ಬಹಳ ಹಿಂದೆ ಬ್ಯಾಂಕ್‍ನಲ್ಲಿರುವ ಹಣವನ್ನು ಪಡೆಯಲು ದಿನಗಟ್ಟಲೇ ಬ್ಯಾಂಕ್ ಮುಂದೇ ನಿಲ್ಲಬೇಕಿತ್ತು ಆದರೇ ವೈಜ್ಞಾನಿಕವಾಗಿ ನಾವು ಮುಂದುವರೆದ ಮೇಲೆ ಎಲ್ಲಾ ವಿಷಯದಲ್ಲೂ ನಾವು ಸುಲಭವಾಗಿ ಹೇಗೆ ಕಾರ್ಯವನ್ನು ಸಾಧಿಸಬೇಕು ಎಂಬುದರ ಬಗ್ಗೆ ಯೋಚಿಸುತ್ತೇವೆ. ಹಾಗಾಗೀ ಬ್ಯಾಂಕಿಂಗ್ ಕ್ಷೇತ್ರದಲ್ಲೂ ಅದೇ ರೀತಿ ಬೆಳವಣಿಗೆಗಳು ಆಗುತ್ತಿದ್ದು. ಅದು ನಮ್ಮ ಸಮಯವನ್ನು ಉಳಿಸುತ್ತಿದೆ. ಇಂದು ನಾವು ಹಣ ಪಡೆಯಲು, ಹಾಕಲು ಎಟಿಎಂಗಳನ್ನು ಬಳಸುತ್ತಿದ್ದೇವೆ. ಆದರೇ ಕೆಲವು ಬಾರಿ ಕಾರ್ಡ್ ಅನ್ನು ಮರೆತು ಬಂದಿದ್ದು ಹಣಕ್ಕಾಗಿ ಮತ್ತೆ ಸಮಯ ವ್ಯರ್ಥ ಮಾಡದೇ ನಿಮ್ಮ ಮೊಬೈಲ್ ಬಳಸಿ ಎಟಿಎಂನಲ್ಲಿ ಹಣವನ್ನು ಪಡೆಯಬಹುದಾಗಿದೆ.
ಹೌದು, ಎಟಿಎಂಗೆ ಹೋಗಿ ಹಣ ವಿತ್‍ಡ್ರಾ ಮಾಡಲು ಇನ್ಮುಂದೆ ಎಟಿಎಂ ಕಾರ್ಡ್ ಇರಲೇಬೇಕು ಅಂತೇನಿಲ್ಲ. ನೀವು ಡೆಬಿಟ್ ಕಾರ್ಡ್ ಇಲ್ಲದೆಯು ಹಣವನ್ನು ವಿತ್‍ಡ್ರಾ ಮಾಡುವ ಅವಕಾಶ ಕಲ್ಪಿಸಿವೆ ಕೆಲವು ಬ್ಯಾಂಕ್‍ಗಳು. ಈ ಸೌಲಭ್ಯವು ಗ್ರಾಹಕರಿಗೆ ಎಟಿಎಂಗಳಿಂದ ಸುರಕ್ಷಿತವಾಗಿ ಮತ್ತು ಅನುಕೂಲಕರವಾಗಿ ಹಣವನ್ನು ಹಿಂಪಡೆಯಲು ಅನುವು ಮಾಡಿಕೊಡುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಮತ್ತು ಐಸಿಐಸಿಐ ಬ್ಯಾಂಕ್ ಈ ಸೇವೆಯನ್ನು ಗ್ರಾಹಕರಿಗೆ ನೀಡುತ್ತಿವೆ. ಮೊದಲಿಗೆ ಎನ್ ಸಿ ಆರ್ ಕಂಪನಿಯು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ಪಿಸಿಐ) ಮತ್ತು ಸಿಟಿ ಯೂನಿಯನ್ ಬ್ಯಾಂಕ್ ಸಹಭಾಗಿತ್ವದಲ್ಲಿ ಕಾರ್ಡ್ ಲೆಸ್ ಕ್ಯಾಶ್ ಡ್ರಾ ಸೌಲಭ್ಯವನ್ನು ಪ್ರಾರಂಭಿಸಿದೆ.
