Home » ರಸಗೊಬ್ಬರ ಖರೀದಿರಸುವ ಮುನ್ನ ರೈತರು ಗಮನಿಸಬೇಕಾದ ಅಂಶಗಳು

ರಸಗೊಬ್ಬರ ಖರೀದಿರಸುವ ಮುನ್ನ ರೈತರು ಗಮನಿಸಬೇಕಾದ ಅಂಶಗಳು

by manager manager

ಬಿತ್ತಿದ ಬೆಳೆಯಿಂದ ಲಾಭದ ನಿರೀಕ್ಷೆ ಪಡುವ ರೈತರಿಗೆ ಕಳಪೆ ಬಿತ್ತನೆ ಬೀಜಗಳು ಒಂದು ಸಮಸ್ಯೆಯಾದರೆ ಕಳಪೆ ರಸಗೊಬ್ಬರ(fertilizer)ವೂ ಮತ್ತೊಂದು ಸಮಸ್ಯೆಯಾಗಿದೆ. ಅಧಿಕ ಇಳುವರಿ ಪಡೆಯುವುದಕ್ಕಾಗಿ ರೈತರುಗಳು ರಸಗೊಬ್ಬರವನ್ನು ತಮ್ಮ ಹೊಲ-ಗದ್ದೆಗಳಿಗೆ ಸಿಂಪಡಿಸಿರುತ್ತಾರೆ. ಆದರೆ ರಸಗೊಬ್ಬರದ ಕಡಿಮೆ ಗುಣಮಟ್ಟದಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಪಸಲು ಬಾರದೆ ರೈತರು ನಷ್ಟ ಅನುಭವಿಸುತ್ತಿದ್ದಾರೆ.

ಕಳಪೆ ದರ್ಜೆ ಮತ್ತು ಕಲಬೆರಕೆ ರಸಗೊಬ್ಬರ ಮಾರಾಟದಿಂದ ರೈತರಿಗೆ ವಂಚನೆಯಾಗಿ ಹೆಚ್ಚಿನ ನಷ್ಟು ಉಂಟಾಗುವ ಸಂಭವವುಂಟು. ಇಂತಹ ರಸಗೊಬ್ಬರಗಳ ಬಳಕೆಯಿಂದ ರೈತರಿಗೆ ಹಲವಾರು ತೊಂದರೆಗಳಾಗುತ್ತವೆ. ನಿರೀಕ್ಷಿತ ಬೆಳೆಯ ಇಳುವರಿ ಬರುವುದಿಲ್ಲ ಹಾಗೂ ನಷ್ಟವಾಗುತ್ತದೆ. ಇದರಿಂದ ರಸಗೊಬ್ಬರದ ಮೇಲೆ ವಿಶ್ವಾಸ ಕಳೆದುಕೊಳ್ಳಬಹುದು. ಹೀಗಾಗಿ ರಸಗೊಬ್ಬರ ಖರೀದಿರಸುವ ಮುನ್ನ ಈ ಕೆಳಕಂಡ ಅಂಶಗಳನ್ನು ಅನುಸರಿಸಿದರೆ ಮುಂದಾಗುವ ನಷ್ಟವನ್ನು ತಡೆಗಟ್ಟಬಹುದು.

Things to know before buying Fertilizers Tips for Former's

ರೈತರು ಗಮನಿಸಬೇಕಾದ ಅಂಶಗಳು:

  • ರಸಗೊಬ್ಬರಗಳನ್ನು ಯಾವಾಗಲೂ ಅಧಿಕೃತ ಮಾರಾಟಗಾರರಿಂದಲೇ ಕೊಂಡುಕೊಳ್ಳಿ.
  • ರಸಗೊಬ್ಬರದ ಚೀಲದ ಬಾಯಿಯು ಯಂತ್ರದಿಂದ ಹೊಲಿದಿರಬೇಕು. ಕೈಯಿಂದ ಹೊಲಿದಿದ್ದರೆ ಅದಕ್ಕೆ ಸೀಸದಿಂದ ಮೊಹರನ್ನು ಹಾಕಿರಬೇಕು.
  • ರಸಗೊಬ್ಬರದ ಚೀಲವು ಸರಿಯಾದ ತೂಕವಿರಬೇಕು. ಅನುಮಾನವಿದ್ದಲ್ಲಿ ಚೀಲವನ್ನು ತೂಕ ಮಾಡಿಸಿ ತೆಗೆದುಕೊಳ್ಳಬೇಕು.
  • ರಸಗೊಬ್ಬರದ ಚೀಲದ ಮೇಲೆ ನಮೂದಿಸಿರುವ ಗರಿಷ್ಠ ಮಾರಾಟ ಬೆಲೆಗಿಂತ ಹೆಚ್ಚಿನ ಬೆಲೆ ನೋಡಬಾರದು.

