Home » ಪುರುಷರು ಆರೋಗ್ಯ ಸದೃಢತೆಗಾಗಿ ದಿನನಿತ್ಯ ಪಾಲಿಸಬೇಕಾದ ಸಲಹೆಗಳು..

ಪುರುಷರು ಆರೋಗ್ಯ ಸದೃಢತೆಗಾಗಿ ದಿನನಿತ್ಯ ಪಾಲಿಸಬೇಕಾದ ಸಲಹೆಗಳು..

by manager manager

ಆರೋಗ್ಯ ಕೆಡುವುದಕ್ಕೆ ಮುನ್ನ, ಅಪಘಾತವಾಗುವ ಮುನ್ನ, ಗಾಯಗಳು ಆಗುವ ಮುನ್ನ ಅಥವಾ ಗಂಭೀರ ಅನಾರೋಗ್ಯಕ್ಕೆ ತುತ್ತಾಗುವ ಮುನ್ನ ಪುರುಷರು ಕಂಡಿತ ಡಾಕ್ಟರ್ ಮತ್ತು ಆಸ್ಪತ್ರೆಗಳ ಕಡೆ ಮುಖಮಾಡುವುದು ಇಲ್ಲ. ಅಲ್ಲದೇ ಸಣ್ಣ ಸಮಸ್ಯೆಗಳಿಗಂತೂ ತಲೆ ಕೆಡಿಸಿಕೊಳ್ಳುವುದು ಇಲ್ಲ.

ಆದರೆ ಈಗಿನ ಆಹಾರ, ಜೀವನಶೈಲಿ ಎಲ್ಲವೂ ಬದಲಾಗಿದೆ. ಆದ್ದರಿಂದ ಪುರುಷರು ಸಹ ತಮ್ಮ ಆರೋಗ್ಯದ ಬಗ್ಗೆ ದಿನನಿತ್ಯ ಜೀವನದಲ್ಲಿ ತಲೆಕೆಡಿಸಿಕೊಳ್ಳಲೇ ಬೇಕಾದ ಅಗತ್ಯಗಳಿವೆ.

ಏನಿಲ್ಲ. ಎಂತಿಲ್ಲ. ಪ್ರಾಯದ ವಯಸ್ಸಿನ ಹುಡುಗನೊಬ್ಬ ಹೆಚ್ಚು ಹೊಟ್ಟೆ ನೋವು ಅನುಭವಿಸಿದ. ಅದು ಆತನ ನೆನ್ನೆ ಇಂದು, ಮೊನ್ನೆಗಳ ಘಟನೆಗಳಿಂದ, ಆಹಾರ ಕ್ರಮದಿಂದ ಬಂದದ್ದು ಅಲ್ಲ ಅಂತ ಆತನಿಗೂ ಗೊತ್ತು. ಕೊನೆಗೆ ಡಾಕ್ಟರ್ ಬಳಿ ತೋರಿಸಿದಾಗ ಹೇಳಿದ್ದು ಹೊಟ್ಟೆಯಲ್ಲಿ ಕಲ್ಲು ಇದೆ. ಒಂದು ಆಪರೇಷನ್ ಮಾಡಬೇಕು, ಇಲ್ಲ ಕರೆಂಟ್‌ನಿಂದ ಶೂಟ್‌ ಮಾಡಿ ಸಿಡಿಸಬೇಕು. ಮುಂದಿನ ಇತರೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದ್ರು ಡಾಕ್ಟರ್.

ಈ ಮೇಲಿನ ವಾಸ್ತವ ಘಟನೆಗಳ ಉದಾಹರಣೆ ಯಾಕೆ ಅಂದ್ರೆ… ನಾವು ಹೀಗೆ ದಿನನಿತ್ಯ ಜಂಜಾಟದಲ್ಲಿ ನೀರು ಕುಡಿಯುವುದನ್ನು ಮರೆಯುತ್ತೇವೆ, ಸರಳ ವ್ಯಾಯಾಮಗಳನ್ನು ಮಾಡುವುದಿಲ್ಲ. ಆಫೀಸು, ಮನೆ, ಟಿವಿ, ಮೊಬೈಲ್, ವಾರಾಂತ್ಯದಲ್ಲಿ ಒಂದು ಫಿಲ್ಮ್‌ ಅಥವಾ ಒಂದು ಟ್ರಿಪ್ ಇಷ್ಟೇ ಜೀವನ ಎಂಬುದಕ್ಕಷ್ಟೇ ಸೀಮಿತವಾಗಿದೆ. ಇವೆಲ್ಲ ಕಾರ್ಯಗಳಿಗೂ ಅಂತ್ಯವಾಡದೇ ಸಂತೋಷದಿಂದ ನಗು ನಗುತ್ತಾ ಮುಂದುವರಿಸಬೇಕು ಅಂದ್ರೆ ಇವುಗಳ ಜೊತೆಗೆ ನಾವು ಇಂದು ತಿಳಿಸುವ ಕೆಲವು ಹೆಲ್ತ್ ಟಿಪ್ಸ್‌ಗಳನ್ನು ಪಾಲಿಸಿ.

