Home » ರೈಲ್ವೆ ನೇಮಕಾತಿ: ಅರ್ಜಿ ಶುಲ್ಕ, ಬೇಕಾದ ದಾಖಲೆಗಳು, ಪರೀಕ್ಷಾ ವಿಧಾನ, ತಯಾರಿ, ಹುದ್ದೆವಾರು ಮೀಸಲಾತಿ..

ರೈಲ್ವೆ ನೇಮಕಾತಿ: ಅರ್ಜಿ ಶುಲ್ಕ, ಬೇಕಾದ ದಾಖಲೆಗಳು, ಪರೀಕ್ಷಾ ವಿಧಾನ, ತಯಾರಿ, ಹುದ್ದೆವಾರು ಮೀಸಲಾತಿ..

by manager manager

ರೈಲ್ವೆ ನೇಮಕಾತಿ 2019: ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು, ಅರ್ಜಿ ಶುಲ್ಕ, ಪರೀಕ್ಷಾ ವಿಧಾನ ಮತ್ತು ತಯಾರಿ, RRB ಬೆಂಗಳೂರು ವಿಭಾಗದಲ್ಲಿನ ಹುದ್ದೆಗಳ ಸಂಖ್ಯೆ ಮತ್ತು ಹುದ್ದೆವಾರು ಮೀಸಲಾತಿ ಮಾಹಿತಿಗಾಗಿ ಈ ಕೆಳಗಿನಂತಿದೆ.

ಅರ್ಜಿ ಶುಲ್ಕ ಎಷ್ಟು?

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ: ರೂ.500

ಹಿಂದುಳಿದ ವರ್ಗಗಳು, ಪ.ಜಾ/ಪ.ಪಂ ಮತ್ತು ಮೀಸಲಾತಿ ವರ್ಗಗಳ ಅಭ್ಯರ್ಥಿಗಳಿಗೆ : ರೂ.250

ಪರೀಕ್ಷಾ ಹಂತಗಳು – ಮುಖ್ಯವಾಗಿ ತಿಳಿಯಲೇ ಬೇಕಾದ ಮಾಹಿತಿ

ಎಲ್ಲಾ ಹುದ್ದೆಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ ಈ ಹುದ್ದೆಗಳಿಗೆ ನಡೆಯಲಿದ್ದು, ಕೆಲವು ಹುದ್ದೆಗಳಿಗೆ ಕೌಶಲ್ಯ ಪರೀಕ್ಷೆಯು ನಡೆಯಲಿದ್ದು ಅದು ಸಹ ಕಂಪ್ಯೂಟರ್ ಆಧಾರಿತ ಪರೀಕ್ಷೆ ಆಗಿರುತ್ತದೆ.

– ಕಂಪ್ಯೂಟರ್ ಆಧಾರಿತ ಪರೀಕ್ಷೆಯು ಸ್ಟೇಷನ್ ಮಾಸ್ಟರ್ ಮತ್ತು ಟ್ರ್ಯಾಪಿಕ್ ಅಸಿಸ್ಟಂಟ್ ಹುದ್ದೆಗಳಿಗೆ

– ಕಂಪ್ಯೂಟರ್ ಆಧಾರಿತ ಪರೀಕ್ಷೆ ಜೊತೆಗೆ ಎರಡನೇ ಹಂತದ ಪರೀಕ್ಷೆ ಆಗಿ ಟೈಪಿಂಗ್ ಕೌಶಲ್ಯ ಪರೀಕ್ಷೆಯನ್ನು – ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್, ಜೂನಿಯರ್ ಅಕೌಂಟಂಟ್ ಕಮ್ ಟೈಪಿಸ್ಟ್ ಮತ್ತು ಸೀನಿಯರ್ ಟೈಮ್ ಕೀಪರ್. ನಂತರ ದಾಖಲೆಗಳ ಪರಿಶೀಲನೆ ಮತ್ತು ಮೆಡಿಕಲ್ ಟೆಸ್ಟ್ ಸಾಮಾನ್ಯವಾಗಿರುತ್ತದೆ.

– ಟ್ರೈನ್‌ ಕ್ಲರ್ಕ್, ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್, ಗೂಡ್ಸ್ ಗಾರ್ಡ್, ಸೀನಿಯರ್ ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್, ಕಮರ್ಷಿಯಲ್ ಅಪ್ರೆಂಟಿಸ್, ಹುದ್ದೆಗಳಿಗೂ ಎರಡು ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಯಲಿದೆ. ದಾಖಲೆಗಳ ಪರಿಶೀಲನೆ ಮತ್ತು ಮೆಡಿಕಲ್ ಪರೀಕ್ಷೆ ಸಾಮಾನ್ಯವಾಗಿರುತ್ತದೆ.

