡು ವಿವರಗಳನ್ನು ಬಳಸಬಹುದು.
  • ಚಲನ್ ವಿವರಗಳನ್ನು ಜನರೇಟ್ ಮಾಡಿದ ನಂತರ, ಆನ್‍ಲೈನ್‍ನಲ್ಲಿ ಪಾವತಿ ಮಾಡಲು ‘ಈಗ ಪಾವತಿಸಿ’ ಆಯ್ಕೆಯನ್ನು ಕ್ಲಿಕ್ ಮಾಡಿ.
  • ಬಳಿಕ ವಹಿವಾಟನ್ನು ಪ್ರಾರಂಭಿಸಲು, ನಿಮ್ಮ ಸಂಖ್ಯೆಗೆ ಕಳುಹಿಸಲಾದ ಒಟಿಪಿಯನ್ನು ನಿಮ್ಮ ಮೊಬೈಲ್ ಸಂಖ್ಯೆಯನ್ನು ಎಂಟ್ರಿ ಮಾಡಿ. ಈ ಹಂತದಲ್ಲಿ, ನಿಮ್ಮನ್ನು ನಿಮ್ಮ ರಾಜ್ಯದ ಇ-ಚಲನ್ ಪಾವತಿ ವೆಬ್‍ಸೈಟ್‍ಗೆ ಕೊಂಡೊಯ್ಯಲಾಗುತ್ತದೆ.
  • ಮೇಲಿನ ಹಂತ ಮುಗಿದ ನಂತರ, ನೀವು ಪಾವತಿಸಿದ ಬಗ್ಗೆ ದೃಢೀಕರಣವನ್ನು ನೋಡುತ್ತೀರಿ. ಇಲ್ಲಿ ‘‘Proceed with net payment” ಆಯ್ಕೆಯನ್ನು ಕ್ಲಿಕ್ ಮಾಡಿ, ನಿಮ್ಮ ಆದ್ಯತೆಯ ಪೇಮೆಂಟ್ ಗೇಟ್‍ವೇ ಆಯ್ಕೆಮಾಡಿ. ಇಲ್ಲಿ ನಿಮಗೆ ನೆಟ್ ಬ್ಯಾಂಕಿಂಗ್, ಕಾರ್ಡ್ ಪಾವತಿ ಮತ್ತಿತರ ಇತರ ಪಾವತಿ ವಿಧಾನಗಳು ಲಭ್ಯವಿದ್ದು, ನಿಮ್ಮ ಇಷ್ಟದ ಪಾವತಿ ವಿಧಾನದಲ್ಲಿ ದಂಡ ಪಾವತಿಸಬಹುದು.
    ಈ ಮೇಲಿನ ರೀತಿ ನೀವು ಮಾಡಿದ್ದೇ ಆದಲ್ಲಿ ನಿಮ್ಮ ದಂಡವನ್ನು ಕಟ್ಟಬಹುದು, ಒಂದನ್ನು ನೆನಪಿಡಿ ದಂಡ ಕಟ್ಟುವುದು ಈಗ ತುಂಬ ಸುಲಭವಾಗಿದೆ ಎಂದು ಅದಕ್ಕೆ ಅಡ್ಜಸ್ಟ್ ಆಗಬೇಡಿ ಸಂಚಾರಿ ನಿಯಮಗಳಿರುವುದೇ ನಮ್ಮ ಪ್ರಾಣವನ್ನು ಉಳಿಸಲು ಹಾಗಾಗಿ ಅದನ್ನು ಸಂಚಾರಿ ನಿಯಮವನ್ನು ಪಾಲಿಸಿ.
    ಸ್ಮಾರ್ಟ್‌ಫೋನ್‌ ಟಚ್‌ಸ್ಕ್ರೀನ್‌ ವರ್ಕ್‌ ಆಗದಿದ್ದಾಗ ಈ ಟ್ರಿಕ್ಸ್‌ ಬಳಸಿ!