ರಾಜ್ಯದ ಬಹುಪಾಲು ಜನರ ಮೂಲ ಕಸುಬು ಹಾಗೂ ಬಹುಪಾಲು ಜನರ ಜೀವನೋಪಾಯವಾಗಿರುವುದು ಕೃಷಿ ಕ್ಷೇತ್ರ. ಬಹುತೇಕ ರೈತರು ಇಂದು ಮಾನ್ಸುನ್ ಮಾರುತಗಳನ್ನು ನಂಬಿಕೊಂಡಿದ್ದಾರೆ. ಮಳೆ ಬಂದರಷ್ಟೇ ಬೆಳೆ ಎಂಬ ಪರಿಸ್ಥಿತಿ ಇದೆ. ಆದರೆ ಮಳೆ ಬಂದರೂ, ಬೆಳೆ ಬೆಳೆದರು ಹಾಕಿದ ಬಂಡವಾಳ ಬರದಷ್ಟು ಪರಿಸ್ಥಿತಿ ಇದೆ. ಇನ್ನು ಮಳೆ ಬಾರದೇ ಇದ್ದರೆ ರೈತನ ಪಾಡು ಹೀನಾಯವಾಗಿಬಿಡುತ್ತದೆ.
ಹೀಗಾಗಿ ರೈತರು ಕೆಲವು ಕ್ರಮಗಳನ್ನು ಅನುಸರಿಸಿ ಬೇಸಾಯ ಮಾಡಬೇಕಾಗುತ್ತದೆ. ಅಂದರೆ ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆಯುವುದಾಗಿದೆ. ಆದ್ದರಿಂದ ಇಂದು ಕನ್ನಡ ಅಡ್ವೈಜರ್ ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆಯುವ ಬೇಸಾಯ ಕ್ರಮಗಳ ಬಗ್ಗೆ ಒಂದಷ್ಟು ಮಾಹಿತಿ ನೀಡಲಿದೆ. ಈ ಮೂಲಕ ರೈತರು ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆದು ಜೀವನಮಟ್ಟವನ್ನು ಉತ್ತಮ ಪಡಿಸಿಕೊಳ್ಳುವುದಲ್ಲದೆ, ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬಹುದಾಗಿದೆ.
ಅಧಿಕ ಇಳುವರಿ ಪಡೆಯುವ ಬೇಸಾಯ ಕ್ರಮಗಳು:
- ಮಾಗಿ ಉಳುಮೆ ಮಾಡಿ
- ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ ಗೊಬ್ಬರವನ್ನು ಬಿತ್ತನೆಗೆ ಅಥವಾ ನಾಟಿಗೆ ೪ ವಾರ ಮುಂಚಿತವಾಗಿ ಮಣ್ಣಿಗೆ ಸೇರಿಸಿ.
- ಆಯಾ ಹಂಗಾಮಿಗೆ ಹಗೂ ಆಯಾ ಪ್ರದೇಶಕ್ಕೆ ಶಿಫಾರಸ್ಸು ಮಾಡಿರುವ ಬೆಳೆ ಹಾಗೂ ತಳಿಗಳನ್ನು ಬೆಳೆಸಿರಿ.
- ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಬಳಸಿ.
- ಬೀಜೋಪಚಾರ ಮಾಡಿ ಬಿತ್ತನೆ ಮಾಡಿ.
- ಸಮಯಕ್ಕೆ ಸರಿಯಾಗಿ ಬಿತ್ತನೆ ಅಥವಾ ನಾಟಿ ಮಾಡಿ. ಇದರಿಂದ ರೋಗ, ಕೀಟಗಳ ಭಾದೆಯಿಂದ ಬೆಳೆಗಳನ್ನು ರಕ್ಷಿಸಬಹುದು.
- ಶುಷ್ಕ ವಾತಾವರಣ ಇರುವಾಗ ಅಂತರ ಬೇಸಾಯ ಮಾಡುವುದು ಸೂಕ್ತ.
- ಸಕಾಲದಲ್ಲಿ ಕಳೆ ನಿಯಂತ್ರಿಸಿ. ತಪ್ಪಿದಲ್ಲಿ ಕಳೆಯ ಪೈಪೋಟಿಯಿಂದ ಬೆಲೆಯ ಇಳುವರಿಯ ಕುಂಠಿತವಾಗುವುದು.
- ಕೀಟ, ರೋಗಗಳ ಭಾದೆಯಿಂದ ಬೆಳೆಗಳನ್ನು ರಕ್ಷಿಸಲು ಬೆಳೆ ಪರಿವರ್ತನೆ ಅನುಸರಿಸಿ.
- ಸಮಗ್ರ ಪೀಡೆ ನಿರ್ವಾಹಣಾ ಕ್ರಮಗಳನ್ನು ಕೈಗೊಳ್ಳಿ.
- ಬೆಳೆಗಳ ಸಂಧಿಗ್ದ ಹಂತಗಳಲ್ಲಿ ಅವಶ್ಯವಿರುವಷ್ಟು ತೇವಾಂಶ ಕಾಯ್ದುಕೊಳ್ಳಿ.
Agricultural measures to get High yielding at low cost. Farmers can improve the quality of life. They must resort to good quality seed and varieties suitable to land and season.