Home » ರೈತರಿಗಾಗಿ ಇಂದು ಬಾನುಲಿ ಕೃಷಿ ಬೆಳಗು ಕಾರ್ಯಕ್ರಮ, ಸಾವಯವ ಕೃಷಿ ತರಬೇತಿ ಕಾರ್ಯಗಾರ

ರೈತರಿಗಾಗಿ ಇಂದು ಬಾನುಲಿ ಕೃಷಿ ಬೆಳಗು ಕಾರ್ಯಕ್ರಮ, ಸಾವಯವ ಕೃಷಿ ತರಬೇತಿ ಕಾರ್ಯಗಾರ

by manager manager

ಮಂಡ್ಯ: ಮೈಸೂರು ಆಕಾಶವಾಣಿ, ಕೃಷಿ ಇಲಾಖೆ ಹಾಗೂ ವಿಶ್ವೇಶ್ವರಯ್ಯ ಡೆವಲಪ್ಮೆಂಟ್ ಆರ್ಗನೈಝೇಶನ್ ವತಿಯಿಂದ ಶ್ರೀ ವಿಘ್ನೇಶ್ವರ ಸಾವಯವ ಕೃಷಿಕರ ಸಂಘ, ಕಟ್ಟೇದೊಡ್ಡಿ, ಮಂಡ್ಯ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಬಾನುಲಿ ಕೃಷಿ ಬೆಳಗು ಕಾರ್ಯಕ್ರಮ ಮತ್ತು ಸಾವಯವ ಕೃಷಿ ತರಬೇತಿ ಕಾರ್ಯಗಾರ ನಡೆಯಲಿದೆ.

ಮಂಡ್ಯ ತಾಲ್ಲೂಕಿನ ಕಟ್ಟೇದೊಡ್ಡಿಯ ಆದಿಮೂರ್ತಿ ಚೆನ್ನೇಗೌಡ ಆಗ್ರೋ ಫಾರಂನಲ್ಲಿ ನಡೆಯುವ ಕಾರ್ಯಕ್ರಮದ ಉದ್ಘಾಟನೆಯನ್ನು ಮಂಡ್ಯ ಜಿಲ್ಲೆಯ ಕೃಷಿ ಜಂಟಿ ನಿರ್ದೇಶಕರಾದ ರಾಜಸುಲೋಚನ ಅವರು ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕೋಲಾರದ ಜಿ. ವೆಂಕಟಪ್ಪ ಅವರು ‘ಮರಗಡ್ಡಿ ಬೇಸಾಯ ಹಾಗೂ ಶ್ರೀಗಂಧ ಕೃಷಿ’ ಬಗ್ಗೆ ಪ್ರಧಾನ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಂ.ಎಸ್ ರಾಜು ಹಾಗೂ ಚೌಡೇಗೌಡ ಹೆಚ್.ಸಿ ರವರು ಉಪಸ್ಥಿತರಿರಲಿದ್ದಾರೆ. ಇನ್ನು ಮೈಸೂರು ಆಕಾಶವಾಣಿಯ ಸಹಾಯಕ ನಿರ್ದೇಶಕರಾದ ಹೆಚ್ ಶ್ರೀನಿವಾಸ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುತ್ತಾರೆ.

ಈ ವೇಳೆ ಕೋಲಾರದ ಶ್ರೀನಿವಾಸಪುರ ತಾಲ್ಲೂಕು ಕುಪ್ಪಹಳ್ಳಿಯ ಡಾ. ಕೆ.ಆರ್ ಹುಲ್ಲುನಾಚೇಗೌಡ ಅವರಿಗೆ ಕೃಷಿರತ್ನ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಕಾರ್ಯಕ್ರಮದಲ್ಲಿ ರೇಷ್ಮೆ ಕೃಷಿಯಲ್ಲಿ ವಿನೂತನ ಸಾಧನೆ ಮಾಡಿರುವ ಕೆ.ಆರ್ ಹುಲ್ಲುನಾಚೇಗೌಡ ರವರ ಸಾಧನೆಗಳ ಕುರಿತ ಹರ್ಷ ಡಿ.ಎನ್ ಬರೆದಿರುವ ‘ಕೃಷಿಯಾಂತ್ರಿಕ’ ಪುಸ್ತಕ ಬಿಡುಗಡೆ ಮಾಡಲಾಗುತ್ತದೆ. ಸಾವಯವ ಕೃಷಿ ಆಹಾರ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಜರುಗಲಿವೆ.

Today is a farming program for farmers. Organic Agricultural Training Workshop.

You may also like