Home » ಆರ್‌ಆರ್‌ಬಿ ‘ಗ್ರೂಪ್ ಡಿ’ ಫಲಿತಾಂಶ ಮಾರ್ಚ್‌’ನಲ್ಲಿ

ಆರ್‌ಆರ್‌ಬಿ ‘ಗ್ರೂಪ್ ಡಿ’ ಫಲಿತಾಂಶ ಮಾರ್ಚ್‌’ನಲ್ಲಿ

by manager manager
RRB Group D results 2018 group d result

ಆರ್‌ಆರ್‌ಬಿಗ್ರೂಪ್ ಡಿ ರಿಸಲ್ಟ್ ಅನ್ನು ಪರೀಕ್ಷೆ ಬರೆದಿರುವ ಸುಮಾರು 1.8 ಕೋಟಿಗೂ ಹೆಚ್ಚು ಅಭ್ಯರ್ಥಿಗಳು ಕಾತುರದಿಂದ ಕಾಯುತ್ತಲೇ ಇದ್ದಾರೆ. ಆದರೆ ಭಾರತೀಯ ರೈಲ್ವೆಯು ಈಗಾಗಲೇ ರಿಸಲ್ಟ್ ಪ್ರಕಟಿಸಲು ನಿಗದಿಪಡಿಸಿದ್ದ ಎರಡು ದಿನಾಂಕಗಳಲ್ಲೂ ಮಾತುತಪ್ಪಿದೆ.(railway group d result 2019)

ಈ ಹಿಂದೆ ಭಾರತೀಯ ರೈಲ್ವೆ ನೇಮಕಾತಿ ಮಂಡಳಿಯು ಗ್ರೂಪ್ ಡಿ ಫಲಿತಾಂಶವನ್ನು ಈ ಹಿಂದೆ ಫೆಬ್ರವರಿ 13 ಮತ್ತು 17 ರಂದು ಪ್ರಕಟಿಸುವ ಬಗ್ಗೆ ಹೇಳಿತ್ತು. ಆದರೆ ಈಗ ಮತ್ತೆ ಫಲಿತಾಂಶ ದಿನಾಂಕವನ್ನು ಮುಂದೂಡಿದೆ.

ರೈಲ್ವೆ ನೇಮಕಾತಿ ಮಂಡಳಿಯು ಗ್ರೂಪ್ ಡಿ ಫಲಿತಾಂಶವನ್ನು ಅಂತಿಮವಾಗಿ ಮಾರ್ಚ್‌ ನಲ್ಲಿ ಪ್ರಕಟಿಸಲಿದೆ ಎಂದು ಆರ್‌ಆರ್‌ಬಿಯ ಅಧಿಕಾರಿ ಅನಗರಾಜ್ ಮೋಹನ್‌ ರವರು ತಿಳಿಸಿರುವುದಾಗಿ ಉನ್ನತ ಮೂಲಗಳಿಂದ ತಿಳಿದಿದೆ. ಫಲಿತಾಂಶವನ್ನು ಪ್ರಕಟಿಸಲು ಕ್ರಾಶ್ ಚೆಕ್ಕಿಂಗ್ ವೇಳೆ ಹಲವು ರೀತಿಯ ತಪ್ಪುಗಳು ಕಂಡುಬಂದಿರುವುದರಿಂದ ಈ ಹಿಂದೆ ಹೇಳಿದ ಎರಡು ದಿನಾಂಕಗಳಲ್ಲಿ ಫಲಿತಾಂಶ ನೀಡಲು ಅಸಾಧ್ಯವಾಗಿರುವುದಾಗಿಯೂ ತಿಳಿಸಿದ್ದಾರೆ.(RRB Group D Result 2018)

ಆರ್‌ಆರ್‌ಬಿ ಗ್ರೂಪ್ ಡಿ ಫಲಿತಾಂಶದ ದಿನಾಂಕ ಮತ್ತು ಸಮಯದ ಬಗ್ಗೆ ಅಧಿಕೃತ ವೆಬ್‌ಸೈಟ್‌ನಲ್ಲಿ ಫೆಬ್ರವರಿ 28 ರ ಒಳಗೆ ಪ್ರಕಟಣೆ ಹೊರಡಿಸಲಾಗುತ್ತದೆ ಎಂದು ಅನಗರಾಜ್‌ ಮೋಹನ್‌ ರವರು ತಿಳಿಸಿದ್ದಾರೆ.

RRB ಗ್ರೂಪ್ ಡಿ ಫಲಿತಾಂಶ ಯಾವಾಗ? ಕೀ ಉತ್ತರಗಳನ್ನು ಚೆಕ್‌ ಮಾಡುವುದು ಹೇಗೆ? ತಿಳಿಯಲು – ಕ್ಲಿಕ್ ಮಾಡಿ

RRB Railway Group D Result 2018-2019 was released in March told Railway Recruitment Board(RRB) official Anagaraj Mohan.(railway group d result)

You may also like