Home » ವಿಜ್ಞಾನವೇ ವಾಸ್ತು, ವಾಸ್ತುವಿರದ ವಸ್ತುಸ್ಥಿತಿಯೇ ಇಲ್ಲ: ಹಲವು ವಿಷಯಗಳಿಗೆ ವಾಸ್ತು ಪ್ರಾಮುಖ್ಯತೆ ಮಾಹಿತಿ ಇಲ್ಲಿದೆ..

ವಿಜ್ಞಾನವೇ ವಾಸ್ತು, ವಾಸ್ತುವಿರದ ವಸ್ತುಸ್ಥಿತಿಯೇ ಇಲ್ಲ: ಹಲವು ವಿಷಯಗಳಿಗೆ ವಾಸ್ತು ಪ್ರಾಮುಖ್ಯತೆ ಮಾಹಿತಿ ಇಲ್ಲಿದೆ..

by manager manager

ನಮ್ಮಲ್ಲಿ ಅನೇಕ ರೀತಿಯ ಸಂಪ್ರದಾಯಗಳಿವೆ ಅವುಗಳನ್ನು ನಾವು ಗೊತ್ತಿದ್ದು ಗೊತ್ತಿರದ ರೀತಿಯಲ್ಲಿ

ಆಚರಿಸುತ್ತೇವೆ, ಆ ರೀತಿಯ ಸಂಪ್ರದಾಯಿಕ ವಿಚಾರಗಳಲ್ಲಿ ವಿಜ್ಞಾನವು ಅಡಗಿದೆ. ನಾವು ಆ ನಿರ್ದಿಷ್ಠ ವಿಷಯವನ್ನು ಆಳವಾಗಿ ನೋಡಿದಾಗ ಅದರಲ್ಲಿ ನಮಗೆ ವಿಜ್ಞಾನವು ಕಾಣುತ್ತದೆ. ಅದೇ ರೀತಿಯಲ್ಲು

ವಾಸ್ತುವು ಕೂಡ ಹಲವು ಲೆಕ್ಕಚಾರದಿಂದ ಕೂಡಿರುವ ವಿಜ್ಞಾನವೇ.

ನಮಗೆ ಒಳ್ಳೆಯದಾಗಬೇಕು ಅಂದ್ರೆ ನಾವು ಸರಿ ದಾರಿಯಲ್ಲೇ ನಡೆಯಬೇಕು ಹೀಗಿರುವಾಗ

ಪ್ರತಿಯೊಂದು ನಡೆಯು ನೋಡಲು ಸರಿಯಿದ್ದರು ಅದು ಸಮಯಕ್ಕೆ ಸರಿಯಾಗಿ ಮಾಡಿದ ಕೆಲಸಕ್ಕೆ

ಪ್ರತಿಫಲ ಸಿಗುವುದರಿಂದ ನಾವು ಸಂತೋಷ ಪಡುತ್ತೇವೆ. ಹೀಗಿರುವಾಗ ನಮ್ಮಲ್ಲಿ ಕೆಲವು ರೀತಿಯ

ಬದಲಾವಣೆಗಳನ್ನು ಮಾಡಿಕೊಂಡು ವಾಸ್ತು ಪುರುಷನ ಪ್ರಕಾರ ಮಾಡುವ ಕೆಲಸಗಳನ್ನು ಸರಿಯಾದ

ಟೈಂನಲ್ಲಿ, ಸರಿಯಾದ ಜಾಗದಲ್ಲಿ, ಸರಿಯಾದ ವಿಧಾನಗಳಲ್ಲಿ ಮಾಡಿದರೆ ಆ ಕೆಲಸ ಯಶಸ್ಸನ್ನು

ಕಾಣುತ್ತದೆ. ನಾವು ವಾಸ್ತುವನ್ನು ಎಲ್ಲೆಲ್ಲಿ ನೋಡಬಹುದೆಂದರೆ ಮುಖ್ಯವಾಗಿ ಮನೆಯೇ

ಮಂತ್ರಾಲಯ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಮೊದಲಿಗೆ ನಾವು ವಾಸ ಮಾಡುವ ಮನೆಯಲ್ಲಿನ