ಅದೆಷ್ಟೇ ಬ್ಯುಸಿ ಇದ್ರು ನಿಮ್ಮ ಆರೋಗ್ಯಕ್ಕಾಗಿ ದಿನನಿತ್ಯ ಅಟ್‌ ಲೀಸ್ಟ್ ಈ ಸಲಹೆಗಳನ್ನು ಪಾಲಿಸಿಬಿಡಿ. ಅವುಗಳು ಈ ಕೆಳಗಿನಂತಿವೆ..

ಒತ್ತಡ ನಿರ್ವಹಣೆ ಕಲಿಯಿರಿ

ಬಹುಸಂಖ್ಯಾತ ಪುರುಷರು ತಮ್ಮ ಎಲ್ಲಾ ಆತ್ಮೀಯರೊಂದಿಗೆ ಹೇಳುವುದು ಒಂದೇ ರೋಧನೆ. ಅದು ತಮ್ಮ ಉದ್ಯೋಗ, ಇಲ್ಲವೇ ಕುಟುಂಬದ ಸಮಸ್ಯೆ. ಈ ಎಲ್ಲಾ ಬಾವನಾತ್ಮಕ ಸಮಸ್ಯೆಗಳ ಒತ್ತಡ ಮಾನಸಿಕ ಮತ್ತು ಭೌತಿಕವಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಆದ್ದರಿಂದ ಈ ಒತ್ತಡಗಳನ್ನು ಕಡಿಮೆ ಮಾಡಲು ವ್ಯಾಯಾಮ, ಧ್ಯಾನ ಅಥವಾ ಮಸಾಜ್‌ ಮಾಡುವುದನ್ನು ಅಳವಡಿಸಿಕೊಳ್ಳಿ.

ದಿನದಲ್ಲಿ 30 ನಿಮಿಷ ವ್ಯಾಯಾಮ

ಕಡೆ ಪಕ್ಷ ವೀಕ್ ಡೇ ಗಳಲ್ಲಿ 30 ನಿಮಿಷಗಳ ಕಾಲ ನಡೆದಾಡುವುದು, ಜಾಗಿಂಗ್, ಈಜು ಮತ್ತು ಇತರೆ ವ್ಯಾಯಾಮಗಳು ನಿಮ್ಮ ಆರೋಗ್ಯವನ್ನು ಹೆಚ್ಚಿಸಬಲ್ಲವು. ವೀಕ್‌ ಡೇಗಳಲ್ಲಿ ಈ ವಾರ್ಮ್‌ ಅಪ್‌ ಮಾಡದೇ ವೀಕ್‌ ಎಂಡ್‌ ನಲ್ಲಿ ಒಮ್ಮೆಲೇ ಆಟವಾಡಲು ಹೋದರೆ ಸಮಸ್ಯೆ, ನೋವು ಹೆಚ್ಚಾಗುವುದು.

ಆರೋಗ್ಯಕರ ಮತ್ತು ಸಮತೋಲನ ಆಹಾರ

ಅತೀ ಕಡಿಮೆ ಕೊಬ್ಬಿನಂಶ ವಿರುವ ಆಹಾರ, ಎರಡು ಕಪ್‌ ಹಣ್ಣುಗಳು, ಮೂರು ಕಪ್ ತರಕಾರಿಗಳಷ್ಟು ಉತ್ತಮ ಆಹಾರವನ್ನು 50 ವಯಸ್ಸಿನವರೆಗಿನ ಪುರುಷರು ದಿನನಿತ್ಯ ಸೇವಿಸಿ. ಹೃದಯ ಸಂಬಂಧಿ ಕಾಯಿಲೆ, ಡಯಾಬಿಟೀಸ್ ಮತ್ತು ಯಾವುದೇ ರೀತಿಯ ಕ್ಯಾನ್ಸರ್‌ಗಳಿಂದಲೂ ದೂರ ಉಳಿಯಬಹುದು.

