Home » ಭಾವನೆಗಳಿಗೆ ಸ್ಪಂದಿಸುವ ಆಪ್ತಜೀವ ಬೇಕೆ? ಹಾಗಿದ್ರೆ ಈ ಡೇಟಿಂಗ್ ಆಪ್‌ಗಳನ್ನು ಎಚ್ಚರದಿಂದ ಬಳಸಿ

ಭಾವನೆಗಳಿಗೆ ಸ್ಪಂದಿಸುವ ಆಪ್ತಜೀವ ಬೇಕೆ? ಹಾಗಿದ್ರೆ ಈ ಡೇಟಿಂಗ್ ಆಪ್‌ಗಳನ್ನು ಎಚ್ಚರದಿಂದ ಬಳಸಿ

by manager manager

ನಿಮ್ಮ ಮನಸ್ಸಿಗೆ ಮತ್ತು ಆಲೋಚನೆಗಳಿಗೆ ಹತ್ತಿರದವರ ಜೊತೆಗೆ ಮಾತನಾಡಲು ಬಯಸುತ್ತೀರಾ.. ಹಾಗದರೇ ಡೇಟಿಂಗ್ ಅಪ್ಲಿಕೇಶನ್‌ಗಳ ಬಗ್ಗೆ ತಿಳಿಯುವುದು ಅಗತ್ಯ.

ಮನುಷ್ಯ ಒಟ್ಟಿಗೆ ಸೇರಿ ಕಾಲ ಕಳೆಯುವ ಕಾಲ ಬಹಳ ಹಿಂದೆಯೇ ಅವನತಿಯತ್ತ ಸಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ ಹೀಗಿರುವಾಗ, ನಾವು ಕಾಲಕ್ಕೆ ತಕ್ಕಂತೆ ಬದಲಾಗುತ್ತಿರಬೇಕು, ಹಾಗಾಗೀ ನಮ್ಮ ನಡುವೆ ಇಂದು ಡೇಟಿಂಗ್ ಅಪ್ಲಿಕೇಶನ್‌ ಬಹಳ ಫೇಮಸ್ ಆಗುತ್ತಿದೆ. ಏನಿದು ಡೇಟಿಂಗ್ ಆಪ್‌, ಇದರಲ್ಲಿ ನೀವು ನಿಮ್ಮ ಮನಸ್ಸಿಗೆ ಹತ್ತಿರವಾಗುವವರ ಜೊತೆ ಅಂದರೇ ನಿಮ್ಮ ಫ್ಯೂಚರ್ ಗಂಡ ಅಥವಾ ಹೆಂಡತಿಯ ಜೊತೆ ಆಪ್‌ಗಳ ಮೂಲಕ ಮಾತಾಡುವುದಾಗಿದೆ. ನಿಮ್ಮ ಸಂತೋಷ, ದುಃಖ, ನೋವಿನ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಒಂದು ಆಪ್ತ ಜೀವ ಬೇಕು. ಆದರೇ ಈಗೀನ ಓಡುತ್ತಿರುವ ಕಾಲದಲ್ಲಿ ನಿಮಗೆ ಸಮಯಕ್ಕೆ ಸರಿಯಾಗಿ ಯಾರು ಸಿಗುವುದಿಲ್ಲ, ಆ ನಿಟ್ಟಿನಲ್ಲಿ ನಿಮ್ಮ ಭಾವನೆ ಮತ್ತು ಅಭಿರುಚಿಗಳಿಗೆ ಸರಿ ಹೊಂದುವಂತಹ ಆಪ್ತರನ್ನು ಹುಡುಕಲು ಗೂಗಲ್ ಪ್ಲೇ ಸ್ಟೋರ್‍ನಲ್ಲಿ ಅನೇಕ ಡೇಟಿಂಗ್ ಆಪ್‍ಗಳು ಲಭ್ಯವಿದ್ದು, ಯುವಜನತೆ ಡೇಟಿಂಗ್ ಆಪ್‌ಗಳನ್ನು ಹೆಚ್ಚು ಬಳಸುತ್ತಿದ್ದು ತನ್ನ ಜೀವನ ಸಂಗಾತಿಯನ್ನು ಆಯ್ದುಕೊಳ್ಳಲು ಇದು ಒಂದು ವೇದಿಕೆಯಾಗಿದೆ.

