ಫೇಸ್ ಬುಕ್ ಕಳೆದ ವರ್ಷ ಕೆಲವು ಹೊಸ ಟೂಲ್ ಗಳನ್ನು ರಿಲೀಸ್ ಮಾಡಿದೆ. ಫೇಸ್ ಬುಕ್ ನಲ್ಲಿ ಬಳಕೆದಾರರ ಡೇಟಾವನ್ನು ಥರ್ಡ್ ಪಾರ್ಟಿ ಆ್ಯಪ್ ಗಳು ಹಾಗೂ ವೆಬ್ ಸೈಟ್ ಗಳು ಬಳಸುತ್ತಿವೆ ಎಂಬುದನ್ನು ಈ ಟೂಲ್ ಮೂಲಕ ಅರಿಯಬಹುದು.
ಹೌದು. ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ‘Off-Facebook Activity’ ಎಂಬುದನ್ನು ಬಳಕೆ ಮಾಡುವ ಮೂಲಕ ಫೇಸ್‌ಬುಕ್ ಟ್ರ್ಯಾಕ್ ಮಾಡುವುದನ್ನು ಸ್ಟಾಪ್ ಮಾಡಬಹುದು.
Off-Facebook Activity ಚೆಕ್ ಮಾಡುವುದು ಹೇಗೆ?
- ಫೇಸ್ ಬುಕ್ ಓಪನ್ ಮಾಡಿ ಲಾಗಿನ್ ಆಗಿ.
- ಬಲ ಮೇಲ್ಭಾಗದ ಮೂಲೆಯಲ್ಲಿರುವ ಡ್ರಾಪ್ ಡೌನ್ ಮೆನು ಕ್ಲಿಕ್ ಮಾಡಿ’ Security and Privacy ‘ ಆಯ್ಕೆ ಮಾಡಿ.
- ಸೆಟಿಂಗ್ಸ್ ಕ್ಲಿಕ್ ಮಾಡಿ ನಿಮ್ಮ Facebook Information ಆಯ್ಕೆ ಮಾಡಿ.
- Off-Facebook Activity ಕ್ಲಿಕ್ ಮಾಡಿ.
Off-Facebook Activity ಮೂಲಕ ಯಾವೆಲ್ಲ ಆ್ಯಪ್ , ವೆಬ್ ಸೈಟ್ ಗಳು ಡಾಟಾ ಕಲೆಕ್ಟ್ ಮಾಡುತ್ತವೆ ಎಂದು ಪರಿಶೀಲಿಸುವುದು ಹೇಗೆ?
ಆಫ ಫೇಸ್‌ಬುಕ್ ಆಕ್ಟಿವಿಟಿ ಪುಟದಲ್ಲಿ ‘Manage your off-Facebook activity’ ಎಂಬಲ್ಲಿ ಕ್ಲಿಕ್ ಮಾಡಿ. ಫೇಸ್ ಬುಕ್ ನೊಂದಿಗೆ ಲಿಂಕ್ ಆಗಿರುವ ಎಲ್ಲ ಅಪ್ಲಿಕೇಶನ್ ಮತ್ತು ವೆಬ್ ಸೈಟ್ ಗಳ ಸಂಪೂರ್ಣ ಮಾಹಿತಿ ಪ್ರದರ್ಶನವಾಗುತ್ತದೆ.
ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ಗಳಿಗೆ ‘off-Facebook activity’ ನಿರ್ಬಂಧಿಸುವುದು ಹೇಗೆ?
- off-Facebook activity ಪುಟದಲ್ಲಿರುವ Manage Future Activities ಆಯ್ಕೆ ಕ್ಲಿಕ್ ಮಾಡಿ.
- ಪಾಪ್ ಅಪ್ ನಲ್ಲಿ ಮತ್ತೊಮ್ಮೆ Manage Facebook Activity ಕ್ಲಿಕ್ ಮಾಡಿ.
- ಮುಂದಿನ ಪುಟದಲ್ಲಿ Future off-Facebook activity ಆಯ್ಕೆ ಕ್ಲಿಕ್ ಮಾಡಿ ಟಾಗಲ್ ಬಟನ್ ಆಫ್ ಮಾಡಿ.
off-Facebook activity ಹಿಸ್ಟರಿ ಕ್ಲಿಯರ್ ಮಾಡುವ ವಿಧಾನ
Off-Facebook Activity page ನಲ್ಲಿ ಕ್ಲಿಯರ್ ಹಿಸ್ಟರಿ ಬಟನ್ ಮೇಲೆ ಕ್ಲಿಕ್ ಮಾಡಿ. ನಂತರ ಪಾಪ್ ಅಪ್ ಬಟನ್ ಟಚ್ ಮಾಡಿ ಕನ್ಫರ್ಮ್ ಮಾಡಿದರೆ ಆಯಿತು.
UAN ನಂಬರ್ ಅನ್ನು ಆನ್‌ಲೈನ್ ಮೂಲಕ ಪಡೆಯುವುದು ಹೇಗೆ?