Home » ವಾಟ್ಸಾಪ್‌ ಬದಲು ಬಳಸಬಹುದಾದ ಟಾಪ್‌ 5 ಪ್ರೈವೇಟ್ ಮೆಸೇಜಿಂಗ್ ಅಪ್ಲಿಕೇಶನ್‌ಗಳಿವು..

ವಾಟ್ಸಾಪ್‌ ಬದಲು ಬಳಸಬಹುದಾದ ಟಾಪ್‌ 5 ಪ್ರೈವೇಟ್ ಮೆಸೇಜಿಂಗ್ ಅಪ್ಲಿಕೇಶನ್‌ಗಳಿವು..

by manager manager

ವೈಯಕ್ತಿಕ ಮೆಸೇಜಿಂಗ್ ಅಪ್ಲಿಕೇಶನ್‌ ವಾಟ್ಸಾಪ್‌ನ ಹೊಸ ಪ್ರೈವೆಸಿ ಪಾಲಿಸಿ ಬಹುಸಂಖ್ಯಾತ ಬಳಕೆದಾರರಲ್ಲಿ ಗೊಂದಲ ಸೃಷ್ಟಿಸಿದೆ. ಈ ಬಳಕೆದಾರರು ತಮ್ಮ ಡಾಟಾವನ್ನು ವಾಟ್ಸಾಪ್‌ ನೋಡಬಹುದು, ಅದನ್ನು ಬೇರೆ ಕಡೆ ಶೇರ್ ಮಾಡಬಹುದು ಎಂಬಿತ್ಯಾದಿ ಮಾಹಿತಿಗಳನ್ನು ಕೇಳಿ, ವಾಟ್ಸಾಪ್‌ ಬಳಸುವುದೋ ಬೇಡವೋ ಎಂಬ ಚಿಂತೆಯಲ್ಲಿದ್ದಾರೆ. ಅಂತಹವರಿಗಾಗಿ, ವಾಟ್ಸಾಪ್‌ನಷ್ಟೇ ಫೀಚರ್‌ಗಳನ್ನು ಹೊಂದಿರುವ ಬೆಸ್ಟ್‌ ಅಪ್ಲಿಕೇಶನ್‌ಗಳನ್ನು ನಾವಿಲ್ಲಿ ತಿಳಿಸಿದ್ದೇವೆ.

ವಾಟ್ಸಾಪ್‌ ಬದಲು ಬಳಸಬಹುದಾದ ಟಾಪ್‌ 5 ಇತರೆ ಅಪ್ಲಿಕೇಶನ್‌ಗಳಿವು..

ಸಿಗ್ನಲ್

ವಾಟ್ಸಾಪ್‌ ಐಕಾನ್‌ ಮಾದರಿಯನ್ನೇ ಸರಿಸುಮಾರು ಹೊಂದಿರುವ ‘ಸಿಗ್ನಲ್’ ಅಪ್ಲಿಕೇಶನ್‌ ಭಾರತದಲ್ಲಿ ತಮ್ಮ ಕಂಪನಿಯನ್ನು ಇದೀಗ ಆರಂಭಿಸಲು ಮುಂದಾಗಿರುವ ಎಲಾನ್‌ ಮಸ್ಕ್‌ ಅವರದ್ದು. ಈ ಅಪ್ಲಿಕೇಶನ್‌ ಎಂಡ್ ಟು ಎಂಡ್ ಎನ್‌ಕ್ರಿಪ್ಶನ್ (ಅಂದರೆ ಸಂವಹನದ ಗೌಪ್ಯತೆ ಮೆಸೇಜ್‌ ಕಳುಹಿಸಿದಾತ ಮತ್ತು ಸ್ವೀಕೃತದಾರ ಇಬ್ಬರ ನಡುವೆ ಮಾತ್ರ ಇರುವಂತದ್ದು) ಫೀಚರ್ ಹೊಂದಿದೆ. ಈ ಅಪ್ಲಿಕೇಶನ್‌ನಲ್ಲಿ ಕಾಲ್‌, ಮೆಸೇಜ್, ಸ್ಟಿಕರ್ಸ್‌, ಗ್ರೂಪ್‌, ಮತ್ತು ಮುಂತಾದ ಫೀಚರ್‌ಗಳಿವೆ.