ಪ್ರಸ್ತುತ ಬ್ಯೂಸಿ ಲೈಫ್ ಸ್ಟೈಲ್‍ನಿಂದಾಗಿ ಬಹುತೇಕರು ತಮಗೆ ಸರಿ ಹೊಂದುವ ಆಪ್ತರನ್ನು ಹುಡಕಲು ಈ ಡೇಟಿಂಗ್ ಆಪ್‍ಗಳ ಮೊರೆಹೋಗುತ್ತಿದ್ದಾರೆ. ಸಮಾನ ವಯಸ್ಸು ಮತ್ತು ಸಮಾನ ಅಭಿರುಚಿಗಳು ಪರಸ್ಪರ ನಡುವೆ ಆಪ್ತತೆಯನ್ನು ಗಟ್ಟಿಗೊಳಿಸುತ್ತದೆ. ಹಾಗಾಗಿ ಡೇಟಿಂಗ್ ಆಪ್‍ಗಳಲ್ಲಿ ಅಭಿರುಚಿಗಳನ್ನು ನಮೂದಿಸುವ ಮೂಲಕ ನಿಮ್ಮ ಪ್ರೊಫೈಲ್ ರಚಿಸಿಕೊಳ್ಳವುದಕ್ಕೆ ಅವಕಾಶ ನೀಡಲಾಗಿರುವುದು. ಆ ಆಧಾರದ ಮೇಲೆ ನಿಮಗೆ ಸರಿಹೊಂದುವ ಆಪ್ತರ ಆಯ್ಕೆಗಳನ್ನು ಆಪ್‌ನಲ್ಲಿ ಒದಗಿಸಲಾಗುತ್ತದೆ. ಆ ರೀತಿಯ ಜನಪ್ರಿಯ ಡೇಟಿಂಗ್ ಆಪ್‌ಗಳ ಬಗ್ಗೆ ತಿಳಿದುಕೊಳ್ಳಬೇಕಂದರೇ ಮುಂದೆ ಓದಿ.

ಟಿಂಡರ್ :-

ಈ ಟಿಂಡರ್ ಡೇಟಿಂಗ್ ಆಪ್ ಭಾರತದಲ್ಲಿ ಹೆಚ್ಚು ಜನಪ್ರಿಯತೆ ಹೊಂದಿದ್ದು ಉಚಿತವಾಗಿದೆ. ನಿಮ್ಮ ಲೋಕೇಶನ್ ಆಧಾರದ ಮೇಲೆ ಸುತ್ತಮುತ್ತಲಿನ ಇತರೆ ಫ್ರೊಫೈಲ್‍ಗಳ ಆಯ್ಕೆ ಬರುತ್ತವೆ. ಒಬ್ಬ ಸೀಮಿತ ಬಳಕೆದಾರ ಒಂದು ದಿನಕ್ಕೆ ನಿಯಮಿತ ಪ್ರೊಫೈಲ್‌ಗಳನ್ನು ಮಾತ್ರ ನೋಡಬಹುದು. ಅಥವಾ ನಾನು ಹೆಚ್ಚಿನ ಪ್ರೊಫೈಲ್‌ ನೋಡಬೇಕು ಎಂದಾದರೇ ಅದಕ್ಕೆ ಹಣ ಪಾವತಿ ಮಾಡಬೇಕಾಗುತ್ತದೆ. ಓಕೆ ಆದ ಪ್ರೊಫೈಲ್‌ ಬಳಕೆದಾರರೊಂದಿಗೆ ಚಾಟ್ ಮಾಡಲು ಅನುಮತಿ ಸಿಗುತ್ತದೆ. ಇನ್ನೂ ಈ ಆಪ್‌ಗೆ ಫೇಸ್‍ಬುಕ್ ಮೂಲಕ ಕೂಡ ಲಾಗಿನ್ ಆಗಬಹುದು. ಅಥವಾ ಮೊಬೈಲ್ ನಂಬರ್ ಮೂಲಕ ಲಾಗಿನ್ ಆಗಬಹುದು.

