Home » ತುಮಕೂರು ಜಿಲ್ಲಾ ಕೋರ್ಟ್‌ನಲ್ಲಿ ವಿವಿಧ ಹುದ್ದೆಗಳ ನೇಮಕ

ತುಮಕೂರು ಜಿಲ್ಲಾ ಕೋರ್ಟ್‌ನಲ್ಲಿ ವಿವಿಧ ಹುದ್ದೆಗಳ ನೇಮಕ

by manager manager
Tumakuru District Court recruitment 2019 notification

ತುಮಕೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಘಟಕದ ನ್ಯಾಯಾಲಯಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ(Tumakuru district court recruitment 2019). ಈ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಈ ಕೆಳಗಿನಂತಿದೆ.

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 21-01-2019

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20-02-2019

ಒಟ್ಟು ಹುದ್ದೆಗಳ ಸಂಖ್ಯೆ : 49

ಹುದ್ದೆಯ ಹೆಸರು : ಶೀಘ್ರಲಿಪಿಗಾರ

ಹುದ್ದೆಗಳ ಸಂಖ್ಯೆ : 14

ವಿದ್ಯಾರ್ಹತೆ : ಎಸ್‌ಎಸ್‌ಎಲ್‌ಸಿ/ತತ್ಸಮಾನ ಪರೀಕ್ಷೆ ಉತ್ತೀರ್ಣ ಜೊತೆಗೆ ಕನ್ನಡ ಮತ್ತು ಇಂಗ್ಲೀಷ್ ಹಿರಿಯ ಶ್ರೇಣಿ ಬೆರಳಚ್ಚು ಮತ್ತು ಶೀಘ್ರಲಿಪಿ/ತತ್ಸಮಾನ ಪರೀಕ್ಷೆ ಉತ್ತೀರ್ಣ

ಹುದ್ದೆಯ ಹೆಸರು : ಬೆರಳಚ್ಚುಗಾರ(ಬ್ಯಾಕ್‌ಲಾಗ್)

ಹುದ್ದೆಗಳ ಸಂಖ್ಯೆ : 06

ವಿದ್ತಾರ್ಹತೆ : ಎಸ್‌ಎಸ್‌ಎಲ್‌ಸಿ/ತತ್ಸಮಾನ ಪರೀಕ್ಷೆ ಉತ್ತೀರ್ಣ ಜೊತೆಗೆ ಕನ್ನಡ ಮತ್ತು ಇಂಗ್ಲೀಷ್ ಹಿರಿಯ ಶ್ರೇಣಿ ಬೆರಳಚ್ಚು ಮತ್ತು ತತ್ಸಮಾನ ಪರೀಕ್ಷೆ ಉತ್ತೀರ್ಣ

ಹುದ್ದೆಯ ಹೆಸರು : ಬೆರಳಚ್ಚು ನಕಲುಗಾರ

ಹುದ್ದೆಗಳ ಸಂಖ್ಯೆ : 04

ವಿದ್ತಾರ್ಹತೆ : ಎಸ್‌ಎಸ್‌ಎಲ್‌ಸಿ/ತತ್ಸಮಾನ ಪರೀಕ್ಷೆ ಉತ್ತೀರ್ಣ ಜೊತೆಗೆ ಕನ್ನಡ ಮತ್ತು ಇಂಗ್ಲೀಷ್ ಕಿರಿಯ ಶ್ರೇಣಿ ಬೆರಳಚ್ಚು ಪರೀಕ್ಷೆ / ತತ್ಸಮಾನ ಪರೀಕ್ಷೆ ಉತ್ತೀರ್ಣ

ಹುದ್ದೆಯ ಹೆಸರು : ಜಾರಿಪೇದೆ

ಹುದ್ದೆಗಳ ಸಂಖ್ಯೆ : 16

ವಿದ್ತಾರ್ಹತೆ : ಎಸ್‌ಎಸ್‌ಎಲ್‌ಸಿ/ತತ್ಸಮಾನ ಪರೀಕ್ಷೆ ಉತ್ತೀರ್ಣ. ಜೊತೆಗೆ ಕನ್ನಡ ಓದಲು, ಬರೆಯಲು ಬರಬೇಕು. ಲಘು ವಾಹನ ಚಾಲನಾ ಪರವಾನಗಿ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.

