ಯುಪಿಎಸ್‌ಸಿ’ಯು ಅಸಿಸ್ಟಂಟ್ ಡಿವಿಷನಲ್ ಮೆಡಿಕಲ್ ಆಫೀಸರ್, ಜೆನೆರಲ್ ಡ್ಯೂಟಿ ಮೆಡಿಕಲ್ ಅಫೀಸರ್ ಮತ್ತು ಇತರೆ ಮೆಡಿಕಲ್ ಸೇವೆಗಳ ಪೋಸ್ಟ್‌ಗಳನ್ನು ಭರ್ತಿ ಮಾಡುವ ಸಲುವಾಗಿ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ವಿವರಗಳನ್ನು ತಿಳಿದು ಆನ್‌ಲೈನ್ ಮೂಲಕ ಸಿಎಂಎಸ್ ಪರೀಕ್ಷೆಗೆ ರಿಜಿಸ್ಟ್ರೇಷನ್ ಪಡೆಯಬಹುದು.
ಜೂನಿಯರ್ ಸ್ಕೇಲ್ ಹುದ್ದೆಗಳು : 349
ಅಸಿಸ್ಟಂಟ್ ಡಿವಿಷನಲ್ ಮೆಡಿಕಲ್ ಸ್ಕೇಲ್ ಹುದ್ದೆಗಳು : 300
ಜಿಡಿಎಂಒ : 05
ಜೆನೆರಲ್ ಡ್ಯೂಟಿ ಮೆಡಿಕಲ್ ಪೋಸ್ಟ್ ಗ್ರೇಡ್-2 ಹುದ್ದೆಗಳು : 184
ಶೈಕ್ಷಣಿಕ ಅರ್ಹತೆ : ಎಂಬಿಬಿಎಸ್ ವಿದ್ಯಾರ್ಹತೆಯನ್ನು ಪಡೆದಿರಬೇಕು.
ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 07-07-2021
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 27-07-2021
ಅರ್ಜಿ ವಿತ್‌ಡ್ರಾ ಮಾಡಿಕೊಳ್ಳಲು ಅವಕಾಶ : ಆಗಸ್ಟ್ 03-08 ರವರೆಗೆ.
ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ : 26-07-2021
ಪರೀಕ್ಷೆ ದಿನಾಂಕ : 21-11-2021
ಫಲಿತಾಂಶ ಬಿಡುಗಡೆ ದಿನಾಂಕ : ನವೆಂಬರ್ / ಡಿಸೆಂಬರ್ 2021
ವಯೋಮಿತಿ ಅರ್ಹತೆಗಳು
ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳಿಗೆ ಗರಿಷ್ಠ 32 ವರ್ಷ ಮೀರಿರಬಾರದು. ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ಅರ್ಜಿ ಶುಲ್ಕ ರೂ.200. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಶುಲ್ಕವನ್ನು ಆನ್‌ಲೈನ್ ಮೂಲಕವೇ ಪಾವತಿಸಬೇಕು.