Home » ಸಂಶೋಧನೆ ಪ್ರಕಾರ ತಂದೆಯಾಗಲು ಉತ್ತಮ ವಯಸ್ಸು ಯಾವುದು ಗೊತ್ತೇ?

ಸಂಶೋಧನೆ ಪ್ರಕಾರ ತಂದೆಯಾಗಲು ಉತ್ತಮ ವಯಸ್ಸು ಯಾವುದು ಗೊತ್ತೇ?

by manager manager

ತಂದೆಯಾಗಲು ಬಯಸುವವರು ಯಾವ ವಯಸ್ಸಿಗೆ ತಂದೆಯಾದರೇ ಒಳ್ಳೆಯದು? ಎಂಬುದನ್ನು ಇಂದಿನ ಯುವಜನತೆ ತಿಳಿದುಕೊಳ್ಳುವುದು ಎಲ್ಲ ಆಯಾಮಗಳಿಂದಲೂ ಉತ್ತಮ.

ಮದುವೆಯಾದ ತರುವಾಯ ಪ್ರತಿಯೊಬ್ಬ ಗಂಡಿಗೂ ತಾನು ತಂದೆಯಾಗಬೇಕು ಎಂಬ ಆಸೆ ಇದ್ದೆ ಇರುತ್ತೆ. ಹೀಗಿರುವಾಗ ಆ ತಂದೆಯಾಗುವ ಸಮಯ ಯಾವುದಿದ್ದರೆ ಒಳ್ಳೆಯದು ಎಂಬ ಪ್ರಶ್ನೆಗೆ ಅವರವರ ದೇಹದ ಸಾಮರ್ಥ್ಯದ ಮೇಲೆ ನಿರ್ಧರಿತವಾಗಿದ್ದರೂ ಗಂಡಸರಿಗೆ 30 ವರ್ಷದ ಬಳಿಕ ವೀರ್ಯಾಣು ಗುಣಮಟ್ಟವು ಕಡಿಮೆಯಾಗುತ್ತದೆ. ನಿಧಾನವಾಗಿ ಪುರುಷತ್ವದ ಸಾಮರ್ಥ್ಯ ಕೂಡ ಕುಂಠಿತವಾಗುತ್ತದೆ ಇದರಿಂದಾಗಿ ತಂದೆಯಾಗುವ ಸಾಧ್ಯತೆಯಲ್ಲಿ ಹೆಚ್ಚಿನ ಸಮಸ್ಯೆಗಳು ಇರುವುದು ಖಂಡಿತ. ಮಹಿಳೆಯರು ಗರ್ಭಧರಿಸಬೇಕಾದ ಸರಿಯಾದ ಸಮಯದ ಬಗ್ಗೆ ವೈದ್ಯರು ಹಲವು ಸಲಹೆಗಳನ್ನು ನೀಡುತ್ತಾರೆ. ಆದರೆ ಗಂಡಸರು ತಂದೆಯಾಗಲು ಉತ್ತಮ ವಯಸ್ಸು ಯಾವುದೆಂಬುದರ ಕುರಿತು ಯಾರು ಚರ್ಚೆ ಮಾಡುವುದೇ ಇಲ್ಲ. ಹಾಗಾಗೀ ಈ ಲೇಖನ ನಿಮಗಾಗಿ.

ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ 40 ವರ್ಷ ದಾಟಿದ ಪುರುಷರಿಂದ ಸಂಗಾತಿ ಗರ್ಭಧರಿಸಿದರೆ ಹುಟ್ಟುವ ಮಕ್ಕಳಲ್ಲಿ ಅನೇಕ ಸಮಸ್ಯೆಗಳು ಕಾಡುತ್ತದೆ. ಆದರೆ ಯೌವ್ವನದಲ್ಲೇ ಅಂದರೇ 30 ವರ್ಷದ ಒಳಗೆ ಸಮ್ಮಿಲನ ಮಾಡುವುದರಿಂದ ಶೀಘ್ರ ಮಕ್ಕಳ ಭಾಗ್ಯ ಪಡೆಯುವ ಸಾಧ್ಯತೆ ಹೆಚ್ಚಿದೆ ಎಂದು ಈ ಅಧ್ಯಯನ ಹೇಳುತ್ತದೆ.
• ತಂದೆಯಾಗಲು ಸರಿಯಾದ ವಯಸ್ಸು 22 ರಿಂದ 25 ವರ್ಷವಾಗಿದ್ದು, ಭವಿಷ್ಯದ ಕಾಳಜಿಯಿಂದ 28-30 ವರ್ಷದವರೆಗೆ ಕಾಯಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.
• 22 ರಿಂದ 30 ವರ್ಷದ ಒಳಗೆ ಉತ್ಸುಕರಾಗಿದ್ದು ಎಲ್ಲ ವಿಷಯದಲ್ಲೂ ತುಂಬ ಜೋಶ್ ಅಲ್ಲಿ ಇರುವುದರಿಂದ ನಿಮಗೆ ಆಗ ಹುಟ್ಟಿದ ಮಕ್ಕಳು ತುಂಬ ಕ್ರೀಯಾಶೀಲಾರಾಗುತ್ತಾರೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.
• 30 ವಯಸ್ಸಿನ ಬಳಿಕ ದೇಹದ ಸಾಮರ್ಥ್ಯ ಕಡಿಮೆಯಾಗುವುದರಿಂದ ಮಕ್ಕಳಾಗುವ ಸಾಧ್ಯತೆಗಳಲ್ಲಿ ವ್ಯತ್ಯಾಸಗಳಾಗುತ್ತದೆ ಎಂದು ತಿಳಿಸಲಾಗಿದೆ.
• 30 ವರ್ಷದ ಬಳಿಕ ಪ್ರತಿ ವರ್ಷ ದೇಹದ ಟೆಸ್ಟೋಸ್ಟೇರಾನ್ ಮಟ್ಟವು ಇಳಿಮುಖವಾಗುತ್ತದೆ.
• 30 ವರ್ಷದ ಬಳಿಕ ನಿಮ್ಮ ಆರೋಗ್ಯದಲ್ಲೂ, ಸಾಮರ್ಥ್ಯದಲ್ಲೂ ಕೆಲ ಬದಲಾವಣೆಗಳು ಕಂಡು ಬರುತ್ತದೆ.
• 30 ವರ್ಷದ ಬಳಿಕ ವೀರ್ಯಾಣು ಗುಣಮಟ್ಟವು ಕಡಿಮೆಯಾಗುವುದರಿಂದ ನಿಧಾನವಾಗಿ ಪುರುಷತ್ವದ ಸಾಮರ್ಥ್ಯ ಕೂಡ ಕುಂಠಿತವಾಗುವುದು.
• 30 ವರ್ಷದ ಒಳಗೆ ಎಂದು ಎಲ್ಲರಿಗೂ ಹೇಳಲು ಕಷ್ಟಸಾಧ್ಯ ಏಕೆಂದರೆ ನಾನಾ ರೀತಿಯ ವ್ಯಾಯಾಮ ಮತ್ತು ದೇಹದ ಸಾಮಾರ್ಥ್ಯಕ್ಕೆ ಅನುಗುಣವಾಗಿ ಎಲ್ಲರನ್ನೂ ಗಮನದಲ್ಲಿಟ್ಟುಕೊಂಡು 30 ವರ್ಷದೊಳಗೆ ಎಂದು ಹೇಳಲಾಗಿದೆ. ಹಾಗಾಗೀ ಜಂಕ್‍ಫುಡ್, ಧೂಮಪಾನ ಮತ್ತು ಪೋಷಕಾಂಶಗಳ ಕೊರತೆಯಿಂದ ವೀರ್ಯಾಣುಗಳ ಗುಣಮಟ್ಟವು ಇಳಿಕೆಯಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಎಟಿಎಂ ಕಾರ್ಡ್ ಇಲ್ಲದೆ ಎಟಿಎಂ ಅಲ್ಲಿ ಮೊಬೈಲ್ ಮೂಲಕ ಹಣ ಪಡೆಯುವುದು ಹೇಗೆ?

You may also like