ಸ್ಪರ್ಧಾತ್ಮಕ ಪರೀಕ್ಷೆಗಾಗಿ ನಾನು ದಿನನಿತ್ಯ 8 ರಿಂದ 10 ಗಂಟೆ ಸಮಯ ಓದುತ್ತಿದ್ದೇನೆ. ಆದ್ರೆ ಏನ್ ಮಾಡ್ಲಿ ಸ್ವಲ್ಪನೂ ತಲೇಲಿ ಉಳಿತಿಲ್ಲ ಅನ್ನೋ ಬೇಸರ ಹಲವಾರು ಯುವ ಸ್ಪರ್ಧಾ ಮಿತ್ರರಲ್ಲಿ ಕಾಡುತ್ತಿರುವ ವಿಷಯ. ಅಂತಹವರು ಈ ಲೇಖನವನ್ನು ತಪ್ಪದೇ ಓದಲೇ ಬೇಕು.
ಮಿದುಳಿಗೆ ಸುಖಾಸುಮ್ಮನೇ ಒಂದೇ ಸಮನೇ ಎಡಬಿಡದೇ ಮಾಹಿತಿ ತುಂಬುತ್ತಿದ್ದರೇ ಆ ಯಾವ ಮಾಹಿತಿಯು ತಲೆಯಲ್ಲಿ ಉಳಿಯುವುದು ಭಾಗಶಃ ಸಂಶಯ. ಅಲ್ಲದೇ ನಾನು ದಿನನಿತ್ಯ ಅಷ್ಟು ಸಿಲ್ಲಾಬಸ್ ಮುಗಿಸಬೇಕು, ಇಷ್ಟು ಕಲಿಯಲೇ ಬೇಕು ಎಂದು ವೇಗವಾಗಿ ಓದಿದರೂ ಅದು ಸಹ ನಿಷ್ಪ್ರಯೋಜಕವಾಗುತ್ತದೆ. ಹಾಗಿದ್ರೆ ನಾವು ಓದುವ ಮಾಹಿತಿ ನೆನಪಿನಲ್ಲಿ ದೀರ್ಘಕಾಲ ಉಳಿಯಬೇಕೆಂದರೆ ಏನು ಮಾಡಬೇಕು ಎಂಬ ಬಗ್ಗೆ ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ.
ಬ್ರೈನ್ ಅನ್ನು ತರಬೇತುಗೊಳಿಸಲು ನೀವು ಹೊಸ ಚಟುವಟಿಕೆಗಳಲ್ಲಿ ಅಥವಾ ನಿಮಗಿಷ್ಟದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಇದರಿಂದ ಮಿದುಳಿನ ನ್ಯುರಾನ್‌ಗಳು ಸಂಪೂರ್ಣ ಚುರುಕುಗೊಳ್ಳುತ್ತವೆ. ಕ್ರಾಫ್ಟ್‌ನಂತಹ ಚಟುವಟಿಕೆಗಳಿಂದ ಮಿದುಳಿಗೆ ಹೆಚ್ಚಿನ ಉತ್ತೇಜನ ಸಿಗುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ. ಅದೇ ರೀತಿ ಆಗಾಗ ಸಂಗೀತ ಕೇಳುವುದು, ಡಿಜಿಟಲ್ ಫೋಟೋಗ್ರಫಿ, ಮ್ಯೂಸಿಕ್ ಸಾಧನಗಳನ್ನು ನುಡಿಸುವುದು, ತಮ್ಮ ಬೆಸ್ಟ್ ಫ್ರೆಂಡ್‌ಗಳೊಂದಿಗೆ ಹರಟೆಹೊಡೆಯುವುದು ಸಹ ಮನಸ್ಸಿಗೆ ಖುಷಿ ಸಿಗುವ ಜತೆಗೆ ಹೊಸ ಉಲ್ಲಾಸ ಮೂಡುತ್ತದೆ. ಇಂಥ ಮನೋಲ್ಲಾಸ ನೀಡುವ ಚಟುವಟಿಕೆಯ ಬಳಿಕ ಓದಿದರೆ ವಿಷಯಗಳು ಬೇಗ ಅರ್ಥವಾಗುವ ಜೊತೆಗೆ ಹೆಚ್ಚು ಕಾಲ ಜ್ಞಾಪಕದಲ್ಲಿ ಉಳಿಯುತ್ತವೆ.