ಟ್ರೂಲೀ ಮ್ಯಾಡ್ಲೀ :-

ಇದು ಬಳಕೆದಾರರು ನೀಡಿರುವ ಪ್ರೊಫೈಲ್‌ಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಇದರಲ್ಲಿ ಪ್ರೊಫೈಲ್‌ಗಳನ್ನು ನಿರ್ಮಿಸಲು ಕೆಲವು ದಾಖಲೆಗಳನ್ನು ಕೊಡಬೇಕಾಗುತ್ತದೆ. ನಿಮ್ಮ ಪ್ರೊಫೈಲ್‌ಗಳಿಗೆ ಅನುಸಾರವಾಗಿ ನಿಮಗೆ ಸರಿಹೊಂದುವಂತಹವರನ್ನು ನೀಡುತ್ತಾರೆ, ನಿಮ್ಮ ಅಭಿರುಚಿಗೆ ಮ್ಯಾಚ್ ಆದ ಬಳಕೆದಾರರೊಂದಿಗೆ ಪ್ರತ್ಯಕವಾಗಿ ಸಂದೇಶ ಮಾಡಲು ಅನುಮತಿ ಪಡೆಯುತ್ತೀರಿ. ಇದರಲ್ಲಿ ನಿಮ್ಮ ಪ್ರೊಫೈಲ್‌ ಗಳಿಗೆ ಸಂಪೂರ್ಣ ಸುರಕ್ಷತೆ ಇದ್ದು, ಯಾರು ಡೌನಲೋಡ್ ಮಾಡಿಕೊಳ್ಳಲು ಅವಕಾಶ ಇರುವುದಿಲ್ಲ, ಯಾವುದೇ ರೀತಿಯ ಅನುಚಿತ ವರ್ತನೆಯನ್ನು ಈ ಅಪ್ಲಿಕೇಶನ್‌ ಮಾಡಲಾಗುವುದಿಲ್ಲ.

ಹ್ಯಾಪೆನ್ :-

ಇದು ಸಹ ಲೋಕೇಶನ್ ಆಧಾರಿತ ಡೇಟಿಂಗ್ ಅಪ್ಲಿಕೇಶನ್ ಆಗಿದ್ದು, ಇದರ ಪ್ರೊಫೈಲ್ ಮ್ಯಾಚಿಂಗ್ ಸ್ವಲ್ಪ ಭಿನ್ನವಾಗಿದೆ. ನಿಮ್ಮ ನಿಜ ಜೀವನದಲ್ಲಿ ಕಂಡಿರುವ ವ್ಯಕ್ತಿಗಳು ಹ್ಯಾಪೆನ್ ಆಪ್‌ನಲ್ಲಿ ಪ್ರೊಫೈಲ್‌ ಹೊಂದಿದ್ದಾರಾ ಎಂದು ತಿಳಿಯಬಹುದು, ಹೊಂದಿದ್ದರೆ ನೀವು ಅವರಿಗೆ ಹ್ಯಾಪನ್ ಆಪ್ ಮೂಲಕ ರಿಕ್ವೆಸ್ಟ್‌ ಕಳುಹಿಸಬಹುದು. ನಿಮ್ಮ ರಿಕ್ವೆಸ್ಟ್‌ ಅವರು ಸ್ವೀಕರಿಸಿದರೇ ನೀವು ಅವರೊಂದಿಗೆ ಮಾತಾಡುವ ಅವಕಾಶ ಇದೆ.

ಭಾರತದಲ್ಲಿ ವಾಟ್ಸಾಫ್ ಬದಲಿಗೆ ಟ್ರೆಂಡ್ ಆಗಿದೆ ಸರ್ಕಾರದ ಸಂದೇಶ್ ಅಪ್ಲಿಕೇಶನ್‌: ಡೌನ್‌ಲೋಡ್‌ ಲಿಂಕ್ ಇಲ್ಲಿದೆ..

