Home » ಕೊರೊನಾ ವ್ಯಾಕ್ಸಿನೇಷನ್ ಪ್ರಮಾಣಪತ್ರ ತಿದ್ದುಪಡಿ ಹೇಗೆ?

ಕೊರೊನಾ ವ್ಯಾಕ್ಸಿನೇಷನ್ ಪ್ರಮಾಣಪತ್ರ ತಿದ್ದುಪಡಿ ಹೇಗೆ?

by manager manager

ಕೋವಿಡ್-19 ವ್ಯಾಕ್ಸಿನ್ ಹಾಕಿಸಿಕೊಳ್ಳುತ್ತಿದ್ದೇವೆ. ವ್ಯಾಕ್ಸಿನ್ ಹಾಕಿಸಿಕೊಂಡವರಿಗೆ ಸರ್ಕಾರದಿಂದ ಪ್ರಮಾಣ ಪತ್ರ ನೀಡಲಾಗುತ್ತದೆ. ಹೆಸರು, ಜನ್ಮದಿನಾಂಕ, ಲಿಂಗ ಈ ಎಲ್ಲ ಮಾಹಿತಿ ಪ್ರಮಾಣಪತ್ರದಲ್ಲಿ ಇರುತ್ತದೆ. ಆದರೆ ಕೆಲವೊಮ್ಮೆ ಮಾಹಿತಿ ತುಂಬುವಾಗ ಹೆಸರು, ಜನ್ಮ ದಿನಾಂಕಗಳು, ಇತರೆ ಮಾಹಿತಿ ತಪ್ಪಾಗುತ್ತವೆ. ಇದನ್ನು ತಿದ್ದುಪಡಿ ಮಾಡಲು ಈಗ ಸರ್ಕಾರ ಅವಕಾಶ ಮಾಡಿಕೊಟ್ಟಿದೆ.

ಹೌದು. ಸರ್ಕಾರದ ವೆಬ್‌ಸೈಟ್‌ http://cowin.gov.in ಗೆ ಭೇಟಿ ನೀಡಿ ಅದರ ಬಗ್ಗೆ ದೂರು ನೀಡಬಹುದು. ಇದನ್ನು ಆರೋಗ್ಯ ಸೇತು ಟ್ವಿಟರ್ ಹ್ಯಾಂಡಲ್ ಮೂಲಕ ಸರ್ಕಾರ ಸ್ಪಷ್ಟಪಡಿಸಿದೆ.

ಒಂದೇ ಒಂದು ಬಾರಿ ಹೀಗೆ ವ್ಯಾಕ್ಸಿನೇಷನ್‌ ಪ್ರಮಾಣ ಪತ್ರದ ತಿದ್ದುಪಡಿ ಮಾಡಬಹುದು ಎಂದು ಹೇಳಲಾಗಿದೆ. ಅಲ್ಲದೇ ಹೆಸರು, ಜನ್ಮದಿನಾಂಕ ಹಾಗೂ ಲಿಂಗ ಈ ಮೂರು ಮಾಹಿತಿಗಳನ್ನು ಮಾತ್ರ ತಿದ್ದುಪಡಿ ಮಾಡಬಹುದು ಎಂಬುದು ಮುಖ್ಯ ಸೂಚನೆಯಾಗಿದೆ.

ವ್ಯಾಕ್ಸಿನೇಷನ್‌ ಸರ್ಟಿಫಿಕೇಟ್‌ ತಿದ್ದುಪಡಿ ಹೇಗೆ?

  • www.cowin.gov.in ವೆಬ್‌ಸೈಟ್‌ಗೆ ಹೋಗಿ Register/Sign in yourself ಆಯ್ಕೆ ಕ್ಲಿಕ್ ಮಾಡಿ.
  • ಈಗ ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್ ನೀಡಿದಾರ OTP ಬರುತ್ತದೆ.-
  • ಇಲ್ಲಿ ಅಕೌಂಟ್ ಡಿಟೇಲ್ಸ್ ಮೆನುಗೆ ಹೋಗಿ ‘Raise an Issue’ ಬಟನ್ ಮೇಲೆ ಕ್ಲಿಕ್ ಮಾಡಿ.
  • ಡ್ರಾಪ್ ಡೌನ್ ಲಿಸ್ಟ್‌ನಿಂದ ಮೆಂಬರ್ ಹೆಸರು ಆಯ್ಕೆ ಮಾಡಿ.
  • ಈಗ ‘Correction’ ಎಂಬುದನ್ನು ಕ್ಲಿಕ್ ಮಾಡಿ ಮುಂದುವರೆಸಿ.
  • ಇಲ್ಲಿ ಅಗತ್ಯವಿರುವ ತಿದ್ದುಪಡಿಯನ್ನು ಆಯ್ಕೆ ಮಾಡಿ, ಸರಿಯಾದ ಮಾಹಿತಿಯನ್ನು ತುಂಬಿದ ನಂತರ ಕಂಟಿನ್ಯೂ ಬಟನ್ ಕ್ಲಿಕ್ ಮಾಡಿ. ನಿಮ್ಮ ಸಮಸ್ಯೆಯ ಮನವಿ ಸ್ವೀಕೃತವಾಗುತ್ತದೆ.

RDWSD ಇಲಾಖೆಯಿಂದ ನೇಮಕ: ಸಮಾಲೋಚಕ ಹುದ್ದೆಗೆ ಅರ್ಜಿ ಆಹ್ವಾನ

You may also like