ಜ್ಞಾಪಕ ಶಕ್ತಿ ಹೆಚ್ಚಿಸುವಲ್ಲಿ ಮೂರು ಅಂಶಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ನಿಮ್ಮ ಮಿದುಳಿನ ಪವರ್ ಹೆಚ್ಚಿಸುವ ಆ ಮೂರು ಅಂಶಗಳು ಈ ಕೆಳಗಿನಂತಿವೆ.
1. ಜೀವಸತ್ವ ಡಿ: ಬ್ರೈನ್ ನರಗಳ ಬೆಳವಣಿಗೆಯಲ್ಲಿ ವಿಟಮಿನ್ ಡಿ ಪ್ರಮುಖ ಪಾತ್ರ ವಹಿಸುತ್ತದೆ. ಯೋಜನೆ, ಮಾಹಿತಿ ಸ್ಟೋರ್ ಮಾಡುವಿಕೆಯ ಪ್ರಕ್ರಿಯೆಗಳನ್ನು ನಿರ್ವಹಿಸುವ ಮಿದುಳಿನ ಭಾಗದ ಕಾರ್ಯನಿರ್ವಹಣೆಗೆ ಡಿ ಜೀವಸತ್ವ ಅಗತ್ಯ. ವೃದ್ಧರಲ್ಲಿ ಡಿ ಜೀವಸತ್ವದ ಕೊರತೆಯಿಂದ ಮಿದುಳು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಸಾಧ್ಯವಿದೆ. ಈಗಲೂ ಸಹ ನವಜಾತ ಶಿಶುಗಳನ್ನು ಬೆಳಗ್ಗಿನ ಎಳೆಬಿಸಿಲಿಗೆ ಹಿಡಿಯುವ ಪರಿಪಾಠವಿದೆ. ಇದಕ್ಕೆ ವೈಜ್ಞಾನಿಕ ಹಿನ್ನೆಲೆಯೂ ಇದೆ. ಕಾರಣ ಬೆಳಗ್ಗಿನ ಸೂರ್ಯ ಕಿರಣಗಳಲ್ಲಿ ಜೀವಸತ್ವ ಡಿ ಇರುತ್ತದೆ. ಇದು ಶಾರೀರಿಕ ಆರೋಗ್ಯದ ಜೊತೆಗೆ ಮಿದುಳಿನ ವಿಕಾಸಕ್ಕೂ ಉತ್ತಮ. ಸಂಜೆ ಸಮಯದಲ್ಲಿನ ಸೂರ್ಯನ ಕಿರಣಗಳಲ್ಲಿ ಕೂಡ ಡಿ ಜೀವಸತ್ವ ಹೇರಳವಾಗಿರುತ್ತದೆ. ದೇಹದಲ್ಲಿ ಜೀವಸತ್ವ ಡಿ ಕೊರತೆಯಾಗದಂತೆ ಎಚ್ಚರವಹಿಸಿ.
