ಇಂದು ಪ್ರಾಣಸ್ನೇಹಿತ ಎಂದು ಯಾವುದೇ ವ್ಯಕ್ತಿಯನ್ನು ತೋರಿಸಲಾಗುವುದಿಲ್ಲ ಬದಲಿಗೆ ನಮ್ಮ ಬಳಿ ಇರುವ ಸ್ಮಾರ್ಟ್ ಫೋನ್ ಇಂದಿನ ಯುಗದಲ್ಲಿ ನಮ್ಮ ಪ್ರಾಣ ಸ್ನೇಹಿತ ಎಂದೇ ಹೇಳಬಹುದು. ನಾವು ಅದನ್ನು ಎಷ್ಟು ಪಾಸಿಟೀವ್ ಆಗಿ ಬಳಸುತ್ತೇವೆಯೇ ನಮಗೆ ಒಳ್ಳೆಯದೆ ಆಗುತ್ತದೆ ಹಾಗಾಗೀ ಇಂದು ಸ್ಮಾರ್ಟ್‍ಫೋನ್ ಎನ್ನುವುದು ಕೇವಲ ಡಿವೈಸ್, ಆಟಿಕೆಗಳಾಗಿಲ್ಲ. ಪ್ರತಿಯೊಬ್ಬರ ಜೊತೆಗಾರ ಆಗಿದೆ. ಇಂದಿನ ಸ್ಮಾರ್ಟ್‌ಫೋನ್‌ನಿನಲ್ಲಿ ಸಾಕಷ್ಟು ಅಪ್‍ಡೇಟ್‍ಗಳಾಗಿದ್ದು, ಟಚ್‍ಸ್‍ಕ್ರೀನ್‍ನಲ್ಲಿಯೂ ಸಹ ಹೊಸತನಗಳು ಸೇರಿಕೊಂಡಿವೆ. ಸ್ಮಾರ್ಟ್‍ಫೋನ್‍ಗಳಲ್ಲಿ ಸ್ಕ್ರೀನ್ ಅತೀ ಮುಖ್ಯವಾಗಿದ್ದು, ಪ್ರತಿ ಆದೇಶವು ಸ್ಕ್ರೀನ್ ಟಚ್ ಮಾಡುವ ಮೂಲಕವೇ ಕೊಡಲಾಗುತ್ತದೆ. ಆದ್ರೆ ಸರಿಯಾಗಿ ಕೆಲಸ ಮಾಡುವ ಫೋನಿನ ಸ್ಕ್ರೀನ್ ಒಮ್ಮೊಮ್ಮೆ ವರ್ಕ್ ಆಗುವುದೇ ಇಲ್ಲ. ಆಗ ಫೋನ್ ಡಿಸ್‍ಪ್ಲೇ ಸ್ಟ್ರಕ್ ಆಯ್ತು ಅಂತಾ ಚಿಂತಿಸಿಬೇಡಿ. ಹೀಗಿರುವಾಗ ನಮ್ಮ ಮೊಬೈಲ್ ಫೋನ್‍ನಿನ ಸ್ಕ್ರೀನ್ ವರ್ಕ್ ಆಗದೆ ಸರಿಯಾದ ಸಮಯಕ್ಕೆ ಕೈ ಕೊಟ್ಟರೆ ನಮಗೆ ಆಗುವ ನೋವು ಅಷ್ಟಿಷ್ಟಲ್ಲ. ಹಾಗಾಗೀ ನಮ್ಮ ಜೀವನದಲ್ಲಿ ಪ್ರಮುಖ ಪಾತ್ರವಹಿಸುವ ಸ್ಮಾರ್ಟ್‍ಫೋನ್ ಸ್ಥಿತಿಗತಿ ಹೇಗೆ ಅಂತಿರಾ?..ಹಾಗೆನಾದ್ರೂ ಫೋನ್ ಸ್ಕ್ರೀನ್ ವರ್ಕ್ ಆಗದೇ ಇದ್ರೂ ಸಹ ಫೋನ್ ಆಪರೇಟ್ ಮಾಡಬಹುದು. ಅದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಈ ಕೆಳಗಿನಂತಿದೆ.
– ಮೊದಲು ಫೋನ್ ರೀ ಸ್ಟಾರ್ಟ್ ಮತ್ತು ರೀಬೂಟ್ ಮಾಡಿ ನೋಡಿ. ಒಮ್ಮೊಮ್ಮೆ ಹ್ಯಾಂಗ್ ಆಗಿಯೂ ಸ್ಕ್ರೀನ್ ವರ್ಕ್ ಮಾಡುವುದಿಲ್ಲ. ಹೀಗಾಗಿ ಪವರ್ ಬಟನ್ ಮತ್ತು ವ್ಯಾಲ್ಯೂಮ್ ಬಟನ್ ಒತ್ತಿ ರೀಬೂಟ್ ಆಯ್ಕೆಯನ್ನು ಸೆಲೆಕ್ಟ್ ಮಾಡಿರಿ. ರೀಬೂಟ್ ಮಾಡಿದಾಗ ಸ್ಕ್ರೀನ್ ಹ್ಯಾಂಗ್ ಆಗಿದ್ದರೇ ಸರಿಯಾಗುವ ಚಾನ್ಸ್ ಹೆಚ್ಚಿರುತ್ತೆ.
