ಪ್ರಧಾನಿ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾರಿಗೊಳಿಸಿರುವ ಪ್ರಧಾನಮಂತ್ರಿ ಕೃಷಿ ಸಮ್ಮಾನ್(PMKISAN) ಯೋಜನೆಗೆ ರೈತರು ಈಗಾಗಲೇ ತಮ್ಮ ಜಮೀನು ಸಂಬಂಧಪಟ್ಟ ದಾಖಲೆಗಳನ್ನು ವರ್ಷಕ್ಕೆ ರೂ.6000 ಪಡೆಯಲು ಅರ್ಜಿ ನೀಡಿರಬಹುದು. ಈ ಅರ್ಜಿ ಸಂಪೂರ್ಣವಾಗಿ ಯೋಜನೆಗೆ ಆಯ್ಕೆ ಆಗಿದೆಯೇ, ಅರ್ಜಿ ತಲುಪಿದೆಯೇ ಎಂದು ಅರ್ಜಿ ಸಲ್ಲಿಸಿರುವ ರೈತರು ತಿಳಿಯಬಹುದಾಗಿದೆ.
ರೈತರು ಅಗತ್ಯ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಿದ್ದರು ಕೆಲವೊಂದು ಸಣ್ಣ ತಪ್ಪುಗಳಿಂದಾಗಿ ಅಥವಾ ಆಧಾರ್, ಬ್ಯಾಂಕ್ ಖಾತೆ ನಂಬರ್, ಜಮೀನು ಖಾತೆ ನಂಬರ್ ನೀಡಿರುವ ದಾಖಲೆಗಳಿಗೆ, ಅರ್ಜಿದಾರರ ಹೆಸರಿಗೆ ಹೋಲಿಕೆ ಆಗದಿದ್ದಲ್ಲಿ ಅರ್ಜಿ ರಿಜೆಕ್ಟ್ ಆಗುವ ಅವಕಾಶ ಇರುತ್ತದೆ. ಆದ್ದರಿಂದ ರೈತರು ವರ್ಷಕ್ಕೆ ರೂ.6000 ಸಹಾಯಧನ ಪಡೆಯುವ ಪ್ರಧಾನಮಂತ್ರಿ ಕೃಷಿ ಸಮ್ಮಾನ್(PMKISAN) ಯೋಜನೆಗೆ ಅರ್ಜಿ ಸಲ್ಲಿಕೆ ಆಗಿದೆಯೇ ಅಥವಾ ಇಲ್ಲವೋ ಎಂಬುದನ್ನು ಪರಿಶೀಲಿಸಬಹುದಾಗಿದೆ.
ಪ್ರಧಾನಮಂತ್ರಿ ಕೃಷಿ ಸಮ್ಮಾನ್(PMKISAN) ಯೋಜನೆಗೆ ರೈತರು ಸಲ್ಲಿಸಿರುವ ಅರ್ಜಿಯ ಸ್ಟೇಟಸ್ ಚೆಕ್ ಮಾಡಲು ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. ನಂತರ ಓಪನ್ ಆದ ವೆಬ್‌ಸೈಟ್‌ನಲ್ಲಿ Aadhaar ಎಂಬುದರ ಮೇಲೆ ಕ್ಲಿಕ್ ಮಾಡಿ ಆಧಾರ್ ನಂಬರ್ ನೀಡಿ Search ಎಂಬುದರ ಮೇಲೆ ಕ್ಲಿಕ್ ಮಾಡಿ. ನಂತರ ನಿಮ್ಮ ಅರ್ಜಿ ಸ್ಟೇಟಸ್ ಓಪನ್ ಆಗುವ ಪೇಜ್ ಮೇಲೆ ಪ್ರದರ್ಶನವಾಗುತ್ತವೆ.
ಪ್ರಧಾನಮಂತ್ರಿ ಕೃಷಿ ಸಮ್ಮಾನ್(PMKISAN) ಯೋಜನೆ ಅರ್ಜಿ ಸ್ಟೇಟಸ್ ಚೆಕ್ ಮಾಡಲು ಕ್ಲಿಕ್ ಮಾಡಿ
ಪ್ರಧಾನಮಂತ್ರಿ ಕೃಷಿ ಸಮ್ಮಾನ್(PMKISAN) ಯೋಜನೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು – ಕ್ಲಿಕ್ ಮಾಡಿ
PM-KISAN ಯೋಜನೆಯ ಹೊಸ ಅಪ್‌ಡೇಟ್: ಗ್ರಾಮ ಪಂಚಾಯ್ತಿಗಳಲ್ಲೇ ಅರ್ಜಿ ಸಲ್ಲಿಸಬಹುದು..