ವೂ :-

ಈ ಡೇಟಿಂಗ್ ಆಪ್‌ ವಿದ್ಯಾವಂತ ಪ್ರೋಫೇಶನಲ್‍ಗಳಿಗೆ ಮಾತ್ರ. ಇಲ್ಲಿ ವಾಯಿಸ್ ಮೂಲಕ ಪರಿಚಯ ಮಾಡಿಕೊಳ್ಳುವ ಅವಕಾಶವಿದೆ. ಮಹಿಳೆಯರು ತಮ್ಮ ಹೆಸರು, ನಂಬರ್ ಮತ್ತು ಲೋಕೇಶನ್‌ಗಳನ್ನು ಶೇರ್ ಮಾಡದೇ ಧ್ವನಿ ಮೂಲಕ ತಮ್ಮನ್ನ ಪರಿಚಯಿಸಿಕೊಳ್ಳಬಹುದಾಗಿದೆ. ಈ ಆಪ್‌ನಲ್ಲಿಯೂ ಸಹ ಎಡಕ್ಕೆ, ಬಲಕ್ಕೆ ಸರಿಸುವ ಮೂಲಕ ಪ್ರೊಫೈಲ್‌ಗಳ ವೀಕ್ಷಣೆ ಮಾಡಬಹುದಾಗಿದ್ದು, ಪರಸ್ಪರ ಒಪ್ಪಿದ ಪ್ರೊಫೈಲ್‌ ಬಳಕೆದಾರರು ಚಾಟ್ ಮಾಡುವ ಮತ್ತು ಮಾತನಾಡುವ ಅವಕಾಶ ಇದೆ.

ಒಕೆಕುಪಿಡ್:-

ಒಕೆಕುಪಿಡ್ ಡೇಟಿಂಗ್ ಆಪ್‌ ಅಂತರಾಷ್ಟ್ರೀಯ ಮಟ್ಟದ ಡೇಟಿಂಗ್ ಒಕೆಕುಪಿಡ್. ಒಟ್ಟು 113 ರಾಷ್ಟ್ರಗಳಲ್ಲಿ ನೆಟವರ್ಕ್ ಹೊಂದಿದೆ. ಇದರಲ್ಲಿ ಬಳಕೆದಾರರನ್ನು ಖಚಿತಪಡಿಸಿಕೊಳ್ಳಲು ಹಲವು ಪ್ರಶ್ನೆಗಳನ್ನು ಕೇಳಲಾಗುತ್ತದೆ ಮತ್ತು ಸರ್ಚ ಸೆಕ್ಷನ್ ಮೂಲಕ ನಿಮಗೆ ಸರಿಯಾಗಿ ಮ್ಯಾಚ್ ಆಗುವ ಆಪ್ತರನ್ನು ಹುಡುಕಿಕೊಳ್ಳಬಹುದಾಗಿದೆ. ಇದರಲ್ಲಿಯೂ ಸಹ ನಿಮ್ಮ ಪ್ರೊಫೈಲ್‌ಗೆ ಸುರಕ್ಷತೆಗೆ ಗಮನ ನೀಡಲಾಗಿದೆ.

ಐಸ್ಲ್ :-

ದೇಶದಲ್ಲಿ ಇರುವ ಮತ್ತೊಂದು ಇಂಟರೆಸ್ಟಿಂಗ್ ಆಪ್‌ ಎಂದರೆ ಅದು ಐಸ್ಲ್ ಡೇಟಿಂಗ್ ಆಪ್. ನಿಮ್ಮಲ್ಲಿ ಫೇಸ್‍ಬುಕ್, ಲಿಂಕ್ಡಿನ್ ಆಪ್‌ ಇದ್ದರೆ ಉತ್ತಮ. ಇಲ್ಲಿ ಕೂಡ ಖಾತೆ ದೃಢೀಕರಣ ಅಗತ್ಯವಾಗಿ ಬೇಕಾಗುತ್ತದೆ. ಒಮ್ಮೆ ಖಾತೆ ದೃಢಪಟ್ಟ ಬಳಿಕ ಡೇಟಿಂಗ್ ಆಪ್ ಚಾಟ್ ಮತ್ತಿತರ ಆಯ್ಕೆಗಳನ್ನು ಬಳಸಬಹುದು.

ಬಾಡೋ :-

ಜಾಗತಿಕವಾಗಿ ಅತ್ಯಾಧಿಕ ಸಂಖ್ಯೆಯಲ್ಲಿ ಬಳಕೆದಾರರನ್ನು ಹೊಂದಿರುವ ಡೇಟಿಂಗ್ ಆಪ್‌ ಎಂದರೆ ಅದು ಬಾಡೂ. ಟಿಂಡರ್‍ಗೆ ಹೋಲಿಕೆಯಿರುವ ಕೆಲವೊಂದು ಆಯ್ಕೆಗಳನ್ನು ಈ ಆಪ್‌ ಹೊಂದಿದೆ. ಫೋಟೋ ಮೂಲಕ ಇದನ್ನು ದೃಢೀಕರಿಸಲಾಗುತ್ತದೆ. ಲೊಕೇಶನ್ ಆಧರಿಸಿ ನಿಮಗೆ ಪ್ರೊಫೈಲ್ ಮ್ಯಾಚಿಂಗ್ ಒದಗಿಸುತ್ತದೆ.

