Home » ಟಿಕೆಟ್ ಬುಕ್, ಕ್ಯಾನ್ಸೆಲ್, ರಿಸರ್ವ್‌ಗಾಗಿ ರೈಲ್ವೆಯಿಂದ ‘utsonmobile’ ಆಪ್ ಪರಿಚಯ

ಟಿಕೆಟ್ ಬುಕ್, ಕ್ಯಾನ್ಸೆಲ್, ರಿಸರ್ವ್‌ಗಾಗಿ ರೈಲ್ವೆಯಿಂದ ‘utsonmobile’ ಆಪ್ ಪರಿಚಯ

by manager manager

ಈ ಹಿಂದೆ ರೈಲ್ವೆ ಟಿಕೆಟ್ ಬುಕ್ ಮಾಡಬೇಕಂದ್ರೆ ವೆಬ್‌ಸೈಟ್ ಅಥವಾ ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ಗಳ ಮೂಲಕ ಪ್ರಯಾಣಿಕರು ಟಿಕೆಟ್ ಬುಕ್ ಮಾಡಬೇಕಿತ್ತು. ಆದರೆ ಈಗ ರೈಲ್ವೆ ಇಲಾಖೆಯೇ ಮೊಬೈಲ್ ಅಪ್ಲಿಕೇಶನ್ ಒಂದನ್ನು ಪರಿಚಯಿಸಿದೆ. ಈ ಅಪ್ಲಿಕೇಶನ್‌ ನಲ್ಲಿ ಪ್ರಯಾಣಿಕರು ಟಿಕೆಟ್‌ ಬುಕ್ ಮಾಡುವುದು ಮಾತ್ರವಲ್ಲದೇ ಕಾಯ್ದಿರಿಸದ ಟಿಕೆಟ್ ಗಳನ್ನು ರದ್ದು ಮಾಡಲು ಅವಕಾಶ ನೀಡಲಾಗಿದೆ.

ರೈಲ್ವೆ ಸಚಿವಾಲಯವು ಪರಿಚಯಿಸಿರುವ ಮೊಬೈಲ್ ಅಪ್ಲಿಕೇಶನ್ ಬುಕಿಂಗ್ ಸಮಸ್ಯೆಗೆ ಪರಿಹಾರ ಮತ್ತು ಪಾಸ್‌ಗಳ ರಿನೀವಲ್, ಪ್ಲಾಟ್‌ಫಾರ್ಮ್ ಟಿಕೆಟ್ ಬುಕಿಂಗ್, R-Wallet ಚೆಕ್‌ ಮಾಡುವಿಕೆ ಮತ್ತು ಬ್ಯಾಲೆನ್ಸ್ ತುಂಬುವಿಕೆ ಜೊತೆಗೆ ಸಂಪೂರ್ಣವಾಗಿ ಬಳಕೆದಾರರು ಆಪ್‌ ಅನ್ನು ಸರಳವಾಗಿ ನಿರ್ವಹಣೆ ಮಾಡಬಹುದಾಗಿದೆ ಎಂದು ಹೇಳಿದೆ.

ಅಂದಹಾಗೆ ರೈಲ್ವೆ ಸಚಿವಾಲಯವು ಪರಿಚಯಿಸಿರುವ ಮೊಬೈಲ್ ಅಪ್ಲಿಕೇಶನ್ ‘utsonmobile’ (ಯುಟಿಎಸ್‌ಆನ್‌ಮೊಬೈಲ್). ಈ ಆಪ್ ಅನ್ನು ರೈಲ್ವೆ ಮಾಹಿತಿ ಕೇಂದ್ರ(Centre for Railway Information System) ಅಭಿವೃದ್ದಿ ಪಡಿಸಿದ್ದು, ಆಪ್ ಆಂಡ್ರಾಯ್ಡ್ ಮತ್ತು ವಿಂಡೋಸ್ ಸ್ಮಾರ್ಟ್‌ಫೋನ್‌ ಗಳಿಗೆ ಲಭ್ಯವಿದೆ. ಈ ಆಪ್ ಅನ್ನು ಗೂಗಲ್ ಪ್ಲೇ ಸ್ಟೋರ್ ಮತ್ತು ವಿಂಡೋಸ್ ಸ್ಟೋರ್ ಗಳಲ್ಲಿ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ರೈಲ್ವೆಯ ‘utsonmobile’ ಆಪ್ ಅನ್ನು ಮೊದಲಿಗೆ ಮೊಬೈಲ್ ನಂಬರ್, ಹೆಸರು, ಸಿಟಿ, ಚಲಿಸುವ ರೈಲಿನ ವಿಧ, ಯಾವ ತರಗತಿ ಸೀಟುಗಳಲ್ಲಿ ಪ್ರಯಾಣಿಸುತ್ತೀರಿ, ಟಿಕೆಟ್ ವಿಧ, ಎಷ್ಟು ಪ್ರಯಾಣಿಕರು ಪ್ರಯಾಣಿಸುತ್ತೀರಿ, ಹೆಚ್ಚು ಚಲಿಸುವ ಮಾರ್ಗ ಮತ್ತು ಇತರೆ ಕೆಲವು ಮಾಹಿತಿಗಳನ್ನು ನೀಡಿ ರಿಜಿಸ್ಟರ್ ಮಾಡಿಕೊಳ್ಳಬೇಕು. ನಂತರ R-Wallet(ರೈಲ್ವೆ ವ್ಯಾಲೆಟ್) ಸೊನ್ನೆ ಬ್ಯಾಲೆನ್ಸ್‌ನಲ್ಲಿಯೇ ಕ್ರಿಯೇಟ್ ಆಗುತ್ತದೆ.

R-Wallet ಅನ್ನು ಯಾವುದೇ UTS ಕೌಂಟರ್‌ನಲ್ಲಿ ಅಥವಾ ರೈಲ್ವೆ ಅಧಿಕೃತ ವೆಬ್‌ಸೈಟ್‌ ನಲ್ಲಿ ರೀಚಾರ್ಜ್‌ ಮಾಡಿಕೊಳ್ಳಬಹುದು. ಕ್ಲಿಕ್ ಮಾಡಿ

‘utsonmobile’ ಆಪ್ ಬಳಸುವ ಪ್ರಯಾಣಿಕರು ಇನ್ನುಮುಂದೆ ಪೇಪರ್ ಟಿಕೆಟ್ ಅನ್ನು ಬಳಸದೆಯೇ ಪ್ರಯಾಣಿಸಬಹುದು. ಟಿಕೆಟ್ ಪರಿಶೀಲಕರು ಕೇಳಿದಾಗ ಮೊಬೈಲ್ ಅಪ್ಲಿಕೇಶನ್ ನಲ್ಲಿಯ ‘Show Ticket’ ಆಯ್ಕೆಯನ್ನು ಕ್ಲಿಕ್ ಮಾಡಿ ತೋರಿಸಬಹುದು.

ಈ ಅಪ್ಲಿಕೇಶನ್ ಕುರಿತ ಹೆಚ್ಚಿನ ಅಪ್‌ಗಳಿಗಾಗಿ ಕನ್ನಡ ಅಡ್ವೈಜರ್ ಫಾಲೋ ಮಾಡುತ್ತಿರಿ. ಹಾಗೂ ಪ್ರಶ್ನೆಗಳಿದ್ದಲ್ಲಿ ಕಮೆಂಟ್ ಬಾಕ್ಸ್‌ನಲ್ಲಿ ಟೈಪಿಸಿ..

The Ministry of Railway introduces a Mobile application ‘ ‘utsonmobile’, which can enables booking and cancellation of unreserved tickets among a host of other facillities.

You may also like