Home » PM-KISAN ಯೋಜನೆಯ ರೂ.6000 ಪಡೆಯಲು ಅರ್ಜಿ ಸಲ್ಲಿಕೆ ಹೇಗೆ? ಬೇಕಾದ ದಾಖಲೆಗಳು ಏನು?

PM-KISAN ಯೋಜನೆಯ ರೂ.6000 ಪಡೆಯಲು ಅರ್ಜಿ ಸಲ್ಲಿಕೆ ಹೇಗೆ? ಬೇಕಾದ ದಾಖಲೆಗಳು ಏನು?

by manager manager

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದ ರೈತ ಬಾಂಧವರಿಗೆ ಧನ ಸಹಾಯ ನೀಡುವ ಹೊಸ ಯೋಜನೆಯೊಂದನ್ನು ಪ್ರಕಟಗೊಳಿಸಿದೆ. ಆ ಯೋಜನೆಯೂ ಈಗಾಗಲೇ ಕಾರ್ಯರಂಭವು ಆಗಿದೆ. ಅದರ ಹೆಸರು “ಪ್ರಧಾನಮಂತ್ರಿ ಕೃಷಿ ಸಮ್ಮಾನ್ ನಿಧಿ ಯೋಜನೆ”. ಈ ಯೋಜನೆ ಪಡೆಯುವುದು ಹೇಗೆ? ಇದರಿಂದ ರೈತರಿಗೆ ಆಗುವ ಅನುಕೂಲಗಳು ಏನು ಎಂಬುದನ್ನು ಈ ಕೆಳಗೆ ನೀಡಲಾಗಿದೆ. (pm kisan samman nidhi yojana)

ಪ್ರಧಾನಮಂತ್ರಿ ಕೃಷಿ ಸಮ್ಮಾನ್ ನಿಧಿ (PM-KISAN) ಯೋಜನೆ’ಯ ಅನುಕೂಲಗಳು

ಈ ಯೋಜನೆ ಅಡಿಯಲ್ಲಿ ದೇಶದ ಪ್ರತಿ ರೈತನಿಗೆ ವಾರ್ಷಿಕವಾಗಿ ರೂ.6000 ಸಹಾಯಧನವನ್ನು ನೇರವಾಗಿ ಅವರ ಖಾತೆಗೆ ನೀಡಲಾಗುತ್ತದೆ.

ರೂ.6000 ಸಹಾಯಧನವನ್ನು ಮೂರು ಕಂತುಗಳಲ್ಲಿ ರೂ.2000 ದಂತೆ ವಾರ್ಷಿಕವಾಗಿ ರೈತನ ಖಾತೆಗೆ ಜಮೆ ಮಾಡಲಾಗುತ್ತದೆ.

ಪ್ರಧಾನಮಂತ್ರಿ ಕೃಷಿ ಸಮ್ಮಾನ್ ನಿಧಿ (PM-KISAN) ಯೋಜನೆ ಸಹಾಯಧನಕ್ಕಾಗಿ ರೈತರು ತಮ್ಮ ತಮ್ಮ ಹೋಬಳಿಯ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಿ ಅವರಿಗೆ ಅರ್ಜಿ ಸಲ್ಲಿಸಬೇಕು.

ಪ್ರಧಾನಮಂತ್ರಿ ಕೃಷಿ ಸಮ್ಮಾನ್ ನಿಧಿ (PM-KISAN) ಧನ ಸಹಾಯ ಪಡೆಯಲು ರೈತರು ಅರ್ಜಿಯೊಂದಿಗೆ ಕಡ್ಡಾಯವಾಗಿ ಸಲ್ಲಿಸಬೇಕಾದ ದಾಖಲೆಗಳು ಈ ಕೆಳಗಿನಂತಿವೆ.

– ಅರ್ಜಿ ನಮೂನೆ

– ಆರ್ ಟಿ ಸಿ

– ಆಧಾರ್ ಕಾರ್ಡ್ ಜೆರಾಕ್ಸ್

– ಬ್ಯಾಂಕ್‌ ಪಾಸ್ ಬುಕ್ ಜೆರಾಕ್ಸ್

– ಇತ್ತೀಚಿನ ಪಾಸ್‌ಪೋರ್ಟ್‌ ಅಳತೆಯ ಎರಡು ಫೊಟೋಗಳು

– ಜಾತಿ ಪ್ರಮಾಣ ಪತ್ರ (ಪಂ.ಜಾತಿ ಮತ್ತು ಪ.ಪಂ ರೈತರುಗಳಿಗೆ ಮಾತ್ರ)

ಅರ್ಜಿ ಪಡೆಯುವುದು ಎಲ್ಲಿ?

ಅರ್ಜಿಯನ್ನು ರೈತರು ತಮ್ಮ ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ಪಡೆಯಬೇಕು. ಹಾಗೂ ಅರ್ಜಿಯನ್ನು ಅಲ್ಲಿನ ಕೃಷಿ ಅಧಿಕಾರಿಗಳಿಗೆ ನೀಡಬೇಕು.

ರೈತರು ಸಲ್ಲಿಸುವ ದಾಖಲೆಗಳು ಎಲ್ಲವೂ ಕೂಡ ತಮ್ಮ ಹೆಸರಿನಲ್ಲಿಯೇ ಇರಬೇಕು.

ಅಂದಹಾಗೆ ಈಗಾಗಲೇ ಆಯಾ ರಾಜ್ಯ ಮತ್ತು ಜಿಲ್ಲೆಗಳಲ್ಲಿ ಪ್ರಧಾನಮಂತ್ರಿ ಕೃಷಿ ಸಮ್ಮಾನ್ ನಿಧಿ (PM-KISAN) ಯೋಜನೆಗೆ ಅರ್ಹರಾಗಿರುವ ರೈತರ ಪಟ್ಟಿಯನ್ನು ಪ್ರಕಟಿಸಲಾಗಿದ್ದು ಇದನ್ನು C ಕಾಪಿ ಎನ್ನಲಾಗುತ್ತದೆ.

Here is how to apply for Pradhan Mantri kisan Samman nidhi yojana online information. Pradhan Mantri Naredra Modi recently anounced this scheme for nation farmers.

You may also like