Home » ರೈಲ್ವೆ ಗ್ರೂಪ್ ‘ಡಿ’ ಪರೀಕ್ಷೆ ದಿನಾಂಕ ಹೊರಬಿದ್ದಿದೆ: ಕಂಪ್ಲೀಟ್ ಮಾಹಿತಿ ಇಲ್ಲಿದೆ..

ರೈಲ್ವೆ ಗ್ರೂಪ್ ‘ಡಿ’ ಪರೀಕ್ಷೆ ದಿನಾಂಕ ಹೊರಬಿದ್ದಿದೆ: ಕಂಪ್ಲೀಟ್ ಮಾಹಿತಿ ಇಲ್ಲಿದೆ..

by manager manager

ಆರ್‌ಆರ್‌ಬಿ ಗ್ರೂಪ್ ಡಿ(RRB Group D) ಪರೀಕ್ಷೆ ದಿನಾಂಕ ಹೊರಬಿದ್ದಿದೆ. ಹಿಂದುಸ್ತಾನ್ ಟೈಮ್ಸ್ ಪ್ರಕಾರ ಆರ್‌ಆರ್‌ಬಿ ಗ್ರೂಪ್ ‘ಡಿ’ ಕಂಪ್ಯೂಟರ್ ಆಧಾರಿತ ಪರೀಕ್ಷೆ ಆಗಸ್ಟ್ 12, 2018 ರಿಂದ ಸೆಪ್ಟೆಂಬರ್ 16, 2018 ರವರೆಗೆ ಐದು ಶೆಡ್ಯೂಲ್‌ ಗಳಲ್ಲಿ ನಡೆಯಲಿದೆ. ಈ ಪರೀಕ್ಷೆಯನ್ನು ಆರ್‌ಆರ್‌ಬಿ ಅಭ್ಯರ್ಥಿಗಳ ಇಂಗ್ಲೀಷ್ ವರ್ಣಮಾಲೆಯ (alphabetical) ಪ್ರಕಾರ ನಡೆಸಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಅಂದಹಾಗೆ ಆರ್‌ಆರ್‌ಬಿಯ 90,000 ಗ್ರೂಪ್ ‘ಡಿ’ ಮತ್ತು ಅಸಿಸ್ಟಂಟ್ ಲೋಕೋಪೈಲಟ್ ಎರಡು ಹುದ್ದೆಗಳಿಗೆ ಒಟ್ಟಾರೆ 2 ಕೋಟಿಗೂ ಅಧಿಕ ಅರ್ಜಿಗಳು ಸ್ವೀಕೃತವಾಗಿವೆ. ಗ್ರೂಪ್ ‘ಡಿ’ ಕಂಪ್ಯೂಟರ್ ಆಧಾರಿತ ಪರೀಕ್ಷೆ ಅಭರ್ಥಿಗಳ ಇಂಗ್ಲೀಷ್ ವರ್ಣಮಾಲೆಯ ಆಧಾರಿತವಾಗಿ ಈ ಕೆಳಗಿನ ಟೈಮ್‌ಟೇಬಲ್ ಪ್ರಕಾರ ನಡೆಯಲಿದೆ.

ಆರ್‌ಆರ್‌ಬಿ ಗ್ರೂಪ್ ‘ಡಿ’ ಪರೀಕ್ಷೆ ವೇಳಾಪಟ್ಟಿ 2018

ಪರೀಕ್ಷೆ ದಿನಾಂಕ : 12/08/2018

ಪರೀಕ್ಷೆಗೆ ಕೂರುವ ಅಭ್ಯರ್ಥಿಗಳ ಹೆಸರಿನ ಮೊದಲನೇ ಅಕ್ಷರ : A,B,T,Q,O,L,F,E

 

ಪರೀಕ್ಷೆ ದಿನಾಂಕ : 18/08/2018

ಪರೀಕ್ಷೆಗೆ ಕೂರುವ ಅಭ್ಯರ್ಥಿಗಳ ಹೆಸರಿನ ಮೊದಲನೇ ಅಕ್ಷರ : R,Y,H,N

 

