Home » UAN ನಂಬರ್ ಅನ್ನು ಆನ್‌ಲೈನ್‌ ಮೂಲಕ ಪಡೆಯುವುದು ಹೇಗೆ?

UAN ನಂಬರ್ ಅನ್ನು ಆನ್‌ಲೈನ್‌ ಮೂಲಕ ಪಡೆಯುವುದು ಹೇಗೆ?

by manager manager

ಇಪಿಎಫ್‌ ಚಂದಾದಾರರಾಗಬೇಕಾದರೆ UAN ನಂಬರ್ ಕಡ್ಡಾಯವಾಗಿದೆ. ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಆರ್ಗನೈಸೇಶನ್ ಸಂಸ್ಥೆಯು ಪೋರ್ಟಲ್ ಮೂಲಕ ಯುನಿವರ್ಸಲ್ ಅಕೌಂಟ್ ನಂಬರ್ (UAN) ಪಡೆಯುವ ಸೌಲಭ್ಯವನ್ನು ನೀಡಿದೆ. ಆದಾಗ್ಯೂ ವೈಯಕ್ತಿಕ ಗ್ರಾಹಕರು ಸ್ವತಃ ಆನ್‌ಲೈನ್‌ ಮೂಲಕ UAN ನಂಬರ್ ಪಡೆಯುವ ಸೌಲಭ್ಯ ಇದೆ. 12 ಅಂಕಿಗಳ UAN ನಂಬರ್ ಸಿಕ್ಕ ತಕ್ಷಣ ನೀವು ನಿಮ್ಮ ಇಪಿಎಫ್ ಅಕೌಂಟಿನ ವಿವರಗಳನ್ನು ಚೆಕ್‌ ಮಾಡಬಹುದು. EPF ಅಕೌಂಟ್ ಫಾಸ್‌ಬುಕ್‌ ನೋಡಲು ಅಥವಾ ಖಾತೆಯಲ್ಲಿ ಜಮೆಯಾಗಿರುವ ಮೊತ್ತ ಎಷ್ಟೆಂಬುದನ್ನು ಚೆಕ್‌ ಮಾಡಲು ಈ UAN ನಂಬರ್ ಬೇಕೇ ಬೇಕು.

ಆನ್‌ಲೈನ್‌ ಮೂಲಕ UAN ನಂಬರ್ ಪಡೆಯುವುದು ಹೇಗೆ?
UAN ನಂಬರ್ ಪಡೆಯಲು ಪ್ರಕ್ರಿಯೆ ಆರಂಭಿಸುವ ಮುನ್ನ ನಿಮ್ಮ ಆಧಾರ ಕಾರ್ಡ್ ಅನ್ನು ಮೊದಲಿಗೆ ಬಳಿಗೆ ಇಟ್ಟುಕೊಳ್ಳಿ. ಮೊಬೈಲ್ ಫೋನ್ ಸಹ ಹತ್ತಿರದಲ್ಲಿರಲಿ.

  • EPFO ಪೋರ್ಟಲ್ಗೆ ಹೋಗಿ Member e-Sewa ಆಯ್ಕೆ ಕ್ಲಿಕ್ ಮಾಡಿ.
  • Active UAN ಆಯ್ಕೆ ಕ್ಲಿಕ್ ಮಾಡಿ.
  • ಆಧಾರ್ ಆಯ್ಕೆ ಕ್ಲಿಕ್ ಮಾಡಿ, ನಿಮ್ಮ ಆಧಾರ ನಂಬರ್ ಟೈಪಿಸಿ.
  • ನಿಮ್ಮ ಹೆಸರು, ಜನ್ಮ ದಿನಾಂಕ, ಮೊಬೈಲ್ ಸಂಖ್ಯೆ ಸೇರಿಸಿದ ನಂತರ ಕ್ಯಾಪ್ಚಾ ಕೋಡ್ ಟೈಪಿಸಿ.
  • ಈಗ Get Authorization Pin ಎಂಬಲ್ಲಿ ಕ್ಲಿಕ್ ಮಾಡಿ.
  • ಮತ್ತೊಂದು ಸ್ಕ್ರೀನ್ ತೆರೆಯುತ್ತದೆ. ಇದರಲ್ಲಿ ನೀವು ನೀಡಿರುವ ಮಾಹಿತಿಗಳೆಲ್ಲ ಕಾಣಿಸುತ್ತವೆ. ಎಲ್ಲ ಮಾಹಿತಿಗಳು ಸರಿಯಾಗಿವೆಯಾ ಎಂದು ಚೆಕ್ ಮಾಡಿಕೊಳ್ಳಿ.
  • Agree ಚೆಕ್ ಬಾಕ್ಸ್ ಆಯ್ಕೆ ಮಾಡಿ.
  • ಇದಾದ ನಂತರ ನಿಮ್ಮ ಮೊಬೈಲಿಗೆ ಬಂದಿರುವ ಓಟಿಪಿ ಟೈಪ್ ಮಾಡಿ.
  • Validate OTP and Activate UAN ಎಂಬಲ್ಲಿ ಕ್ಲಿಕ್ ಮಾಡಿ.

ಈ ಪ್ರಕ್ರಿಯೆ ಮುಗಿದ ನಂತರ ನಿಮ್ಮ UAN ನಂಬರ್ ಹಾಗೂ ಪಾಸ್‌ವರ್ಡ್‌ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್ಸೆಮ್ಮೆಸ್ ಮೂಲಕ ಬರುತ್ತವೆ.
ಇಪಿಎಫ್ಓ ಪೋರ್ಟಲ್ನಲ್ಲಿ ಈ UAN ನಂಬರ್ ನಂಬರ್ ಹಾಗೂ ಪಾಸ್‌ವರ್ಡ್‌ ಬಳಸಿ ನಿಮ್ಮ ಖಾತೆಯು ಓಪನ್ ಆಗುತ್ತಿದೆಯಾ ಎಂಬುದನ್ನು ಪರಿಶೀಲಿಸಿಕೊಂಡು ಬಳಕೆ ಮಾಡಿ.

ಎಟಿಎಂ ಕಾರ್ಡ್ ಇಲ್ಲದೆ ಎಟಿಎಂ ಅಲ್ಲಿ ಮೊಬೈಲ್ ಮೂಲಕ ಹಣ ಪಡೆಯುವುದು ಹೇಗೆ?

You may also like