ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ದೇಶದ ಬೆನ್ನಲುಬು ಕೃಷಿ ಅಭಿವೃದ್ಧಿಗಾಗಿ ರೈತರಿಗೆ ಹಲವಾರು ಯೋಜನೆಗಳನ್ನು ಆಗಾಗ ಅನುಷ್ಠಾನಗೊಳಿಸುತ್ತಿರುತ್ತದೆ. ಈ ಯೋಜನೆಗಳ ಸಾಲಿನಲ್ಲಿ ಗಂಗಾಕಲ್ಯಾಣ ಯೋಜನೆ ಸಹ ಒಂದು. ಈ ಯೋಜನೆ ಅಡಿಯಲ್ಲಿ ರೈತರು ರೂ.4 ಲಕ್ವವರೆಗೂ ಸಹಾಯಧನ ಪಡೆಯಬಹುದಾಗಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ ಓದಿರಿ..
ಗಂಗಾ ಕಲ್ಯಾಣ ನೀರಾವರಿ ಯೋಜನೆಯ ಉದ್ದೇಶ ಏನು?
ಹಿಂದುಳಿದ ವರ್ಗಗಳ ಸಣ್ಣ ಮತ್ತು ಅತಿಸಣ್ಣ ರೈತರ ಜಮೀನುಗಳಿಗೆ ನಿರಾವರಿ ಸೌಲಭ್ಯ ಒದಗಿಸುವುದು ಈ ಯೋಜನೆಯ ಪ್ರಮುಖ ಉದ್ದೇಶ.
ಯಾರೆಲ್ಲಾ ಈ ಯೋಜನೆ ಸೌಲಭ್ಯ ಪಡೆಯಬಹುದು?
ಹಿಂದುಳಿದ ವರ್ಗಗಳಾದ ಪ್ರವರ್ಗ-1, 2ಎ, 3ಎ ಮತ್ತು 3ಬಿ ಸೇರಿದವರು, ಸಣ್ಣ ಮತ್ತು ಅತಿಸಣ್ಣ ರೈತರು ಗಂಗಾ ಕಲ್ಯಾಣ ಯೋಜನೆ ಸೌಲಭ್ಯ ಪಡೆಯಬಹುದಾಗಿದೆ.
ಗಂಗಾ ಕಲ್ಯಾಣ ಯೋಜನೆ ಸೌಲಭ್ಯಗಳ ಸಂಕ್ಷಿಪ್ತ ವಿವರ ಹಾಗೂ ಅರ್ಹತೆ ಈ ಕೆಳಗಿನಂತಿವೆ..
ವೈಯಕ್ತಿಕ ನೀರಾವರಿ ಕೊಳವೆ ಬಾವಿ ಯೋಜನೆ:
– ಉಡುಪಿ, ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಕನಿಷ್ಠ 1 ಎಕರೆ ಭೂಮಿ ಹೊಂದಿರಬೇಕು.
– ಇತರೆ ಜಿಲ್ಲೆಗಳಲ್ಲಿ ಒಂದೇ ಸ್ಥಳದಲ್ಲಿ ಹೊಂದಿಕೊಂಡಂತೆ ಇರುವ ಕನಿಷ್ಠ 2 ಎಕರೆ ಜಮೀನು ಇರಬೇಕು.
– ಈ ಯೋಜನೆ ಅಡಿಯಲ್ಲಿ ಘಟಕವೆಚ್ಚ ರೂ.2.50 ಲಕ್ಷ ಸಹಾಯಧನ ದೊರೆಯುತ್ತದೆ. ಇದರಲ್ಲಿ ರೂ.2.00 ಲಕ್ಷ ಸಹಾಯಧನ(ಸಬ್ಸಿಡಿ) ಕೊಳವೆ ಬಾವಿ ಕೊರೆಸಲು, ಪಂಪ್‌ಸೆಟ್ ಅಳವಡಿಕೆಗೆ, ಪೂರಕ ಸಾಮಾಗ್ರಿಗಳ ಸರಬರಾಜಿಗೆ ವೆಚ್ಚ ಭರಿಸಲಾಗುವುದು. ಮತ್ತು ವಾರ್ಷಿಕ ಶೇ.4 ಬಡ್ಡಿದರದಲ್ಲಿ ರೂ.50000 ಸಾಲ ದೊರೆಯುತ್ತದೆ.
– ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳಲ್ಲಿ ವೈಯಕ್ತಿಕ ಕೊಳವೆ ಬಾವಿಯ ಘಟಕ ವೆಚ್ಚ ರೂ.4.00 ಲಕ್ಷ ದೊರೆಯಲಿದೆ.
ಸಾಮೂಹಿಕ ನೀರಾವರಿ ಕೊಳವೆಬಾವಿ ಯೋಜನೆ:
– ಈ ಯೋಜನೆ ಅಡಿಯಲ್ಲಿ ಹಿಂದುಳಿದ ವರ್ಗಗಳಾದ ಪ್ರವರ್ಗ-1, 2ಎ, 3ಎ ಮತ್ತು 3ಬಿ ಗೆ ಸೇರಿದ 3 ಸಣ್ಣ ಮತ್ತು ಅತಿಸಣ್ಣ ರೈತರು ಹೊಂದಿರುವ 8 ಎಕರೆ ಪ್ರದೇಶ ಅಥವಾ ಅದಕ್ಕಿಂತ ಹೆಚ್ಚಿನ ಜಮೀನಿಗೆ ಸಾಮೂಹಿಕವಾಗಿ ಕೊಳವೆಬಾವಿ ನೀರಾವರಿ ಸೌಲಭ್ಯ ಒದಗಿಸಲಾಗುವುದು.
– ಈ ಯೋಜನೆ ಅಡಿಯಲ್ಲಿ 8-15 ಎಕರೆ ಪ್ರದೇಶಕ್ಕೆ 2 ಕೊಳವೆಬಾವಿ ಸೌಲಭ್ಯಕ್ಕೆ ರೂ.4 ಲಕ್ಷ ವರೆಗೆ ಸಹಾಯಧನ ದೊರೆಯುತ್ತದೆ.
– ಈ ಯೋಜನೆ ಅಡಿಯಲ್ಲಿ 15 ಎಕರೆಗಿಂತ ಹೆಚ್ಚು ಭೂಮಿಗೆ ಒಳಪಡುವ ಘಟಕಗಳಿಗೆ ರೂ.6 ಲಕ್ಷವರೆಗೆ ಸಹಾಯಧನ ದೊರೆಯಲಿದೆ. ಹಾಗೂ ಇದು ಸಂಪೂರ್ನ ಅನುದಾನವಾಗಿರುತ್ತದೆ.
ಈ ಯೋಜನೆ ಸೌಲಭ್ಯ ಪಡೆಯಲು ರೈತರು ತಮ್ಮ ತಾಲೂಕು ಕೇಂದ್ರಗಳ ಅಂತರ್ಜಲ ನಿರ್ವಹಣಾ ಕಛೇರಿ(ಇದ್ದಲ್ಲಿ) ಇಂದ ಅನುಮತಿ ಪಡೆದು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಛೇರಿಗಳಲ್ಲಿ ಸೌಲಭ್ಯಕ್ಕಾಗಿ ಅರ್ಜಿ ಪ್ರಕ್ರಿಯೆ ಮುಂದುವರೆಸಬೇಕು.
ಈ ಬಗ್ಗೆ ಇನ್ನಷ್ಟು ಹೆಚ್ಚು ಮಾಹಿತಿ ತಿಳಿಯಲು ಕ್ಲಿಕ್ ಮಾಡಿ