Home » ಆದಾಯ ತೆರಿಗೆ ಸಂಸ್ಥೆಯಲ್ಲಿ ಉದ್ಯೋಗ: ವೇತನ ರೂ.34,000 ವರೆಗೆ, ಡಿಗ್ರಿ ವಿದ್ಯಾರ್ಹತೆ

ಆದಾಯ ತೆರಿಗೆ ಸಂಸ್ಥೆಯಲ್ಲಿ ಉದ್ಯೋಗ: ವೇತನ ರೂ.34,000 ವರೆಗೆ, ಡಿಗ್ರಿ ವಿದ್ಯಾರ್ಹತೆ

by manager manager

ಭಾರತ ಸರ್ಕಾರ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಆದಾಯ ತೆರಿಗೆ ಇಲಾಖೆಯಲ್ಲಿ ಈ ಕೆಳಗಿನ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಸೆಪ್ಟೆಂಬರ್ 16 ರೊಳಗೆ ಅರ್ಜಿ ಸಲ್ಲಿಸಬೇಕು.

ಉದ್ಯೋಗ ಸಂಸ್ಥೆ : ಆದಾಯ ತೆರಿಗೆ ಸಂಸ್ಥೆ
ಹುದ್ದೆಗಳ ಹೆಸರು : ಟ್ಯಾಕ್ಸ್‌ ಅಸಿಸ್ಟಂಟ್, ಇನ್ಸ್‌ಪೆಕ್ಟರ್ ಆಫ್‌ ಇನ್‌ಕಮ್‌ ಟ್ಯಾಕ್ಸ್‌
ವಿದ್ಯಾರ್ಹತೆ : ಯಾವುದೇ ಪದವಿ ಪಾಸ್ ಜತೆಗೆ, ನಿಗಧಿತ ಕ್ರೀಡಾ ಸಾಧನೆ ಮಾಡಿರಬೇಕು.

ಅಪ್ಲಿಕೇಶನ್ ಸಲ್ಲಿಸಲು ಆರಂಭಿಕ ದಿನಾಂಕ : 03-09-2022
ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ: 16-09-2022
ಟ್ಯಾಕ್ಸ್‌ ಅಸಿಸ್ಟಂಟ್‌ಗೆ ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 27 ವರ್ಷ ವಯಸ್ಸು ಮೀರಿರಬಾರದು.
ಇನ್ಸ್‌ಪೆಕ್ಟರ್ ಆಫ್‌ ಇನ್‌ಕಮ್‌ ಟ್ಯಾಕ್ಸ್‌ ಹುದ್ದೆಗೆ ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು.
ಟ್ಯಾಕ್ಸ್‌ ಅಸಿಸ್ಟಂಟ್ ವೇತನ ರೂ.5200-20200.
ಇನ್ಸ್‌ಪೆಕ್ಟರ್ ಆಫ್‌ ಇನ್‌ಕಮ್‌ ಟ್ಯಾಕ್ಸ್ ವೇತನ 9300-34800.

ಆಸಕ್ತರು ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ವಿಳಾಸ – Additional /Joint Commissioner of Income Tax (Hqrs & TPS), O/O the Pr. ‘ Chief Commissioner of Income Tax, NER, 1st floor, Aayakarbhawan, Christian Basti, G.S Road, Guwahati, Assam -781005’ ಕ್ಕೆ ಅಂಚೆ ಅಥವಾ ಸ್ಪೀಡ್ ಪೋಸ್ಟ್‌ ಮೂಲಕ ಸಲ್ಲಿಸಬೇಕು.

ಹುದ್ದೆಗಳ ನೋಟಿಫಿಕೇಶನ್‌ ಅನ್ನು ಎಂಪ್ಲಾಯ್‌ಮೆಂಟ್‌ ನ್ಯೂಸ್‌ಪೇಪರ್‌ ದಿನಾಂಕ 03-09-2022 ರಲ್ಲಿ ಚೆಕ್‌ ಮಾಡಬಹುದು. ಅಥವಾ ವೆಬ್‌ ವಿಳಾಸ https://incometaxindia.gov.in/ ಕ್ಕೆ ಭೇಟಿ ನೀಡಿ.

You may also like