ವಾಸ್ತುವನ್ನು ತಿಳಿದುಕೊಂಡರೆ ಅದರಿಂದ ಅನೇಕ ರೀತಿಯ ಲಾಭಾಂಶಗಳು ಇವೆ. ಹೀಗೆ

ವಿದ್ಯಾಭ್ಯಾಸದಲ್ಲಿ, ಪೂಜಾ ಗೃಹದಲ್ಲಿ, ವಿವಾಹದಲ್ಲಿ, ಅಡುಗೆಮನೆಯಲ್ಲಿ, ಶೌಚಾಲಯ, ಸ್ನಾನದ

ಮನೆ, ಆರೋಗ್ಯ, ಕಛೇರಿಯಲ್ಲಿ, ಮಲಗುವ ಕೋಣೆಯಲ್ಲಿ, ಬಿಸಿನೆಸ್‌ನಲ್ಲಿ, ಐಶ್ವರ್ಯವನ್ನು

ಹೊಂದಲು, ಸಂಬಂಧಗಳನ್ನು ಉಳಿಸಿಕೊಳ್ಳುವುದಲ್ಲಿ, ಹೀಗೆ ಎಲ್ಲಾ ಕಡೆ ನಾವು ವಾಸ್ತುವನ್ನು

ಅನುಸರಿಸಿದರೆ ನಮಗೆ ಶುಭಫಲಗಳು ಜರುಗುತ್ತವೆ. ಮೇಲೆ ವಿವರಿಸಿದ ಪ್ರತಿಯೊಂದು ವಿಷಯವನ್ನು

ಅಮೂಲಾಗ್ರವಾಗಿ ಈ ಕೆಳಗಿನಂತೆ ತಿಳಿಸಲಾಗಿದೆ.

ಮನೆಯೇ ಮಂತ್ರಾಲಯ :-

ಮನೆಯಲ್ಲಿ ಬಹುಮುಖ್ಯ ಎಂದರೆ ಅದು ಮನೆಯ ಬಾಗಿಲು. ಈ ರೀತಿಯ ಮನೆಯ ಬಾಗಿಲು ಯಾವ

ದಿಕ್ಕಿಗೆ ಇರಬೇಕೆಂದರೆ ಅದು ಪೂರ್ವಕ್ಕೆ ಮುಖ ಮಾಡಿರಬೇಕು ಅಥವಾ ಉತ್ತರಕ್ಕೆ ಮುಖ ಮಾಡಿರಬೇಕು

ಈ ರೀತಿಯ ಬಾಗಿಲ್ಲನ್ನು ನಂದಿ ಬಾಗಿಲು ಎಂದು ಕರೆಯುತ್ತೇವೆ. ಜೊತೆಗೆ ಈ ರೀತಿಯ ಬಾಗಿಲನ್ನು

ಹೊಂದುವುದು ಒಬ್ಬೊಬ್ಬರಿಗೆ ಅವರವರ ನಕ್ಞತ್ರಗಳ ಫಲಗಳಿಂದ ಬೇರೆ ಬೇರೆ ರೀತಿಯಲ್ಲಿರುತ್ತವೆ.

