Home » ರಕ್ಷಾ ಬಂಧನ: ಆಚರಣೆಯ ಹಿಂದಿನ ಮಹತ್ವ, ರಕ್ಷಾಬಂಧನಕ್ಕೆ ಶುಭಾಶಯಗಳು ಇಲ್ಲಿ ತಿಳಿಯಿರಿ

ರಕ್ಷಾ ಬಂಧನ: ಆಚರಣೆಯ ಹಿಂದಿನ ಮಹತ್ವ, ರಕ್ಷಾಬಂಧನಕ್ಕೆ ಶುಭಾಶಯಗಳು ಇಲ್ಲಿ ತಿಳಿಯಿರಿ

by manager manager

ಯಾವುದೇ ಆಚರಣೆಯ ಹಿಂದಿನ ಸತ್ಯವನ್ನು ತಿಳಿದು ಅದನ್ನು ಆಚರಣೆ ಮಾಡಿದರೆ ಅದರ ಮಹತ್ವ ದ್ವಿಗುಣವಾಗುತ್ತದೆ. ಹಾಗೇ ನಮ್ಮೆಲ್ಲರಿಗೂ ರಕ್ಷಾ ಬಂಧನ ಎಂದರೇ ತಿಳಿದಿರುವುದು ಒಂದೇ ಅದು ತಂಗಿ ಅಣ್ಣನಿಗೆ, ಅಕ್ಕ ತಮ್ಮನಿಗೆ ರಾಖಿಯನ್ನು ಕಟ್ಟುವುದು ಎಂದಷ್ಟೇ, ಆದರೇ ಆ ರಾಖಿಯನ್ನು ಏಕೆ ಕಟ್ಟ ಬೇಕು ಅದರಲ್ಲಿರುವ ಅರ್ಥವನ್ನು ನಾವು ಹುಡುಕಲು ಹೋಗುವುದಿಲ್ಲ. ಹಾಗಾಗೀ ರಕ್ಷಾ ಬಂಧನದ ಸಂಪೂರ್ಣ ವಿವಿರವನ್ನು ಇಲ್ಲಿ ಕೊಡಲಾಗಿದೆ.

ರಾಖಿ ಎಂದರೆ ರಕ್ಷಣೆ ಎಂದರ್ಥ. ರಾಖಿ ಹಬ್ಬವನ್ನೇ ರಕ್ಷಾ ಬಂಧನದ ಹಬ್ಬ ಅಂತ ಕರೆಯೋದ್ಯಾಕೆ ಅಂದ್ರೆ, ರಕ್ಷ ಎಂದರೆ ರಕ್ಷಿಸುವುದು, ಬಂಧನ್ ಎಂದರೆ ಸೂತ್ರ ಕಟ್ಟುವುದು ಎಂದರ್ಥ. ಸಹೋದರಿಯು ಅಣ್ಣ ಅಥವಾ ತಮ್ಮ ಯಶಸ್ಸಿನ ಕಡೆಗೆ ಹೆಜ್ಜೆ ಹಾಕಬೇಕೆಂದು, ಅತ್ಯುನ್ನತ ಶಿಖರಗಳನ್ನು ಮುಟ್ಟಬೇಕೆಂದು ಬಯಸುತ್ತಾ ರಾಖಿ ಕಟ್ಟುತ್ತಾಳೆ. ಸಹೋದರನ ಯಶಸ್ಸನ್ನು ಸಹೋದರಿ ಬಯಸುತ್ತ ಅಣ್ಣ ಅಥವ ತಮ್ಮ ನಮಗೆ ರಕ್ಷಣೆಯನ್ನು ನೀಡುತ್ತಾನೆ ಹಾಗೂ ಒಳ್ಳೆ ಮಾರ್ಗದಲ್ಲಿ ನಮ್ಮನ್ನು ಕರೆದುಕೊಂಡು ಹೋಗುತ್ತಾನೆ ಮತ್ತು ಬೆನ್ನೆಲುಬಾಗಿ ನಿಲ್ಲುತ್ತಾನೆ ಎಂದು. ಸಹೋದರಿಯ ಪ್ರೀತಿ ಮತ್ತು ಭಾತೃತ್ವ ಸಂಭ್ರಮದ ಪ್ರತೀಕವೇ ರಕ್ಷಾ ಬಂಧನ. ಸಹೋದರರಿಗೆ ರಾಖಿ ಕಟ್ಟಿ ಅವರ ಏಳಿಗೆಯನ್ನು ಬಯಸುವುದು ಮತ್ತು ಆತ ತನ್ನನ್ನು ದುಷ್ಟ ಶಕ್ತಿಗಳಿಂದ ರಕ್ಷಿಸಲಿ ಎಂಬುದು ಈ ಹಬ್ಬದ ಧ್ಯೇಯ.