Signal App – Download

https://play.google.com/store/apps/details?id=org.thoughtcrime.securesms

ಈ ಹಿಂದೆ ಅಮೆರಿಕ ಸರ್ಕಾರದ ಗೌಪ್ಯ ಮಾಹಿತಿಯನ್ನು ಹೊರಹಾಕಿ ಸುದ್ದಿಯಾಗಿದ್ದ ಎಡ್ವರ್ಡ್‌ ಸ್ನೋಡೆನ್‌ ರವರು ಮೊದಲ ಬಾರಿಗೆ ಈ ಅಪ್ಲಿಕೇಶನ್‌ ಬಳಸಲು ಸೂಚಿಸಿದ್ದರು.

ವೈರ್

ಈ ವೈಯಕ್ತಿಕ ಮೆಸೇಜಿಂಗ್ ಅಪ್ಲಿಕೇಶನ್‌ ಯುರೋಪಿಯನ್ ಒಕ್ಕೂಟದ ಮಾಹಿತಿ ಸುರಕ್ಷತೆಯ ನಿಯಮಗಳನ್ನು ಚಾಚುತಪ್ಪದೇ ಅನುಸರಿಸುತ್ತಿದೆ. ದೊಡ್ಡ ದೊಡ್ಡ ಸಂಸ್ಥೆಗಳೂ ಸಹ ಬಳಸಬಹುದಾಗಿದ್ದು, ಇದಕ್ಕೆ ನಿಗದಿತ ಶುಲ್ಕ ಪಾವತಿಸಬೇಕಾಗುತ್ತದೆ. ಗ್ರೂಪ್ ಚಾಟ್, ಫೈಲ್ ಶೇರಿಂಗ್, ವಿಡಿಯೋ ಕರೆ, ಕಾನ್ಫರೆನ್ಸ್‌ಗಾಗಿ ಫೀಚರ್‌ಗಳಿವೆ.

Wire App – Download

https://play.google.com/store/apps/details?id=com.wire

ಟೆಲಿಗ್ರಾಂ

ಈಗಾಗಲೇ 50 ಕೋಟಿಗಿಂತ ಹೆಚ್ಚು ಬಳಕೆದಾರರನ್ನು ಹೊಂದಿರುವ ಅಪ್ಲಿಕೇಶನ್‌ ಇದು. ಒಂದೇ ಗ್ರೂಪ್‌ನಲ್ಲಿ / ಚಾನೆಲ್‌ ನಲ್ಲಿ ಲಕ್ಷಾಂತರ ಸಂಖ್ಯೆಯ ಸದಸ್ಯರನ್ನು ಹೊಂದಲು, ದೊಡ್ಡ ಪ್ರಮಾಣದ ಫೈಲ್, ವಿಡಿಯೋಗಳನ್ನು ಕಳುಹಿಸಲು ಈ ಅಪ್ಲಿಕೇಶನ್‌ ನಲ್ಲಿ ಸಾಧ್ಯ. ವಿಡಿಯೋ ಕರೆ, ಆಡಿಯೋ ಕರೆ, ಸಾಮಾನ್ಯ ಚಾಟ್ ಜತೆಗೆ ಸೀಕ್ರೆಟ್ ಚಾಟ್ ವ್ಯವಸ್ಥೆ ಇರುವ ಈ ಅಪ್ಲಿಕೇಶನ್ ಬಳಕೆದಾರರ ಖಾಸಗಿತನಕ್ಕೆ ಹೆಚ್ಚು ಆದ್ಯತೆ ನೀಡುತ್ತದೆ. ಒಂದು ರೀತಿ ಹೇಳುವುದಾದರೆ ವಾಟ್ಸಾಪ್‌ಗಿಂತ ಹೆಚ್ಚು ಫೀಚರ್‌ಗಳನ್ನು ಈ ಟೆಲಿಗ್ರಾಂ ಹೊಂದಿದೆ. ಆದರೆ ವಾಟ್ಸಾಪ್‌ ರೀತಿ ಸ್ಟೇಟಸ್‌ ಹಾಕಿಕೊಳ್ಳುವ ಫೀಚರ್ ಇದರಲ್ಲಿ ಇರದ ಕಾರಣ ಬಾಗಶಃ ಹೆಚ್ಚು ಬಳಕೆ ಮಾಡುವುದಿಲ್ಲ.

Telegram App – Download

https://play.google.com/store/apps/details?id=org.telegram.messenger

ವಾಟ್ಸಾಪ್ ನಿಮ್ಮೆಲ್ಲ ಯಾವ ಮಾಹಿತಿ ತಿಳಿಯುತ್ತದೆ? ಹೊಸ ಪ್ರೈವೆಸಿ ಪಾಲಿಸಿ ಬಗ್ಗೆ ನಿಮಗೆಷ್ಟು ಗೊತ್ತು?

