Home » ನಿದ್ರಾಹೀನತೆ ದೂರವಾಗಿಸಲು ಇಲ್ಲಿದೆ ಸರಳ ಪರಿಹಾರ

ನಿದ್ರಾಹೀನತೆ ದೂರವಾಗಿಸಲು ಇಲ್ಲಿದೆ ಸರಳ ಪರಿಹಾರ

by manager manager

ನಿದ್ರಾಹೀನತೆ ಅತ್ಯಂತ ಸೂಕ್ಷ್ಮವಾಗಿ ಕಾಣಿಸುವ ಕಾಯಿಲೆ.ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ ಪ್ರತಿದಿನ 6-8 ಗಂಟೆಗಳ ಕಾಲ ನಿದ್ರೆ ಮಾಡಬೇಕು ಇಲ್ಲವಾದರೆ ದೇಹದ ಜಡತೆ, ಮಾನಸಿಕ ತೊಂದರೆ ಕಾಣಿಸಿಕೊಳ್ಳುವುದು.

ನಿದ್ರಾಹೀನತೆ ಇಂದು ಜನರನ್ನು ಕಾಡುವ ಬಹುದೊಡ್ಡ ಸಮಸ್ಯೆಯಾಗಿದ್ದು, ಕೆಲಸದ ಒತ್ತಡ,ಚಿಂತನೆಗಳು, ಕೆಲ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯದಿಂದಲೂ ಸರಿಯಾಗಿ ನಿದ್ರೆ ಬರುವುದಿಲ್ಲ. ಜನರ ಬದುಕು ಅವಸರದಿಂದ ಸಾಗುತ್ತ ,ಗೊಂದಲ ಗೂಡಾಗಿ ನೆಮ್ಮದಿ ಇಲ್ಲವಾಗಿದೆ. ಈ ಎಲ್ಲಾ ತೊಂದರೆಯಿಂದ ಮುಕ್ತಿ ಹೊಂದಲು ಮನೆಯಲ್ಲಿ ದೊರೆಯುವ ಕೆಲ ಆಹಾರ ಪದಾರ್ಥಗಳನ್ನು ಬಳಸಿಕೊಂಡು ಔಷಧ ತಯಾರಿಸಬಹುದು. ಮನೆಯಲ್ಲಿ ದೊರಕದ ಪದಾರ್ಥಗಳೇ ಇಲ್ಲ. ಅಲ್ಲಿ ದೊರೆಯುವ ಪದಾರ್ಥಗಳಿಂದಲೇ ಹಲವಾರು ಬಗೆಯ ಔಷಧಿಗಳನ್ನು ತಯಾರಿಸುವುದು.

Here's a simple solution to relieving insomnia

ಇತ್ತೀಚಿನ ದಿನಗಳಲ್ಲಿ ಸಣ್ಣ- ಪುಟ್ಟದಕ್ಕೆ ವೈದ್ಯರ ಬಳಿ ಹೋಗಲು ಸಮಯವಿಲ್ಲ. ಅಲ್ಲಿ ಹೋದರು ಉದ್ದದ ಕ್ಯೂ ಕಂಡರೆ ಸಾಕು ಕಾಯಿಲೆ ಮತ್ತಷ್ಟು ಉಲ್ಬಣಗೊಳ್ಳುವುದು.ಅದ್ದರಿಂದ ಜನರು ಮನೆಯಲ್ಲಿ ದೊರೆಯುವ ಪ್ರಕೃತಿ ಚಿಕಿತ್ಸೆ , ಸರಳ ಆಯುರ್ವೇದ ಬಳಕೆ ಯಿಂದ ಸುಲಭವಾಗಿ ತಮ್ಮ ಸಮಸ್ಯೆ ನಿವಾರಿಸಿಕೊಳ್ಳಬಹುದು.

ನಿದ್ರಾಹೀನತೆ ದೂರವಾಗಿಸಲು ಈ ಕೆಳಗಿನ ಸೂಚನೆಗಳನ್ನು ಅನುಸರಿಸಿ:

