Home » ‘ಸೌರಶಕ್ತಿ ಆಧಾರಿತ ನೀರಾವರಿ ಪಂಪ್‌ಸೆಟ್ ಯೋಜನೆ’ ಸೌಲಭ್ಯ ಪಡೆಯುವುದು ಹೇಗೆ?

‘ಸೌರಶಕ್ತಿ ಆಧಾರಿತ ನೀರಾವರಿ ಪಂಪ್‌ಸೆಟ್ ಯೋಜನೆ’ ಸೌಲಭ್ಯ ಪಡೆಯುವುದು ಹೇಗೆ?

by manager manager

ಪ್ರಸ್ತುತ ರೈತರು ತಮ್ಮ ಪಂಪ್‌ಸೆಟ್‌ಗಳಿಂದ ಬೆಳೆಗಳಿಗೆ ನೀರು ಸೌಲಭ್ಯ ಪಡೆಯಬೇಕಾದರೆ ಕೇವಲ ರಾತ್ರಿ 3 ಗಂಟೆ ವೇಳೆ ಮತ್ತು ಹಗಲು 3 ಗಂಟೆ ವೇಳೆಯ ಕರೆಂಟ್‌ ಅನ್ನು ಮಾತ್ರ ನಂಬಿಕೊಂಡಿರಬೇಕು. ಆದರೆ ಈಗ ಸರ್ಕಾರದ ಸೌರಶಕ್ತಿ ಆಧಾರಿತ ಜಾಲಮುಕ್ತ ನೀರಾವರಿ ಪಂಪ್‌ಸೆಟ್‌ ಅಳವಡಿಸುವ ಯೋಜನೆ ಸೌಲಭ್ಯದಿಂದ ಪ್ರಸ್ತುತಕ್ಕಿಂತ ಹೆಚ್ಚು ವೇಳೆ ಪಂಪ್‌ಸೆಟ್‌ ನೀರಿನ ಸೌಲಭ್ಯ ಪಡೆಯಬಹುದಾಗಿದೆ.

ರೈತರು ಸಾಂಪ್ರದಾಯಿಕವಾಗಿ ಕೃಷಿ ಪಂಪ್‌ಸೆಟ್‌ಗಳಿಗೆ ಬಳಸುವ ವಿದ್ಯುತ್ ಜಾಲದ ಬದಲು ಸೌರ ವಿದ್ಯುತ್ ಅನ್ನು ಈಗ ಸರ್ಕಾರದ ಸಹಯೋಗದಿಂದ ಬಳಸಬಹುದಾಗಿದೆ.

ಕೇಂದ್ರ ಸರ್ಕಾರದ M.N.R.E ಸಹಯೋಗದೊಂದಿಗೆ ರಾಜ್ಯ ಸರ್ಕಾರವು ಸೌರಶಕ್ತಿ ಆಧಾರಿತ ಜಾಲಮುಕ್ತ ನೀರಾವರಿ ಪಂಪ್‌ಸೆಟ್‌ಗಳನ್ನು ಅಳವಡಿಸುವ ಯೋಜನೆಯನ್ನು K.R.E.D.L ಮುಖಾಂತರ ರಾಜ್ಯ ವ್ಯಾಪ್ತಿಯಲ್ಲಿ ಎಲ್ಲಾ ವಿದ್ಯುತ್‌ ಸರಬರಾಜು ಕಂಪನಿಗಳ ಸಹಯೋಗದೊಂದಿಗೆ ಈಗಾಗಲೇ ಕೈಗೆತ್ತಿಕೊಳ್ಳಲಾಗಿರುತ್ತದೆ. ಸದರಿ ಯೋಜನೆಯ ಲಾಭವನ್ನು ಆಸಕ್ತ ರೈತರು ಪಡೆಯಬಹುದು.

– ಸಾಮಾನ್ಯ ವರ್ಗದಲ್ಲಿ ಬಾಕಿ ಉಳಿದಿರುವ ಒಟ್ಟು 303 ಸಂಖ್ಯೆಗಳ ಜಾಲಮುಕ್ತ ನೀರಾವರಿ ಸೌರ ಪಂಪ್‌ಸೆಟ್‌ಗಳನ್ನು ರೈತರಿಗೆ ಅಳವಡಿಸಿಕೊಡಲು ಆನ್‌ಲೈನ್ ಮುಖಾಂತರ ‘ಮೊದಲು ಬಂದವರಿಗೆ ಮೊದಲ ಆದ್ಯತೆಯ’ ಮೇರೆಗೆ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನು ಆನ್‌ಲೈನ್ ಮೂಲಕ ಸ್ವೀಕರಿಸಲಾಗುವುದು.

– ವರ್ಗವಾರು ನೀಡಲಾಗಿರುವ ಉದ್ದೇಶಿತ ಗರಿಷ್ಠ ಅರ್ಜಿಗಳ ಸಂಖ್ಯೆ ತಲುಪಿದ ನಂತರ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮುಕ್ತಾಯಗೊಳ್ಳುವುದು.

– ರೈತರಿಗೆ 5 HP ಸಾಮರ್ಥ್ಯದ ಸಬ್‌ಮರ್ಸಿಬಲ್ ಪಂಪ್‌ಸೆಟ್ ಮತ್ತು ಸೌರಘಟಕವನ್ನು ಒದಗಿಸಲಾಗುವುದು.