ಇಂದಿನ ನವಯುಗದ ಸಮಾಜದಲ್ಲಿ ತಮ್ಮ ಇರುವಿಕೆಯನ್ನು ಸಾಬೀತುಪಡಿಸಿಕೊಳ್ಳಲು ಓಡುತ್ತಿರುವ ಜನ ಸಮುದಾಯದಲ್ಲಿ ರಾಖಿ ಕಟ್ಟುವ, ಕಟ್ಟಿಸಿಕೊಳ್ಳುವ ವ್ಯವಧಾನವೇ ಇರುವುದಿಲ.್ಲ ಇದು ಅವರ ತಪ್ಪಲ್ಲ ಇಂದು ವೇಗದಿಂದ ಓಡುತ್ತಿರುವ ಸಮಾಜದ ತಪ್ಪು. ಅಂತಹವರು ಈ ಕೋಟ್‍ಗಳನ್ನು ಕಳುಹಿಸಿ ನಿಮ್ಮ ಪ್ರೀತಿಯ ಸಹೋದರಿ/ಸಹೋದರರಿಗೆ ರಾಖಿ ಹಬ್ಬದ ಶುಭಾಶಯವನ್ನ ತಿಳಿಸಿಬಹುದು.

• ಆಕಾಶದಲ್ಲಿ ಎಷ್ಟೇ ನಕ್ಷತ್ರಗಳಿದ್ದರೂ, ಭೂಮಿಗೆ ಬೆಳಕು ನೀಡುವ ನಕ್ಷತ್ರವೆಂದರೆ ಸೂರ್ಯ ಮಾತ್ರ.

ಭೂಮಿಯ ಮೇಲೆ ಎಷ್ಟೇ ಸಂಬಂಧಗಳಿದ್ದರೂ ಶ್ರೇಷ್ಠವಾದ ಪ್ರೀತಿಯ ಸಂಬಂಧವೆಂದರೆ ನಮ್ಮ ಅಣ್ಣ-ತಂಗಿ ಸಂಬಂಧ ಮಾತ್ರ.

• ಕನಸುಗಳು ನೂರಿರಲಿ, ಸಂರಕ್ಷಣೆಯ ಹೊಣೆ ನನಗಿರಲಿ

ಎಂಬ ಸಂದೇಶ ಸಾರುವ ಸೋದರತೆಯ ಸಂಭ್ರಮದ ಹಬ್ಬಕ್ಕೆ ಶುಭಾಶಯ.

• ನಿನ್ನ ಜೊತೆಗೆ ಬೆಳೆದೆ,

ನಿನ್ನ ಹಿಂದೆಯೇ ಓಡಾಡಿದೆ

ನೀನು ಮುದ್ದು ಮಾಡುತ್ತಿದ್ದರೆ ಹಸುಗೂಸಾಗುತ್ತೇನೆ

ಈ ರಕ್ಷಾ ಬಂಧನ ಸಾಕ್ಷಿಯಾಗಿ ಆಶೀರ್ವದಿಸಿದರೆ ಖುಷಿಪಡುತ್ತೇನೆ

ಅಣ್ಣ ನನಗೆ ಆಶೀರ್ವದಿಸು

ಅನುಗಾಲ ನನ್ನನು ಹೀಗೆಯೇ ಪ್ರೀತಿಸು

ಇಂತಿ ನಿನ್ನ ಪ್ರೀತಿಯ ನಿನ್ನ ತಂಗಿ.

• ನನ್ನನ್ನು ಕಣ್ಣಿಗೆ ರೆಪ್ಪೆಯಂತೆ ನೋಡಿಕೊಳ್ಳುವ ಅಣ್ಣಾ

ನಿನ್ನ ಹಾರೈಕೆಗಳೇ ನನಗೆ ಶ್ರೀರಾಮ ರಕ್ಷೆ.

• ನಿನ್ನಣ್ಣನಂತಹ ಅಣ್ಣ ಬೇಕು ಎಂದು ಗೆಳತಿಯರು ಹೇಳುವಾಗ

ರಾಣಿ ಎಲಿಜೆಬೆತ್ ಸಿಂಹಾಸನ ಏರಿದ ಖುಷಿ ನನ್ನಲ್ಲುಂಟಾಗುತ್ತದೆ.

• ಅಣ್ಣ ಅಂದರೆ ಪ್ರೀತಿ, ಕಾಳಜಿ, ಗೌರವ, ಮೌಲ್ಯ, ಅಷ್ಟೇ ಏಕೆ ಅಣ್ಣ ಅಂದ್ರೆ ನನ್ನ ಇಡೀ ಜಗತ್ತು.