ಪರೀಕ್ಷೆ ದಿನಾಂಕ : 26/08/2018

ಪರೀಕ್ಷೆಗೆ ಕೂರುವ ಅಭ್ಯರ್ಥಿಗಳ ಹೆಸರಿನ ಮೊದಲನೇ ಅಕ್ಷರ : K,M,V

 

ಪರೀಕ್ಷೆ ದಿನಾಂಕ : 09/09/20108

ಪರೀಕ್ಷೆಗೆ ಕೂರುವ ಅಭ್ಯರ್ಥಿಗಳ ಹೆಸರಿನ ಮೊದಲನೇ ಅಕ್ಷರ : C,I,S

 

ಪರೀಕ್ಷೆ ದಿನಾಂಕ : 16/09/2018

ಪರೀಕ್ಷೆಗೆ ಕೂರುವ ಅಭ್ಯರ್ಥಿಗಳ ಹೆಸರಿನ ಮೊದಲನೇ ಅಕ್ಷರ : U,W,X,Y,Z,G,P,J,D

 

ಆರ್‌ಆರ್‌ಬಿ ಸಿಬಿಟಿ ಪರೀಕ್ಷೆ ಆರಂಭ ಆಗುವ ದಿನಾಂಕ : 12/08/2018

ಆರ್‌ಆರ್‌ಬಿ ಸಿಬಿಟಿ ಪರೀಕ್ಷೆ ಕೊನೆ ಆಗುವ ದಿನಾಂಕ : 16/09/2018

ಆರ್‌ಆರ್‌ಬಿ ಸಿಬಿಟಿ ಪರೀಕ್ಷೆಯ ಹಾಲ್‌ ಟಿಕೆಟ್ ಬಿಡುಗಡೆ ದಿನಾಂಕ : ಸಿಬಿಟಿ(ಕಂಪ್ಯೂಟರ್ ಆಧಾರಿತ ಪರೀಕ್ಷೆ) ನಡೆಯುವ 10 ದಿನಗಳ ಮುಂಚಿತವಾಗಿ

 

ಆರ್‌ಆರ್‌ಬಿ ಕುರಿತ ಇತರೆ ಹೈಲೈಟ್ಸ್

– ಆರ್‌ಆರ್‌ಬಿ ಸಿಬಿಟಿ ಪರೀಕ್ಷೆ ದೇಶದ 500 ಕೇಂದ್ರಗಳಲ್ಲಿ ನಡೆಯಲಿದೆ.

– ಶೀಘ್ರದಲ್ಲೇ ಆರ್‌ಆರ್‌ಬಿ ಪರೀಕ್ಷೆ ದಿನವನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಿದೆ.

– ಫೈನಲ್‌ ಮೆರಿಟ್‌ ಲಿಸ್ಟ್ ನಲ್ಲಿ ಸೆಲೆಕ್ಟ್ ಆಗುವವರು ಮುಂದಿನ ವರ್ಷದಿಂದ ಹುದ್ದೆಗೆ ಸೇರಬಹುದು.

– ಈ ಹುದ್ದೆಗೆ ಪರೀಕ್ಷೆ ಹೊರತುಪಡಿಸಿ ಇನ್ಯಾವುದೇ ಸಂದರ್ಶನ ಇರುವುದಿಲ್ಲ.

– ಗ್ರೂಪ್‌ ಡಿ ಹುದ್ದೆಗೆ ಅಭ್ಯರ್ಥಿಗಳನ್ನು ಸಿಬಿಟಿ ಪರೀಕ್ಷೆ ಮತ್ತು ದೈಹಿಕ ಪರೀಕ್ಷೆ ಆಧಾರಿತವಾಗಿ ಆಯ್ಕೆ ಮಾಡಲಾಗುತ್ತದೆ.

Indian Railways RRB exam dates for group D 2018 was out. Here is complete time table of RRB Group D exam date.

You may also like

1 comment

Shashikanth June 1, 2018 - 4:41 pm

Yes sir

Comments are closed.