ಹಾಗಾಗೀ ನೀವು ವಾಸ್ತುವನ್ನು ವಿಜ್ಞಾನವೆಂದು ನಂಬಿರುವವರ ಬಳಿ ಕೇಳಿ ತಿಳಿದುಕೊಳ್ಳಿ. ಜೊತೆಗೆ

ಮನೆಯ ಬಾಗಿಲ ಬಳಿ ಮಲಗುವುದು, ಚಪ್ಪಲಿಗಳನ್ನು ಇಡುವುದು, ಬಾಗಿಲಿಗೆ ಅಡ್ಡಲಾಗಿ ಏನನ್ನಾದರು

ಇಡುವುದು ಆದಷ್ಟು ಕಂಟ್ರೋಲ್ ಮಾಡಿ ಯಾಕೆಂದರೆ ಈ ರೀತಿ ಮಾಡುವುದರಿಂದ ಒಳಗೆ ಬರುವ

ಲಕ್ಷ್ಮೀಯು ಮುಜುಗರಕ್ಕೆ ಒಳಗಾಗುತ್ತಾಳೆ ಎಂಬುದನ್ನು ಮರೆಯಬೇಡಿ, ಹಾಗೇ ಬಾಗಿಲೇನಾದರೂ

ಸದ್ದು ಮಾಡುತ್ತಿದ್ದರೆ ಅದನ್ನು ಸರಿಪಡಿಸಿ ಕಾರಣ ಅದು ಹೊರಹೊಮ್ಮಿಸುವ ಸದ್ದು ಮನೆಗೆ

ಋಣಾತ್ಮಕವಾದ ಫಲಗಳನ್ನು ಕೊಡುತ್ತದೆ. ಈ ರೀತಿಯಾಗಿ ಪಾಲಿಸಿದರೆ ಮನೆಯಲ್ಲಿ ಶಾಂತಿ,

ನೆಮ್ಮದಿ, ಲಕ್ಷ್ಮೀಯು ನೆಲೆಸುತ್ತಾಳೆ. ಹಾಗೇ ಮನೆಯ ಒಳಗೆ ಯಾವುದೇ ಕೋಣೆಯಲ್ಲಿ ಕತ್ತಲೆ

ಇರದಂತೆ ನೋಡಿಕೊಳ್ಳಿ, ಮನೆಯ ತುಂಬ ಬೆಳಕು ಹರಿಯುವಂತೆ ಮಾಡಿ ಇದು ನಿಮ್ಮನ್ನು

ಉತ್ಸಾಹದಿಂದ ಕೆಲಸ ಮಾಡಲು ಪ್ರಚೋದಿಸುತ್ತದೆ. ಮನೆಯಲ್ಲಿ ಒಡೆದ ಕನ್ನಡಿಗಳನ್ನು ಇಡಬೇಡಿ

ಅವುಗಳು ಋಣಾತ್ಮಕವಾದ ಶಕ್ತಿಗಳನ್ನು ಆಕರ್ಷಿಸುತ್ತದೆ. ಮನೆಯನ್ನು ಸ್ವಚ್ಛವಾಗಿ

ಇಟ್ಟುಕೊಳ್ಳುವುದರಿಂದ ನಿಮ್ಮ ಮನೆಯಲ್ಲಿ ಐಶ್ವರ್ಯಾ ತುಂಬಿ ತುಳುಕುತ್ತದೆ.

ವಿದ್ಯಾಭ್ಯಾಸದಲ್ಲಿ ವಾಸ್ತು:-

ವಿಜ್ಞಾನದ ಪ್ರಕಾರ ಶಕ್ತಿಯ ಮೂಲಗಳಾದ ಎಲ್ಲಾ ವಿಷಯದಲ್ಲೂ ನಾವು ವಾಸ್ತುವನ್ನು

ನೋಡಬಹುದು ಹಾಗೇ ನಾವು ವಿದ್ಯಾಭ್ಯಾಸದಲ್ಲೂ ಸಹ ಕೆಲವು ವಾಸ್ತುಗಳಿವೆ. ತಂದೆ ತಾಯಿಗಳು

ಮಗುವಿಗೆ ಟ್ಯೂಶನ್ ಕೊಡಿಸುವದರ ಜೊತೆಗೆ ವಾಸ್ತು ಪ್ರಕಾರ ಯಾವ ಸ್ಥಳದಲ್ಲಿ ಕೂತು ಯಾವ

ದಿಕ್ಕಿಗೆ ಮುಖಮಾಡಿದರೆ ಮಗುವಿಗೆ ಹೆಚ್ಚಿನ ಏಕಾಗ್ರತೆ ಬರುತ್ತದೆ ಎಂಬುದನ್ನು ತಿಳಿದಿರಬೇಕು.

