Home » ಕೊಂಕಣ ರೈಲ್ವೆಯ ಗ್ರೂಪ್ ‘ಡಿ’ ಹುದ್ದೆಗೆ ಅರ್ಜಿ ಆಹ್ವಾನ

ಕೊಂಕಣ ರೈಲ್ವೆಯ ಗ್ರೂಪ್ ‘ಡಿ’ ಹುದ್ದೆಗೆ ಅರ್ಜಿ ಆಹ್ವಾನ

by manager manager

ಭಾರತೀಯ ರೈಲ್ವೆಗೆ ಸೇರಿರುವ ಕೊಂಕಣ ರೈಲ್ವೆ ನಿಗಮವು(Konkan Railway Limited) ನಿಗಮದ ಹಲವು ಹುದ್ದೆಗಳಿಗೆ ಅರ್ಜಿ ಅಹ್ವಾನಿಸಿದೆ.

ಟ್ರಾಕ್‌ಮನ್, ಪಾಯಿಂಟ್ಸ್ ಮ್ಯಾನ್ ಹಾಗೂ ಕಲಾಸಿ ಸೇರಿದಂತೆ 100 ಗ್ರೂಪ್ ‘ಡಿ’ ಹುದ್ದೆಗಳಿಗೆ(Group D post) ಅರ್ಜಿ ಆಹ್ವಾನಿಸಿದೆ.

ಅರ್ಜಿ ಸಲ್ಲಿಸಲು ವೆಬ್‌ಸೈಟ್ ವಿಳಾಸ: www.konkanrailway.com

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :21-06-2018

ಹುದ್ದೆಗಳ ವಿವರ : ಟ್ರಾಕ್ ಮನ್ 50, ಪಾಯಿಂಟ್ ಮ್ಯಾನ್ 37, ಕಲಾಸಿ 2, ಕಲಾಸಿ ಮೆಕ್ಯಾನಿಕಲ್ 3 ಹುದ್ದೆಗಳು.

ವಯೋಮಿತಿ : ಕನಿಷ್ಠ 18 ವರ್ಷಗಳು, ಗರಿಷ್ಠ 30 ವರ್ಷಗಳು, ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ 5 ವರ್ಷಗಳು, ಒಬಿಸಿಗೆ 3 ವರ್ಷ, ಮಾಜಿ ಸೈನಿಕರಿಗೆ ಹಾಗೂ ವಿಕಲಚೇತನರಿಗೆ ಅರ್ಹತಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಇದೆ.

ವಿದ್ಯಾರ್ಹತೆ : ಈ ಮೇಲಿನ ಎಲ್ಲಾ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ(SSLC) ಊತ್ತೀರ್ಣರಾಗಿರುವವರು ಅರ್ಜಿ ಸಲ್ಲಿಸಬಹುದು.

ಅರ್ಜಿ ಶುಲ್ಕ : ಪರಿಶಿಷ್ಟ ಜಾತಿ ಮತ್ತು ಪಂಗಡದವರು, ಆರ್ಥಿಕವಾಗಿ ಹಿಂದುಳಿದ ವರ್ಗದವರು, ಮಾಜಿ ಸೈನಿಕರು, ವಿಕಲ ಚೇತನರು, ಮಹಿಳೆಯರು, ಅಲ್ಪಸಂಖ್ಯಾತರಿಗೆ ಅರ್ಜಿ ಶುಲ್ಕ ರೂ.250/ ಮಾತ್ರ. ಇತರರಿಗೆ ಅರ್ಜಿ ಶುಲ್ಕ ರೂ500/. ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು.

ಆಯ್ಕೆ ವಿಧಾನ : ಕಂಪ್ಯೂಟರ್ ಆಧಾರಿತ ಪರೀಕ್ಷೆ(ಸಿಬಿಟಿ), ದೈಹಿಕ ಅರ್ಹತಾ ಪರೀಕ್ಷೆ(ಪಿಇಟಿ), ದಾಖಲೆಗಳ ಪರಿಶೀಲನೆ(ಡಿಎ) ಮೂಲಕ.

ಪರೀಕ್ಷೆ ದಿನಾಂಕ : ಪರೀಕ್ಷೆ ದಿನಾಂಕವನ್ನು ಅಧಿಕೃತವಾಗಿ ನೀಡಿಲ್ಲ. ಆದರೆ 2018 ಆಗಸ್ಟ್ ತಿಂಗಳಲ್ಲಿ ನಡೆಸಲಾಗುವುದು ಎಂದು ತಿಳಿಸಲಾಗಿದೆ. ಪರೀಕ್ಷೆಗೆ ಮೆಟ್ರಿಕ್ ಮಟ್ಟದ ಸಾಮಾನ್ಯ ಜ್ಞಾನ ವಿಷಯಗಳ ಪ್ರಶ್ನೆಗಳಾಗಿರುತ್ತವೆ.

ದೈಹಿಕ ಅರ್ಹಾತಾ ಪರೀಕ್ಷೆ : ಪುರುಷರು 1 ಸಾವಿರ ಮೀಟರ್ ದೂರವನ್ನು 4.15 ನಿಮಿಷದಲ್ಲಿ ಓಡಿ ತಲುಪಬೇಕು. ಮಹಿಳೆಯರು 400 ಮೀಟರ್ ಅಂತರವನ್ನು 3.10 ನಿಮಿಷಗಳಲ್ಲಿ ಕ್ರಮಿಸಬೇಕು.

ವಿಶೇಷ ಸೂಚನೆ : ಭಾರತೀಯ ರೈಲ್ವೆಗೆ ಸೇರಿರುವ ಕೊಂಕಣ ರೈಲ್ವೆಯ ಈ ಮೇಲಿನ ಹುದ್ದೆಗಳಿಗೆ ಕೊಂಕಣ ರೈಲ್ವೆ ಯೋಜನೆಯ ವ್ಯಾಪ್ತಿಯ ಮಹಾರಾಷ್ಟ್ರದ ರೋಹಾದಿಂದ ಕರ್ನಾಟಕದ ಥೋಕರ್‌ವರೆಗಿನ ಪ್ರದೇಶದಲ್ಲಿ ಭೂಮಿ ಕಳೆದುಕೊಂಡವರು ಮಾತ್ರ ಪ್ರಸ್ತುತ ಈ ನೇಮಕಾತಿಗೆ ಅರ್ಜಿ ಹಾಕಬಹುದು. ಆದರೆ ಈಗಾಗಲೇ ಇದೇ ಯೋಜನೆಯಡಿ ಹುದ್ದೆ ಪಡೆದಿರುವ ಕುಟುಂಬದವರಿಗೆ ಅವಕಾಶವಿಲ್ಲ. ಆದರೆ ಪರಿಶಿಷ್ಠ ಜಾತಿ ಮತ್ತು ಪಂಗಡಕ್ಕೆ ಸೇರಿದವರಿಗೆ ಯೋಜನೆಯ ವ್ಯಾಪ್ತಿ ಮತ್ತು ಹುದ್ದೆ ಸಂಖ್ಯೆ ಮಿತಿ ಅನ್ವಯಿಸುವುದಿಲ್ಲ.

Konhan Railway invited group D job their cluster. Here is full details to apply to Konkan railway group D post fRecruitment 2018-19 Group D in Kannada

You may also like