ಈ ತಂತ್ರಜ್ಞಾನವು ಬಳಕೆದಾರರಿಗೆ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಅಗತ್ಯವಿಲ್ಲದೆ ಎಟಿಎಂನಿಂದ ಹಣವನ್ನು ಡ್ರಾ ಮಾಡಲು ಅನುವು ಮಾಡಿಕೊಡುತ್ತದೆ. ಸದ್ಯ ಸಿಟಿ ಯೂನಿಯನ್ ಬ್ಯಾಂಕ್ ದೇಶಾದ್ಯಂತ ತನ್ನ ಸುಮಾರು 1,500 ಎಟಿಎಂಗಳು ಈಗಾಗಲೇ ಈ ತಂತ್ರಜ್ಞಾನವನ್ನು ಬೆಂಬಲಿಸುತ್ತಿವೆ ಎನ್ನಲಾಗಿದೆ. ಇದಕ್ಕಾಗಿ ಬಳಕೆದಾರರು ತಮ್ಮ ಮೊಬೈಲ್ ಫೋನ್ ಮತ್ತು ಯುಪಿಐ-ಶಕ್ತಗೊಂಡ ಗೂಗಲ್ ಪೇ, ಫೋನ್ ಪೇ, ಭೀಮ್ ಅಪ್ಲಿಕೇಶನ್ ಮುಂತಾದ ಯಾವುದೇ ಅಪ್ಲಿಕೇಶನ್ಗಳನ್ನು ಬಳಸಿಕೊಂಡು ಹಣವನ್ನು ಹಿಂಪಡೆಯಲು ಸಾಧ್ಯವಾಗುತ್ತದೆ. ಆದರಿಂದ ನೀವು ಎಟಿಎಂ ಕಾರ್ಡ್ ಅನ್ನು ಜೊತೆಗೆ ತೆಗೆದುಕೊಂಡು ಹೋಗುವ ಅವಶ್ಯ ಕತೆ ಇಲ್ಲ.
ಹಣ ಪಡೆದುಕೊಳ್ಳುವುದು ಹೇಗೆ ?
– ನೀವು ಮೊದಲನೆಯದಾಗಿ ಈ ಸೌಲಭ್ಯವನ್ನು ಬೆಂಬಲಿಸುವ ಯಾವುದೇ ಎಟಿಎಂಗೆ ಹೋಗಿ ಮತ್ತು ಯಂತ್ರದಲ್ಲಿ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಬೇಕು.
– ಬಳಿಕ ನೀವು ಹಿಂತೆಗೆದುಕೊಳ್ಳಲು ಬಯಸುವ ನಿಖರವಾದ ಮೊತ್ತವನ್ನು ನಮೂದಿಸಿ.
– ಯುಪಿಐ-ಶಕ್ತಗೊಂಡ ಮೊಬೈಲ್ ಅಪ್ಲಿಕೇಶನ್ ಬಳಸಿ ನೀವು ವ್ಯವಹಾರವನ್ನು ಅಧಿಕೃತಗೊಳಿಸಬೇಕಾಗುತ್ತದೆ.
– ವಹಿವಾಟನ್ನು ಅನುಮೋದಿಸಿದ ನಂತರ ನೀವು ಹಣವನ್ನು ಡ್ರಾ ಮಾಡಲು ಸಾಧ್ಯವಾಗುತ್ತದೆ.
– ಇನ್ನು ಕೀ ಕೋಡ್ಗಳು ಕ್ರಿಯಾತ್ಮಕವಾಗಿರುವುದರಿಂದ, ಅವು ಪ್ರತಿ ವಹಿವಾಟಿನೊಂದಿಗೆ ಬದಲಾಗುತ್ತಲೇ ಇರುತ್ತವೆ. ಆದ್ದರಿಂದ ಇವುಗಳನ್ನು ಬೇರೆ ಯಾರು ಕೂಡ ನಕಲಿಸಲಾಗುವುದಿಲ್ಲ. ಈ ಪ್ರಕ್ರಿಯೆಯ ಮೂಲಕ ವ್ಯವಹಾರವು ಸುರಕ್ಷಿತವಾಗಿದೆ ಎಂದು ಖಚಿತಪಡಿಸುತ್ತದೆ.
