Home » ನಿಮ್ಮ ಮೆಸೇಜ್‌ ಎಷ್ಟು ಬಾರಿ ಫಾರ್ವರ್ಡ್ ಆಗಿದೆ? ತಿಳಿಸುತ್ತದೆ ವಾಟ್ಸಾಪ್‌ನ ಹೊಸ ಫೀಚರ್

ನಿಮ್ಮ ಮೆಸೇಜ್‌ ಎಷ್ಟು ಬಾರಿ ಫಾರ್ವರ್ಡ್ ಆಗಿದೆ? ತಿಳಿಸುತ್ತದೆ ವಾಟ್ಸಾಪ್‌ನ ಹೊಸ ಫೀಚರ್

by manager manager

ಫೇಸ್‌ಬುಕ್ ಮಾಲೀಕತ್ವದ ವಾಟ್ಸಾಪ್‌ ಅಪ್ಲಿಕೇಶನ್‌ಗೆ ಈಗ ಎರಡು ಹೊಸ ಫೀಚರ್‌ಗಳನ್ನುಅಪ್‌ಡೇಟ್‌ ಮಾಡಲು ವರ್ಕ್‌ ಮಾಡಲಾಗುತ್ತಿದೆ. ಅದಲ್ಲದೇ ಇತ್ತೀಚೆಗೆ ವಾಟ್ಸಾಪ್‌ ಗೆ ‘forwarding’ ಎಂಬ ಹೊಸ ಫೀಚರ್ ಅನ್ನು ಅಪ್‌ಡೇಟ್ ಮಾಡಲಾಗಿದೆ.

ವಾಟ್ಸಾಪ್‌ನ ‘forwarding’ ಫೀಚರ್, ವಾಟ್ಸಾಪ್‌ ಬಳಕೆದಾರರು ಇತರರಿಗೆ ಕಳುಹಿಸಿದ ತಮ್ಮ ಮೆಸೇಜ್‌ ಎಷ್ಟು ಬಾರಿ ಫಾರ್ವರ್ಡ್ ಆಗಿದೆ ಎಂಬುದನ್ನು ಮತ್ತು ಫೇಕ್‌ ಮೆಸೇಜ್‌ ಗಳನ್ನು ನಿಗ್ರಹಿಸಲು ಸಹಾಯಕವಾಗಿದೆ.

ವಾಟ್ಸಾಪ್, ಗೂಗಲ್ ಪ್ಲೇ ಮುಖಾಂತರ WABetaInfo ಎಂಬ ಹೊಸ ಬೆಟಾ ಅಪ್‌ಡೇಟ್‌ ಅನ್ನು ಆಂಡ್ರಾಯ್ಡ್‌ ಗಳಿಗೆ ನೀಡಿದೆ. ಇದರಲ್ಲಿ ‘frequently forwarded’ ಮತ್ತು ಮತ್ತೊಂದು ಬಳಕೆದಾರರ ಮೆಸೇಜ್ ಇತರರಿಗೆ ಫಾರ್ವರ್ಡ್‌ ಆಗಿದೆಯೇ ಎಂದು ಚೆಕ್‌ ಮಾಡಲು ಸಹಾಯವಾಗುವುದು.

ಫಾರ್ವರ್ಡ್‌ ಮೆಸೇಜ್‌ ಬಗ್ಗೆ ಮಾಹಿತಿ

– ವಾಟ್ಸಾಪ್‌ನ ಹೊಸ ಫೀಚರ್ ವಾಟ್ಸಾಪ್‌ನಲ್ಲಿ Info ಸೆಕ್ಷನ್‌ ನಲ್ಲಿ ಲಭ್ಯ. Info ಸೆಕ್ಷನ್‌ನಲ್ಲಿ ಬಳಕೆದಾರರ ಮೆಸೇಜ್‌ಗಳು ಡಿಲಿವರ್ ಅಗಿದೆಯೇ ಮತ್ತು ಓದಲಾಗಿದೆಯೇ ಎಂಬುದನ್ನು ತಿಳಿಸುತ್ತದೆ. ಇದೇ ಸೆಕ್ಷನ್‌ನಲ್ಲಿ ಆ ಮೆಸೇಜ್‌ ನ ಇತರರಿಗೆ ಫಾರ್ವರ್ಡ್‌ ಆಗಿದೆಯೇ, ಎಷ್ಟು ಜನರಿಗೆ ಫಾರ್ವರ್ಡ್ ಆಗಿದೆ ಎಂಬುದನ್ನು ತಿಳಿಸುತ್ತದೆ.

Frequently Forwarded

– ಪ್ರಸ್ತುತ ವಾಟ್ಸಾಪ್‌ ನಲ್ಲಿ ಫಾರ್ವರ್ಡ್‌ ಲೆಬೆಲ್‌ ಅನ್ನು ತೋರಿಸಲಾಗುತ್ತದೆ. ಇದನ್ನು ಮೆಸೇಜ್‌ನ ಮೇಲ್ಭಾಗದಲ್ಲಿ ನೋಡಬಹುದು. ಯಾವ ಮೆಸೇಜ್‌ 4 ಕ್ಕಿಂತ ಹೆಚ್ಚು ಬಾರಿ ಫಾರ್ವರ್ಡ್‌ ಆಗಿರುತ್ತದೆಯೋ ಆ ಮೆಸೇಜ್‌ ಮೇಲ್ಭಾಗದಲ್ಲಿ’Frequently Forwarded’ ಎಂದು ತೋರಿಸಲಾಗುತ್ತದೆ.

ವಾಟ್ಸಾಪ್‌ನ ಈ ಹೊಸ ಫೀಚರ್‌ಗಳು ವಾಟ್ಸಾಪ್‌ ಬೆಟಾ ವರ್ಸನ್‌ನಲ್ಲಿ ಲಭ್ಯವಿದೆ. ಈ ಫೀಚರ್‌ ಬಳಕೆದಾರರಿಗೆ ಮುಂದಿನ ಅಪ್‌ಡೇಟ್‌ನಲ್ಲಿ ಸಿಗಬಹುದು. ಹಾಗೂ ಮೊಬೈಲ್‌ ಸಪೋರ್ಟ್‌ ಮಾಡುವ ವರ್ಸನ್‌ ಆಧಾರಿತವಾಗಿಯೂ ಈ ಅಪ್‌ಡೇಟ್‌ ಲಭ್ಯ, ಅಲಭ್ಯವಾಗಿಯೂ ಇರಬಹುದು.

ಮುಂದಿನ ದಿನಗಳಲ್ಲಿ ವಾಟ್ಸಾಪ್‌, ತನ್ನ ಬಳಕೆದಾರರಿಗೆ ಮೆಸೇಜ್‌ನಲ್ಲಿ ಬಂದ ಅಧಿಕೃತ ಮಾಹಿತಿಗಳ ಇಮೇಜ್‌ ಸತ್ಯವೋ ಅಥವಾ ಫೇಕ್‌ ಆಗಿರಬಹುದೋ ಎಂಬುದನ್ನು ತಿಳಿಯಲು ಫೀಚರ್‌ ಒಂದನ್ನು ಅಭಿವೃದ್ದಿ ಪಡಿಸಲು ಮುಂದಾಗಿದೆ.

You may also like