ರೈತರಿಗೆ ಆಗುವ ಬೆಳೆ ನಷ್ಟಕ್ಕೆ ಕಳಪೆ ಬಿತ್ತನೆ ಬೀಜ(From Seeds)ಗಳನ್ನು ಬಿತ್ತನೆ ಮಾಡುವುದು ಸಹ ಕಾರಣವಾಗಿದೆ. ಕಡಿಮೆ ಬೆಲೆಯಲ್ಲಿ ಬಿತ್ತನೆ ಬೀಜ ಸಿಗುತ್ತದೆ ಎಂದು ರೈತರು ಇಂಥ ಬೀಜಗಳನ್ನು ಖರೀದಿಸಿ, ಬಿತ್ತನೆ ಮಾಡಿ ನಷ್ಟ ಅನುಭವಿಸುತ್ತಾರೆ. ಹೀಗಾಗಿ ಅನಧಿಕೃತವಾಗಿ, ಪರವಾನಗಿ ಇಲ್ಲದೇ ಬಿತ್ತನೆ ಬೀಜಗಳನ್ನು ಮಾರಾಟ ಮಾಡುವವರ ಬಳಿ ಕೊಳ್ಳುವುದರ ಬದಲು ಕೃಷಿ ಇಲಾಖೆಯ ಅಧಿಕೃತ ಕೇಂದ್ರಗಳಲ್ಲಿಯೇ ರೈತರು ಬೀಜಗಳ ಖರೀದಿ ಮಾಡಬೇಕು. ಈ ಮೂಲಕ ಉತ್ತಮ ಬೀಜಗಳನ್ನು ಬಿತ್ತನೆ ಮಾಡಿ ಒಳ್ಳೆಯ ಫಸಲನ್ನು ಪಡೆಯಬಹುದು.
ಸರ್ಕಾರ ಎಷ್ಟೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡರೂ ಅನಧಿಕೃತವಾಗಿ ಬಿತ್ತನೆ ಬೀಜ (From Seeds) ಮಾರಾಟ ನಡೆಯುತ್ತಿದೆ. ಕಡಿಮೆ ದುಡ್ಡು ಎಂದು ಖರೀದಿಸಿದರೆ ರೈತರಿಗೆ ನಷ್ಟ ಕಟ್ಟಿಟ್ಟ ಬುತ್ತಿ. ಹೀಗಾಗಿ ಬೀಜ ಖರೀದಿಸುವ ಮುನ್ನ ಈ ಕೆಳಗಿನ ಕೆಲವು ಅಂಶಗಳನ್ನು ಗಮನಿಸಬೇಕು.
ಬೀಜ ಖರೀದಿಸುವ ಮುನ್ನ ಗಮನಿಸಬೇಕಾದ ಅಂಶಗಳು:
- ಅಧಿಕೃತ ಬಿತ್ತನೆ ಬೀಜ ಮಾರಾಟಗಾರರಿಂದಲೇ ಬಿತ್ತನೆ ಬೀಜವನ್ನು ಖರೀದಿಸಿ.
- ಬಿತ್ತನೆ ಬೀಜ ಖರೀದಿಸಿದಾಗ ತಪ್ಪದೇ ಅಧಿಕೃತ ರಸೀದಿ ಪಡೆಯಬೇಕು. ರಶೀದಿಯಲ್ಲಿ ಲಾಟ್’ನಂಬರ್ ನಮೂದಿಸಿರಬೇಕು.
- ಚೀಲದ ಮೇಲೆ ನಮೂದಿಸಿರುವಂತೆ ತೂಕ ಸರಿಯಾಗಿದಿಯೇ..? ಚೀಲವನ್ನು ಮಷಿನಿನಿಂದ ಹೊಲೆಯಲಾಗಿದಿಯೇ..? ಎಂಬುದನ್ನು ಗಮನಿಸಬೇಕು.