ಕಾಫಿ ಮೀಟ್ಸ್ ಬಗೆಲ್ :-

ಇದು ಕಾಫಿ ಮೀಟ್ಸ್ ಬಗೆಲ್. ಮಹಿಳೆಯರಿಗೆ ಹೆಚ್ಚಿನ ಆಯ್ಕೆ ಒದಗಿಸುವ ಆಪ್ ಇದಾಗಿದೆ. ಹುಡುಗರಿಗೆ ಇದರಲ್ಲಿ ಕಡಿಮೆ ಆಯ್ಕೆಗಳಿವೆ, ಆದರೆ ಹುಡುಗಿಯರಿಗೆ ಅಧಿಕ ಆಯ್ಕೆ ಲಭ್ಯವಿದೆ.

ಅಝರ್ :-

ಈ ಡೇಟಿಂಗ್ ಆಪ್‌ ಎಂದು ಪ್ರಚಾರ ನೀಡುವುದಿಲ್ಲ. ಆದರೆ ಅಪರಿಚಿತರೊಡನೆ ಚಾಟ್ ಮಾಡಲು, ವಿಡಿಯೋ ಕಾಲ್ ಮಾಡಲು ಅವಕಾಶ ಕಲ್ಪಿಸುತ್ತದೆ. ನಿಮ್ಮ ಆಸಕ್ತಿಗೆ ಅನುಗುಣವಾಗಿ ಮ್ಯಾಚಿಂಗ್ ಪ್ರೊಫೈಲ್ ಹುಡುಕಬಹುದು. ಜತೆಗೆ ಚಾಟ್ ಟ್ರಾನ್ಸ್‍ಲೇಶನ್ ಆಯ್ಕೆ ಕೂಡ ಲಭ್ಯವಿದೆ.

ಹಿಂಜ್ :-

ಇದಕ್ಕೆ ಫೇಸ್‍ಬುಕ್ ಮೂಲಕ ಲಾಗಿನ್ ಆಗಬಹುದು. ಬಳಿಕ ನೀವು ನಿಮ್ಮ ಖಾತೆ ರಚಿಸಿಕೊಂಡು, ಅಲ್ಲಿ ನಿಮ್ಮ ಮ್ಯಾಚ್ ಹುಡುಕಿಕೊಳ್ಳಬಹುದು. ನಿಮ್ಮ ಫೋಟೋ, ಆಸಕ್ತಿಯ ವಿವರ ಬಳಸಿಕೊಂಡು ಅಲ್ಲಿ ಟೈಮ್‍ಲೈನ್ ಸೃಷ್ಟಿಸಬಹುದಾಗಿದೆ.

ಈ ರೀತಿಯಾಗಿ ನಿಮ್ಮ ಸುತ್ತಮುತ್ತ ಅನೇಕ ಡೇಟಿಂಗ್ ಆಪ್ಗಳು ಸಿಗುತ್ತವೆ. ಅವುಗಳಲ್ಲಿ ಸಾಕಷ್ಟು ಸುರಕ್ಷತೆ ಇದ್ದರೂ ಪ್ರೋಫೈಲ್‍ಗಳ ದುರ್ಬಳಕೆ ಮಾಡಿಕೊಳ್ಳುವುದು ಮತ್ತು ಮೋಸ ಮಾಡುವ ಸಾಧ್ಯತೆಗಳನ್ನು ಸಹ ಸರಿಸುವಂತಿಲ್ಲ. ಹೀಗಾಗಿ ನೀವು ಡೇಟಿಂಗ್ ಆಪ್‌ಗಳನನ್ಉ ಬಳಸುವ ಮುನ್ನ ಎಚ್ಚರಿಕೆಯಿಂದಿರಿ. ನಿಮ್ಮ ಭಾವನೆಗಳಿಗೆ ಧಕ್ಕೆ ಆದರೆ ಸುಧಾರಿಸುವುದು ಕಷ್ಟ ಮತ್ತು ಅವಸರದಲ್ಲಿ ಆಪ್ತರು ಆಪತ್ತನ್ನು ತಂದರೇ ಕಷ್ಟ.

You may also like