2 ಉಪವಾಸ: ವಾರಕ್ಕೋ, ತಿಂಗಳಿಗೋ ಒಮ್ಮೆ ಅನ್ನಾಹಾರ ತ್ಯಜಿಸಿ ಉಪವಾಸ ಮಾಡುವುದರಿಂದ ಮಿದುಳು ಚುರುಕುಗೊಳ್ಳುತ್ತದೆ. ಎಂಬ ನಂಬಿಕೆಯೂ ಇದೆ. ಆಹಾರ ತೆಗೆದುಕೊಳ್ಳುವುದನ್ನು ನಿಲ್ಲಿಸಿದಾಗ ದೇಹವು ತನಗೆ ಅಗತ್ಯವಾದ ಶಕ್ತಿಯನ್ನು ಮತ್ತು ಈಗಾಗಲೇ ಶೇಕರಣೆಗೊಂಡಿರುವ ಕೊಬ್ಬನ್ನು ಕರಗಿಸುವ ಮೂಲಕ ಪಡೆದುಕೊಳ್ಳುತ್ತದೆ. ಹಾಗಾಗಿ ಆಗಾಗ ಉಪವಾಸ ಮಾಡುವುದರಿಂದ ದೇಹದಲ್ಲಿ ಶೇಖರಣೆಗೊಂಡಿರುವ ಅನಗತ್ಯ ಕೊಬ್ಬು ಕರಗುತ್ತದೆ. ಜತೆಗೆ ಇದು ನಾವು ಸೇವಿಸುವ ಆಹಾರದ ಒಟ್ಟು ಕ್ಯಾಲೋರಿ ಪ್ರಮಾಣವನ್ನು ತಗ್ಗಿಸುತ್ತ ಬರಲು ನೆರವು ನೀಡುತ್ತದೆ. ಆ ಮೂಲಕ ಮಿದುಳಿನ ಅತ್ಯುತ್ತಮ ಶಕ್ತಿ ಪೂರೈಕೆ ಮಾಡುವುದು ಗ್ಲುಕೋಸ್ ಅಲ್ಲ ಬದಲಿಗೆ ಕೆಟೋನ್ಸ್ ಎಂಬ ನಂಬಿಕೆಯೂ ಇದೆ. ಕಾರ್ಬೋಹೈಡ್ರೇಟ್ ಸೇವನೆಯನ್ನು ನಿಲ್ಲಿಸಿದ ತಕ್ಷಣ ನಮ್ಮ ಶರೀರ ಕೆಟೋನ್ಸ್ ಎಂಬ ಕೊಬ್ಬನ್ನು ಸಂಗ್ರಹಿಸಲು ಪ್ರಾರಂಬಿಸುತ್ತದೆ. ಅದನ್ನು ಕರಗಿಸಿ ಮಿದುಳಿಗೆ ಅಗತ್ಯವಾದ ಆಹಾರವನ್ನು ಪೂರೈಸುತ್ತದೆ. ಇದು ಜ್ಞಾಪಕಶಕ್ತಿ ಹೊಂದಿರಲು ಇದು ಕೂಡ ಒಂದು ಕಾರಣವಾಗಿದೆ.
3 ಕರುಳಿನ ಆರೋಗ್ಯ: ಮಿದುಳು ಮತ್ತು ಕರುಳಿಗೆ ಸಂಬಂಧವಿದೆ. ಕರುಳು ಮನುಷ್ಯನ ಎರಡನೆಯ ಮಿದುಳು ಇದ್ದಂತೆ. ಕರುಳಿನಲ್ಲಿರುವ ಬ್ಯಾಕ್ಟೀರಿಯಾಗಳು ವೇಗಸ್ ಎಂಬ ನರದ ಮೂಲಕ ಮಿದುಳಿಗೆ ಮಾಹಿತಿ ರವಾನಿಸುತ್ತದೆ. ಕರುಳಿನಲ್ಲಿ ಅಸಮರ್ಪಕ ಬೆಳವಣಿಗೆಯಿದ್ದ ಸಂದರ್ಭದಲ್ಲಿ ಮಿದುಳಿನ ಬೆಳವಣಿಗೆ ಕೂಡ ಅಸಮರ್ಪಕವಾಗಿರುತ್ತದೆ. ಆದ ಕಾರಣ ಕರುಳಿನ ಆರೋಗ್ಯ ಕೂಡ ನಮ್ಮ ಜ್ಞಾಪಕಶಕ್ತಿ ಮೇಲೆ ಪ್ರಭಾವ ಬೀರುತ್ತದೆ.
Did you know that your measurable level of intelligence (IQ), memory, focus, and overall brain power are not permanently set levels? And that, there are things you can do to make yourself much smarter, no matter your age.