ಉತ್ತಮ ವಿದ್ಯಾಭ್ಯಾಸಕ್ಕೆ ಕೆಲವು ಆಚರಣೆಗಳು ಸಹ ಮುಖ್ಯವಾಗುತ್ತದೆ. ನಿಮ್ಮ ಮಗು ಕುಳಿತು ಓದುವ

ಕೋಣೆಯು ಸಕರಾತ್ಮಕ ಶಕ್ತಿಯನ್ನು ಹೊರಹೊಮ್ಮಿಸದೆ ಇದ್ದಲ್ಲಿ ಆ ರೀತಿ ಓದು ವ್ಯರ್ಥವಾಗುತ್ತದೆ.

ಅಧ್ಯಾಯನದಲ್ಲಿ ಏಕಾಗ್ರತೆಯನ್ನು ಪಡೆಯುವಲ್ಲಿ ನಿಮ್ಮ ಮಗು ಓದುವಾಗ 4ನೇ ದಿಕ್ಕಿಗೆ

ಅನುಕೂಲಕರವಾಗಿ ಕುಳಿತು ಓದಬೇಕು. ಓದುವಾಗ ಹಾಸಿಗೆಯ ಮೇಲೆ ಕುಳಿತುಕೊಳ್ಳುವುದನ್ನು

ಆದಷ್ಟು ತಪ್ಪಿಸಿ ಯಾಕೆಂದರೆ ಅದು ನಿಮಗೆ ಏಕಾಗ್ರತೆಯನ್ನು ತಂದುಕೊಡುವುದಿಲ್ಲ. ಹೀಗೆ ಕೆಲವು

ಸೂತ್ರಗಳನ್ನು ಪಾಲಿಸಿದರೆ ಸರಸ್ವತಿಯು ನೆಲೆಗೊಳ್ಳುತ್ತಾಳೆ ಇದರಿಂದ ಐಶ್ವರ್ಯವು

ದ್ವಿಗುಣಗೊಳ್ಳುತ್ತದೆ.