ನನ್ನಣ್ಣನೇ ನನಗೆ ಹೀರೋ.

• ನನ್ನಲ್ಲಿ ಆಶೋತ್ತರಗಳಿಗೆ ಸ್ಪಂದಿಸಿ, ಕೆಲವೊಮ್ಮೆ ತಂದೆಯಾಗಿ, ತಾಯಿಯಾಗಿ, ಅಕ್ಕನಾಗಿ, ಸ್ನೇಹಿತನಾಗಿ, ಗುರುವಾಗಿ, ಮಾರ್ಗದರ್ಶಕನಾಗಿ, ನನ್ನ ಜೀವನದ ಎಲ್ಲ ಆಯಾಮಗಳಿಗೆ ಶಕ್ತಿ ಕೇಂದ್ರ ಅಣ್ಣನಿಗೆ ರಾಖಿ ಹಬ್ಬದ ಶುಭಾಶಯಗಳು.

• ಗುಟ್ಟು ಹೇಳುವಾಗ ಸ್ನೇಹಿತನಾಗಿ, ಬುದ್ಧಿ ಹೇಳುವಾಗ ತಂದೆಯಾಗಿ, ಸಮಾಧಾನ ಮಾಡುವಾಗ ಅಮ್ಮನಾಗಿ, ಕಾಪಾಡುವಾಗ ಅಣ್ಣನಿಗೆ ರಕ್ಷಾ ಬಂಧನದ ಶುಭಾಶಯಗಳು.

• ಅಣ್ಣನೆಂದರೆ ಪ್ರೀತಿಯ ಚಿಲುಮೆ

ಅದಕ್ಕೆ ಸರಿಸಾಟಿಯಾಗಿರುವುದು ನನ್ನ ಪ್ರೀತಿಯ ಒಲುಮೆ

ಆ ಬಾನು ಜಗತ್ತಿಗೆಲ್ಲ ಬೆಳಕಾಗಿರುವನು

ಈ ಭಾನುವಿನ ಜಗತ್ತೇ ತನ್ನ ಅಣ್ಣನಾಗಿರುವನು

ಅಣ್ಣ ನಿನ್ನ ಕನಸುಗಳ ಸರಮಾಲೆಯಲ್ಲಿ

ಯಶಸ್ಸಿನ ಗಾಳಿಪಟ ಹಾರಲಿ ಇಲ್ಲಿ

ಏಳೆಂಟು ಸಾಲುಗಳಲ್ಲಿ ಹೇಳಲಾರದಷ್ಟು ಭಾವನೆಗಳಲ್ಲಿ

ಈ ಕವನಗಳನ್ನು ಮುಗಿಸಲು ಮನಸ್ಸಿಲ್ಲ

ಆದರೂ ಕೆಲವು ಸಾಲುಗಳಲ್ಲಿ ಸೋದರ ಬಾಂಧವ್ಯದ

ನಮ್ಮ ಸಂಬಂಧವನ್ನು ಹೇಳಿರುವೆನಿಲ್ಲಿ.

• ನೀನೆಷ್ಟೇ ದೊಡ್ಡವಳಾದರೂ ನನ್ನ ಕಣ್ಣಿಗೆ ಇನ್ನೂ ಚಿಕ್ಕವಳೇ

ಬೆಟ್ಟದಷ್ಟು ಪ್ರೀತಿಯನ್ನು ಹಂಚಿ

ತುಂಬು ಹಾರೈಸುವ ಚಿನ್ನದ ತಂಗಿಗೆ

ರಾಖಿ ಹಬ್ಬದ ಶುಭಾಶಯಗಳು.

• ಪ್ರೀತಿಯ ಕೀಟಲೆ, ಸಮಾಧಾನದ ಮಾತು, ಒಂದು ಕೂಡ ಗುಟ್ಟು ಇರದ

ನಮ್ಮ ಸೋದರ ಸಂಬಂಧಕ್ಕೆ ನಿಮ್ಮೆಲ್ಲರ ಹಾರೈಕೆ-ಆಶೀರ್ವಾದ ಎಂದಿಗೂ ಇರಲಿ.

Raksha Bandhan Date 2021 – Sunday, 22 August

ಗಾಂಧಿಯವರ ನುಡಿಮುತ್ತುಗಳು: ಪೋಷಕರೇ ಮಕ್ಕಳಿಗೆ ಹೇಳಿಕೊಡಿ, ನೀವು ಅರಿತುಕೊಳ್ಳಿ..

You may also like