ವೈಬರ್

ಅಬ್ಬಬ್ಬಾ.. 100 ಕೋಟಿ ಬಳಕೆದಾರರನ್ನು ಹೊಂದಿರುವ ಅಪ್ಲಿಕೇಶನ್‌ ಇದು. ಹೆಚ್‌ಡಿ ವಿಡಿಯೋ ಕರೆ, ಜಿಫ್‌, ವಿಡಿಯೋ ಚಾಟ್‌ ಫೀಚರ್‌ಗಳನ್ನು ಇದು ಹೊಂದಿದೆ. ಸ್ಟಿಕರ್, ನೋಡಿದ ಮೆಸೇಜ್‌ಗಳನ್ನು ಡಿಲೀಟ್‌ ಮಾಡುವ ಫೀಚರ್ ಇದೆ. ಪ್ರತಿ ಮೆಸೇಜ್‌ ಅನ್ನು ಹಸಿರು, ಬೂದು, ಕೆಂಪು ಬಣ್ಣದ ಮೂಲಕ ಗೌಪ್ಯತೆ, ಖಾಸಗಿ, ಅಧಿಕೃತ ಎಂಬುದನ್ನು ಸೂಚಿಸಲು ಬಹುದು. ಅಷ್ಟೇ ಅಲ್ಲದೇ ಎಂಡ್ ಟು ಎಂಡ್ ಎನ್‌ಕ್ರಿಪ್ಶನ್ ಫೀಚರ್ ಹೊಂದಿದೆ.

Viber – Download

https://play.google.com/store/apps/details?id=com.viber.voip

ಡಸ್ಟ್‌

ಇತರರಿಗೆ ಸೆಂಡ್ ಮಾಡಿದ ಮೆಸೇಜನ್ನು ಅನ್‌ಸೆಂಡ್ ಮಾಡಬಹುದು. ನಿಮ್ಮೊಂದಿಗೆ ಚಾಟ್‌ ಮಾಡುವವರು ಅದನ್ನು ಸ್ಕ್ರೀನ್ ಶಾಟ್ ತೆಗೆದುಕೊಂಡರೆ ನಿಮಗೆ ನೋಟಿಫೀಕೇಶನ್‌ ಬರುವ ಫೀಚರ್ ಇದರಲ್ಲಿದೆ. ಪ್ರತಿ 24 ಗಂಟೆಯೊಳಗೆ ನಿಮ್ಮ ಚಟುವಟಿಕೆಗಳ ಹಿಸ್ಟರಿಯನ್ನು ಸ್ವಯಂ ಡಿಲೀಟ್ ಮಾಡುತ್ತದೆ. ವೈಯಕ್ತಿಕ ಸುರಕ್ಷತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಡಸ್ಟ್‌ ಅಪ್ಲಿಕೇಶನ್‌ ತನ್ನ ಬಳಕೆದಾರರಿಗೆ ವಿಶೇಷ ಎಕ್ಸ್‌ಪೀರಿಯನ್ಸ್‌ ನೀಡುವಲ್ಲಿ ಯಾವುದೇ ಸಂಶಯವಿಲ್ಲ.

Dust App – Download

https://play.google.com/store/apps/details?id=com.radicalapps.cyberdust

ಈ ಮೇಲಿನ ಯಾವುದೇ ಅಪ್ಲಿಕೇಶನ್‌ ನಿಮಗೆ ಇಷ್ಟವಾದಲ್ಲಿ ಡೌನ್‌ಲೋಡ್‌ ಮಾಡಿ ಇನ್‌ಸ್ಟಾಲ್‌ ಮಾಡಲು ಗೂಗಲ್ ಪ್ಲೇ ಸ್ಟೋರ್‌ನ ಡೈರೆಕ್ಟ್‌ ಲಿಂಕ್‌ ಅನ್ನು ಪ್ರತಿ ಅಪ್ಲಿಕೇಶನ್‌ಗೆ ಅಲ್ಲೇ ನೀಡಲಾಗಿದೆ.

ಒಂದೇ ಮೊಬೈಲ್‌ ನಂಬರ್ ನೀಡಿ ಹಲವು ಫೋನ್‌ಗಳಲ್ಲಿ ವಾಟ್ಸಾಪ್‌ ಬಳಕೆ ಸಾಧ್ಯವೇ?

You may also like