Home » ಫೇಸ್‌ಬುಕ್‌ನಲ್ಲಿ ಜಾಬ್‌ ಸರ್ಚ್‌ ಮಾಡುವುದು ಹೇಗೆ?..

ಫೇಸ್‌ಬುಕ್‌ನಲ್ಲಿ ಜಾಬ್‌ ಸರ್ಚ್‌ ಮಾಡುವುದು ಹೇಗೆ?..

by manager manager

ಭಾರತದಂತಹ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಕ್ಕೆ ದೊಡ್ಡ ಸವಾಲು ಎಂದರೆ ತನ್ನ ಪ್ರಜೆಗಳಿಗೆ ಕಾಲಕ್ಕೆ ತಕ್ಕಂತೆ ಉದ್ಯೋಗ ನೀಡುವುದು.

ಶಿಕ್ಷಣ ಮುಗಿಸಿ ದೊಡ್ಡ ದೊಡ್ಡ ನಗರಗಳಿಗೆ ಉದ್ಯೋಗ ಹುಡುಕಿ ಬರುವ ಹಲವು ಯುವಕರು ಇಂದು ತಮ್ಮ ಗೆಳೆಯ, ಗೆಳತಿಯರು, ಹಿರಿಯರ ಸಂಪರ್ಕಗಳಿಂದ, ಆನ್‌ಲೈನ್‌ ತಾಣಗಳಲ್ಲಿ ತಮ್ಮ ಮಾಹಿತಿ, ರೆಸ್ಯೂಮ್ ನೀಡುವ ಮೂಲಕ ಮತ್ತು ಇನ್ನೂ ಹಲವು ರೀತಿಯಲ್ಲಿ ಉದ್ಯೋಗ ಹರಸಿ ಬರುತ್ತಾರೆ. ಆದರೆ ಇನ್ನೂ ಕೆಲವರಿಗೆ ಯಾವುದೇ ಮಾರ್ಗಗಳು ಉದ್ಯೋಗ ಹುಡುಕಲು ತಿಳಿದೇ ಇರುವುದಿಲ್ಲ ಅಂತಹವರಿಗಾಗಿ ಇಂದು ಕನ್ನಡ ಅಡ್ವೈಜರ್ ದೊಡ್ಡ ದೊಡ್ಡ ನಗರಗಳಲ್ಲಿ ತುಂಬಾ ಸರಳ ಮಾರ್ಗದಲ್ಲಿ ಫೇಸ್‌ಬುಕ್ ಸಹಾಯದಿಂದ ಉದ್ಯೋಗ ಹುಡುಕುವುದು ಹೇಗೆ ಎಂಬುದನ್ನು ತಿಳಿಸುತ್ತಿದೆ.

ಫೇಸ್‌ಬುಕ್ ನಲ್ಲಿ ಜಾಬ್‌ ಸರ್ಚ್ ಮಾಡಲು ಈ ಕೆಳಗಿನ ಸರಳ ಮಾರ್ಗಗಳನ್ನು ಅನುಸರಿಸಿ

– ಇಂದು ಕೇವಲ ಉದ್ಯೋಗ ನೀಡುವ ಕಂಪನಿಗಳು ತಮ್ಮ ಅಧಿಕೃತ ವೆಬ್‌ಸೈಟ್, ಪತ್ರಿಕೆಗಳು ಮಾತ್ರವಲ್ಲದೇ ಸಾಮಾಜಿಕ ಜಾಲತಾಣಗಳಲ್ಲೂ ಉದ್ಯೋಗ ಖಾಲಿ ಇರುವ ಬಗ್ಗೆ ಮಾಹಿತಿ ನೀಡಿರುತ್ತಾರೆ.

– ಫೇಸ್‌ಬುಕ್ ನಲ್ಲಿ ಸರ್ಚ್ ಆಯ್ಕೆ ಮೇಲೆ ಕ್ಲಿಕ್ ಮಾಡಿ ನಿಮ್ಮ ಸ್ನೇಹಿತರ ಹೆಸರನ್ನು ಟೈಪಿಸಿ ಹುಡುಕುವಂತೆಯೇ, ಅದೇ ಸರ್ಚ್ ಆಯ್ಕೆಯಲ್ಲಿ ದೊಡ್ಡ ದೊಡ್ಡ ನಗರಗಳಲ್ಲಿಯ ಉದ್ಯೋಗ ಇರುವ ಬಗ್ಗೆ ತಿಳಿಯಬಹುದು. ಯಾರಾದರೂ ಜಾಬ್ ಹ್ಯಾಶ್‌ಟ್ಯಾಗ್ ನೀಡಿ ಉದ್ಯೋಗ ಮಾಹಿತಿ ಶೇರ್ ಮಾಡಿದ್ದರೆ ಮಾಹಿತಿ ದೊರೆಯುತ್ತದೆ.

– ನಿಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಸರ್ಚ್ ಆಯ್ಕೆ ಮೇಲೆ ಕ್ಲಿಕ್ ಮಾಡಿ ಕೀ ವರ್ಡ್ ನೀಡಿ ಉದ್ಯೋಗ ಹುಡುಕಿ. ನಿಮಗೆ ಬೆಂಗಳೂರಿನಲ್ಲಿ ಉದ್ಯೋಗ ಬೇಕೆಂದಿದ್ದರೆ ಉದಾಹರಣೆಗೆ:Jobs in bengaluru, bpo job seeker, bengaluru job seekers ಎಂಬ ಕೀವರ್ಡ್‌ಗಳನ್ನು ನೀಡಿ ಉದ್ಯೋಗ ಹುಡುಗಬಹುದು.

– ಕಂಪನಿಗಳ ಹೆಸರು ನೀಡಿಯೂ ಉದ್ಯೋಗ ಹುಡುಕಬಹುದು. ಉದಾಹರಣೆಗೆ: Job in Amazom, Job in Flipkart, Job in Ola, Job in Wipro.

– ಜಾಬ್ ಮಾಹಿತಿ ನೀಡಲೇ ಕೆಲವು ಫೇಸ್‌ಬುಕ್ ಗ್ರೂಪ್‌ಗಳು ಇರುತ್ತವೆ. ಅಂತಹವುಗಳಿಗೆ ಸೇರಿಕೊಳ್ಳಿ.

– ನಿಮಗೆ ಯಾವ ಕ್ಷೇತ್ರದಲ್ಲಿ, ಯಾವ ನಗರದಲ್ಲಿ ಉದ್ಯೋಗ ಬೇಕೋ ಅದರಂತೆ ಕೀವರ್ಡ್ ನೀಡಿ ಫೇಸ್‌ಬುಕ್‌ ನಲ್ಲಿ ಜಾಬ್ ಸರ್ಚ್ ಮಾಡಬಹುದು.

– ನಿಮಗೆ ಯಾವ ಕ್ಷೇತ್ರದಲ್ಲಿ ಉದ್ಯೋಗ ಬೇಕೋ ಅಂತಹ ಫೇಸ್‌ಬುಕ್‌ ಪೇಜ್‌ಗಳೀಗೆ ಸೇರಿಕೊಳ್ಳಿ.

– ನೀವು ಉದ್ಯೋಗ ಬಯಸುವ ಕಂಪನಿಗಳ ಫೇಸ್‌ಬುಕ್ ಪೇಜ್ ಮತ್ತು ಇತರೆ ಸಾಮಾಜಿಕ ಜಾಲತಾಣಗಳನ್ನು ಲೈಕ್ ಮತ್ತು ಫಾಲೋ ಮಾಡಿ. ಹೀಗೆ ಮಾಡುವುದರಿಂದ ಕಂಪನಿಯ ಎಲ್ಲಾ ಅಪ್‌ಡೇಟ್‌ಗಳ ಜೊತೆಗೆ ಉದ್ಯೋಗ ಮಾಹಿತಿಯು ದೊರೆಯುತ್ತದೆ.

– ನಿಮಗೆ ಯಾವ ಕ್ಷೇತ್ರದಲ್ಲಿ ಉದ್ಯೋಗ ಬೇಕೋ ಆ ಕ್ಷೇತ್ರದವರ ಜೊತೆ ಫೇಸ್‌ಬುಕ್ ಫ್ರೆಂಡ್‌ ಆಗಿ ಮತ್ತು ಅವರ ಸಂಪರ್ಕ ಬಳಸಿಕೊಳ್ಳಿ.

Kannadaadvisor giving most simple tips to search job in popular social media network Facebook. Here is how to search job in facebook if you are in Bengaluru.

You may also like