ಆರೋಗ್ಯಕರ ತೂಕ ಕಾಪಾಡಿಕೊಳ್ಳಿ

ದೇಹದ ತೂಕ ನಿರ್ವಹಣೆ ಕೂಡ ಒಂದು ಉತ್ತಮ ಕಲೆ. ಎತ್ತರಕ್ಕೆ ತಕ್ಕ ತೂಕ ನಿರ್ವಹಣೆ ಮಾಡದೇ ಸೊಂಟದ ಭಾಗದಲ್ಲಿ ಹೆಚ್ಚು ಕೊಬ್ಬು ಬೆಳೆಸಿಕೊಂಡರೆ ಸಮಸ್ಯೆ ಕಟ್ಟಿಟ್ಟ ಬುತ್ತಿ. ದೇಹದಲ್ಲಿ ಅತಿಯಾದ ಕೊಬ್ಬು ಹೊಂದುವುದರಿಂದ ಹೃದಯ ಸರಿಯಾಗಿ ಕೆಲಸ ಮಾಡಲಾಗದೆ ಹೃದಯ ಸಂಬಂಧಿ ರೋಗ ಮತ್ತು ಲಕ್ವ ಹೊಡೆಯುವ ಸಂಭವ ಹೆಚ್ಚು. ಆದ್ದರಿಂದ ಸಮಪ್ರಮಾಣದ ತೂಕ ನಿರ್ವಹಣೆ ಉತ್ತಮ.

ಮೂರು ವೇಳೆಯ ಆಹಾರ ಮಿಸ್‌ ಆಗದಿರಲಿ

ದಿನದ ಮೂರು ವೇಳೆಯ ಆಹಾರ ತಪ್ಪದಿರುವಂತೆ, ಹಾಗೂ ಸಮಯಕ್ಕೆ ಸರಿಯಾಗಿ ಸೇವಿಸುವ ಕ್ರಮವನ್ನು ಅನುಸರಿಸಿ. ಒಂದು ಟೈಮ್ ಆಹಾರ ಮಿಸ್ ಆದರೂ ಅಂದಿನ ದಿನದ ನಿಮ್ಮ ದೈನಂದಿನ ಕೆಲಸದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ರೆ ಅನಾರೋಗ್ಯ ಸಮಸ್ಯೆ ಆಗೋಲ್ಲ.

ಸರ್ವ ರೋಗಕ್ಕೂ ನೀರು ಮದ್ದು

ಇದನ್ನು ಮರೆಯದಿರಿ. ಅದೆಷ್ಟೇ ಒತ್ತಡ ಇದ್ದರೂ, ನಿಮ್ಮ ಕೆಲಸದ ವೇಳೆ ಆಗಾಗ ನೀರು ಕುಡಿಯುವುದನ್ನು ಮರೆಯದಿರಿ. ನಿಮ್ಮ ಮಾನಸಿಕ ಹೆಚ್ಚು ಒತ್ತಡವನ್ನು ಕಡಿಮೆ ಮಾಡುವುದು, ದೇಹದ ಆರೋಗ್ಯ, ಉಷ್ಣತೆ ಎಲ್ಲವನ್ನೂ ಸಮತೋಲನವಾಗಿ ಇಡುವ ಶಕ್ತಿ ನೀರಿಗಿದೆ.

ಧೂಮಪಾನ ಬಳಸಬೇಡಿ

ತಂಬಾಕು 4000 ಕ್ಕೂ ಹೆಚ್ಚು ರಾಸಾಯನಿಕಗಳನ್ನು ಹೊಂದಿದ್ದು, ಕ್ಯಾನ್ಸರ್ ಗೆ ಇದೇ ಕಾರಣವಾಗಿದೆ. ಶ್ವಾಸಕೋಶ, ಹೃದಯ, ರಕ್ತದ ಒತ್ತಡ ಸಮಸ್ಯೆಗಳಿಗೆ ಧೂಮಪಾನವೇ ಕಾರಣ. ಆದ್ದರಿಂದ ಇದಕ್ಕೆ ಗುಡ್ ಬಾಯ್‌ ಹೇಳಿಬಿಡಿ.

ಮದ್ಯಪಾನ ಮಿತವಾಗಿರಲಿ

ದಿನನಿತ್ಯದ ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ. ಇದು ಮಿತಿಯಲ್ಲಿರಲಿ.

ಸುರಕ್ಷಿತ ಲೈಂಗಿಕ ಕ್ರಿಯೆ ಇರಲಿ

ನೀವು ಹೆಚ್ಚು ಲೈಂಗಿಕ ಕ್ರಿಯೆಯಲ್ಲಿ ತೊಡಗುವರಾಗಿದ್ದಲ್ಲಿ ಸುರಕ್ಷಿತ ಲೈಂಗಿಕ ಕ್ರಿಯೆ ಬಗ್ಗೆ ಗಮನಹರಿಸಿ ಅಳವಡಿಸಿಕೊಳ್ಳಿ.

You may also like