Home » ಟೆಲಿಗ್ರಾಂ ಭಾರತದ ಆಪ್‌ ಅಲ್ಲ: ಇತಿಹಾಸ ಇಲ್ಲಿದೆ ಓದಿ ತಿಳಿಯಿರಿ..

ಟೆಲಿಗ್ರಾಂ ಭಾರತದ ಆಪ್‌ ಅಲ್ಲ: ಇತಿಹಾಸ ಇಲ್ಲಿದೆ ಓದಿ ತಿಳಿಯಿರಿ..

by manager manager

Telegram is not India based Smartphone App. 

ಟೆಲಿಗ್ರಾಂ(Telegram) ಭಾರತದ ಸ್ಮಾರ್ಟ್‌ಫೋನ್‌(Smartphone) ಆಧಾರಿದ ಮೆಸೇಜಿಂಗ್ ಆಪ್‌ ಎಂದು ದಿನದಿಂದ ದಿನಕ್ಕೆ ಬಹು ಸಂಖ್ಯಾತರು ಇನ್‌ಸ್ಟಾಲ್‌ ಮಾಡಿಕೊಳ್ಳುತ್ತಲೇ ಇದ್ದಾರೆ. ಆದರೆ ಟೆಲಿಗ್ರಾಂ ಭಾರತದ ಮೊಬೈಲ್ ಅಪ್ಲಿಕೇಶನ್ ಅಲ್ಲ ಎಂಬುದು ನೆನಪಿರಲಿ. ಹಾಗಿದ್ರೆ ಇನ್ಯಾವ ದೇಶದ್ದು? ಎಂಬ ಪ್ರಶ್ನೆಗೆ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ..

ಪ್ರಸ್ತುತದಲ್ಲಿ 10 ಕೋಟಿಗೂ ಹೆಚ್ಚು ಜನರು ಬಳಕೆ ಮಾಡುತ್ತಿರುವ ಟೆಲಿಗ್ರಾಂ ಆಪ್‌, ಮೂಲತಃ ಅಭಿವೃದ್ಧಿಗೊಂಡಿರುವುದು ದುಬೈ ಮೂಲದ St.Petersburg ನಗರದಲ್ಲಿನ ಹೆಚ್ಚಿನ ಕೌಶಲ್ಯಹೊಂದಿದ ಸಾಫ್ಟ್‌ವೇರ್ ಇಂಜಿನಿಯರ್‌ಗಳಿಂದ. ಟೆಲಿಗ್ರಾಂ ಆಪ್‌ ಮೂಲತಃ ಡೆವಲಪ್ ಆಗಿರುವುದು ಇಲ್ಲಿಯೇ. ಆದರೆ ಇದರ ಸಂಸ್ಥಾಪಕರು ಅಂದರೆ ಅಭಿವೃದ್ಧಿಗೊಳ್ಳಲು ಕಾರಣಕರ್ತರು ಮಾತ್ರ Nikolai Durov ಮತ್ತು Pavel Durov.

ಟೆಲಿಗ್ರಾಂ(Telegram) ಆಪ್(App) ಇತಿಹಾಸದಲ್ಲೊಂದು ವಿಶೇಷತೆ ಇದೆ. ಅದನ್ನು ನೀವೆಲ್ಲಾ ಗಮನಿಸಲೇ ಬೇಕು. ಈ ಆಪ್ ಅಭಿವೃದ್ಧಿಗೆ ಹಣ ಹೂಡಿದ್ದು Pavel Durov ಆದ್ರೆ, ತಾಂತ್ರಿಕವಾಗಿ ಉತ್ತಮವಾದ ಐಡಿಯಾಲಜಿ ಕೊಡುಗೆ ನೀಡಿದ್ದುNikolai Durov. ಆದರೂ ಆಪ್‌ ಫೈನಲಿ ಡೆವಲಪ್ ಆಗಿದ್ದು ಮಾತ್ರ ದುಬೈ ಮೂಲದ ಸಾಫ್ಟ್‌ವೇರ್ ಪರಿಣತರಿಂದ. ಇನ್ನೊಂದು ವಿಶೇಷತೆ ಅಂದ್ರೆ ಖಾಸಗಿ ಒಡೆತನದ ಟೆಲಿಗ್ರಾಂ ಆಪ್‌ ಗೆ ಸಂಬಂಧಿಸಿದ ಕಂಪನಿ ಮೂಲತಃ ರಿಜಿಸ್ಟರ್ ಆಗಿರುವುದು ಗ್ರೇಟ್ ಬ್ರಿಟನ್‌ ನ ಲಂಡನ್ ನಗರದಲ್ಲಿ. ಇದರ ಬಗ್ಗೆ ಇನ್ನೊಂದು ಗಾಳಿ ಸುದ್ದಿಯೂ ಇತ್ತು?

ಅದೇನಂದ್ರೆ ಟೆಲಿಗ್ರಾಂ ರಷ್ಯಾ ಮೂಲದ್ದು ಅಂತ. ಆದರೆ ಇದು ರಷ್ಯಾದ ಆಪ್‌ ಅಲ್ಲ. ಆದರೂ ಹೀಗೆ ರೂಮರ್ಸ್ ಹಬ್ಬಲು ಕಾರಣ ಟೆಲಿಗ್ರಾಂ ಆಪ್‌ ಗೆ ಹಣ ಹೂಡಿದ ಸಾಫ್ಟ್‌ವೇರ್ ಉದ್ಯಮಿಯಾದ Pavel Durov ಮೂಲತಃ ರಷ್ಯಾದವರು. ಅಲ್ಲದೇ ಇವರು ರಷ್ಯಾದ ಪ್ರಖ್ಯಾತ ಸಾಮಾಜಿಕ ಜಾಲತಾಣ VK(ವಿಕೆ) ಸಂಸ್ಥಾಪಕರು.