– ನೀರೆತ್ತುವ ಒಟ್ಟಾರೆ ಆಳವು Dynamic Head 230 ಅಡಿಗೆ ಸೀಮಿತವಾಗಿರುತ್ತದೆ.

– ಈ ಸೌಲಭ್ಯವನ್ನು ಹೊಸ ಕೊಳವೆ ಬಾವಿಗಳಿಗೆ ಹಾಗೂ ಹಾಲಿ ವಿದ್ಯುತ್ ಸಂಪರ್ಕದಲ್ಲಿರುವ ರೈತರ ಕೃಷಿ ಪಂಪ್‌ಸೆಟ್‌ಗಳಿಗೂ ಸಹ ಈ ಯೋಜನೆಯು ಅನ್ವಯಿಸುತ್ತದೆ.

– ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಇತರೆ ಮಾಹಿತಿ, ಸೂಚನೆಗಳನ್ನು ತಿಳಿಯಲು – ಕ್ಲಿಕ್ ಮಾಡಿ

– ಆನ್‌ಲೈನ್‌ ಅರ್ಜಿ ಸಲ್ಲಿಸಲು – ಕ್ಲಿಕ್ ಮಾಡಿ

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಒದಗಿಸಬೇಕಾದ ಅಗತ್ಯ ಮಾಹಿತಿಗಳು

– ಭೂ ಮಾಲಿಕತ್ವದ ಫಲಾನುಭವಿಯ ಹೆಸರು

– RTC ನೀಡುವುದು

– ವಾಸಸ್ವಳ ಮತ್ತು ವಿಳಾಸ

– ಆಧಾರ್ ಸಂಖ್ಯೆ

– ಮೊಬೈಲ್ ನಂಬರ್

– ಜಾತಿ ಪ್ರಮಾಣ ಪತ್ರ

– ಫಲಾನುಭವಿಯ ವಂತಿಗೆಯ ವಿವರ(ಡಿಡಿ ಸಂಖ್ಯೆ ಹಾಗೂ ದಿನಾಂಕ- ಡಿಡಿಯನ್ನು MD KREDL ರವರ ಹೆಸರಿಗೆ ಪಡೆಯುವುದು)

– RTGS ವಿವರ : UTR ಸಂಖ್ಯೆ ಅಥವಾ ಟ್ರಾನ್ಸಾಕ್ಷನ್ ಐಡಿ (ಡಿ.ಡಿ ಮೊತ್ತ: ಸಾಮಾನ್ಯ ವರ್ಗಕ್ಕೆ ರೂ.1 ಲಕ್ಷ)

– ಅರ್ಜಿ ದಾರರ ಬ್ಯಾಂಕ್‌ ಖಾತೆಯ ವಿವರ

ಆನ್‌ಲೈನ್ ಅರ್ಜಿ ಸಲ್ಲಿಸಿದ ನಂತರದ ಪ್ರಕ್ರಿಯೆ

– ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದ ನಂತರ ಸ್ವೀಕೃತಿ ಪ್ರತಿಯನ್ನು (Acknowledgement copy) ಮುದ್ರಿಸಿಕೊಂಡು, ಪ್ರತಿಯಲ್ಲಿ ಸಹಿ ಮಾಡಿ ಇತ್ತೀಚಿನ ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರವನ್ನು ನಿಗಧಿತ ಸ್ಥಳದಲ್ಲಿ ಅಂಟಿಸಿ ಸಹಿಮಾಡುವುದು. ಜೊತೆಗೆ ಪ್ರತ್ಯೇಕ ಭಾವಚಿತ್ರ ಸಲ್ಲಿಸುವುದು.

– ಮೂಲ ಡಿಡಿ, ಆಧಾರ್ ಕಾರ್ಡ್‌ ಪ್ರತಿ, ಆರ್‌ಟಿಸಿ ಪ್ರತಿ, ಮತ್ತು ಜಲ ಇಳುವರಿ ಪ್ರಮಾಣ ಪತ್ರ. ಈ ಎಲ್ಲಾ ದಾಖಲೆಗಳ ಒಂದು ಸೆಟ್‌ ಅನ್ನು ಸ್ವಯಂ ದೃಢೀಕರಿಸಿ ಹಾರ್ಡ್‌ ಪ್ರತಿಯನ್ನು ಪರಿಶೀಲನೆಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ದಿನಾಂಕದಿಂದ ಐದು ದಿನಗಳೊಳಗಾಗಿ ಸಂಬಂಧಿಸಿದ ವಿದ್ಯುತ್ ಸರಬರಾಜು ಕಂಪನಿಯ ಉಪ-ವಿಭಾಗೀಯ ಕಛೇರಿಗಳಿಗೆ ಸಲ್ಲಿಸಿ ಸ್ವೀಕೃತಿ ಪಡೆದುಕೊಳ್ಳುವುದು.

– ಹೆಚ್ಚಿನ ಮಾಹಿತಿಗಾಗಿ ಕಛೇರಿ ವೇಳೆಯಲ್ಲಿ ಸಂಪರ್ಕಿಸಲು ದೂರವಾಣಿ ಸಂಖ್ಯೆ – 080-22202100

You may also like