– ಇನ್ನೊಂದು ವಿಧಾನ ಕೂಡ ಇದೆ ಅದನ್ನು ಅನುಸರಿಸಿಯು ಹಣವನ್ನು ಪಡೆಯಬಹುದಾಗಿದೆ. ಮೊದಲನೆಯದಾಗಿ ನಿಮ್ಮ ಬ್ಯಾಂಕ್ ಈ ಕಾಡ್ರ್ಲೆಸ್ ಸೌಲಭ್ಯವನ್ನು ನೀಡುತ್ತದೆಯೆ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಬ್ಯಾಂಕ್ ಈ ಸೌಲಭ್ಯವನ್ನು ಒದಗಿಸಿದರೆ, ಅದರ ಅಪ್ಲಿಕೇಶನ್ ಡೌನ್ಲೋಡ್ ಮಾಡಿ. ನೀವು ಎಸ್ಬಿಐ ಗ್ರಾಹಕರಾಗಿದ್ದರೆ ಯೋನೊ ಅಪ್ಲಿಕೇಶನ್, ಬ್ಯಾಂಕ್ ಆಫ್ ಬರೋಡಾದ ಗ್ರಾಹಕರಾಗಿದ್ದರೆ ಬಾಬ್ ಎಂಕನೆಕ್ಟ್ ಪ್ಲಸ್ ಅಪ್ಲಿಕೇಶನ್, ಐಸಿಐಸಿಐ ಬ್ಯಾಂಕಿನ ಗ್ರಾಹಕರಾಗಿದ್ದರೆ, ಐಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ. ನಂತರ ‘ಕಾರ್ಡ್-ಲೆಸ್ ನಗದು ಹಿಂಪಡೆಯುವಿಕೆ’ ಕ್ಲಿಕ್ ಮಾಡಿ. ಇದರ ನಂತರ ನೀವು ಹಿಂಪಡೆಯಲು ಬಯಸುವ ಹಣವನ್ನು ಭರ್ತಿ ಮಾಡಿ. ನಂತರ ಬ್ಯಾಂಕಿಂಗ್ ಅಪ್ಲಿಕೇಶನ್ನ ಪಿನ್ ಅನ್ನು ನಮೂದಿಸಿ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬ್ಯಾಂಕ್ ಒಟಿಪಿ ಕಳುಹಿಸುತ್ತದೆ, ಅದು ನಿಗದಿತ ಸಮಯಕ್ಕೆ ಇರುತ್ತದೆ.. ಇದರ ನಂತರ ನಿಮ್ಮ ಬ್ಯಾಂಕಿನ ಎಟಿಎಂಗೆ ಹೋಗಿ. Card Less Cash Withdraw’ ಆಯ್ಕೆಯನ್ನು ಆರಿಸಿ. ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸಿದ ಒಟಿಪಿಯನ್ನು ನಮೂದಿಸಿ. ನೀವು ಅಪ್ಲಿಕೇಶನ್ನಲ್ಲಿ ಭರ್ತಿ ಮಾಡಿದ ನಗದು ಮೊತ್ತವನ್ನು ನಮೂದಿಸಿ, ಈ ರೀತಿ ಎಟಿಎಂ ಡೆಬಿಟ್ ಕಾರ್ಡ್ ಇಲ್ಲದೆ ಹಣ ವಿತ್ ಡ್ರಾ ಮಾಡಬಹುದಾಗಿದೆ.
ಈ ವ್ಯವಸ್ಥೆಯನ್ನು ಯಾರೆಲ್ಲ ಉಪಯೋಗಿಸಬಹುದು ?
ಈ ಸೌಲಭ್ಯ ಎಲ್ಲರಿಗೂ ಸದ್ಯಕ್ಕೆ ಲಭ್ಯವಿಲ್ಲ. ಎನ್ ಸಿಆರ್ ಕಾರ್ಪೊರೇಷನ್ ಮತ್ತು ಎನ್ ಪಿಸಿಐ ಪ್ರಸ್ತುತ ದೇಶದ ಎಲ್ಲಾ ಎಟಿಎಂಗಳಲ್ಲಿ ಈ ಸೌಲಭ್ಯವನ್ನು ಹೇಗೆ ಕಾರ್ಯಗತಗೊಳಿಸಬಹುದು ಎಂದು ಚರ್ಚಿಸುತ್ತಿದೆ. ಎರಡು ಸಂಸ್ಥೆಗಳು ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕುಗಳೊಂದಿಗೆ ನಿರಂತರ ಮಾತುಕತೆ ನಡೆಸುತ್ತಿದ್ದು, ಮುಂದಿನ ಎರಡು ತಿಂಗಳಲ್ಲಿ ಅವರೊಂದಿಗೆ ಔಪಚಾರಿಕ ಒಡನಾಟವನ್ನು ಪ್ರಕಟಿಸಲಾಗುವುದು ಎನ್ನಲಾಗಿದೆ. ಸದ್ಯ ಸಿಟಿ ಯೂನಿಯನ್ ಎಟಿಎಂಗಳಲ್ಲಿ ಈ ಸೌಲಭ್ಯವನ್ನು ಅನುಮತಿಸಲು ತನ್ನ ಅಸ್ತಿತ್ವದಲ್ಲಿರುವ ಸಾಫ್‍ಟ್ವೇರ್ ಅನ್ನು ಅಪ್‍ಗ್ರೇಡ್ ಮಾಡಿದೆ ಎಂದು ಎನ್ಸಿಆರ್ ಕಾರ್ಪೊರೇಶನ್ ವಕ್ತಾರರು ಹೇಳಿದ್ದಾರೆ. ಯಂತ್ರಾಂಶವನ್ನು ಅಪ್‍ಗ್ರೇಡ್ ಮಾಡುವ ಅಗತ್ಯವಿಲ್ಲದ ಕಾರಣ, ಈ ಸೌಲಭ್ಯವನ್ನು ದೇಶದ ಎಲ್ಲಾ ಎಟಿಎಂಗಳಲ್ಲಿ ಲಭ್ಯವಾಗುವಂತೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.
ಕರ್ನಾಟಕದಲ್ಲಿ ಡ್ರೈವಿಂಗ್ ಲೈಸೆನ್ಸ್ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಸುಲಭ ವಿಧಾನ..