Home » ಮೊಬೈಲ್‌ನಲ್ಲಿ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ನ ವಿಡಿಯೋ ಡೌನ್‌ಲೋಡ್‌ ಮಾಡುವುದು ಹೇಗೆ?

ಮೊಬೈಲ್‌ನಲ್ಲಿ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ನ ವಿಡಿಯೋ ಡೌನ್‌ಲೋಡ್‌ ಮಾಡುವುದು ಹೇಗೆ?

by manager manager

ಇಂದು ಸಾಮಾಜಿಕ ಜಾಲತಾಣಗಳ ಬಳಕೆ ಮಾಡದವರು ಬೆರಳೆಣಿಕೆ ಎಂದೇಳಬಹುದು. ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ರೀತಿಯ ಸಾಮಾಜಿಕ ಜಾಲತಾಣಬಳಕೆಗಳು ಬಂದಿವೆ. ಅವುಗಳಲ್ಲಿ ಚೀನ ಮೂಲದ ಬೈಟ್‌ಡ್ಯಾನ್ಸ್‌ ಕಂಪನಿಯ Hello ಆಪ್‌ ಸಹ ಒಂದು. ಇನ್ನೂ ಟಿಕ್‌ ಟಾಕ್‌ ಸಾಮಾಜಿಕ ವಿಡಿಯೋ ತಾಣವಾಗಿದೆ. ಈ ಆಪ್‌ಗಳು ಫೇಸ್‌ಬುಕ್‌ ಗಿಂತ ವೇಗವಾಗಿ ತಮ್ಮ ಬಳಕೆದಾರರನ್ನು ಹೆಚ್ಚು ಮಾಡಿಕೊಳ್ಳುತ್ತಿವೆ.

ಅಂದಹಾಗೆ ಇಂದಿನ ಲೇಖನದಲ್ಲಿ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂನಲ್ಲಿ ನಿಮ್ಮ ಇಷ್ಟದ ವಿಡಿಯೋಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ ಎಂಬುದನ್ನು ಸರಳವಾಗಿ ಇಲ್ಲಿ ಹೇಳಿದ್ದೇವೆ ನೋಡಿ.

– ಫೇಸ್‌ಬುಕ್‌ ವಿಡಿಯೋ ಮತ್ತು ಇನ್‌ಸ್ಟಾಗ್ರಾಂ ನಲ್ಲಿನ ವಿಡಿಯೋಗಳನ್ನು ಡೌನ್‌ಲೋಡ್ ಮಾಡಲು, ಮೊದಲಿಗೆ ವಿಡಿಯೋ ಡೌನ್‌ಲೋಡರ್(Video Downloader) ಮತ್ತು ಇಜೀ ಡೌನ್‌ಲೋಡರ್‌(Easy Downloader) ಆಪ್‌ಗಳನ್ನು ನಿಮ್ಮ ಆಂಡ್ರಾಯ್ಡ್ ಮೊಬೈಲ್‌ಗೆ ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್‌ ಮಾಡಿಕೊಳ್ಳಿ.

ಫೇಸ್‌ಬುಕ್‌ ವಿಡಿಯೋ ಡೌನ್‌ಲೋಡ್ ಮಾಡುವುದು ಹೇಗೆ?

-ವಿಡಿಯೋ ಡೌನ್‌ಲೋಡರ್‌ ಆಪ್‌ ಇನ್‌ಸ್ಟಾಲ್‌ ಆದ ನಂತರ, ಇದರಲ್ಲಿ ನಿಮ್ಮ ಫೇಸ್‌ಬುಕ್‌ ಯೂಸರ್ ನೇಮ್‌ ಐಡಿಯೊಂದಿಗೆ ಈ ಆಪ್‌ನಲ್ಲಿ ಲಾಗಿನ್‌ ಆಗಿ

– ನಂತರ ನೀವು ಫೇಸ್‌ಬುಕ್‌ ಅನ್ನು ಹೇಗೆ ಬಳಸುತ್ತಿರೋ ಅದೇ ರೀತಿ ವಿಡಿಯೋ ಡೌನ್‌ಲೋಡರ್‌ ನಲ್ಲಿ ಬಳಕೆ ಆರಂಭಿಸಿದರೆ ವಿಡಯೋ ಗಳು ಪ್ರದರ್ಶನಗೊಳ್ಳುತ್ತವೆ.

– ನಿಮಗೆ ಬೇಕಾದ ವಿಡಿಯೋ ಮೇಲೆ ಕ್ಲಿಕ್ ಮಾಡಿದರೆ, ಪ್ಲೇ, ಡೌನ್‌ಲೋಡ್, ಶೇರ್ ಆಯ್ಕೆಗಳು ಗೋಚರಿಸುತ್ತವೆ.

– ನೀವು ಡೌನ್‌ಲೋಡ್ ಮಾಡಲು Download ಆಪ್ಶನ್ ಆಯ್ಕೆ ಮಾಡಿದರೆ, ವಿಡಿಯೋ ಯಾವ ಕ್ವಾಲಿಟಿಯಲ್ಲಿ ಬೇಕು ಎಂಬುದನ್ನು ಆಯ್ಕೆ ಮಾಡಿಕೊಂಡು ಓಕೆ ಮಾಡಬೇಕು. ನಂತರ ವಿಡಿಯೋ ಡೌನ್‌ಲೋಡ್ ಆಗುತ್ತದೆ.

ಇನ್‌ಸ್ಟಾಗ್ರಾಂ ನಲ್ಲಿ ವಿಡಿಯೋ ಡೌನ್‌ಲೋಡ್ ಮಾಡುವುದು ಹೇಗೆ?

– ಈಗಾಗಲೇ ತಿಳಿಸಿದಂತೆ Easy Downloader ಆಂಡ್ರಾಯ್ಡ್ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿಕೊಂಡಿದ್ದೀರಿ.

– ಇನ್‌ಸ್ಟಾಗ್ರಾಂ ಆಪ್‌ ಓಪನ್‌ ಮಾಡಿ ನಿಮ್ಮ ಇಷ್ಟದ ವಿಡಿಯೋದ ಬಲಭಾಗದಲ್ಲಿ 3 ಚುಕ್ಕೆಗಳ ಮೇಲೆ ಟಚ್‌ ಮಾಡಿ.

– ಅಲ್ಲಿ ನಿಮಗೆ ಮೂರು ಆಯ್ಕೆಗಳು ಕಾಣಿಸುತ್ತವೆ. ಅವುಗಳಲ್ಲಿ Copy link ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಇಷ್ಟದ ವಿಡಿಯೋ ಡೌನ್‌ಲೋಡ್ ಆಗಿರುತ್ತದೆ.

You may also like