- ಬಿತ್ತನೆ ಬೀಜದ ಉತ್ಪಾದಕರು ಹಾಗೂ ಮಾರಾಟಗಾರರ ವಿಳಾಸವನ್ನು ಗಮನಿಸಬೇಕು.
- ಬಿತ್ತನೆ ಬೀಜವು ಸಂಬಂದಪಟ್ಟ ಪ್ರಾಧಿಕಾರದಿಂದ ಪರೀಕ್ಷಿಸಲ್ಪಟ್ಟು ಗುಣಮಟ್ಟದ ಬಗ್ಗೆ ದೃಡೀಕರಿಸಲಾಗಿದೆಯೇ..? ದೃಡೀಕರಣದ ಟ್ಯಾಗ್’ಗಳನ್ನು ಲಗತ್ತಿಸಲಾಗಿದೆಯೆ..? ಎಂದು ಖಾತರಿಪಡಿಸಿಕೊಳ್ಳಿ.
- ಬಿತ್ತನೆಗೆ ಮುಂಚೆ ಬೀಜ ಮೊಳೆಯುವಿಕೆ ಪ್ರಮಾಣವನ್ನು ಪರೀಕ್ಷಿಸಿಕೊಳ್ಳಬೇಕು.
- ಬಿತ್ತನೆ ಬೀಜವನ್ನು ಕೀಟನಾಶಕಗಳಿಂದ ಉಪಚರಿಸಲಾಗಿದೆಯೆ..? ಎಂಬುದನ್ನು ಗಮನಿಸಿ.
- ಬಿತ್ತನೆ ಬೀಜದ ಚೀಲ, ಸ್ವಲ್ಪ ಪ್ರಮಾಣದ ಬಿತ್ತನೆ ಬೀಜ, ದೃಡೀಕರಣದ ಬಗ್ಗೆ ಲಗತ್ತಿಸಿರುವ ಟ್ಯಾಗುಗಳನ್ನು ಬೆಳೆ ಕಟಾವು ಆಗುವವರೆಗೆ ಸುರಕ್ಷಿತವಾಗಿ ಕಾಯ್ದಿಟ್ಟುಕೊಳ್ಳಬೇಕು.
- ನಮೂದಿಸಿರುವ ಉತ್ಪಾದನಾ ದಿನಾಂಕ ಮತ್ತು ವ್ಯಾಲಿಡಿಟಿ ಅವಧಿಯನ್ನು ಗಮನಿಸಬೇಕು.
- ಹಿಂದಿನ ಹಂಗಾಮಿನಲ್ಲಿ ಉತ್ತಮ ಇಳುವರಿ ನೀಡಿದ ವಿವಿಧ ತಳಿಗಳ ಬಿತ್ತನೆ ಬೀಜ ಖರೀದಿಸಬೇಕು.
- ಹವಾಮಾನದ ವೈಪರೀತ್ಯಗಳಿದ್ದಾಗ ತಳಿಗಳ ಕಾರ್ಯಕ್ಷಮತೆ ಕುರಿತು ಮಾಹಿತಿ ಹೊಂದಿರಬೇಕು.
- ಬಿತ್ತನೆ ಬೀಜ ಮಾರಾಟದ ಪ್ಯಾಕೇಟ್‌ಗಳ ಮೇಲೆ ನಮೂದಿಸಿದ ಗರಿಷ್ಠ ಮಾರಾಟ ಬೆಲೆ ಮಾತ್ರ ಸಂದಾಯಿಸಬೇಕು. ಹೆಚ್ಚಿನ ದರ ವಸೂಲಿ ಮಾಡಿದ್ದಲ್ಲಿ ತಕ್ಷಣ ಕೃಷಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬೇಕು.
Purchasing seeds is a big step towards growing a healthy crop. There are certain varieties seeds in the market. But planting poor seeds for crop losses to farmers. Before Buying From Seeds know Things things.