  • ಪ್ರತಿದಿನ ಎರಡು ಬಾರಿ ಸ್ನಾನ ಮಾಡಬೇಕು. ಶುಚಿಯಾದ ಉಡುಪು, ಹಾಸಿಗೆ ಬಟ್ಟೆಗಳು ಶುಭ್ರವಾಗಿರಬೇಕು.ನೀವು ಮಲಗುವ ಕೊಠಡಿ ಮಂದವಾದ ಬೆಳಕಿನಿಂದ ಕೂಡಿರಬೇಕು. ಹತ್ತಿಯಿಂದ ತಯಾರಿಸಿದ ಉಡುಪನ್ನು ಧರಿಸಿ.
  • ರಾತ್ರಿ ಸಮಯದಲ್ಲಿ ಊಟ ಮಿತವಾಗಿ ಸೇವಿಸಬೇಕು. ಮಲಗುವ ಮುನ್ನ ಇಷ್ಟವಾದ ತಾಜಾ ಹಣ್ಣುಗಳನ್ನು ತಿನ್ನಬೇಕು. ಊಟ ಹಾಗೂ ನಿದ್ರೆ ಯ ನಡುವೆ ಒಂದು ಗಂಟೆಯ ಅಂತರವಾದರೂ ಇರಬೇಕು. ಆಗ ನಾವು ಸೇವಿಸಿದ ಆಹಾರ ಸುಲಭವಾಗಿ ಜೀರ್ಣವಾಗುವುದು. ತಿಂದ ಆಹಾರ ಜೀರ್ಣವಾಗದಿದ್ದರೆ ನಿದ್ರೆ ಬರುವುದಿಲ್ಲ.Here's a simple solution to relieving insomnia
  • ಪ್ರತಿಯೊಬ್ಬರಿಗು 6 ರಿಂದ 8 ಗಂಟೆಯ ನಿದ್ದೆ ಅತ್ಯಗತ್ಯ. ನಿಮ್ಮ ಕೋಣೆಯನ್ನು ಕತ್ತಲಾಗಿಸಿ. ಪರದೆ ಅಥವಾ ಕಣ್ಣಿನ ಮಾಸ್ಕ್‍ಗಳ ನೆರವಿನಿಂದ ಕತ್ತಲಿನ ವಾತಾವರಣ ನಿರ್ಮಿಸಿ. ಕತ್ತಲಿನ ವಾತಾವರಣದಲ್ಲಿ ಮಾನವ ಶರೀರದಲ್ಲಿ ಮೆಲಾಟೊನಿನ್ ಉತ್ಪಾದನೆಯಾಗುತ್ತದೆ. ಇದು ನಿದ್ದೆಯ ಚಕ್ರ ನಿರ್ಮಾಣಕ್ಕೆ ಸಹಕಾರಿ.
  • ರಾತ್ರಿ ಮಲಗುವಾಗ ಉಗುರು ಬೆಚ್ಚನೆಯ ಹಾಲಿಗೆ ಚಿಟಿಕೆ ಅಡುಗೆ ಅರಿಶಿಣ ಬೆರಸಿ ,ನಿಮಗೆ ಇಷ್ಟವಾದರೆ ಜೇನುತುಪ್ಪವನ್ನು ಸೇರಿಸಿ ಕುಡಿಯಿರಿ. ಹಾಲಿನಲ್ಲಿ ಇರುವ “ಲಾಕ್ಟೋನ್ “ಎಂಬ ಪದಾರ್ಥ ಮನಸ್ಸನ್ನು ಆಹ್ಲಾದಗೊಳಿಸುವುದು. ಹಾಲಿನಲ್ಲಿ ತುಂಬಾ ಉತ್ತಮ ಪೌಷ್ಟಿಕ ಜೀವಸತ್ವಗಳಿವೆ , ಹಣ್ಣುಗಳಲ್ಲಿರುವ ಜೀವಸತ್ವಗಳು ನಿದ್ರೆಯನ್ನು ಪ್ರಚೋದಿಸುವುದು. ಅಲ್ಲದೆ ಹಣ್ಣಿನಲ್ಲಿರುವ ನೀರಿನ ಅಂಶ ದೇಹವನ್ನು ಗಟ್ಟಿಗೊಳಿಸಿ ನಿದ್ರೆ ಮಾಡಲು ಅನುಕೂಲವಾಗುವಂತೆ ಪ್ರೇರೇಪಿಸುವುದು. ಸ್ನಾನ ಮಾಡುವುದರಿಂದ ಶುಭ್ರತೆ ಉಂಟಾಗುವುದು ದೇಹ ಅಗುರಾಗುವುದು .ಮಿತವಾದ ಆಹಾರ ಆರೋಗ್ಯದ ಪ್ರಮುಖ ಸೂತ್ರಗಳಲ್ಲಿ ಒಂದಾಗಿದೆ.
  • ವಾರಕ್ಕೊಮ್ಮೆ ಹರಳೆಣ್ಣೆಯನ್ನು ತಲೆ, ಮೈ ಕೈಗೆ ಹಚ್ಚಿಕೊಂಡು ಸ್ನಾನ ಮಾಡುವುದರಿಂದ ದೇಹದ ಉಷ್ಣ ಕಡಿಮೆ ಆಗುವುದು. ರಾತ್ರಿ ವೇಳೆ ಚೆನ್ನಾಗಿ ನಿದ್ರೆ ಬರುವುದು.

Here's a simple solution to relieving insomnia

  • ನಿದ್ದೆ ಮಾಡುವ ಮೊದಲು ೧ ಗಂಟೆಗೂ ಮುಂಚೆ ಊಟದ ಮುಗಿಸಿ.  ಕಾಫಿ ಮತ್ತು ಸಕ್ಕರೆ ಮುಂತಾದ ಉತ್ತೇಜಕಗಳನ್ನು ಸೇವಿಸಬಾರದು. ಆಲ್ಕೊಹಾಲ್ ಮುಂತಾದವುಗಳ ಸೇವನೆಯಿಂದ ನಿದ್ದೆ ದೂರ ಉಳಿಯುತ್ತದೆ.
  • ಮಲಗುವುದಕ್ಕೆ ಮುಂಚಿತವಾಗಿ ಟಿವಿ ನೋಡಬೇಡಿ, ಕಂಪ್ಯೂಟರ್ನಲ್ಲಿ ಕೆಲಸ ಮಾಡುವುದಿಲ್ಲ.

-ರಕ್ಷಿತ ಬಿ.ಎನ್

people nowadays suffering from Insomnia. Insomnia is a complicated condition. If you are suffering from insomnia, there are many steps help you get to sleep. Here are some tips for beating insomnia.

You may also like