ಸೂಚನೆ : ಎರಡನೇ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆಗೆ, ಮೊದಲನೇ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ಮೆರಿಟ್ ಆಧಾರಿತವಾಗಿ ಆಯ್ಕೆ ಮಾಡಲಾಗುತ್ತದೆ.

ನೆಗೆಟಿವ್ ಅಂಕಗಳು :ಮೂರನೇ ಒಂದು ಅಂಕವನ್ನು ಪ್ರತಿ ತಪ್ಪಾದ ಪ್ರಶ್ನೆಗೆ ಕಳೆಯಲಾಗುತ್ತದೆ.

ಹುದ್ದೆಗಳ ಆಯ್ಕೆ

ಅಭ್ಯರ್ಥಿಗಳು ಆನ್‌ಲೈನ್ ಅರ್ಜಿ ಸಲ್ಲಿಸುವಾಗ ಹುದ್ದೆಗಳ ಆಯ್ಕೆಯನ್ನು ಮಾಡಲು ಅವಕಾಶ ನೀಡಲಾಗಿದೆ. ಎಲ್ಲಾ ಹಂತದ ಪರೀಕ್ಷೆಗಳು ಮುಗಿದ ನಂತರ ಹುದ್ದೆ, ರೈಲ್ವೆ ಮತ್ತು ಘಟಕಗಳಿಗೆ ಅಭ್ಯರ್ಥಿಗಳನ್ನು ಅವರು ನೀಡಿದ ಆಧ್ಯತೆ ಹುದ್ದೆಗಳ ಪ್ರಕಾರ ನೇಮಕ ಮಾಡಲಾಗುತ್ತದೆ.

ಮೊದಲ ಹಂತದ CBT ಪರೀಕ್ಷೆ

ಎಲ್ಲಾ ಹುದ್ದೆಗಳಿಗೆ ನಡೆಯಲಿರುವ ಸಾಮಾನ್ಯ ಕಂಪ್ಯೂಟರ್ ಆಧಾರಿತ ಪರೀಕ್ಷೆ ಇದಾಗಿದ್ದು 100 ಅಂಕಗಳಿಗೆ ನಡೆಯಲಿದೆ.

100 ಅಂಕಗಳ ಪ್ರಶ್ನೆ ಪತ್ರಿಕೆಯಲ್ಲಿ ಈ ಕೆಳಗಿನಂತೆ ಪ್ರಶ್ನೆಗಳು ವಿಂಗಡಣೆ ಆಗಿರುತ್ತವೆ.

ಪರೀಕ್ಷೆ ಸಮಯ : 90 ನಿಮಿಷ

ಸಾಮಾನ್ಯ ಜ್ಞಾನ : 40

ಗಣಿತ ವಿಷಯ : 30

ಸಾಮಾನ್ಯ ಬುದ್ಧವಂತಿಕೆ ಮತ್ತು ರೀಸನಿಂಗ್ : 30

ಒಟ್ಟು ಪ್ರಶ್ನೆಗಳು : 100

ಅಭ್ಯರ್ಥಿಗಳು ಪರೀಕ್ಷಾ ತಯಾರಿಗೆ ಕ್ಷೇತ್ರವಾರು ಫೋಕಸ್ ಮಾಡಬೇಕಾದ ವಿಷಯಗಳು ಈ ಕೆಳಗಿನಂತಿವೆ.

ಸಾಮಾನ್ಯ ಜ್ಞಾನ : 40

ಗಣಿತ ವಿಷಯ : 30

ಸಾಮಾನ್ಯ ಬುದ್ಧವಂತಿಕೆ ಮತ್ತು ರೀಸನಿಂಗ್ : 30

ಎರಡನೇ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು, ಮೊದಲನೇ ಹಂತದ ಪರೀಕ್ಷೆಯಲ್ಲಿ ಪಡೆದ ಅಂಕಗಳ ಮೇಲೆ ಮೆರಿಟ್ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಹಂತದಲ್ಲಿ 120 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಪರೀಕ್ಷೆ ಪ್ರಶ್ನೆಗಳು ಈ ಕೆಳಗಿನಂತೆ ವಿಂಗಡನೆ ಆಗಿರುತ್ತವೆ.