ಪೂಜಾ ಗೃಹಕ್ಕೆ ವಾಸ್ತು :-

ದೇವರು ಎಲ್ಲಾ ಕಡೆ ಇದ್ದರೂ ಅವನನ್ನು ಪೂಜಿಸಲು ಕೆಲವು ಪ್ರದೇಶವನ್ನು ನಾವು

ಸಿಮೀತಗೊಳಿಸಿದ್ದೇವೆ. ಅದು ಏಕೆಂದರೆ ಎಲ್ಲಾ ಕಡೆಯಿರುವ ದೇವರ ಶಕ್ತಿಯನ್ನು ಒಂದು ಕಡೆ

ಕೇಂದ್ರಿಕರಿಸಿ ಪೂಜಿಸಿದರೆ ಅದರ ಫಲಗಳು ಜಾಸ್ತಿ ಎಂದು. ಪೂಜಾ ಕೋಣೆ ಅಥವಾ ದೇವರ ಮನೆಯು

ಮನೆಯ ಒಳಗೆ ಒಂದು ಮೂಲೆಯಲ್ಲಿರಬೇಕು. ಹಾಗೆ ಅದು ಈಶಾನ್ಯಾವಾಗಿದ್ದರೆ ಡಬಲ್ ಓಕೆ,

ಏಕೆಂದರೆ ಶಕ್ತಿಯ ಸಂಚಾರವು ಹುಟ್ಟುವುದೇ ದೇವರ ಮೂಲೆಯಲ್ಲಿ. ಹಾಗಾಗಿ ವಾಸ್ತು ಪುರುಷನ ತಲೆ

ಈಶಾನ್ಯ ದಿಕ್ಕಿನಲ್ಲಿರುವಂತೆ ಮಲಗಿಸಲಾಯಿತು ಎಂದು ಹೇಳುತ್ತಾರೆ. ಅದಕ್ಕೆ ಈ ಈಶಾನ್ಯ ದಿಕ್ಕು

ಹೆಚ್ಚು ಪ್ರಾಶಸ್ಯವಾಗಿರುತ್ತದೆ. ಹಾಗೂ ಬೆಳಿಗ್ಗೆ ಉದಯಿಸುವ ಸೂರ್ಯನ ಕಿರಣಗಳು ನೇರವಾಗಿ

ದೇವರ ಮನೆ ಮೇಲೆ ಬೀಳುವಂತಿರಬೇಕು ಇದರಿಂದ ಹೆಚ್ಚಿನ ಆರೋಗ್ಯ, ಐಶ್ವರ್ಯ ವೃದ್ಧಿಸುತ್ತದೆ

ಎಂದು ಹೇಳುತ್ತಾರೆ. ಪೂಜಾ ಕೋಣೆಯಲ್ಲಿ ಕತ್ತಲು ಇರಬಾರದು, ಪೂಜಾ ಕೋಣೆ ಎದುರು ಮನೆಯ

ಮುಖ್ಯ ದ್ವಾರವಿರಕೂಡದು ಇದ್ದರೆ ಅದು ಪೂಜಾ ಮನೆಯಲ್ಲಿ ಉಂಟಾದ ಸಕರಾತ್ಮಕ ವಿಷಯವನ್ನು

ಕುಗ್ಗಿಸುತ್ತದೆ. ಪೂಜಾ ಕೋಣೆಯು ಎಂದಿಗೂ ಕೋಣೆಗಳಲ್ಲಿ ಸ್ಥಾಪಿಸಬೇಡಿ ಅದು ತಪ್ಪು.

ಶೌಚಾಲಯ ಮತ್ತು ಸ್ನಾನದ ಕೋಣೆಯಲ್ಲಿ ವಾಸ್ತು :-

ಹಿಂದಿನ ಕಾಲದಲ್ಲಿ ಋಣಾತ್ಮಕ ಶಕ್ತಿಗಳನ್ನು ಮನೆಯೊಳಗೆ ಬರದಂತೆ ಮಾಡಲು ಸ್ನಾನದ ಮತ್ತು

ಶೌಚಾಲಯಗಳನ್ನು ಮನೆಯ ಹೊರಗೆ ಕಟ್ಟಲಾಗುತ್ತಿತ್ತು. ಆದರೆ ಇಂದಿನ ಸಮಾಜದಲ್ಲಿ ಅದು

ಅಸಾಧ್ಯವಾದದ್ದು ಹಾಗಾಗೀ ಕೆಲವು ನಿಯಮಗಳಿಂದ ಋಣಾತ್ಮಕ ಶಕ್ತಿಗಳು ಒಳಗೆ ಬರುವುದನ್ನು

ತಡೆಬಹುದು. ಆ ರೀತಿ ಸೂತ್ರಗಳಲ್ಲಿ ನೀವು ಎಲ್ಲಾ ಸ್ವಚ್ಚ ಕಾರ್ಯಗಳನ್ನು ಪೂರ್ಣಗೊಳಿಸಿದ ಮೇಲೆ

ಶೌಚಗೃಹದ ಬಾಗಿಲ್ಲನ್ನು ಮುಚ್ಚಿರಿ. ಹಾಗೂ ಸ್ನಾನದ ಕೋಣೆಯಲ್ಲಿ ಯಾವುದೇ ಕಾರಣಕ್ಕು

ಕನ್ನಡಿಯನ್ನು ಇರಿಸಬೇಡಿ ಅದು ಋಣಾತ್ಮಕ ಶಕ್ತಿಯನ್ನು ಪ್ರಚೋಧಿಸುತ್ತದೆ.

