Home » ‘ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ’ದ ಉಪಯೋಗ ಏನು? ಸೌಲಭ್ಯ ಪಡೆಯುವುದು ಹೇಗೆ?

‘ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ’ದ ಉಪಯೋಗ ಏನು? ಸೌಲಭ್ಯ ಪಡೆಯುವುದು ಹೇಗೆ?

by manager manager

ಕರ್ನಾಟಕ ರಾಜ್ಯ ಸರ್ಕಾರವು ಕಳೆದ ವರ್ಷ ದಿನಾಂಕ 02/03/2018 ರಂದು ‘ಆರೋಗ್ಯ ಕರ್ನಾಟಕ’ ಎಂಬ ಸಾರ್ವತ್ರಿಕ ಆರೋಗ್ಯ ರಕ್ಷಣಾ ಯೋಜನೆಯನ್ನು ಜಾರಿ ಮಾಡಿತ್ತು. ಈ ಯೋಜನೆಯಡಿಯಲ್ಲಿ ರಾಜ್ಯದ ಎಲ್ಲಾ ನಿವಾಸಿಗಳಿಗೆ ಆರೋಗ್ಯ ಸೇವೆ ಒದಗಿಸುವುದು ಇದರ ಉದ್ದೇಶವಾಗಿತ್ತು.

ಈಗ ರಾಜ್ಯ ಸರ್ಕಾರದ ‘ಆರೋಗ್ಯ ಕರ್ನಾಟಕ ಮತ್ತು ಕೇಂದ್ರ ಸರ್ಕಾರದ ‘ಆಯುಷ್ಮಾನ್ ಭಾರತ್’ ಎರಡು ಯೋಜನೆಗಳನ್ನು ವಿಲೀನಗೊಳಿಸಿ ‘ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ’ ಎಂಬ ವಿನೂತನ ಯೋಜನೆಯನ್ನು ದಿನಾಂಕ 30/10/2018 ರಿಂದ ಜಾರಿ ಮಾಡಲಾಗಿದೆ. ಈ ಯೋಜನೆಯ ಉಪಯೋಗ ಏನು? ಉಪಯೋಗ ಪಡೆಯುವ ವಿಧಾನ ಹೇಗೆ? ಯಾವೆಲ್ಲಾ ಚಿಕಿತ್ಸೆಗಳು ಈ ಯೋಜನೆ ಅಡಿ ಸಿಗಲಿದೆ ಎಂಬ ಸಂಪೂರ್ಣ ಮಾಹಿತಿಯನ್ನು ನಿಮ್ಮ ಕನ್ನಡ ಅಡ್ವೈಜರ್ ಈ ಕೆಳಗೆ ತಿಳಿಸಿದೆ. ಈ ಬಗ್ಗೆ ನೀವು ತಿಳಿಯಿರಿ ಮತ್ತು ಇತರರಿಗೂ ಶೇರ್ ಮಾಡಿ ತಿಳಿಯಲು ಸಹಾಯ ಮಾಡಿರಿ..

‘ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ’ದಲ್ಲಿ ದೊರೆಯುವ ಚಿಕಿತ್ಸಾ ಮೊತ್ತ

* BPL ಪಡಿತರ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ವಾರ್ಷಿಕ ರೂ.5.00 ಲಕ್ಷ ಗಳವರೆಗೆ ಉಚಿತ ಚಿಕಿತ್ಸೆ ಸಿಗಲಿದೆ.

* ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಯಲ್ಲಿ ನೋಂದಾಯಿತವಾಗಿರುವ ಕುಟುಂಬಗಳಿಗೂ ವಾರ್ಷಿಕ ರೂ.5.00 ಲಕ್ಷ ಗಳವರೆಗೆ ಉಚಿತ ಚಿಕಿತ್ಸೆ ಸಿಗಲಿದೆ.

* APL ಪಡಿತರ ಕಾರ್ಡ್ ಹೊಂದಿರುವ ಕುಟುಂಬಗಳಿಗೂ ಸಹ-ಪಾವತಿ (30:70) ಆಧಾರದ ಮೇಲೆ ಚಿಕಿತ್ಸೆ ಪ್ಯಾಕೇಜ್ ದರದಲ್ಲಿ 30% ರಷ್ಟು ಚಿಕಿತ್ಸಾ ವೆಚ್ಚವನ್ನು ವಾರ್ಷಿಕ ಮಿತಿ ಪ್ರತಿ ಕುಟುಂಬಕ್ಕೆ ರೂ.1.50 ಲಕ್ಷದವರೆಗೆ ಸರ್ಕಾರವೇ ಭರಿಸುತ್ತದೆ. ಉಳಿದ 70% ರಷ್ಟು ವೆಚ್ಚವನ್ನು ರೋಗಿಯೇ ಭರಿಸಬೇಕು.

ಅರ್ಹತೆ ಏನು?

