Home » ವಾಟ್ಸಾಪ್ ಪೇಮೆಂಟ್ ಸೇವೆ: ಬಳಕೆದಾರರಿಗಿದ್ದ ಗುಮಾನಿಗೆ ಸಿಕ್ಕಿತು ಉತ್ತರ..!

ವಾಟ್ಸಾಪ್ ಪೇಮೆಂಟ್ ಸೇವೆ: ಬಳಕೆದಾರರಿಗಿದ್ದ ಗುಮಾನಿಗೆ ಸಿಕ್ಕಿತು ಉತ್ತರ..!

by manager manager

ಪ್ರಖ್ಯಾತ ಮೆಸೇಜಿಂಗ್ ಆಪ್ ವಾಟ್ಸಾಪ್ ಪೇಮೆಂಟ್ ಸೇವೆ ಆಪ್‌ (WhatsApp Payment Service)ಕಡಿಮೆ ಡಾಟಾವನ್ನು ಮಾತ್ರ ತನ್ನ ಪೇರೆಂಟ್ ಕಂಪನಿ ಫೇಸ್‌ಬುಕ್ ನೊಂದಿಗೆ ಹಂಚಿಕೊಳ್ಳುತ್ತಿರುವುದಾಗಿ ಹೇಳಿದೆ.

ಅಲ್ಲದೇ ಫೇಸ್‌ಬುಕ್(Facebook) ಸಹ ವಾಟ್ಸಾಪ್ ಪೇಮೆಂಟ್ ಸರ್ವೀಸ್ ಚಟುವಟಿಕೆಯಲ್ಲಿ ಹಂಚಿಕೆಯಾಗುವ ಯಾವುದೇ ಮಾಹಿತಿಯನ್ನು ಕಮರ್ಷಿಯಲ್ ಉದ್ದೇಶಕ್ಕಾಗಿ ಹಂಚಿಕೊಳ್ಳುವುದಿಲ್ಲ ಎಂದು ಹೇಳಿಕೊಂಡಿದೆ.

“ಫೇಸ್‌ಬುಕ್ ವಾಟ್ಸಾಪ್‌ ನ ಪೇಮೆಂಟ್ ಮಾಹಿತಿಯನ್ನು ವ್ಯಾಪಾರ ಉದ್ದೇಶಕ್ಕಾಗಿ ಬಳಸಿಕೊಳ್ಳುವುದಿಲ್ಲ, ಬದಲಾಗಿ ಕೇವಲ ಇದು ಬ್ಯಾಂಕ್ ಪಾಲುದಾರರೊಂದಿಗೆ ಮತ್ತು ಎನ್‌ಪಿಸಿಐ ನೊಂದಿಗೆ ಅಗತ್ಯ ಮಾಹಿತಿಗಳನ್ನು ಮಾತ್ರ ಹಂಚಿಕೊಳ್ಳುತ್ತದೆ. ಇನ್ನೂ ಕೆಲವು ಸಂದರ್ಭಗಳಲ್ಲಿ ಲಿಮಿಟೆಡ್ ಡಾಟಾವನ್ನು ಮಾತ್ರ ಗ್ರಾಹಕರಿಗೆ ಸಹಾಯಮಾಡಲು, ಅಂದ್ರೆ ಪೇಮೆಂಟ್ ಸುರಕ್ಷತೆಗಾಗಿ ನೀಡಲಾಗುತ್ತದೆ” ಎಂದು ವಾಟ್ಸಾಪ್ ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿದೆ.

ಸರ್ಕಾರಿ ಮಾಹಿತಿ ಪ್ರಕಾರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಇತ್ತೀಚೆಗೆ ‘ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ’ಗೆ ವಾಟ್ಸಾಪ್ ಪೇಮೆಂಟ್ ಸುತ್ತಲಿನ ಅನುಸರಣೆ ಮತ್ತು ವಾಟ್ಸಾಪ್ ತನ್ನ ಪೇರೆಂಟ್ ಕಂಪನಿ ಫೇಸ್‌ಬುಕ್‌ ನೊಂದಿಗೆ ಏನಾದರೂ ಗ್ರಾಹಕರ ಮಾಹಿತಿಯನ್ನು ಶೇರ್ ಮಾಡಿಕೊಳ್ಳುತ್ತಿದೆಯೇ ಪರಿಶೀಲಿಸಿ ಎಂದು ಪತ್ರ ಬರೆದಿತ್ತು. ಈ ಹಿನ್ನೆಲೆಯಲ್ಲಿ ಈಗ ವಾಟ್ಸಾಪ್ ಅಧಿಕೃತವಾಗಿ ತನ್ನ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಿದೆ.

ಪ್ರಸ್ತುತದಲ್ಲಿ 10 ಲಕ್ಷಕ್ಕೂ ಹೆಚ್ಚು ಜನರು ದಿನನಿತ್ಯ ವಾಟ್ಸಾಪ್ ಪೇಮೆಂಟ್ ಅನ್ನು ಪರೀಕ್ಷಿಸಿ ಬಳಸುತ್ತಿದ್ದಾರೆ. ಇದರ ಫೀಡ್‌ಬ್ಯಾಕ್‌ ಹೆಚ್ಚು ಸಕಾರಾತ್ಮಕವಾಗಿಯೇ ಇದೆ. ಜನರು ಟೆಕ್ಸ್ಟ್ ಮೆಸೇಜ್ ಎಂಜಾಯ್ ಮಾಡುವಂತೆಯೇ ಪೇಮೆಂಟ್ ಅನ್ನು ಕಳುಹಿಸುವಲ್ಲಿಯೂ ಸರಳ ಮಾರ್ಗದಿಂದ ಎಂಜಾಯ್ ಮಾಡುತ್ತಿದ್ದಾರೆ. ವಾಟ್ಸಾಪ್ ಒನ್‌ ಟೈಮ್ ಪಾಸ್‌ವರ್ಡ್ ಸೇರಿದಂತೆ, ಟೆಕ್ಸ್ಟ್‌ ಮೆಸೇಜ್ ರೀತಿಯೇ ಬಳಕೆದಾರರ ಎಲ್ಲಾ ಮಾಹಿತಿಯನ್ನು ಸುರಕ್ಷಿತವಾಗಿ ಕಾಪಾಡುತ್ತಿದೆ. ಅಲ್ಲದೇ ಬ್ಯಾಂಕ್‌ ಖಾತೆ ನಂಬರ್, ಡೆಬಿಡ್ ಕಾರ್ಡ್ ನಂಬರ್, ಪೇಮೆಂಟ್ ಹಂಚಿಕೆಯ ಸಂದರ್ಭದ ಒನ್‌ ಟೈಮ್ ಪಾಸ್‌ವರ್ಡ್ ಯಾವ ಮಾಹಿತಿಯನ್ನು ವಾಟ್ಸಾಪ್ ಸಹ ಇಟ್ಟುಕೊಳ್ಳುವುದಿಲ್ಲ ಎಂದು ವೆಬ್‌ಸೈಟ್ ನಲ್ಲಿ ಹೇಳಿದೆ.

ವಾಟ್ಸಾಪ್ ಈಗಾಗಲೇ ಭಾರತದಲ್ಲೂ ಸಹ ಪೇಮೆಂಟ್ ಸರ್ವೀಸ್ ನ ಬೆಟಾ ವರ್ಸನ್ ಅನ್ನು ಬಳಸುತ್ತಿದೆ.

Popular massaging app WhatsApp has claimed it shares limited data of payment service with its parent firm Facebook and the social media major does not use the information for commercial purpose.

You may also like