ಸಾಮಾನ್ಯ ಜ್ಞಾನ : 50

ಗಣಿತ ವಿಷಯ : 35

ಸಾಮಾನ್ಯ ಬುದ್ಧವಂತಿಕೆ ಮತ್ತು ರೀಸನಿಂಗ್ : 35

ಒಟ್ಟು ಪ್ರಶ್ನೆಗಳು : 120

ಯಾವ ಯಾವ ಹುದ್ದೆಗಳಿಗೆ ಮೊದಲ ಹಂತದ CBT ಪರೀಕ್ಷೆ, ಎರಡನೇ ಹಂತದ CBT ಪರೀಕ್ಷೆ, ಕೌಶಲ ಪರೀಕ್ಷೆ ಕಡ್ಡಾಯವಾಗಿ ನಡೆಯುತ್ತದೆ ಎಂಬುದನ್ನು ಈ ಕೆಳಗಿನ ಚಾರ್ಟ್‌ ನೋಡಿ ತಿಳಿಯಿರಿ.

ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಸ್ಕ್ಯಾನ್‌ ಮಾಡಿ ರೆಡಿ ಇಟ್ಟುಕೊಳ್ಳಬೇಕಾದ ದಾಖಲೆಗಳು

– ಎಲ್ಲಾ ದಾಖಲೆಗಳು JPEG ಫಾರ್ಮ್ಯಾಟ್‌ ನಲ್ಲಿ ಇರಬೇಕು.

– ಅಭ್ಯರ್ಥಿಯ ಫೋಟೋ ( ಫೋಟೋ size 35mmX45mm or 320 x 240 pixels – 20KB ರಿಂದ 50KB ಒಳಗಿರಬೇಕು)

– ಅಭ್ಯರ್ಥಿಯ ಸಹಿ (size 50 mm x 20 mm or 140 x 60 pixels10KB ಇಂದ 40KB ಒಳಗಿರಬೇಕು)

– SC/ST ಸರ್ಟಿಫಿಕೇಟ್ ( ಉಚಿತ ಟ್ರಾವೆಲ್ ಪಾಸ್ ಬಯಸುವ ಅಭ್ಯರ್ಥಿಗಳು ಇಮೇಜ್ ಸೈಜ್ 50KB ಇಂದ 100KB ಇರುವಂತೆ ಅಪ್‌ಲೋಡ್ ಮಾಡಬೇಕು.)

– ಭಾವಚಿತ್ರ ಇತ್ತೀಚಿನದಾಗಿರಬೇಕು. ಕಲರ್ ಫೋಟೋ ಆಗಿರಬೇಕು.

RRB ಬೆಂಗಳೂರು ವಿಭಾಗದಲ್ಲಿ ಮೀಸಲಾತಿ ವಾರು ಇರುವ ಹುದ್ದೆಗಳ ಸಂಖ್ಯೆ ಮತ್ತು ಹುದ್ದೆ ಹೆಸರು ಈ ಕೆಳಗಿನಂತಿದೆ.

ವಿಶೇಷ ಸೂಚನೆ: ಅಭ್ಯರ್ಥಿಗಳು ತಮಗೆ ಸಂಬಂಧಿಸಿದ ಆರ್‌ಆರ್‌ಬಿ ಬೋರ್ಡ್ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ ಅರ್ಜಿ ಸಲ್ಲಿಸಬೇಕು. ಒಮ್ಮೆ ತಪ್ಪಾಗಿ ಬೇರೆ ಯಾವುದೋ ಆರ್‌ಆರ್‌ಬಿ ಲಿಂಕ್‌ ಮೇಲೆ ಕ್ಲಿಕ್ ಮಾಡಿ ಪ್ರಾಥಮಿಕ ರಿಜಿಸ್ಟರ್‌ ಮಾಡಿದ ನಂತರ ಬದಲಿಸಲು ಅವಕಾಶ ಇರುವುದಿಲ್ಲ.

ರೈಲ್ವೆ ನೇಮಕಾತಿ 2019: ಹುದ್ದೆಗಳ ಸಂಖ್ಯೆ, ಹೆಸರು, ವಿದ್ಯಾರ್ಹತೆ, ಇತರೆ ಸಂಪೂರ್ಣ ಮಾಹಿತಿ..

ರೈಲ್ವೆ ಇಲಾಖೆಯಲ್ಲಿನ 1.3 ಲಕ್ಷ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ


You may also like