ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯು 2018 ಡಿಸೆಂಬರ್ ತಿಂಗಳಲ್ಲಿ 73 ಅರಣ್ಯ ವಲಯಾಧಿಕಾರಿಗಳ (RFO) ಹುದ್ದೆ ಭರ್ತಿಗಾಗಿ ಮುಖ್ಯ ಪರೀಕ್ಷೆ ನಡೆಸಿತ್ತು. ಈ ಅರ್ಹತಾ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳ ಪಟ್ಟಿಯನ್ನು ಈಗ ಅರಣ್ಯ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
ಪ್ರಸ್ತುತ ಅರ್ಹತಾ ಪಟ್ಟಿಯು 1:2 ಅನುಪಾತದಲ್ಲಿದ್ದು, ಪಟ್ಟಿಯಲ್ಲಿ ಹೆಸರು ಇರುವ ಅಭ್ಯರ್ಥಿಗಳು ಧಾರವಾಡದಲ್ಲಿ ಮೂಲ ದಾಖಲಾತಿ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಗೆ ಹಾಜರಾಗಬೇಕಿದೆ. ನಂತರ 1:1 ಅನುಪಾತದಲ್ಲಿ ನೇಮಕಾತಿಗೆ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಗೊಳಿಸಲಾಗುತ್ತದೆ.
1:2 ಅನುಪಾತದಲ್ಲಿ ಬಿಡುಗಡೆಯಾದ ಆಯ್ಕೆ ಪಟ್ಟಿಯನ್ನು ನೋಡಲು –ಕ್ಲಿಕ್ ಮಾಡಿ