ಆರೋಗ್ಯದಲ್ಲಿ ವಾಸ್ತು :-

ನಮ್ಮ ಜೀವನದಲ್ಲಿ ಆರೋಗ್ಯವೇ ಮುಖ್ಯ “ಆರೋಗ್ಯವೇ ಭಾಗ್ಯ” ಎನ್ನುವ ರೀತಿ ನಾವು ಸೇವಿಸುವ

ಆಹಾರ, ಗಾಳಿ ಎಲ್ಲದರಲ್ಲೂ ವಾಸ್ತು ಪ್ರಕಾರವಾಗಿ ಮುಂದುವರಿಯಬೇಕು ಹಾಗೇ ಮುಂದುವರೆದರೆ

ನಮ್ಮ ಕುಟುಂಬಕದಲ್ಲಿ ಆರೋಗ್ಯವು ಕೂಡ ಉತ್ತಮವಾಗಿ ಸಾಗುತ್ತದೆ. ನಮ್ಮ ದೇಹದಲ್ಲಿರುವ ಏಳು

ಚಕ್ರಗಳನ್ನು ಸಕ್ರೀಯವಾಗಿ ಜಾಗ್ರುತಗೊಳಿಸಲು ಈ ವಾಸ್ತು ಶಾಸ್ತ್ರ ಬಹಳ ಮುಖ್ಯ ಹಾಗಾಗೀ ಈ

ಆರೋಗ್ಯ ವಾಸ್ತುವನ್ನು ಅವರವರ ದೇಹದಲ್ಲಿನ ಸಕರಾತ್ಮಕ ಮತ್ತು ಋಣಾತ್ಮಕ ಅಂಶಗಳನ್ನು

ಗಮನದಲ್ಲಿಟ್ಟುಕೊಂಡು ವಾಸ್ತುವನ್ನು ಹೇಳಲಾಗುತ್ತದೆ.

ಬಿಸಿನೆಸ್‌ನಲ್ಲಿ ವಾಸ್ತು :-

ಪ್ರತಿಯೊಬ್ಬ ಮನುಷ್ಯನು ಒಂದಲ್ಲ ಒಂದು ರೀತಿಯ ಬಿಸಿನೆಸ್‌ನಲ್ಲಿ ಪಾಲ್ಗೊಂಡಿರುತ್ತಾನೆ. ಹಾಗಾಗಿ

ನಮ್ಮ ಜೀವನದಲ್ಲಿನ ಈ ವೃತ್ತಿರಂಗದಲ್ಲಿ ವಾಸ್ತುವನ್ನು ನೋಡಿ ಮುಂದುವರೆಯುವುದು ಉತ್ತಮ.

ಎಷ್ಟೇ ನಿಪುಣರಾಗಿದ್ದು ಜಾಣ್ಮೆಯಿಂದ ತಮ್ಮ ಕೆಲಸದಲ್ಲಿ ಮುಳುಗಿದ್ದರು ನಮಗೆ ವಾಸ್ತು ಬೇಕೆಬೇಕು.