– ಚಿಕಿತ್ಸೆ ವೆಚ್ಚ ಪಡೆಯಲು(ಯೋಜನೆ ಅಡಿ ಚಿಕಿತ್ಸೆ ಪಡೆಯಲು) APL ಮತ್ತು BPL ಪಡಿತರ ಕಾರ್ಡ್‌ಗಳು ಬೇಕು.

– ಆಧಾರ್ ಕಾರ್ಡ್ ಲಗತ್ತಿಸಬೇಕು.

ಯೋಜನೆಯ ಸೌಲಭ್ಯ ಪಡೆಯುವ ವಿಧಾನ

* ಈ ಯೋಜನೆ ಅಡಿ ಪ್ರಾಥಮಿಕ ಮತ್ತು ಸಾಮಾನ್ಯ ದ್ವಿತೀಯ ಹಂತದ ಚಿಕಿತ್ಸೆಗಳು ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಮಾತ್ರ ದೊರೆಯಲಿದೆ.

* ದ್ವಿತೀಯ ಗಂಭೀರ ಅನಾರೋಗ್ಯ ಚಿಕಿತ್ಸೆಗಳು ಮತ್ತು ತೃತೀಯ ಹಂತದ ಖಾಯಿಲೆಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿದ್ದಲ್ಲಿ ಅಲ್ಲಿಯೇ ನೀಡಲಾಗುತ್ತದೆ. ಇಲ್ಲದಿದ್ದರೆ ಸರ್ಕಾರಿ ಆಸ್ಪತ್ರೆಯ ಡಾಕ್ಟರ್ ಗಳೇ ಬೇರೆ ಆಸ್ಪತ್ರೆಗಳಿಗೆ ಹೋಗಿ ಎಂದು ರೆಫರ್ ಮಾಡುತ್ತಾರೆ.
* ರೆಫರ್ ಪಡೆದುಕೊಂಡ ರೋಗಿಯು ತಾನು ಇಚ್ಛಿಸುವ ಯಾವುದೇ ಸರ್ಕಾರಿ/ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು.

* ತುರ್ತು ಚಿಕಿತ್ಸೆಗಳಿಗೆ ಯಾವುದೇ ರೆಫರಲ್ ಇಲ್ಲದೆ ನೇರವಾಗಿ ಸರ್ಕಾರಿ/ಖಾಸಗಿ ನೋಂದಾಯಿತ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬಹುದು.

ಆರೋಗ್ಯ ಕಾರ್ಡ್ ಪಡೆಯುವುದು ಎಲ್ಲಿ ಮತ್ತು ಹೇಗೆ?

– ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿಗಳ ಜೆರಾಕ್ಸ್ ಪ್ರತಿ ನೀಡಿ ಆರೋಗ್ಯ ಕಾರ್ಡ್ ಅನ್ನು ರೂ.10 ನೀಡಿ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಪಡೆಯಬಹುದು. ಹಾಗೂ

– ರೂ.35 ನೀಡಿ ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳಲ್ಲಿ ಆರೋಗ್ಯ ಕಾರ್ಡ್ ಪಡೆಯಬಹುದು.

Ayushman bharat arogya karnataka ಕಾರ್ಡ್‌ಗಾಗಿ ರಿಜಿಸ್ಟರ್ ಮಾಡಲು – ಕ್ಲಿಕ್ ಮಾಡಿ

Ayushman bharat arogya karnataka ಕಾರ್ಡ್‌ ಪಡೆಯಬಹುದಾದ ರಾಜ್ಯದಾದ್ಯಂತದ ಆಸ್ಪತ್ರೆಗಳು, ಕರ್ನಾಟಕ ಒನ್‌ ಕೇಂದ್ರಗಳು, ಬೆಂಗಳೂರು ಒನ್ ಕೇಂದ್ರಗಳ ಪಟ್ಟಿಗಾಗಿ –ಕ್ಲಿಕ್ ಮಾಡಿ

ಹೆಚ್ಚಿನ ಮಾಹಿತಿಗೆ

– ಹತ್ತಿರದ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ

– ಉಚಿತ ಆರೋಗ್ಯ ಸಹಾಯವಾಣಿ 104 ನಂಬರ್‌ ಗೆ ಕರೆ ಮಾಡಿ (24‍‍X7)

– ಟೋಲ್ ಫ್ರೀ ಸಂಖ್ಯೆ 18004258330 ಕರೆ ಮಾಡಬಹುದು.

– ವೆಬ್‌ಸೈಟ್ ವಿಳಾಸ – www.sast.go ಅಥವಾ www.arogya.karnataka.gov.in

– ಇಲ್ಲಿಯವರೆಗೆ ಒಟ್ಟು 11 ಲಕ್ಷಕ್ಕೂ ಹೆಚ್ಚು ಜನರು ಕರ್ನಾಟಕದಾದ್ಯಂತ ‘ಎಬಿ-ಎಆರ್‌ಕೆ’ ಕಾರ್ಡ್ ನೀಡಲಾಗಿದೆ.

You may also like