Home » ರೈಲ್ವೆ ಗ್ರೂಪ್ ಡಿ ನೇಮಕಾತಿ: ದೈಹಿಕ ಸಾಮರ್ಥ್ಯ ಪರೀಕ್ಷೆ ದಿನಾಂಕ ಪ್ರಕಟ

ರೈಲ್ವೆ ಗ್ರೂಪ್ ಡಿ ನೇಮಕಾತಿ: ದೈಹಿಕ ಸಾಮರ್ಥ್ಯ ಪರೀಕ್ಷೆ ದಿನಾಂಕ ಪ್ರಕಟ

by manager manager

ರೈಲ್ವೆ ನೇಮಕಾತಿ ಮಂಡಳಿಯು ರೈಲ್ವೆ ಗ್ರೂಪ್ ಡಿ ನೇಮಕಾತಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಆಯ್ಕೆ ಆಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಗೊಳಿಸಿದೆ. ಜೊತೆಗೆ ದೈಹಿಕ ಸಾಮರ್ಥ್ಯ ಪರೀಕ್ಷೆ (Physical Endurance Test -PET) ದಿನಾಂಕವನ್ನು ಪ್ರಕಟಿಸಿದ್ದು, ಮಾರ್ಚ್ ಮೂರನೇ ವಾರ ಅಥವಾ ನಾಲ್ಕನೇ ವಾರ 2019 ನಡೆಯಲಿದೆ.

List of Candidates Shortlisted for Physical Efficiency Test (Pet) – Click Here

PET ಪರೀಕ್ಷೆಗೆ ಆಯ್ಕೆ ಆಗಿರುವ ಅಭ್ಯರ್ಥಿಗಳ ಸಂಖ್ಯೆಯು ನೇಮಕಾತಿ ನಡೆಯುತ್ತಿರುವ ಹುದ್ದೆಗಳ ಸಂಖ್ಯೆಗಿಂತ ಮೂರು ಪಟ್ಟು ಇದೆ.

PET ಪರೀಕ್ಷೆಗೆ ಆಯ್ಕೆ ಆಗಿರುವ ತಾತ್ಕಾಲಿಕ ಅಭ್ಯರ್ಥಿಗಳ ಪಟ್ಟಿಯನ್ನು ಆರ್‌ಆರ್‌ಸಿ ಅಧ್ಯಕ್ಷರು ಆರ್‌ಆರ್‌ಸಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಅಥವಾ ರಿಜಿಸ್ಟರ್‌ ಆಗಿರುವ ಮೊಬೈಲ್‌ ನಂಬರ್/ ಇಮೇಲ್‌ ವಿಳಾಸಕ್ಕೆ ಅವರ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಲು ಸಂದೇಶ ಮತ್ತು ಲಿಂಕ್ ಅನ್ನು ಕಳುಹಿಸಲಾಗುವುದು ಎಂದು ಅಧಿಕೃತವಾಗಿ ಆರ್‌ಆರ್‌ಬಿ ರಿಸಲ್ಟ್‌ ಪಿಡಿಎಫ್‌ ಶೀಟ್‌ ನಲ್ಲಿಯೇ ತಿಳಿಸಲಾಗಿದೆ.

ಆರ್ಆರ್‌ಬಿ ಗ್ರೂಪ್ ಡಿ ದೈಹಿಕ ಸಾಮರ್ಥ್ಯ ಪರೀಕ್ಷೆ ಮಾನದಂಡ ಈ ಕೆಳಗಿನಂತಿದೆ

ಪುರುಷರಿಗೆ

– 35kg ತೂಕ ಭಾರವನ್ನು 2 ನಿಮಿಷದಲ್ಲಿ 100 ಮೀಟರ್ ದೂರಕ್ಕೆ ಒಮ್ಮೆಯೂ ಕೆಳಗೆ ಇಳಿಸದಂತೆ ಎತ್ತಿಕೊಂಡು ಹೋಗಬೇಕು. ಈ ಪರೀಕ್ಷೆಗೆ ಒಂದೇ ಅವಕಾಶ.

– 4 ನಿಮಿಷ 15 ಸೆಕೆಂಡುಗಳಲ್ಲಿ 1000 ಮೀಟರ್ ದೂರಕ್ಕೆ ರನ್ನಿಂಗ್ ಮಾಡಬೇಕು.

ಮಹಿಳೆಯರಿಗೆ

– 20kg ತೂಕ ಭಾರವನ್ನು 2 ನಿಮಿಷದಲ್ಲಿ 100 ಮೀಟರ್ ದೂರಕ್ಕೆ ಒಮ್ಮೆಯೂ ಕೆಳಗೆ ಇಳಿಸದಂತೆ ಎತ್ತಿಕೊಂಡು ಹೋಗಬೇಕು. ಈ ಪರೀಕ್ಷೆಗೆ ಒಂದೇ ಅವಕಾಶ.

– 5 ನಿಮಿಷ 40 ಸೆಕೆಂಡುಗಳಲ್ಲಿ 1000 ಮೀಟರ್ ದೂರಕ್ಕೆ ರನ್ನಿಂಗ್ ಮಾಡಬೇಕು.

ಆರ್‌ಆರ್‌ಬಿ ಗ್ರೂಪ್ ಡಿ ನೇಮಕಾತಿ ಪ್ರಕ್ರಿಯೆಯಲ್ಲಿ ದಾಖಲೆಗಳ‌ ಪರಿಶೀಲನೆಗೆ ಸಲ್ಲಿಸಬೇಕಾದ ದಾಖಲೆಗಳು ಈ ಕೆಳಗಿನಂತಿವೆ..

1. 10ನೇ ತರಗತಿ ಮತ್ತು 12ನೇ ತರಗತಿಯ ಅಂಕಪಟ್ಟಿ

2. NCVT / SCVT ಪ್ರಮಾಣಪತ್ರ

3. ಎಸ್ಸಿ / ಎಸ್ಟಿ ಪ್ರಮಾಣಪತ್ರ (ಎಸ್ಸಿ / ಎಸ್ಟಿ ಅಭ್ಯರ್ಥಿಗಳಿಗೆ)

4. ಒಬಿಸಿ-ಎನ್ಸಿಎಲ್ ಪ್ರಮಾಣಪತ್ರ

5. Non-Creamy layer ಸರ್ಟಿಫಿಕೇಟ್

6. ಆದಾಯ ಪ್ರಮಾಣ ಪತ್ರ

7. ಆಧಾರ್ ಕಾರ್ಡ್‌ ಜೆರಾಕ್ಸ್ ಪ್ರತಿ

8. ಮಾಜಿ ಸೈನಿಕರ ಮೂಲ ಡಿಸ್ಚಾರ್ಜ್ ಪ್ರಮಾಣಪತ್ರ(ಮಾಜಿ ಸೈನಿಕ ಅಭ್ಯರ್ಥಿಗಳಿಗೆ)

9. ಉದ್ಯೋಗದಾತರಿಂದ ಎನ್ಒಸಿ ಸರ್ಟಿಫಿಕೇಟ್(ಈಗಾಗಲೇ ಸರ್ಕಾರಿ ಉದ್ಯೋಗದಲ್ಲಿರುವವರು)

10 ಇತರೆ ವರ್ಗದಲ್ಲಿ ಮೀಸಲಾತಿ ಕೋರಿದ್ದಲ್ಲಿ ಪ್ರಮಾಣಪತ್ರ.

You may also like