Things to know before buying Fertilizers Tips for Former's

  • ರಸಗೊಬ್ಬರದ ಚೀಲದ ಮೇಲೆ ಈ ಕೆಳಕಂಡ ವಿವರಗಳು ಮುದ್ರಿತವಾಗಿರಬೇಕು.
  1. ರಸಗೊಬ್ಬರವೆಂದು ಮುದ್ರಿತವಾಗಿರಬೇಕು.
  2. ರಸಗೊಬ್ಬರದ ಹೆಸರು.
  3. ರಸಗೊಬ್ಬರದ ಬ್ರ್ಯಾಂಡ್
  4. ರಸಗೊಬ್ಬರ ತಯಾರಕರ ಹೆಸರು ಮತ್ತು ವಿಳಾಸ
  5. ರಸಗೊಬ್ಬರದಲ್ಲಿರುವ ಕನಿಷ್ಠ ಶೇಕಡ ಪೋಷಕಾಂಶಗಳ ವಿವರ
  6. ಗರಿಷ್ಠ ಮತ್ತು ನಿವ್ವಳ ತೂಕ(ಪ್ಯಾಕ್ ಮಾಡಿದಾಗ)
  7. ಗರಿಷ್ಠ ಮಾರಾಟ ಬೆಲೆ(ತೆರಿಗೆಗಳನ್ನು ಸೇರಿಸಿ)
  8. ತಯಾರಿಸಿದ ತಿಂಗಳು ಮತ್ತು ವರ್ಷ.
  • ಮಿಶ್ರಣ, ವಿಶೇಷ ಮಿಶ್ರಣ ರಸಗೊಬ್ಬರಗಳು, ಲಘು ಪೋಷಕಾಂಶಗಳು ಮತ್ತು ಅವುಗಳ ಮಿಶ್ರಣ ಮತ್ತು ಸೂಪರ್ ಫಾಸ್ಪೇಟ್ ಚೀಲ/ಡಬ್ಬಿಗಳ ಮೇಲೆ ಬ್ಯಾಚ್ ಸಂಖ್ಯೆ ಮತ್ತು ತಯಾರಿಕಾ ಪರವಾನಿಗೆ ಪತ್ರದ ಸಂಖ್ಯೆ ನಮೂದಿಸಿರಬೇಕು.(Certification of registration)
  • ರಸಗೊಬ್ಬರವನ್ನು ಕೊಂಡದ್ದಕ್ಕೆ ರಸೀತಿಯನ್ನು ಪಡೆಯಬೇಕು. ರಸೀತಿಯಲ್ಲಿ ಕೊಂಡುಕೊಂಡ ರಸಗೊಬ್ಬರಗಳ ವಿವರಗಳನ್ನು ತುಂಬಿದ್ದು ರೈತರ ಸಹಿ ಮತ್ತು ಮಾರಾಟಗಾರ ಸಹಿ ಇರಬೇಕು.
  • ಕೇಂದ್ರ ಸರ್ಕಾರ ನೀಡುವ ಸಹಾಯಧನದ ಮೊತ್ತವನ್ನು(ಅನ್ವಯವಾಗುವ ಕಡೆ) ಕಡ್ಡಾಯವಾಗಿ ನಮೂದಿಸಬೇಕು.

Tips for Former’s buying the right one fertilizer. There are many varieties of fertilizer available in Market. it’s good to gain plants. But you should know some basic knowledge about fertilizers before you go shopping.

You may also like