ಹೀಗೆಲ್ಲಾ ಸತ್ಯಾಸತ್ಯತೆಯ ಅಂಶಗಳನ್ನು ಹೊಂದಿದ್ದರೂ ಈ ಟೆಲಿಗ್ರಾಂ ಭಾರತದ ಮೂಲದ್ದು ಎಂಬ ಕಹಿ ರೂಮರ್ಸ್ ಹಬ್ಬಲು ಕಾರಣವೇನು? ಎಂಬುದು ಗೊತ್ತಿಲ್ಲಾ.

ಟೆಲಿಗ್ರಾಂ ಇನ್ನೂ ಸಹ ವಾಟ್ಸಾಪ್‌ ನಷ್ಟು ಬಳಕೆದಾರರನ್ನು ಹೊಂದಿಲ್ಲದಿದ್ದರೂ ಸಹ ಅದನ್ನು ಬಳಕೆ ಮಾಡುವವರು ಮಾತ್ರ ಟೆಲಿಗ್ರಾಂ ಆಫ್‌ ವಾಟ್ಸಾಪ್‌ಗಿಂತ ಬೆಸ್‌ ಅಂತಲೇ ಹೇಳುತ್ತಾರೆ. ವಾಟ್ಸಾಪ್ ನಷ್ಟೇ ಬಳಕೆದಾರ ಸ್ನೇಹಿ ಮಾತ್ರವಲ್ಲದೇ, ವಾಟ್ಸಾಪ್‌ನಲ್ಲಿ ಸೆಂಡ್‌ ಮಾಡುವ ಫೈಲ್‌ ಸೈಜ್‌ಗಿಂತ ಹೆಚ್ಚು ಡಾಟಾ ಸೈಜ್‌ ನ ಯಾವುದೇ ರೀತಿಯ ಫೈಲ್‌ಗಳನ್ನು ಶೇರ್‌ ಮಾಡಬಹುದು. ಅಲ್ಲದೇ ಟೆಲಿಗ್ರಾಂ ನಲ್ಲಿಯೇ ಹಲವಾರು ಬಗೆಯ ಬಳಕೆದಾರ ಸ್ನೇಹಿ ಮತ್ತು ಉಪಯೋಗಿ ಗ್ರೂಪ್‌ಗಳಿದ್ದು, ನೇರವಾಗಿ ಜಾಯಿನ್‌ ಆಗಬಹುದು.

ಮೂವಿ ಲವರ್‌ಗಳಂತೂ ಇತ್ತೀಚಿನ ದಿನಗಳಲ್ಲಿ ಈ ಆಪ್‌ ಸೇವೆಯಿಂದ ಹೆಚ್ಚು ಸಂತೋಷಗೊಂಡಿದ್ದಾರೆ. ಯಾಕಂದ್ರೆ ಸಿನಿಮಾಗೆ ಸಂಬಂಧಪಟ್ಟ ಹಲವು ಗ್ರೂಪ್‌ಗಳಿದ್ದು, ಅಲ್ಲಿ ಹೊಸ ಮತ್ತು ಹಳೆಯ ಎಲ್ಲಾ ಭಾಷೆಗಳ ಸಿನಿಮಾಗಳು ಡೌನ್‌ಲೋಡ್ ಮಾಡಿಕೊಳ್ಳಲು ಲಭ್ಯವಾಗುತ್ತಿವೆ. ಸಿನಿಮಾ ಡಾಟಾ ಸೈಜ್‌ ಎಷ್ಟೇ ಇದ್ದರೂ ಜಸ್ಟ್ ಒನ್‌ ಕ್ಲಿಕ್‌ ನಿಂದ ಅಲ್ಲಿಯೇ ಡೌನ್‌ಲೋಡ್ ಮಾಡಿ ನಂತರ ಮೂವಿಪ್ಲೇಯರ್‌ಗಳಲ್ಲಿ ಓಪನ್‌ ಮಾಡಿ ನೋಡಬಹುದು.

ಫೈನಲಿ ನಾವು ಹೇಳುವುದು ಇಷ್ಟೇ.. ಟೆಲಿಗ್ರಾಂ ಭಾರತ ಮೂಲದ ಅಪ್ಲಿಕೇಶನ್ ಅಲ್ಲ. ಈ ಆಪ್‌ ನಿಮಗೆ ಇಷ್ಟವಾದಲ್ಲಿ, ಉಪಯೋಗವಿದ್ದಲ್ಲಿ ಮಾತ್ರ ಇನ್‌ಸ್ಟಾಲ್‌ ಮಾಡಿಕೊಳ್ಳಿ ಅಷ್ಟೆ.

ಈ ಮಾಹಿತಿಯನ್ನು ಟೆಲಿಗ್ರಾಂ ಆಪ್‌ ಗೆ ಸಂಬಂಧಿಸಿದ ಅಧಿಕೃತ ವೆಬ್‌ಸೈಟ್‌ನಿಂದ ಸಂಗ್ರಹ ಮಾಡಲಾಗಿದೆ.

Telegram App is not a Indian based mobile application. Telegram privately held company registered in London, United Kingdom. founded by Pavel and Nikolai Durov brothers. Read more here…

You may also like