ಕಾರಣ ಇದರಲ್ಲಿ ದೊರೆಯುವ ಯಶಸ್ಸು ಕೇವಲ ನಮ್ಮ ನೈಪುಣ್ಯದಿಂದ ಬಂದಿದ್ದಾದರೂ ವಾಸ್ತುವಿನ

ಪ್ರಾಮುಖ್ಯತೆ ಕೂಡ ಒಂದಾಗಿರುತ್ತದೆ. ಬಿಸಿನೆಸ್‌ನಲ್ಲಿನ ಏರುಪೇರುಗಳನ್ನು ಬಗೆಹರಿಸಲು ವಾಸ್ತುವಿನ

ಮೊರೆ ಹೋಗುವುದು ಬಹಳ ಮುಖ್ಯವಾಗುತ್ತದೆ. ವಿಪರೀತ ಸ್ಪರ್ಧೆಯುಳ್ಳ ಜಗತ್ತಿನಲ್ಲಿ

ಪ್ರತಿಯೊಂದು ವಿಚಾರಕ್ಕು ತನ್ನದೆಯಾದ ಮಹತ್ವವಿರುತ್ತದೆ. ಸ್ಪರ್ಧಾಜಗತ್ತಿನಲ್ಲಿ ಸ್ಪರ್ಧೆಯಲ್ಲಿ

ಪಾಲ್ಗೊಳ್ಳುವವರು ವಾಸ್ತುವನ್ನು ಗಮನದಲ್ಲಿಟ್ಟುಕೊಳ್ಳಲೇಬೇಕು. ನಿಮಗೆ ಬಿಸಿನೆಸ್‌ನಲ್ಲಿ

ನಷ್ಟವಾಗುತ್ತಿದ್ದರೆ ನಿಮ್ಮ ಮನೆಯಲ್ಲಿನ ಉದ್ಯೋಗ ಸ್ಥಾನವು ದೋಷದಿಂದ ಕೂಡಿದೆ ಎಂದರ್ಥ

ಹಾಗಾಗಿ ವೃತ್ತಿಪರ ಯಶಸ್ಸನ್ನು ಆಳುವಂತಹ ನಿಮ್ಮ ಮನೆಯ ಸ್ಥಳದಲ್ಲಿನ ದೋಷವನ್ನು ಒಬ್ಬ

ವಾಸ್ತು ತಜ್ಞ ಮತ್ತು ಪರಿಣಿತರ ಕೈಯಲ್ಲಿ ಮಾತ್ರ ಹೋಗಲಾಡಿಸಲು ಸಾಧ್ಯ.

ವಿವಾಹಕ್ಕಾಗಿ ವಾಸ್ತು :-

ಪ್ರತಿಯೊಬ್ಬ ಮನುಷ್ಯನ ಜೀವನದಲ್ಲೂ ವಿವಾಹವೆಂಬ ಘಟ್ಟ ಬಹಳ ಪ್ರಾಮುಖ್ಯತೆಯಿಂದ

ಕೂಡಿರುತ್ತದೆ, ತನ್ನ ಮುಂದಿನ ಜೀವನ ಯಾವುದೇ ಲೋಪದೊಷಗಳಿಲ್ಲದೆ ನಡೆಯಬೇಕೆಂದರೆ ನಾವು

ವಿವಾಹವಾಗುವ ರೀತಿನೀತಿಗಳು ಅದರಲ್ಲಿನ ವಿಜ್ಞಾನದ ಅರಿವು, ಸಮಯ ಹೀಗೆ ನಾನಾ ರೀತಿಯ ವಾಸ್ತು

ವಿಷಯಗಳು ಪ್ರಮುಖವಾಗುತ್ತವೆ ಇದರಲ್ಲಿ ನಾವು ಎಡವಿದರೆ ನಮ್ಮ ಜೀವನ ಪರ್ಯಂತ ಕೆಲವು

ನಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಹಾಗಾಗೀ ಇದು ಅಷ್ಟೇ ಅವರವರ ರಾಶಿ, ನಕ್ಷತ್ರಗಳನ್ನು

ಪರಿಗಣಿಸಿ ವಾಸ್ತುವನ್ನು ಹೇಳಲಾಗುತ್ತದೆ. ಇದಕ್ಕೆ ನುರಿತ ಪರಿಣಿತರ ಸಹಾಯ ಕೇಳುವುದು ಅಗತ್ಯ

ಆದರೆ ವಿವಾಹವಾಗುವ ಸಮಯದಲ್ಲಿ ನಡೆಸುವ ಪ್ರತಿಯೊಂದು ಆಚರಣೆಗಳು ಸಹ ವಿಜ್ಞಾನವೇ.

ಅದನ್ನು ಪಾಲಿಸದರೆ ನಮಗೆ ಶ್ರೇಯಸ್ಸು.

ದೇವತೆಗಳ ಪೂಜಾ ವಿಧಾನ ಹೇಗಿರಬೇಕು?

You may also like