– ಇನ್ನೂ ಸ್ಮಾರ್ಟ್‍ಫೋನ್ ಸ್ಕ್ರೀನ್ ಹಾಳಾಗಬಾರದು ಅಂತಾ ಬಹುತೇಕರು ಸ್ಕ್ರೀನ್‍ಗಾರ್ಡ್ ಹಾಕಿಸಿರುತ್ತಾರೆ. ಕೆಲವೊಮ್ಮೆ ಈ ಸ್ಕ್ರೀನ್‍ಗಾರ್ಡ್ ಹಾಳಾಗಿದ್ದು ಆ ರೀತಿಯಲ್ಲು ಫೋನ್ ಸ್ಕ್ರೀನ್ ಸರಿಯಾಗಿ ವರ್ಕ್ ಮಾಡುವುದಿಲ್ಲ. ಅದಕ್ಕಾಗಿ ಸ್ಕ್ರೀನ್‍ಗಾರ್ಡ್ ತೆಗೆದುಹಾಕಿ ಪುನಃ ಸ್ಕ್ರೀನ್ ಟಚ್ ಸರಿಯಾಗಿ ವರ್ಕ್ ಮಾಡುತ್ತಿದೆಯಾ ಎಂದು ಚೆಕ್ ಮಾಡಿಕೊಳ್ಳಿ.
– ಸ್ಮಾರ್ಟ್‍ಫೋನ್ ಸ್ಕ್ರೀನ್ ಟಚ್ ವರ್ಕ್ ಮಾಡದೇ ಇದ್ದಾಗ ಇನ್ನೊಂದು ದಾರಿ ಇದೆ ಅದೇನೆಂದರೇ ವಾಯಿಸ್ ಅಸಿಸ್ಟಂಟ್ ಸೌಲಭ್ಯವನ್ನು ಬಳಸಿ. ಆಂಡ್ರಾಯ್ಡ್ ಓಎಸ್ ಫೋನ್‍ಗಳಲ್ಲಿ ಗೂಗಲ್ ಅಸಿಸ್ಟಂಟ್ ವಾಯಿಸ್ ಸೌಲಭ್ಯವು ಬೆಂಬಲವಿದ್ದು ಇದನ್ನು ಸರಿಯಾಗಿ ವಾಯಿಸ್ ಕಮಾಂಡ್ ಮಾಡುವ ಮೂಲಕ ಸ್ಮಾರ್ಟ್‍ಫೋನ್ ಆಪರೇಟ್ ಮಾಡಬಹುದು sಛಿಡಿeeಟಿ ಜoತಿಟಿ, go bಚಿಛಿಞ ಪದಗಳನ್ನು ಬಳಸಬಹುದು.
– ಸ್ಮಾರ್ಟ್‍ಫೋನ್ ಟಚ್ ಸ್ಕ್ರೀನ್ ಕೈ ಕೊಟ್ಟಾಗ, ನೀವು ಕೀಬೋರ್ಡ್ ಮತ್ತು ಮೌಸ್ ಬಳಸಿಯೂ ಸಹ ಫೋನ್ ಆಪರೇಟಿಂಗ್ ಮಾಡಬಹುದು ಆದರೆ ಎಲ್ಲ ಫೋನ್‍ಗಳು ಕೀಬೋರ್ಡ್ ಮತ್ತು ಮೌಸ್ ಆಯ್ಕೆಯನ್ನು ಹೊಂದಿರುವುದಿಲ್ಲ. ಹಾಗೇನಾದರೂ ನಿಮ್ಮ ಸ್ಮಾರ್ಟ್‍ಫೋನ್ ಕೀಬೋರ್ಡ್ ಮತ್ತು ಮೌಸ್ ಆಯ್ಕೆ ಬೆಂಬಲ ಪಡೆದಿದ್ದರೆ ನೀವು ಪ್ರಯತ್ನಿಸಬಹುದಾಗಿದೆ.
– ತುಂಬ ಆಫ್ಲೀಕೇಷನ್‍ಗಳನ್ನು ಒಂದೇ ಸಲ ಚಾಲನೆ ಮಾಡುವುದರಿಂದಲು ಕೆಲವೊಮ್ಮ ಫೋನ್‍ಗಳು ಹ್ಯಾಂಗ್ ಆಗುತ್ತವೆ, ಸೋ ಆಗ ಒಂದು ಬಾರಿ ಸ್ವಿಚ್ ಆಫ್ ಅಂಡ್ ಆನ್ ಮಾಡಿ. ಸರಿಯಾಗುತ್ತವೆ ಮತ್ತೆ ನಿಮ್ಮ ಮೊಬೈಲ್‍ನಲ್ಲಿ ಈ ಹಿಂದೆ ನೋಡಿದ ವರ್ಕ್‍ಸ್ಕ್ರೀನ್‍ಗಳನ್ನು ಕ್ಲೋಸ್ ಮಾಡುತ್ತ ಇರಿ.
– ಯಾವುದೋ ಒಂದು ಸ್ಥಳದಲ್ಲಿ ಮಾತ್ರ ನಮ್ಮ ಮೊಬೈಲ್ ಸ್ಕ್ರೀನ್ ವರ್ಕ್ ಆಗುತ್ತಿಲ್ಲವೆಂದರೇ ಅದು ಮೊಬೈಲ್ ಆಪ್ಲೀಕೇಷನ್ ಪ್ರಾಬ್ಲಂ ಇರುವುದಿಲ್ಲ ಬದಲಿಗೆ ಎಲ್ಲಾದರೂ ಬಿದ್ದು ಆ ಒಂದು ನಿರ್ದಿಷ್ಠ ಜಾಗದಲ್ಲಿ ಸ್ಕ್ರೀನ್ ಜಖಮ್ ಆಗಿದ್ದು ಈ ರೀತಿ ಆಗುವುದುಂಟು ಅದನ್ನು ನೀವು ಸರ್ವಿಸ್ ಮಾಡಿಸುವ ಮೂಲಕ ಸರಿಪಡಿಸಿಕೊಳ್ಳಬಹುದು.