ಹುದ್ದೆಯ ಹೆಸರು : ಸೇವಕ

ಹುದ್ದೆಗಳ ಸಂಖ್ಯೆ : 09

ವಿದ್ತಾರ್ಹತೆ : 7ನೇ ತರಗತಿ/ತತ್ಸಮಾನ ಉತ್ತೀರ್ಣ. ಕನ್ನಡ ಓದಲು ಮತ್ತು ಬರೆಯಲು ಬರೆಬೇಕು.

ಅರ್ಜಿ ಶುಲ್ಕ ಎಷ್ಟು?

ಸಾಮಾನ್ಯ ವರ್ಗಗಳ ಅಭ್ಯರ್ಥಿಗಳಿಗೆ : ರೂ 200 (ಜಾರಿ ಪೇದೆ, ಸೇವಕ ಹುದ್ದೆಗಳಿಗೆ ರೂ.100)

ಪ್ರವರ್ಗ 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ : ರೂ.200 (ಜಾರಿ ಪೇದೆ, ಸೇವಕ ಹುದ್ದೆಗಳಿಗೆ ರೂ.100)

ಮಾಜಿ ಸೈನಿಕ ಅಭ್ಯರ್ಥಿಗಳಿಗೆ : ರೂ.100 (ಜಾರಿ ಪೇದೆ, ಸೇವಕ ಹುದ್ದೆಗಳಿಗೆ ರೂ.50)

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ1/ : ರೂ 100 (ಜಾರಿ ಪೇದೆ, ಸೇವಕ ಹುದ್ದೆಗಳಿಗೆ ರೂ.50)

ಶುಲ್ಕ ಪಾವತಿಸುವ ವಿಧಾನ – ಆನ್‌ಲೈನ್ ಪೇಮೆಂಟ್ ಮಾಡಬಹುದು ಅಥವಾ ನ್ಯಾಯಾಲಯದ ಅಧಿಕೃತ ವೆಬ್‌ಸೈಟ್‌ನಲ್ಲಿನ ಚಲನ್‌ ಡೌನ್‌ಲೋಡ್ ಮಾಡಿಕೊಂಡು ಯಾವುದಾದರೂ SBI ಬ್ಯಾಂಕ್‌ನಲ್ಲಿ ಶುಲ್ಕ ಪಾವತಿಸಬಹುದು.

ವಯೋಮಿತಿ

ಅರ್ಜಿಸುವ ಕೊನೆಯ ದಿನಾಂಕದೊಳಗೆ ಕನಿಷ್ಟ 18 ವರ್ಷ ಪೂರೈಸಿರಬೇಕು. ಗರಿಷ್ಠ ಮೀರಿರಬಾರದ ವಯೋಮಿತಿ ಈ ಕೆಳಗಿನಂತಿದೆ.

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ1/: 40 ವರ್ಷ

ಪ್ರವರ್ಗ 2ಎ/ಬಿ/3ಎ/3ಬಿ : 38 ವರ್ಷ

ಸಾಮಾನ್ಯ ವರ್ಗ ಗರಿಷ್ಠ : 35 ವರ್ಷ

ಮಾಜಿ ಸೈನಿಕ ಅಭ್ಯರ್ಥಿಗಳು, ಸರ್ಕಾರಿ ಸೇವೆಯಲ್ಲಿರುವವರು, ವಿಧವೆಯರು, ಅಂಗವಿಕಲ ಅಭ್ಯರ್ಥಿಗಳಿಗೆ ನಿಯಮಗಳ ಅನುಸಾರ ವಯೋಸಡಿಲಿಕೆ ನೀಡಲಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿಗಳನ್ನು ಆನ್‌ಲೈನ್ ಮೂಲಕವೇ ಭರ್ತಿ ಮಾಡಿಬೇಕು. ಅರ್ಜಿ ಸಲ್ಲಿಸಲು ತುಮಕೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವೆಬ್‌ಸೈಟ್ ನಲ್ಲಿ ಅರ್ಜಿ ಸಲ್ಲಿಸುವ ಲಿಂಕ್‌ ಕ್ಲಿಕ್ ಮಾಡಿ ವಿವರಗಳನ್ನು ಭರ್ತಿ ಮಾಡಬೇಕು.

– ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ

ಮಂಡ್ಯ ಪ್ರಧಾನ ಜಿಲ್ಲಾ ನ್ಯಾಯಾಧೀಶರ ಕಛೇರಿಯಲ್ಲಿ ವಿವಿಧ ಹುದ್ದೆ: ಅರ್ಜಿ ಆಹ್ವಾನ

Tumakuru district court has invited application for the various post from eligible candidates. This recruitment for total 49 posts.

You may also like