Home » ಸೂರ್ಯ ನಮಸ್ಕಾರ ಮಾಡುವುದರಿಂದ ಪ್ರಯೋಜನಗಳಿವೆ ಗೊತ್ತೇ..?

ಸೂರ್ಯ ನಮಸ್ಕಾರ ಮಾಡುವುದರಿಂದ ಪ್ರಯೋಜನಗಳಿವೆ ಗೊತ್ತೇ..?

by manager manager

ಸೂರ್ಯ ನಮಸ್ಕಾರ (Sun Salutation) ಮಾಡುವುದರಿಂದ ಹಲವಾರು ಪ್ರಯೋಜನಗಳಿವೆ. ಇದು ಹೃದಯಕ್ಕೆ ಒಳ್ಳೆಯ ವ್ಯಾಯಾಮವನ್ನು ನೀಡುತ್ತದೆ. ಇಲ್ಲದೆ ಸೂರ್ಯ ನಮಸ್ಕಾರಸ ಆಸನಗಳು ದೇಹವನ್ನು ಸುಸ್ವರೂಪದಲ್ಲಿರಿಸಲು ಮತ್ತು ಮನಸ್ಸನ್ನು ಶಾಂತವಾಗಿರಿಸಲು ಉತ್ತಮ ಮಾರ್ಗವಾಗಿವೆ.

ಸೂರ್ಯ ನಮಸ್ಕಾರವನ್ನು(Sun Salutation) ಖಾಲಿ ಹೊಟ್ಟೆಯಲ್ಲಿ ಸೂರ್ಯೋದಯದ ಸಮಯದಲ್ಲಿ ಮಾಡುವುದು ಅತ್ಯುತ್ತಮವಾದದ್ದು. ನಾವು ಒಳ್ಳೆಯ ಆರೋಗ್ಯವನ್ನು ಪಡೆದುಕೊಳ್ಳಲು ಸರಳವಾದರೂ ಪ್ರಭಾವಶಾಲಿಯಾದ ಈ ಸೂರ್ಯ ನಮಸ್ಕಾರವನ್ನು ಮಾಡಿದರೆ ಒಳಿತು. ಹೀಗಾಗಿ ಇಂದು ಕನ್ನಡ ಅಡ್ವೈಜರ್ ಸೂರ್ಯ ನಮಸ್ಕಾರ ಮಾಡುವುದರಿಂದಾಗುವ ಉಪಯೋಗಗಳನ್ನು ತಿಳಿಸಿಕೊಡಲಿದೆ.

ಸೂರ್ಯ ನಮಸ್ಕಾರ ಮಾಡುವುದರಿಂದಾಗುವ ಪ್ರಯೋಜನಗಳು

  1. ಸೂರ್ಯ ನಮಸ್ಕಾರ ಸರಿಯಾಗಿ ಮಾಡಿದರೆ ದೇಹಕ್ಕೆ ಆಯಾಸವಾಗುವುದಿಲ್ಲ.
  2. ನಿಮ್ಮ ದೇಹ ಮತ್ತು ಮನಸ್ಸನ್ನು ನವೀಕರಿಸುತ್ತದೆ.
  3. ಸೂರ್ಯ ನಮಸ್ಕಾರ ನಿಮಗೆ ಫ್ಲಕ್ಸಿಬಿಲಿಟಿ ನೀಡಿ ನಿಮ್ಮನ್ನು ಭೌತಿಕವಾಗಿ ದೇಹದ ಸುಸ್ಥಿತಿ ಕಾಪಾಡುವುದಲ್ಲದೆ. ನಿಮ್ಮ ಕೀಲುಗಳು, ಅಸ್ಥಿಕಟ್ಟುಗಳಿಗೆ ಬಹಳ ಪ್ರಯೋಜನಕಾರಿ.
  4. ಸೂರ್ಯ ನಮಸ್ಕಾರ ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯಕ್ಕೆ ಅತೀ ಉತ್ತಮ
  5. ಸೂರ್ಯ ನಮಸ್ಕಾರ ಬಹುತೇಕ ನಿಮ್ಮ ದೇಹದ ಪ್ರತಿಯೊಂದು ವ್ಯವಸ್ಥೆಯನ್ನು ಪ್ರಚೋದಿಸುತ್ತದೆ. ಹೃದಯ ರಕ್ತನಾಳದ ವ್ಯವಸ್ಥೆ, ಜೀರ್ಣಾಂಗ ವ್ಯವಸ್ಥೆ ಹಾಗೂ ನರಮಂಡಲದ ವ್ಯವಸ್ಥೆಯನ್ನೂ ಕೂಡ.
  6. ಸೂರ್ಯ ನಮಸ್ಕಾರ ಥೈರಾಯ್ಡ್, ಪ್ಯಾರಾಥೈರಾಯ್ಡ್ ಮತ್ತು ಪಿಟ್ಯುಟರಿ ಗ್ರಂಥಿ, endocrinal ಗ್ರಂಥಿಗಳು ಸಾಮಾನ್ಯವಾಗಿ ಕೆಲಸ ಮಾಡುವಂತೆ ಮಾಡುತ್ತದೆ.
  7. ನಿಯಮಿತವಾಗಿ ಸೂರ್ಯ ನಮಸ್ಕಾರ ಮಾಡುವುದರಿಂದ ಒತ್ತಡವನ್ನು ಸುಲಭವಾಗಿ ಕಡಿಮೆ ಮಾಡಬಹುದು ಮತ್ತು ನಿಮ್ಮ ಏಕಾಗ್ರತೆ ಮಟ್ಟವನ್ನು ಹೆಚ್ಚಿಸುವುದರ ಜೊತೆಗೆ ನಿಮ್ಮ ಮನಸ್ಸಿಗೆ ಶಾಂತಿ ನೀಡುತ್ತದೆ.
  8. ನಿಮಗೆ ರಾತ್ರಿ ಮಲಗುವ ತೊಂದರೆ ಇದ್ದರೆ, ಸೂರ್ಯ ನಮಸ್ಕಾರ ಮಾಡುವುದರಿಂದ ಯಾವುದೇ ಬಾಹ್ಯ ಉತ್ತೇಜಕಗಳು ಬಳಸದೆ ನೀವು ನಿದ್ರಿಸಲು ಸಹಾಯವಾಗುತ್ತದೆ.

Surya Namaskar is one of the core practices of Yogathon. There are several benefits of sun salutation. It gives a good exercise to the heart. Without sun salutations, asanas are a good way to keep the body in good shape and keep the mind calm. Practicing the Surya Namaskaras have a whole lot of benefits.

You may also like